ಜೂ. ಸಿಂಹ ಜೊತೆ ಚಂದನವನದ ಬ್ಯೂಟಿ ಹರಿಪ್ರಿಯಾ…ಅಮ್ಮ-ಮಗನಿಗೆ ದೃಷ್ಟಿ ತೆಗೆದ ಫ್ಯಾನ್ಸ್

Published : Sep 15, 2025, 06:18 PM IST

ಕನ್ನಡ ಚಿತ್ರರಂಗದ ನಟಿ ಹರಿಪ್ರಿಯಾ ತಮ್ಮ ಮುದ್ದು ಮಗ ಜೂ. ಸಿಂಹ ಜೊತೆಗೆ ಫೋಟೊಗೆ ಮುದ್ದಾಗಿ ಪೋಸ್ ಕೊಟ್ಟಿದ್ದು, ಎಐ ನಂತೆ ಕಾಣುವ ಈ ಫೋಟೊಗಳನ್ನು ನೋಡಿ ಅಭಿಮಾನಿಗಳು ಅಮ್ಮ-ಮಗನಿಗೆ ದೃಷ್ಟಿ ತೆಗೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ವೈರಲ್ ಆಗುತ್ತಿವೆ.

PREV
16
ಜೂ. ಸಿಂಹ ಜೊತೆ ಹರಿಪ್ರಿಯ

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ (Haripriya) ತಮ್ಮ ಮುದ್ದು ಮಗನ ಜೊತೆಗೆ ಮುದ್ದಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಇದೀಗ ಆ ಫೋಟೊಗಳು ವೈರಲ್ ಆಗುತ್ತಿವೆ. ಅಮ್ಮ ಮಗನ ಮುದ್ದಾದ ಜೋಡಿ ನೋಡಿ ಅಭಿಮಾನಿಗಳು ಮೆಚ್ಚಿಕೊಂಡು ಹರಸಿದ್ದಾರೆ.

26
ಮನುಷ್ಯನ ರೂಪದಲ್ಲಿರುವ ನನ್ನ ಹೃದಯ

ಹರಿಪ್ರಿಯಾ ಮುದ್ದಾದ ವಿಡಿಯೋ ಕ್ಲಿಪ್ ಒಂದನ್ನು ಶೇರ್ ಮಾಡಿದ್ದು, ಅದರಲ್ಲಿ ಜೂ. ಸಿಂಹ ಜೊತೆ ಕಾರಿನಲ್ಲಿ ಕುಳಿತು ಪೋಸ್ ಕೊಟ್ಟಿದ್ದಾರೆ. ಅಮ್ಮ-ಮಗ ಇಬ್ಬರೂ ರೆಟ್ರೋ ಲುಕ್ ನಲ್ಲಿದ್ದಂತೆ ಕಾಣಿಸುತ್ತಿದ್ದಾರೆ. ಈ ಫೋಟೊಗೆ ಹರಿಪ್ರಿಯಾ My heart in human form ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

36
ಮೆಚ್ಚಿಕೊಂಡ ಅಭಿಮಾನಿಗಳು

ಅಮ್ಮ-ಮಗನ ಮುದ್ದಾದ ಫೋಟೊ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಸೂಪರ್ ಅಮ್ಮ ಮಗ, ಮುದ್ದು, ಯಾವ ದೃಷ್ಟಿಯೂ ಬೀಳದಿರಲಿ ಎಂದು ಹರಸಿದ್ದಾರೆ. ವಷಿಷ್ಟ ಸಿಂಹ (Vasishta Simha) ಹಾರ್ಟ್ ಇಮೋಜಿ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

46
ಕೃಷ್ಣ ಜನ್ಮಾಷ್ಟಮಿಯಂದು ನಾಮಕರಣ

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ದಂಪತಿ ತಮ್ಮ ಮುದ್ದು ಮಗನಿಗೆ ಆರು ತಿಂಗಳು ತುಂಬಿದ ಬಳಿಕ ನಾಮಕರಣ ಮಾಡಿದ್ದಾರೆ. ಮಗ ಹುಟ್ಟಿ ಆರು ತಿಂಗಳಾಗಿತ್ತು, ಮಗನಿಗೆ ಆಗಸ್ಟ್ ತಿಂಗಳಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ದಿನ ಅದ್ಧೂರಿಯಾಗಿ ನಾಮಕರಣ ಮಾಡಿದ್ದರು.

56
ಹರಿಪ್ರಿಯಾ -ಸಿಂಹ ಮುದ್ದಿನ ಮಗನ ಹೆಸರೇನು?

ಮಗನಿಗೆ ಈ ಸೆಲೆಬ್ರಿಟಿ ಜೋಡಿ ವಿಪ್ರಾ (Vipra)ಎಂದು ಹೆಸರು ಇಟ್ಟಿದ್ದಾರೆ. “ವಿಪ್ರಾ ಎಂದರೆ ಶಿವತತ್ವ,ಎರಡು ಶಕ್ತಿಗಳ ಆಶೀರ್ವಾದ ಎಂದು ಹೇಳಿದ್ದಾರೆ. ಹೆಚ್ಚು ಜ್ಞಾನವುಳ್ಳವನು ಅಥವಾ ಬುದ್ಧಿವಂತನು ಅಂತ ಕೂಡ ಹೇಳಲಾಗುತ್ತದೆ.

66
ಪ್ರೀತಿಸಿ ಮದುವೆಯಾಗಿದ್ದ ಹರಿಪ್ರಿಯಾ -ವಷಿಷ್ಠ ಸಿಂಹ

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಸೆಲೆಬ್ರಿಟಿ ಕಪಲ್ಸ್ ಮೈಸೂರಿನ ಆಶ್ರಮದಲ್ಲಿ 2023ರ ಜನವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ವಾರ್ಷಿಕೋತ್ಸವದ ದಿನವೇ ಹರಿಪ್ರಿಯಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯಕ್ಕಂತೂ ಎಲ್ಲೆಡೆ ಈ ಮುದ್ದಾದ ಫೋಟೊ ವೈರಲ್ ಆಗುತ್ತಿದೆ.

Read more Photos on
click me!

Recommended Stories