Rakshitha Prem: ಊರು ಬಿಟ್ಟರೂ ಮೂಲ‌ ಮರೆಯದ ರಕ್ಷಿತಾ... ಕಟೀಲು, ಕೊಲ್ಲೂರಿಗೆ ಭೇಟಿ ಕೊಟ್ಟ ನಟಿ

Published : Jun 18, 2025, 05:27 PM ISTUpdated : Jun 18, 2025, 05:48 PM IST

ಕನ್ನಡ ಚಿತ್ರರಂಗದ ನಟಿ, ನಿರ್ಮಾಪಕಿ ರಕ್ಷಿತಾ ಜೋರಾದ ಮಳೆಯ ನಡುವೆ ಕರಾವಳಿಗೆ ಭೇಟಿ ನೀಡಿ, ಇಲ್ಲಿನ ವಿವಿಧ ದೇಗುಲಗಳ ದರ್ಶನ ಪಡೆದಿದ್ದಾರೆ.

PREV
18

ಕನ್ನಡ ಚಿತ್ರರಂಗದ ಜನಪ್ರಿಯ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ (Rakshitha Prem) ಮಂಗಳೂರಿಗೆ ಬಂದಿದ್ದಾರೆ. ಕರಾವಳಿಯ ಹಲವು ದೇಗುಲಗಳಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.

28

ಮಂಗಳೂರಿನಲ್ಲಿ ಭಾರಿ ಜೋರಾಗಿ ಮಳೆಯಾಗುತ್ತಿದ್ದು, ಇದರ ನಡುವೆಯೇ ನಟಿ ದೇಗುಲ ದರ್ಶನಕ್ಕಾಗಿ ಕರಾವಳಿಗೆ ಆಗಮಿಸಿದ್ದಾರೆ. ನಟಿ ಬೆಂಗಳೂರಲ್ಲಿ ಬ್ಯುಸಿಯಾಗಿದ್ದರೂ ಸಹ ತಮ್ಮ ಮೂಲಕವನ್ನು ಮರೆಯದೇ ಪ್ರತಿ ವರ್ಷವೂ ಕರಾವಳಿಯ ದೇಗುಲ ದರ್ಶನ ಮಾಡುತ್ತಾರೆ.

38

ಈ ಬಾರಿ ರಕ್ಷಿತಾ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (Kateel Sri Durgaparameshwari Temple), ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

48

ನಟಿ ರಕ್ಷಿತಾ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ ಆಗಿದ್ದರೂ ಸಹ ಅವರ ತಾಯಿಯ ಊರು ಕರಾವಳಿ. ಹಾಗಾಗಿ ನಟಿಗೆ ಹಿಂದಿನಿಂದಲೂ ಕರಾವಳಿ ಜಿಲ್ಲೆಯಲ್ಲಿ ಸೆಳೆತ. ಹಾಗಾಗಿ ಪ್ರತಿ ವರ್ಷ ಇಲ್ಲಿ ಬಂದು ಕಟೀಲು, ಕೊಲ್ಲೂರಿಗೆ ಮುಖ್ಯವಾಗಿ ಭೇಟಿ ಕೊಡುತ್ತಲೇ ಇರುತ್ತಾರೆ.

58

ಅಷ್ಟೇ ಅಲ್ಲ ರಕ್ಷಿತಾ ಪ್ರತಿವರ್ಷವೂ ಮಂಗಳೂರಿನ ಕೊರಗಜ್ಜ ಕ್ಷೇತ್ರಕ್ಕೂ ಭೇಟಿ ನೀಡಿ, ಅಜ್ಜನಿಗೆ ಕಾಣಿಕೆ ಸಲ್ಲಿಸಿ ಬರುತ್ತಾರೆ. ಅಜ್ಜನ ಕ್ಷೇತ್ರ ತುಂಬಾನೆ ಕಾರಣಿಕವಾದುದು ಎಂದು ಅವರೇ ಹಲವು ಬಾರಿ ಹೇಳಿದ್ದರು. ರಕ್ಷಿತಾ ಬಳಿಕ ದರ್ಶನ್, ಮಾಲಾಶ್ರೀ ಕೂಡ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.

68

ಈ ಬಾರಿ ರಕ್ಷಿತಾ ಪ್ರೇಮ್ ಅವರಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕುಮಾರ್ ಹಾಗೂ ಇನ್ನಿತರರು ಸಾಥ್ ನೀಡಿದ್ದಾರೆ. ದೇವಸ್ಥಾನಗಳ ಫೋಟೊಗಳು ಹಾಗೂ ಎಲ್ಲರ ಜೊತೆಗಿರುವ ಫೋಟೊಗಳನ್ನು ರಕ್ಷಿತಾ ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ome pics from my hometown ಎಂದು ಬರೆದುಕೊಂಡಿದ್ದಾರೆ.

78

ಮದುವೆಯ ಬಳಿಕ ನಟನೆಯಿಂದ ದೂರ ಉಳಿದಿರುವ ರಕ್ಷಿತಾ, ಪತಿ ಪ್ರೇಮ್ ಜೊತೆ ಸೇರಿ ಹಲವು ಸಿನಿಮಾ ನಿರ್ಮಾಣವನ್ನೂ ಮಾಡಿದ್ದಾರೆ. ಜೋಗಯ್ಯ, ಡಾನ್, ಎಕ್ ಲವ್ ಯಾ ಸಿನಿಮಾಗಳ ನಿರ್ಮಾಣ ಮಾಡಿದ್ದು ರಕ್ಷಿತಾ.

88

ರಕ್ಷಿತಾ 2014ರಿಂದ ಕನ್ನಡ ರಿಯಾಲಿಟಿ ಶೋಗಳಲ್ಲಿ (reality show) ಜಡ್ಜ್ ಆಗಿ ಕಾಣಿಸಿಕೊಂಡಿದ್ದು, ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೇರಿ ಸುಮಾರು 15 ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ ಕ್ರೇಜಿ ಕ್ವೀನ್ ರಕ್ಷಿತಾ.

Read more Photos on
click me!

Recommended Stories