ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ನಟನೆಯ ಹೊಸ ಸಿನಿಮಾ ‘666 ಆಪರೇಷನ್ ಡ್ರೀಮ್ ಥಿಯೇಟರ್’. ಇದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್.
‘666 ಆಪರೇಷನ್ ಡ್ರೀಮ್ ಥಿಯೇಟರ್’ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ನಟನೆಯ ಹೊಸ ಸಿನಿಮಾ. ಇದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್.
25
ಈ ಚಿತ್ರದ ಘೋಷಣೆಯ ಪೋಸ್ಟರ್ ಜೊತೆಗೆ ಅಣ್ಣಾವ್ರ ‘ಆಪರೇಶನ್ ಡೈಮಂಡ್ ರಾಕೆಟ್’ ಅನ್ನು ಹೋಲುವಂಥಾ ಆನಿಮೇಟೆಡ್ ಟೀಸರ್ ಅನ್ನೂ ಚಿತ್ರತಂಡ ಬಿಡುಗಡೆ ಮಾಡಿದೆ. ವೈಶಾಕ್ ಜೆ ಗೌಡ ನಿರ್ಮಾಣದ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗಲಿದೆ.
35
ಈ ಹಿಂದೆ ನಿರ್ದೇಶಕ ಹೇಮಂತ್ ರಾವ್, ಶಿವರಾಜ್ ಕುಮಾರ್ ಜೊತೆಗೆ ‘ಭೈರವನ ಕೊನೆಯ ಪಾಠ’ ಸಿನಿಮಾ ಘೋಷಿಸಿದ್ದರು. ಶಿವಣ್ಣ ಅವರ ಅನಾರೋಗ್ಯದ ಕಾರಣಕ್ಕೆ ಈ ಸಿನಿಮಾ ಮುಂದಕ್ಕೆ ಹೋಗಿತ್ತು.
ಇದೀಗ ಅದೇ ತಂಡದಿಂದ ಶಿವಣ್ಣ ಹಾಗೂ ಡಾಲಿ ಧನಂಜಯ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಹೊಸ ಸಿನಿಮಾದ ಘೋಷಣೆಯಾಗಿದೆ. ನಾಳೆ (ಜೂ.20) ಈ ಸಿನಿಮಾ ಸೆಟ್ಟೇರಲಿದೆ.
55
'666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರವನ್ನು ಡಾ.ವೈಶಾಖ್ ಜೆ ಗೌಡ ಅವರು ವೈಶಾಖ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ವಿಶ್ವಾಸ್ ಕಾಶ್ಯಪ್ ಕಲಾ ನಿರ್ದೇಶನ ಈ ಸಿನಿಮಾಗಿದೆ.