ಅರಶಿನ ಶಾಸ್ತ್ರದಲ್ಲಿ ಮಿಂದೆದ್ದ 777 ಚಾರ್ಲಿ ನಿರ್ದೇಶಕ Kiran Raj : ಮದುವೆ ಸಂಭ್ರಮ ಬಲು ಜೋರು

Published : Nov 29, 2025, 06:11 PM IST

ಕನ್ನಡದ ಸೂಪರ್ ಹಿಟ್ ಸಿನಿಮಾವಾಗಿರುವ 777 ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದು, ಈಗಗಾಲೇ ಅರಶಿನ ಶಾಸ್ತ್ರ ನಡೆದಿದೆ. ನವಂಬರ್ 30 ರಂದು ಯುಕೆಯಲ್ಲಿ ನೆಲೆಯಾಗಿರುವ ಅನಯಾ ವಸುಧಾ ಜೊತೆ ಕಿರನ್ ಸಪ್ತಪದಿ ತುಳಿಯಲಿದ್ದಾರೆ.

PREV
18
777 ಚಾರ್ಲಿ ನಿರ್ದೇಶಕ ಕಿರಣ್ ರಾಜ್

ರಕ್ಷಿತ್ ಶೆಟ್ಟಿ ನಟಿಸಿರುವ ಕನ್ನಡ ಸೂಪರ್ ಹಿಟ್ ಚಿತ್ರ 777 ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದು, ಇದೀಗ ಅರಶಿನ ಶಾಸ್ತ್ರ ಬಲು ಅದ್ಧೂರಿಯಾಗಿ ನಡೆದಿದೆ.

28
ಅನಯಾ ವಸುಧಾ ಜೊತೆ ಮದುವೆ

ಕಿರಣ್ ರಾಜ್ ಅವರು ಯುಕೆನಲ್ಲಿ ನೆಲೆಸಿರುವ ಡ್ಯಾನ್ಸರ್ ಅನಯಾ ವಸುಧಾ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಇದೀಗ ಮದುವೆ ಶಾಸ್ತ್ರಗಳು ಆರಂಭವಾಗಿದೆ. ಅರಶಿನ ಶಾಸ್ತ್ರದ ವಿಡಿಯೋವನ್ನು ಕಿರಣ್ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

38
ಜನವರಿಯಲ್ಲಿ ನಿಶ್ಚಿತಾರ್ಥ

ಇದೇ ವರ್ಷದ ಆರಂಭದಲ್ಲಿ ಜನವರಿ 13,2025 ರಂದು ಮಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ನವಂಬರ್ 30 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

48
ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳು

ಕಳೆದ ತಿಂಗಳು ಈ ಜೋಡಿಯ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿವೆ. ಕಿರಣ್ ರಾಜ್ ಪ್ರೀ ವೆಡ್ಡಿಂಗ್ ಫೋಟೊ ಶೂಟ್, ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಈ ಜೋಡಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

58
ಮದುವೆ ಎಲ್ಲಿ?

ಕರ್ನಾಟಕದ ಗಡಿನಾಡಾಗಿರುವ ಕಾಸರಗೋಡಿನವರಾಗಿರುವ ಕಿರಣ್ ರಾಜ್, ತಮ್ಮ ಊರಲ್ಲಿ ಮದುವೆಯಾಗುತ್ತಿದ್ದಾರೆ. ಕಾಸರಗೋಡಿನ ನಾರಂಪಾಡಿ ದೇವಸ್ಥಾನದಲ್ಲಿ ನವಂಬರ್ 30 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

68
ಅಮೆರಿಕಾದಲ್ಲಿ ನೆಲೆಸಿರುವ ಅನಯ

ಅನಯ ವಸುಧಾ ಮೂಲತಃ ಕಾಸರಗೋಡಿನವರೇ ಆಗಿದ್ದು, ವೃತ್ತಿಯಲ್ಲಿ ನೃತ್ಯಗಾರ್ತಿ ಆಗಿದ್ದಾರೆ, ಸದ್ಯ ಯುಕೆಯಲ್ಲಿ ನೆಲೆಸಿದ್ದು, ಅಲ್ಲಿ ಭರತನಾಟ್ಯ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

78
ಇವರಿಬ್ಬರ ಲವ್ ಸ್ಟೋರಿ ಶುರು ಆಗಿದ್ದು ಹೀಗೆ

ಈ ಜೋಡಿಯ ಲವ್ ಸ್ಟೋರಿ ಶುರುವಾಗಿದ್ದು ಯುಕೆನಲ್ಲಿಯೇ. ಕಿರಣ್ ರಾಜ್ ಯುಕೆಗೆ ಅನಿಮೇಷನ್ ಕಲಿಯಲು ಹೋಗಿದ್ದರು. ಈ ಕೋರ್ಸ್‌ ಸಮಯದಲ್ಲಿ ಅನಯಾ ವಸುಧಾ ಪರಿಚಯ ಆದರು, ಆ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕೆ ಪ್ರೀತಿ ಮಾಡಿತ್ತು ಈ ಜೋಡಿ.

88
ಚಾರ್ಲಿ ಸಿನಿಮಾಗೆ ರಾಜ್ಯ ಪ್ರಶಸ್ತಿ

ಮದುವೆಯ ಸಂಭ್ರಮದಲ್ಲಿರುವ ಕಿರಣ್ ರಾಜ್ ಗೆ ಮತ್ತೊಂದು ಗೆಲುವು ಸಿಕ್ಕಿದ್ದು, ಈ ಹಿಂದೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ 777 ಚಾರ್ಲಿ ಸಿನಿಮಾಗೆ ಇದೀಗ ಮೂರು ಕೆಟಗರಿಗಳಲ್ಲಿ ರಾಜ್ಯ ಪ್ರಶಸ್ತಿ ಕೂಡ ಒಲಿದು ಬಂದಿದೆ. ಶೀಘ್ರದಲ್ಲೇ ಮತ್ತೊಂದು ನಾಯಿಯ ಕಥೆ ಜೊತೆಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಕಿರಣ್.

Read more Photos on
click me!

Recommended Stories