ವಿವಾಹಕ್ಕೂ ಮುನ್ನ ಅನಂತ್-ರಾಧಿಕಾ ದಾಂಡಿಯಾ ನೃತ್ಯ, ರಾಣಿಯಂತೆ ಕಂಗೊಳಿಸಿದ ಅಂಬಾನಿ ಸೊಸೆ ಫೋಟೋ ವೈರಲ್!

First Published | Jul 12, 2024, 9:10 PM IST

ಭಾರತದ ಅತ್ಯಂತ ಶ್ರೀಮಂತ ಮದುವೆ ಎಂದೇ ಪರಿಗಣಿಸಲಾಗಿರುವ ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಮದುವೆಯ ಕೊನೆ ಕ್ಷಣದ ಕಾರ್ಯಕ್ರಮಗಳ ಫೋಟೋಗಳು ವೈರಲ್‌ ಆಗಿದೆ. 

ಮೂರು ದಿನಗಳ ಕಾಲ ನಡೆಯಲಿರುವ ಈ ಅದ್ದೂರಿ ವಿವಾಹ ಮಹೋತ್ಸವದಲ್ಲಿ ಜುಲೈ 12ರಂದು  ರಾತ್ರಿ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್‌ ವಿವಾಹ ಬಂಧನಕ್ಕೆ ಒಳಗಾಗಲಿದ್ದು, ಜು. 13ರಂದು 'ಶುಭ್ ಆಶೀರ್ವಾದ್'  ಮತ್ತು ಜು. 14ರಂದು ಅಂತಿಮ ಸುತ್ತಿನ 'ಮಂಗಲ್ ಉತ್ಸವ್' (ಆರತಕ್ಷತೆ) ಕಾರ್ಯಕ್ರಮ ನಡೆಯಲಿದೆ.

ಇದಕ್ಕೂ ಮುನ್ನ ನಡೆದ ಕಾರ್ಯಕ್ರಮಗಳ ಫೋಟೋ  ಈಗ ವೈರಲ್ ಆಗಿದೆ. ಮದುಮಗಳು ರಾಧಿಕಾ ಮರ್ಚೆಂಟ್‌ ರಾಣಿಯಂತೆ ಕಂಗೊಳಿಸುತ್ತಿದ್ದು, ವೈಭವದ ಬಟ್ಟೆ ಧರಿಸಿದ್ದಾರೆ.

Tap to resize

ರಾಧಿಕಾ ಅವರು ನೇರಳೆ ಬಣ್ಣದ ಬಂಧನಿ ಲೆಹೆಂಗಾದಲ್ಲಿ ಮಿಂಚಿದ್ದರೆ. ಅನಂತ್ ತನ್ನ ಭಾವೀ ಪತ್ನಿಗೆ ಮ್ಯಾಚ್‌ ಆಗುವ ರೀತಿಯಲ್ಲಿ ಬಟ್ಟೆ ಧರಿಸಿದ್ದಾರೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸಾಂಪ್ರದಾಯಿಕವಾಗಿ ಮದುವೆಯಾಗುತ್ತಿದ್ದು, ಗುಜರಾತಿ ಮಾಮೇರು ಸಮಾರಂಭ ಮತ್ತು ರೋಮಾಂಚಕ ಗರ್ಬಾ ಪಾರ್ಟಿ ಸೇರಿದಂತೆ ದಾಂಡಿಯಾ ಆಚರಣೆಗಳು ನಡೆದಿದೆ.

ಕೆಲವು ದಿನಗಳಲ್ಲಿ ಅಂಬಾನಿ ಅವರ ನಿವಾಸ ಆಂಟಿಲಿಯಾದಲ್ಲಿ ಮಾಮೇರು, ಮಾಂಡ್ವಾ ಮಹುರತ್, ಗ್ರಹ ಶಾಂತಿ ಪೂಜೆ, ಅರಶಿಣ ಶಾಸ್ತ್ರ , ಮೆಹೆಂದಿ, ಗರ್ಬಾ ನೈಟ್ ಮತ್ತು ಶಿವ-ಶಕ್ತಿ ಪೂಜೆ ಸೇರಿದಂತೆ ಸರಣಿ ಆಚರಣೆಗಳು ನಡೆದಿದೆ.

ಅನಂತ್ ಮತ್ತು ರಾಧಿಕಾ ಎಲ್ಲಾ ಸಮಾರಂಭಗಳಿಗೆ ವಿವಿಧ ಅದ್ಧೂರಿ ಬಟ್ಟೆಗಳನ್ನು ಧರಿಸಿದ್ದು, ಅರಶಿಣ ಶಾಸ್ತ್ರ , ಮೆಹೆಂದಿ, ಗರ್ಬಾ ನೈಟ್ , ಸಂಗೀತ ಕಾರ್ಯಕ್ರಮ ಇವೆಲ್ಲವುಗಳಿಗೂ ಬೇರೆ ಬೇರೇ ಸ್ಟೈಲಿಷ್ ಆದ ಉಡುಗೆಗಳನ್ನು ಧರಿಸಿದ್ದಾರೆ.

Latest Videos

click me!