ಮದುವೆಯಾದ 3 ನಿಮಿಷದಲ್ಲೆ ಡಿವೋರ್ಸ್ ಕೊಟ್ಟ ಪತ್ನಿ… ಬೇಷ್ ಎಂದ ಜನ…ಅಷ್ಟಕ್ಕೂ ಆಗಿದ್ದೇನು?

First Published | Jul 25, 2024, 5:47 PM IST

ಒಬ್ಬ ವ್ಯಕ್ತಿ ತಮಾಷೆಗಾಗಿ ಹೇಳಿದ ಮಾತು ವಿಚ್ಛೇದನಕ್ಕೆ ಕಾರಣವಾಗಬಹುದು ಎಂಬುದರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಈ ಬಗ್ಗೆ ಯೋಚಿಸುವ ಅಗತ್ಯವಿಲ್ಲ ಏಕೆಂದರೆ ಕುವೈಟ್ ನಲ್ಲಿ ನಡೆದಿದೆ. ಮದುವೆಯಾಗಿ ಮೂರೇ ಮೂರು ನಿಮಿಷಕ್ಕೆ ಹೆಂಡ್ತಿ ಡಿವೋರ್ಸ್ ನೀಡಿದ ಘಟನೆ ನಡೆದಿದೆ.
 

ಇತ್ತೀಚಿನ ದಿನಗಳು ಹೇಗಾಗಿವೆ ಅಂದ್ರೆ ಅನೇಕ ತಿಂಗಳುಗಳು ಮತ್ತು ವರ್ಷಗಳ ಕಾಲ ಒಟ್ಟಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ (live in relationship) ಇದ್ದ ನಂತರ, ಜನರು ಪರಸ್ಪರ ಮದುವೆಯಾಗುವ ಬಗ್ಗೆ ಯೋಚಿಸುತ್ತಾರೆ, ಆದರೆ ಒಂದು ಸಣ್ಣ ತಪ್ಪಿನಿಂದಾಗಿ ಮದುವೆ ಕೆಲವೇ ನಿಮಿಷಗಳಲ್ಲಿ ಮುರಿದು ಬಿದ್ರೆ? ಹೀಗಾಗೋದಕ್ಕೆ ಸಾಧ್ಯ ಇಲ್ಲ ಅಂತ ನೀವು ಹೇಳಬಹುದು. ಆದ್ರೆ ಇತ್ತೀಚೆಗೆ, 2019 ರಲ್ಲಿ ನಡೆದ ಪ್ರಕರಣವು ಭಾರಿ ಚರ್ಚೆಯಲ್ಲಿದೆ. ಇದರಲ್ಲಿ ಕುವೈಟ್ ನ ದಂಪತಿಗಳು ಮದುವೆಯಾದ ಕೇವಲ 3 ನಿಮಿಷಗಳ ನಂತರ ಪರಸ್ಪರ ವಿಚ್ಛೇದನ ಪಡೆದರು.
 

ಇಂಟರ್ನೆಟ್ ನಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದಂತೆ, ಡಿವೋರ್ಸ್ (divorce) ನೀಡಿದ ಯುವತಿಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ, ನಿನ್ನ ನಿರ್ಧಾರ ಸರಿಯಾಗಿದೆ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗಿದೆ, ನಿನಗೋಸ್ಕರ ನೀನೆ ಸ್ಟಾಂಡ್ ತೆಗೆದುಕೊಂಡದ್ದು ಒಳ್ಳೆಯ ನಿರ್ಧಾರ ಎಂದೆಲ್ಲಾ ಹೇಳ್ತಿದ್ದಾರೆ ಜನ. ಅಷ್ಟಕ್ಕೂ ಮದುವೆಯಾಗಿ ಕೇವಲ ಮೂರು ನಿಮಿಷಗಳ ನಂತರ ವಿಚ್ಛೇದನ ಪಡೆಯಲು ಕಾರಣವೇನು? ಅಷ್ಟಕ್ಕೂ ಅಲ್ಲಿ ನಡೆದದ್ದಾರೂ ಏನು ಅನ್ನೋದನ್ನ ಹೇಳ್ತಿವಿ. 
 

Tap to resize

ವಿಚ್ಛೇದನಕ್ಕೆ ಕಾರಣವೇನು?
ಈ ಪ್ರಕರಣವು ಕುವೈಟ್ ನಲ್ಲಿ ನಡೆದಿದೆ.  ಇದರಲ್ಲಿ 2019 ರಲ್ಲಿ, ಈ ದಂಪತಿಗಳು ಕೋರ್ಟ್ ಮ್ಯಾರೇಜ್ ಆಗಿದ್ದರು. ಇದಾಗಿ 3 ನಿಮಿಷಗಳ ನಂತರ ಇಬ್ಬರೂ ವಿಚ್ಛೇದನ ಪಡೆದರು. ಗಂಡ ತನ್ನ ನವ ವಧುವನ್ನು ಸ್ಟುಪಿಡ್ (ಮೂರ್ಖ) ಎಂದು ಕರೆದುದ್ದಕ್ಕಾಗಿ ಆಕೆ ತನ್ನ ಪತಿಗೆ ಡಿವೋರ್ಸ್ ನೀಡಿದ್ದಾರೆ. ಅಷ್ಟಕ್ಕೂ ಆಗಿದ್ದಿಷ್ಟು, ದಂಪತಿಗಳು ಮದುವೆಯ ನಂತರ ನ್ಯಾಯಾಲಯದಿಂದ ಹೊರಗೆ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ವಧು ಜಾರಿ ಬಿದ್ದಳು. ಅವಳು ಬಿದ್ದ ರೀತಿ ನೋಡಿ, ವರನು ಅವಳನ್ನು ಸ್ಟುಪಿಡ್ ಎಂದು ಕರೆದಿದ್ದಾರೆ.  ಆದರೆ ಇದು ಹುಡುಗಿಗೆ ಇಷ್ಟ ಆಗಿಲ್ಲ. ಹಾಗಾಗಿ ತಕ್ಷಣ ಆ ಹುಡುಗಿ ವಿಚ್ಛೇದನ ಪಡೆಯಲು ನಿರ್ಧರಿಸಿದಳು. ನ್ಯಾಯಾಧೀಶರು ಅದೇ ಸಮಯದಲ್ಲಿ ಡಿವೋರ್ಸ್ ನೀಡಿದ್ದಾರೆ. 

ಘಟನೆ ನಡೆದ 5 ವರ್ಷಗಳ ನಂತರ ಚರ್ಚೆಯಲ್ಲಿದೆ ಈ ಸುದ್ದಿ
ಈ ಪ್ರಕರಣವು 2019 ರಲ್ಲಿ ನಡೆದಿದೆ, ಈ ಜೋಡಿ ವಿವಾಹವಾಗಿ, ಡಿವೋರ್ಸ್ ಆಗಿ ಇದೀಗ 5 ವರ್ಷಗಳ ನಂತರ, ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ ಮತ್ತು ಜನರು ಕಾಮೆಂಟ್ ಮಾಡುವ ಮೂಲಕ ಹುಡುಗಿಯ ನಿರ್ಧಾರವನ್ನ ಬೆಂಬಲಿಸಿದ್ದಾರೆ. 

ಸರಿಯಾದ ನಿರ್ಧಾರ ಎಂದ ಜನ 
ಸೋಷಿಯಲ್ ಮೀಡಿಯಾದಲ್ಲಿ (social media) ಅನೇಕ ರೀತಿಯ ಕಾಮೆಂಟ್ಗಳು ಕಂಡುಬರುತ್ತಿವೆ, ಅದರಲ್ಲಿ ಒಬ್ಬರು 'ಸರಿಯಾದ ಸಮಯದಲ್ಲಿ ತೆಗೆದುಕೊಂಡ ಸರಿಯಾದ ನಿರ್ಧಾರ' ಎಂದು ಬರೆದಿದ್ದಾರೆ. ಮತ್ತೊಬ್ಬರು ನೀವು ಮಾಡಿದ್ದು ಸರಿಯಾಗಿದೆ, ಏಕೆಂದರೆ ನೀವು ಇಡೀ ಜೀವನವನ್ನು ಕಳೆಯಲಿರುವ ವ್ಯಕ್ತಿಯು ಜೀವನದ ಏರಿಳಿತಗಳಲ್ಲಿ ಒಟ್ಟಿಗೆ ಇರಬೇಕು, ಅವನು ಅಂತಹ ಕೆಲಸವನ್ನು ಮಾಡಿದರೆ ಮತ್ತು ನಿಮ್ಮನ್ನ ಗೌರವಿಸದಿದ್ದರೆ ಅವನಿಗೆ ಜೀವನ ಸಂಗಾತಿಯಾಗಲು ಯಾವುದೇ ಹಕ್ಕಿಲ್ಲ ಎಂದು ಸಹ ಹೇಳಿದ್ದಾರೆ. 

ಇನ್ನೊಬ್ಬರು ಕನಿಷ್ಠ ಆಕೆ ತನಗಾಗಿ ಒಂದು ನಿಲುವನ್ನು ತೆಗೆದುಕೊಂಡರು ... ಪ್ರತಿಯೊಂದು ಸಂಬಂಧದಲ್ಲೂ ಆತ್ಮಗೌರವ ಬಹಳ ಮುಖ್ಯ ಎಂದರೆ ಇನ್ನೊಬ್ಬರು ಸಂಬಂಧದ ಫೌಂಡೇಶನ್ ಪರಸ್ಪರ ಗೌರವವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಮತ್ತು ನಿಮ್ಮ ಸಂಗಾತಿ ನಿಮ್ಮನ್ನು ಗೌರವಿಸದಿದ್ದರೆ, ಇಡೀ ಜೀವನವನ್ನು ಅವರೊಂದಿಗೆ ಕಳೆಯುವುದು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುತ್ತದೆ ಎಂದಿದ್ದಾರೆ. 

Latest Videos

click me!