ಯಾರೂ ದೃಷ್ಟಿ ಹಾಕ್ಬೇಡಿ; ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ತೋಳಲ್ಲಿ ಪರಿ; ಚೆಂದದ ಫೋಟೋಗಳಿವು!
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಮುದ್ದಾದ ಮಗಳು ಪರಿಯ ಫೋಟೋಗಳಿವು!
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಮುದ್ದಾದ ಮಗಳು ಪರಿಯ ಫೋಟೋಗಳಿವು!
'ಲವ್ ಮಾಕ್ಟೇಲ್' ಸಿನಿಮಾ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಮುದ್ದಾದ ಮಗಳು ಪರಿಯ ಫೋಟೋ ಇಲ್ಲಿವೆ.
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ʼನಮ್ ದುನಿಯಾ ನಮ್ ಸ್ಟೈಲ್ʼ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದಲ್ಲಿ ಇವರಿಬ್ಬರಿಗೂ ಪರಿಚಯ ಆಯ್ತು.
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಆರು ವರ್ಷಗಳಿಗೂ ಅಧಿಕ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರದ್ದು ಅರೇಂಜ್ ಮ್ಯಾರೇಜ್.
ʼಲವ್ ಮಾಕ್ಟೇಲ್ʼ ಸಿನಿಮಾಕ್ಕೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಹಣ ಹೂಡಿದ್ದರು. ಅಷ್ಟೇ ಅಲ್ಲದೆ ಸಂಗೀತ, ಕ್ಯಾಮರಾ ಕೆಲಸ ಬಿಟ್ಟು ಉಳಿದೆಲ್ಲವನ್ನು ಈ ಜೋಡಿಯೇ ನಿಭಾಯಿಸಿತ್ತು.
ʼಲವ್ ಮಾಕ್ಟೇಲ್ʼ ಸಿನಿಮಾ ಗೆದ್ದ ನಂತರದಲ್ಲಿ ಈ ಜೋಡಿ ಸಿಕ್ವೇಲ್ ರಿಲೀಸ್ ಮಾಡಿತು. ಈಗ ಮೂರನೇ ಭಾಗ ತರಲಿದೆಯಂತೆ. ಇದಕ್ಕಾಗಿ ತಯಾರಿ ಕೂಡ ನಡೆಯುತ್ತಿದೆ.
ಡಾರ್ಲಿಂಗ್ ಕೃಷ್ಣ ಅವರು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಮಾಡೆಲಿಂಗ್ ಲೋಕದಲ್ಲಿಯೂ ಗುರುತಿಸಿಕೊಂಡಿದ್ದರು. ದುಡಿದ ಎಲ್ಲ ಹಣವನ್ನು ತಂದು ಸಿನಿಮಾಕ್ಕೆ ಹಾಕಿದ್ದರು.
ʼಲವ್ ಮಾಕ್ಟೇಲ್ʼ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು. ಇದರಿಂದ ಈ ಜೋಡಿ ಹೊಸ ಮನೆ ಖರೀದಿ ಮಾಡಿತ್ತು. ಅಷ್ಟೇ ಅಲ್ಲದೆ ಗ್ರ್ಯಾಂಡ್ ಆಗಿ ಮದುವೆ ಆಗಿತ್ತು.
ಅದ್ದೂರಿಯಾಗಿ ಬ್ಯಾಚುಲರ್ ಪಾರ್ಟಿ, ಸಂಗೀತ, ಮೆಹೆಂದಿ, ಮದುವೆ, ಆರತಕ್ಷತೆ ಕಾರ್ಯಕ್ರಮ ಆಚರಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಬಾಲಿಗೂ ಹೋಗಿ ಬಂದಿದ್ದರು.
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಈಗ ಹೆಣ್ಣು ಮಗುವಿನ ಪಾಲಕರು. ಮಗಳಿಗೆ ಅವರು ಪರಿ ಎಂದು ಹೆಸರು ಇಟ್ಟಿದ್ದಾರೆ.
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅವರು ಮಗಳ ಜೊತೆಗಿನ ಮುದ್ದಾದ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.