ಇದು ಮಾತ್ರ ಅಲ್ಲ, ವಿಡಿಯೋ ಮಾಡಿ ತಮ್ಮ ಪಿಎಚ್ ಡಿ ಜರ್ನಿ (journey of PhD) ಬಗ್ಗೆ ಮೇಘನಾ ಮಾತನಾಡಿ, ಇವತ್ತು ನಾನು ನಿಮ್ಮೆಲ್ಲರ ಜೊತೆ ಒಂದು ಖುಷಿಯ ವಿಚಾರ, ಹೆಮ್ಮೆಯ ವಿಚಾರ, ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಇಲ್ಲ ನಾನು ಮದುವೆಯಾಗ್ತಿಲ್ಲ, ಆದರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ 6 ವರ್ಷಗಳಿಂದ ನಾನು ನನ್ನ ಪಿಎಚ್‌ಡಿ ಮಾಡುತ್ತಿದ್ದೆ. 2024ರ ಅಕ್ಟೋಬರ್‌ನಲ್ಲಿ ನಾನು ನನ್ನ ಪಿಎಚ್‌ಡಿ ಥೀಸೀಸ್ ಯಶಸ್ವಿಯಾಗಿ ಸಲ್ಲಿಸಿದ್ದೆ. ಕಳೆದ ವಾರ ನನ್ನ ವೈವಾ ಕೂಡ ಆಯ್ತು. ಇವತ್ತು ನಾನು ನನ್ನ ಡಾಕ್ಟರೇಟ್ ಪದವಿಯನ್ನು ಹೆಮ್ಮೆಯಿಂದ ಸ್ವೀಕರಿಸಿದ್ದೇನೆ. ಇದು ತುಂಬಾ ವಿಶೇಷವಾದದ್ದು. ಯಾಕೆಂದರೆ ಈ ಪಿಎಚ್‌ಡಿ ಪಯಣ ಅಷ್ಟು ಸುಲಭ ಆಗಿರಲಿಲ್ಲ ಎಂದಿದ್ದಾರೆ.