ಸೆಕ್ಸ್ ಇಲ್ಲದೆಯೇ ಗರ್ಭಿಣಿಯಾದಳಂತೆ ಈಕೆ, ಇಲ್ಲಿದೆ ವಿಚಿತ್ರ ಸುದ್ದಿ!

First Published | Jul 24, 2020, 6:47 PM IST

ವೈದ್ಯಕೀಯ ಜಗತ್ತಿನಲ್ಲಿ ಅನೇಕ ವಿಚಿತ್ರ ಪ್ರಕರಣಗಳು ಘಟಿಸುತ್ತಲೇ ಇರುತ್ತವೆ. ಇದು 10 ವರ್ಷದ ಮಗು ತಂದೆಯಾಗುವ ಸುದ್ದಿಯಾಗಲಿ ಅಥವಾ 70 ವರ್ಷದ ಅಜ್ಜಿ ತಾಯಿಯಾಗುವುದರಲಿ ಒಂದಲ್ಲ ಒಂದು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಗರ್ಭಧಾರಣೆಗೆ, ಲೈಂಗಿಕತೆ ಅಗತ್ಯ ಎಂಬುವುದು ಯೂನಿವರ್ಸಲ್ ಟ್ರುಥ್. ಆದರೆ ಈಗ ಮ್ಯಾಸಚೂಸೆಟ್ಸ್‌ನ ಮಹಿಳೆ ತಾನು ಸೆಕ್ಸ್‌ ಮಾಡದೇ ಗರ್ಭಿಣಿಯಾಗಿದ್ದೆ ಎಂದು ಹೇಳಿಕೊಂಡಿದ್ದಾಳೆ. ಅವಳು ವರ್ಜಿನ್‌ ಆಗಿದ್ದಾಗಲೇ ತನ್ನ ಮೊದಲ ಮಗು ಜನಿಸಿತು ಎಂದೂ ಹೇಳಿಕೊಂಡಿದ್ದಾಳೆ. ಏನಿದು ನ್ಯೂಸ್? 
 

19ನೇ ವಯಸ್ಸಿನಲ್ಲಿ ಗೆಳೆಯನೊಂದಿಗೆ ದೈಹಿಕಸಂಬಂಧವಿಲ್ಲದೆ ಗರ್ಭಿಣಿಯಾಗಿದ್ದೆ, ಎಂದು ಮಹಿಳೆಯೊಬ್ಬಳುಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾಳೆ. ಈ ಪವಾಡ ಹೇಗೆ ಸಂಭವಿಸಿತು ಎಂದು ಅವನಿಗೂ ತಿಳಿದಿಲ್ಲವಂತೆ.
26 ವರ್ಷ ವಯಸ್ಸಿನ ಸಮಂತಾ ನೇರ ಇಸಾಬೆಲ್ ತಮ್ಮ 19ನೇ ವಯಸ್ಸಿನಲ್ಲಿ ತಾಯಿಯಾದಾಗ, ಅವಳ ಗೆಳೆಯ ಅಲೆಕ್ಸ್ ತನ್ನೊಂದಿಗೆ ಲೈಂಗಿಕ ಸಂಬಂಧವನ್ನೇ ಹೊಂದಿರಲಿಲ್ಲ ಎಂದಿದ್ದಾಳೆ. ಹಾಗಾದರೆ ಮಗುವಾಗಿದ್ದಾದರೂ ಹೇಗೆ?
Tap to resize

ಈಗ ಇಬ್ಬರು ಮಕ್ಕಳ ತಾಯಿಯಾಗಿರುವ ಸಮಂತಾ ಟಿಕ್‌ಟಾಕ್‌ನಲ್ಲಿ ವಿಡಿಯೋ ಮಾಡುವ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತನ್ನ ಗೆಳೆಯ ತನ್ನನ್ನು ಹೇಗೆ ಲೈಂಗಿಕತೆಯಿಲ್ಲದೆ ಮಗುವಿನ ತಾಯಿಯನ್ನಾಗಿ ಮಾಡಿದ ಎಂಬುದನ್ನೂು ಆಕೆಯೇ ವಿವರಿಸಿದ್ದಾಳೆ.
ಪ್ರಕರಣದ ಪೂರ್ಣ ವಿವರಗಳನ್ನು ನೀಡುತ್ತಾ, ಸಮಂತಾ ರಾತ್ರಿ ಗೆಳೆಯ ಅಲೆಕ್ಸ್ ಜೊತೆ ಏಕಾಂಗಿಯಾಗಿರುವಾಗ ಆ ರಾತ್ರಿ ಇಬ್ಬರೂ ಪರಸ್ಪರ ಚುಂಬಿಸಿಕೊಂಡಿದ್ದರಂತೆ.
ಒಂದು ವಾರದ ನಂತರ, ಸಮಂತಾಗೆ ಪಿರಿಯಡ್ಸ್‌ ಆಗದೆ ಹೊಟ್ಟೆನೋವು ಬಂದಾಗ, ಪ್ರೆಗ್ನೆಸಿ ಟೆಸ್ಟ್‌ ಮಾಡಲು ಅವಳು ಅಲೆಕ್ಸ್‌ನನ್ನು ಕೇಳಿದಳು. ಆದರೆ ಅಲೆಕ್ಸ್ ಅವರು ಲೈಂಗಿಕ ಸಂಬಂಧ ಹೊಂದಿರದ ಕಾರಣ ಇದು ಸಾಧ್ಯವಿಲ್ಲ ಎಂದು ಹೇಳಿದನಂತೆ.
ಆದರೆ ಆ ತಿಂಗಳೂ ಸಮಂತಾಗೆ ಋತುಚಕ್ರ ತಪ್ಪಿದಾಗ, ಅವಳು ಅಂತಿಮವಾಗಿ ಟೆಸ್ಟ್‌ ಮಾಡಿದಳು. ಸಮಂತಾ ನಿಜವಾಗಿಯೂ ತಾಯಿಯಾಗಲಿರುವ ರಿಸಲ್ಟ್‌ ಇಬ್ಬರಿಗೂ ಶಾಕ್‌ ಆಗಿತ್ತು.
ಸಮಂತಾ ಮತ್ತು ಅಲೆಕ್ಸ್ ಪರಸ್ಪರ ಕೇವಲ ಚುಂಚಿಸಿದ ಕಾರಣದಿಂದ ಗರ್ಭಿಣಿಯಾದಳು. ಇದು ಬಹಳ ಅಪರೂಪ.
ಪುರುಷನ ವೀರ್ಯವು ಲೈಂಗಿಕತೆಯಿಲ್ಲದೆ ಮಹಿಳೆಯ ದೇಹಕ್ಕೆ ಹೋಗಿ ಅವಳ ಮೊಟ್ಟೆಯನ್ನು ಫಲವತ್ತಾಗಿಸಿದಾಗ ಲೈಂಗಿಕತೆಯಿಲ್ಲದೆ ಮಹಿಳೆ ಗರ್ಭಿಣಿಯಾಗಬಹುದು ಎಂದು ರಾಷ್ಟ್ರೀಯ ಆರೋಗ್ಯ ಸೇವೆ ಯುಕೆ ಹೇಳಿದೆ.
ಇದರ ಸಂಭವ ತುಂಬಾ ವಿರಳ. ಆದರೆ ಪುರುಷನ ವೀರ್ಯವು ಮಹಿಳೆಯ ದೇಹದಲ್ಲಿಬೆರಳುಗಳ ಮೂಲಕ ಹೋದರೆ ಮತ್ತು ಅಲ್ಲಿಂದ ಅದು ಮೊಟ್ಟೆಯೊಂದಿಗೆ ಬೆಸೆಯುತ್ತದೆ, ಆಗ ಮಹಿಳೆ ಗರ್ಭಿಣಿಯಾಗಬಹುದು.
ಇದು ತನಗೂ ಸಂಭವಿಸಿದೆ. ಅವರು ಅಲೆಕ್ಸ್ ಜೊತೆ ಲೈಂಗಿಕ ಸಂಬಂಧ ಹೊಂದಿರಲಿಲ್ಲ. ಆದರೆ ಬಹುಶಃ ಚುಂಬನ ಮತ್ತು ಫೋರ್‌ಪ್ಲೇ ಸಮಯದಲ್ಲಿ ಅಲೆಕ್ಸ್‌ನ ವೀರ್ಯವು ತನ್ನ ದೇಹಕ್ಕೆ ಸೇರಿದೆ ಎಂಬುದು ಸಮಂತಾ ಹೇಳುತ್ತಾರೆ.
ಸಮಂತಾ ವೈದ್ಯರನ್ನು ಸಂಪರ್ಕಿಸಿದಾಗ, ಅವಳು ಐದು ತಿಂಗಳ ಕಾಲ ಗರ್ಭಿಣಿಯಾಗಿದ್ದಳು. ತನ್ನ ವರ್ಜಿನ್‌ ಪ್ರೆಗ್ನೆಸಿಯ ಬಗ್ಗೆಯೂ ಅವರು ವೈದ್ಯರಿಗೆ ತಿಳಿಸಿದರು.

Latest Videos

click me!