ಮುಳುಗೆದ್ದ ಹೆಣ್ಣ ಮೈಯ್ಲಿ, ಹಂಸಲೇಖ ಲೇಖನಿಯಿಂದ ಜಾರಿದ ಶೃಂಗಾರಮಯ ಸಾಲುಗಳು ವೈರಲ್

Published : Nov 29, 2025, 12:57 PM IST

ನಾದಬ್ರಹ್ಮ ಹಂಸಲೇಖ ಅವರ ಹಾಡುಗಳಲ್ಲಿನ ತುಂಟತನ ಎಲ್ಲರಿಗೂ ತಿಳಿದಿದೆ. 1994ರ 'ರಸಿಕ' ಚಿತ್ರದ 'ಅಂಬರವೇರಿ ಅಂಬರವೇರಿ' ಹಾಡಿನಲ್ಲಿ ಪ್ರಕೃತಿಯನ್ನು ಹೆಣ್ಣಿನ ಸೌಂದರ್ಯಕ್ಕೆ ಹೋಲಿಸಿ ಬರೆದ ಶೃಂಗಾರಮಯ ಸಾಲುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

PREV
15
ನಾದಬ್ರಹ್ಮ, ಸಂಗೀತ ಮಾಂತ್ರಿಕ ಹಂಸಲೇಖ

ನಾದಬ್ರಹ್ಮ, ಸಂಗೀತ ಮಾಂತ್ರಿಕ ಹಂಸಲೇಖ ಅವರ ಹಾಡುಗಳಲ್ಲಿ ಸಣ್ಣದಾದ ತುಂಟತನ ಇರುತ್ತೆ ಎಂದು ಬಹುತೇಕ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹಂಸಲೇಖ ಬೆರಳತುದಿಯಿಂದ ಸಾವಿರಾರು ಹಾಡುಗಳು ಹೊರಗೆ ಬಂದಿವೆ. ಆಗಾಗ್ಗೆ ಹಂಸಲೇಖ ಹಾಡುಗಳ ಕೆಲವು ಸಾಲುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ.

25
'ರಸಿಕ' ರೊಮ್ಯಾಂಟಿಕ್ ಸಿನಿಮಾ

1994ರಲ್ಲಿ ಬಿಡುಗಡೆಯಾದ 'ರಸಿಕ' ರೊಮ್ಯಾಂಟಿಕ್ ಸಿನಿಮಾದ ಎಲ್ಲಾ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ತಮಿಳಿನ ಸೆಂತಮಿಳ್ ಪಟ್ಟು ಚಿತ್ರದ ರಿಮೇಕ್ ಇದಾಗಿದ್ದು, ರವಿಚಂದ್ರನ್, ಭಾನುಪ್ರಿಯಾ, ಶ್ರುತಿ, ಜಯಂತಿ, ದ್ವಾರಕೀಶ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಈ ಚಿತ್ರ ಒಟ್ಟು ಏಳು ಹಾಡುಗಳನ್ನು ಹೊಂದಿದ್ದು, ಹಂಸಲೇಖ ಅವರೇ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ.

35
ಅಂಬರವೇರಿ ಅಂಬರವೇರಿ, ಸೂರ್ಯನು ಬಂದಾನೊ

ಸದ್ಯ ರಸಿಕ ಸಿನಿಮಾದ ಅಂಬರವೇರಿ ಅಂಬರವೇರಿ, ಸೂರ್ಯನು ಬಂದಾನೊ, ಥಳಾ ಥಳ ಥಳ - ಜಗಾ ಥಳ ಥಳ, ಫಳಾ ಫಳ ಫಳ - ಜಗಾ ಫಳ ಫಳ ಹಾಡಿನಲ್ಲಿರುವ ಕೆಲವೊಂದು ಸಾಲುಗಳು ಮುನ್ನಲೆಗೆ ಬಂದಿವೆ. ಈ ಹಾಡನ್ನು ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಪ್ರಕೃತಿಯನ್ನು ಹೆಣ್ಣಿನ ಸೌಂದರ್ಯದೊಂದಿಗೆ ಹೋಲಿಸಿ ಶ್ರುಂಗಾರಮಯವಾಗಿ ಹಂಸಲೇಖ ಬರೆದಿದ್ದಾರೆ. ವೈರಲ್ ಆಗಿರುವ ಸಾಲು ಯಾವುದು ಎಂದು ನೋಡೋಣ ಬನ್ನಿ.

45
ಚರಣ

ಅಂಬರವೇರಿ ಅಂಬರವೇರಿ ಹಾಡಿನ ಚರಣದಲ್ಲಿ ತುಂಟತನದಿಂದ ಕೂಡಿರುವ ಸಾಲುಗಳಿವೆ. ಆ ಸಾಲುಗಳು ಈ ಕೆಳಗಿನಂತಿವೆ.

ಮುಂಜಾನೆ ನೀರಿನಲ್ಲಿ

ಮುಳುಗೆದ್ದ ಹೆಣ್ಣ ಮೈಯ್ಲಿ

ನಿಂತ ನೀರಿನಂತೆ

ಜಾರೋ ಮುತ್ತಿನಂತೆ

ನೆಂದಾಡಿವೆ ಹಣ್ಗಳೂ..…

ಇದನ್ನೂ ಓದಿ: ಹಾಲುಂಡರೂ ಖೀರುಂಡರೂ ಬಾಯಾರಿದೆ ಬಾರೆ.. ಸರಸ ಪದಗಳ ಸರದಾರನ ಪ್ರಸ್ತದ ಗೀತೆ

55
ಟೈಟಲ್ ಸಾಂಗ್‌

ಇದೇ ಚಿತ್ರದ ಟೈಟಲ್ ಸಾಂಗ್‌ನಲ್ಲಿ ತಮ್ಮ ಮತ್ತು ರವಿಚಂದ್ರ ನಡುವಿನ ಸ್ನೇಹದ ಬಗ್ಗೆ ಸಾಲು ಬರೆದಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ವಿ.ರವಿಚಂದ್ರನ್-ಹಂಸಲೇಖ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಹಾಡುಗಳು ಇಂದಿಗೂ ಜನಪ್ರಿಯವಾಗಿದ್ದು, ಹೊಸ ಸಂಗೀತ ನಿರ್ದೇಶಕರಿಗೆ ವಿಶ್ವವಿದ್ಯಾಲಯದಂತಿವೆ.

ಇದನ್ನೂ ಓದಿ: ನಿನ್ನ ರವಿಕೆ ಬಿಗಿಯಾಗಿದ್ದು ನನ್ನ ನೆನಪಲ್ ತಾನೇ; ಹಂಸಲೇಖ ಸಾಹಿತ್ಯ ಮತ್ತೊಮ್ಮೆ ವೈರಲ್

Read more Photos on
click me!

Recommended Stories