Aditi Prabhudeva Anniversary: ಚಂದನವನದ ಸುಂದರಿ ನಟಿ ಅದಿತಿ ಪ್ರಭುದೇವ ಇತ್ತೀಚೆಗೆ ತಮ್ಮ ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಮುದ್ದಾದ ಫ್ಯಾಮಿಲಿ ಫೋಟೊ ಶೇರ್ ಮಾಡುವ ಮೂಲಕ ತಮ್ಮ ಬೆಸ್ಟ್ ಫ್ರೆಂಡ್ ಆಗಿರುವ ಗಂಡನಿಗೆ ಶುಭಾಶಯ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದ ಜನಪ್ರಿಯ ನಟಿ, ತಮ್ಮ ಮಾತು ನಗುವಿನಿಂದಲೇ ಮೋಡಿ ಮಾಡುವ ಚೆಲುವೆ ಅದಿತಿ ಪ್ರಭುದೇವ ಇತ್ತೀಚೆಗೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.
27
ಅದಿತಿ- ಯಶಸ್
ಅದಿತಿ ಪ್ರಭುದೇವ ಮೂರು ವರ್ಷಗಳ ಹಿಂದೆ ನವಂಬರ್ 29ರಂದು ಉದ್ಯಮಿಯಾಗಿರುವ ಯಶಸ್ ಪಾಟ್ಲಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮುದ್ದಾದ ಮಗಳಿಗೆ ತಾಯಿಯಾಗಿದ್ದಾರೆ.
37
ಗಂಡನಿಗೆ ಪ್ರೀತಿಯ ವಿಶ್
ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಅದಿತಿ ಮುದ್ದಾದ ಫ್ಯಾಮಿಲಿ ಪೋಸ್ಟ್ ಶೇರ್ ಮಾಡಿ ಗಂಡನಿಗೆ ಶುಭಾಶಯ ತಿಳಿಸಿದ್ದಾ ಹ್ಯಾಪಿ ಆನಿವರ್ಸರಿ. ನನ್ನ ಬೆಸ್ಟ್ ಫ್ರೆಂಡ್ ನೀನಂದ್ರೆ ನನಗೆ ಪ್ರಪಂಚ. 3 years of togetherness ಎಂದಿದ್ದಾರೆ.
ಅದಿತಿ ಪೋಸ್ಟ್ ಗೆ ಯಶಸ್ ಕೂಡ ಉತ್ತರಿಸಿದ್ದು,ಹಾಪಿ 3 ಸ್ವೀಟಿ! ನಮ್ಮ ಕುಟುಂಬಕ್ಕೆ ನಿನ್ನ ಪ್ರೀತಿ, ಕಾಳಜಿ ಮತ್ತು ಸಮರ್ಪಣೆ ನಿಜಕ್ಕೂ ಸ್ಪೂರ್ತಿದಾಯಕ. ನೀವು ನಮ್ಮ ಪುಟ್ಟ ಕುಟುಂಬದ ಬೆನ್ನೆಲುಬು, ಮತ್ತು ನೀನು ನನ್ನ ಪಕ್ಕದಲ್ಲಿರುವುದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
57
ಐ ಲವ್ ಯೂ ಕಂದಮ್ಮ
3 ವರ್ಷಗಳ ಪ್ರೀತಿ, ನಗು ಮತ್ತು ಪುಟ್ಟ ಪಾದಗಳು. ನಮ್ಮ ರಾಜಕುಮಾರಿ ನಮ್ಮ ಪ್ರೀತಿಗೆ ಹೊಸ ಆಯಾಮವನ್ನು ಸೇರಿಸಿದ್ದಾರೆ. ನಾನು ಕೃತಜ್ಞನಾಗಿದ್ದೇನೆ. ಒಟ್ಟಿಗೆ ಇನ್ನೂ ಅನೇಕ ಸಾಹಸಗಳನ್ನು ಮಾಡೋಣ. ಐ ಲವ್ ಯೂ ಕಂದಮ್ಮ
67
ಅದಿತಿ ಪ್ರಭುದೇವ ಕರಿಯರ್
ಎಂಬಿಎ ಗ್ರಾಜುಯೇಟ್ ಆಗಿರುವ ಅದಿತಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಗುಂಡ್ಯನ ಹೆಂಡ್ತಿ ಮತ್ತು ನಾಗಕನ್ನಿಕ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದರು. ಧೈರ್ಯಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇವರ ಹುಟ್ಟು ಹೆಸರು ಸುದೀಪನ ಬನಕರ್ ಪ್ರಭದೇವ. ಸಿನಿಮಾಕ್ಕಾಗಿ ಅದಿತಿ ಪ್ರಭುದೇವ ಆದರು.
77
ಈ ವರ್ಷ ಬಿಡುಗಡೆಯಾದ ಸಿನಿಮಾಗಳು
ಅದಿತಿ ಪ್ರಭುದೇವ ಮದುವೆಯಾಗಿ ಮಗುವಾದ ಬಳಿಕವೂ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಛೂ ಮಂತರ್,ಅಂದೊಂದಿತ್ತು ಕಾಲ, ದಿಲ್ಮಾರ್ 2025ರಲ್ಲಿ ಬಿಡುಗಡೆಯಾದ ಅದಿತಿ ಅಭಿನಯದ ಸಿನಿಮಾಗಳು. ಇನ್ನಷ್ಟೆ ಬಿಡುಗಡೆಯಾಗಲಿರುವ ಮಾಫಿಯಾ ಸಿನಿಮಾದಲ್ಲಿ ಅದಿತಿ ನಟಿಸಿದ್ದಾರೆ.