ಪತಿಯ ಕಾಲಿಗೆ ಬೀಳಲೊಪ್ಪದ ಪತ್ನಿಯರು... ಕಾರಣಗಳು ಹಲವಾರು

Suvarna News   | Asianet News
Published : Jul 20, 2020, 05:54 PM ISTUpdated : Aug 09, 2021, 09:54 AM IST

ಇಂದು ಭೀಮನ ಅಮವಾಸ್ಯೆ. ಪತಿಯೇ ಪರದೈವ ಎಂದು ನಂಬಿ ಆತನಿಗೆ ಪತ್ನಿಯರು ಪೂಜಿಸುವ ಹಬ್ಬ. ಪತ್ನಿಯು ಪತಿಯ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಳ್ಳುವ ರೂಢಿಯಿದೆ. ಆದರೆ, ಈಗ ಕಾಲ ಬದಲಾಗಿದೆ. ಮಹಿಳೆಯರು ಬದಲಾಗಿದ್ದಾರೆ. ಪತಿಯನ್ನು ದೇವರೆಂದು ಪೂಜಿಸಲು ಅವರು ಸಿದ್ಧರಿಲ್ಲ. ಇನ್ನು ಆತನ ಕಾಲಿಗೆ ಬೀಳುವ ಪ್ರಶ್ನೆ ಎಲ್ಲಿಂದ ಬಂತು? ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿಸಮಾನವಾಗಿ ಕಾಲಿಟ್ಟಿರುವ ಅವರು ಪತಿಯನ್ನು ಮಾತ್ರ ತಮಗಿಂತ ಮೇಲೆ, ದೈವಸಮಾನ ಎಂದು ನೋಡಲು ಸಿದ್ಧರಿಲ್ಲ. ತಂದೆತಾಯಿ, ಕಲಿಸಿದ ಗುರುಗಳ ಕಾಲಿಗೆ ಎರಗುವುದು ಓಕೆ, ಪತಿಯ ಕಾಲಿಗೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಪತಿಯ ಕಾಲಿಗೆ ಎರಗಲು ಇಂದಿನ ಪತ್ನಿಯರು ಹಿಂದೇಟು ಹಾಕುವುದೇಕೆ ಎಂದು ಟ್ವಿಟ್ಟರ್‌ನಲ್ಲಿ ಯುವಕನೊಬ್ಬ ಕುತೂಹಲದಿಂದ ಪ್ರಶ್ನಿಸಿದ್ದಾನೆ. ಅದಕ್ಕೆ ಮಹಿಳೆಯರು ಕೊಟ್ಟ ವಿವಿಧ ಉತ್ತರಗಳು ಆಸಕ್ತಿಕರವಾಗಿವೆ. 

PREV
18
ಪತಿಯ ಕಾಲಿಗೆ ಬೀಳಲೊಪ್ಪದ ಪತ್ನಿಯರು... ಕಾರಣಗಳು ಹಲವಾರು

<p>ಭೀಮನ ಅಮಾವಸ್ಯೆ ದಿನ ಪತಿಯರನ್ನು ಪೂಜಿಸಿ, ಒಳ್ಳೆಯದಾಗಲೆಂದು ಪತ್ನಿಯರು ಪೂಜಿಸುತ್ತಾರೆ.</p>

28

ನೀವು ಯಾವ ಸಂಪ್ರದಾಯದ ಬಗ್ಗೆ ಮಾತನಾಡುತ್ತಿದ್ದೀರೋ ಗೊತ್ತಿಲ್ಲ, ಭಾರತೀಯ ಸಂಪ್ರದಾಯದಲ್ಲಿ ಎರಡೂ ಇದೆ ಎಂದ ಒಬ್ಬರು ಕೃಷ್ಣ ತನ್ನ ಪ್ರೇಯಸಿಯ ಕಾಲನ್ನೊತ್ತುತ್ತಿರುವ ಹಾಗೂ ಪ್ರೇಯಸಿಯಿಂದ ಪೂಜಿಸಿಕೊಳ್ಳುತ್ತಿರುವ ಎರಡೂ ಫೋಟೋಗಳನ್ನೂ ಹಾಕಿದ್ದಾರೆ. 

38

ಪ್ರಶ್ನೆ ಕೇಳಿ ಕೋಪಗೊಂಡ ಒಬ್ಬಾಕೆ ಪುರುಷರು ಯುದ್ಧಕ್ಕಾಗಿ ಹೋಗಿ ಸಾಯುತ್ತಿದ್ದ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ. 

48

ನೀವು ಮನಸ್ಸಿಗೆ ಬಂದ ಪ್ರಶ್ನೆ ಕೇಳುತ್ತಿರುವುದರಿಂದ ನಾನೂ ಕೇಳುತ್ತೇನೆ, ಹುಡುಗರನ್ನು ಬೆಟ್ಟದ ಮೇಲಿಂದ ಹಾರುವುದರಿಂದ ತಡೆಯುತ್ತಿರುವುದಾದರೂ ಏನು ಎಂದು ಯುವತಿಯೊಬ್ಬಳು ಖಾರವಾಗಿ ಮರುಪ್ರಶ್ನಿಸಿದ್ದಾಳೆ.

58

ನನ್ನ ನಂಬಿಕೆ ನನಗೆ ಸಮಾನತೆಯ ಬಗ್ಗೆ ಹೇಳುತ್ತದೆ. ನೀವಿನ್ನೂ ಸಂಪ್ರದಾಯದ ಹೆಸರಿನಲ್ಲಿ ಪುರುಷ ಪ್ರಧಾನ್ಯತೆ ಮೆರೆಯುವುದನ್ನು ಬಿಡಿ ಎಂದು ಒಬ್ಬರು ಸಲಹೆ ನೀಡಿದ್ದಾರೆ.

68

ನಮ್ಮ ಸ್ಥಾನ ಆತನ ಕಾಲ ಬಳಿಯಲ್ಲ, ಭುಜಕ್ಕೆ ಭುಜ ಸೇರಿಸುವ ಸಮಸ್ಥಾನ ಸಂಬಂಧವೊಂದರಲ್ಲಿ ಪಾರ್ಟ್ನರ್‌ಗಳದ್ದು ಎಂಬುದೀಗ ಅರಿವಾಗಿದೆ, ಎಂದು ಮಹಿಳೆಯೊಬ್ಬರು ಉತ್ತರಿಸಿದ್ದಾರೆ. 

78

ನಾನೇನಾದರೂ ಪತಿಯ ಕಾಲಿನ ಬಳಿಗೆ ಹೋಗಬೇಕೆಂದರೆ, ಅದು ಬೇರೆಯದೇ ಕಾರಣಕ್ಕಾಗಿ ಆಗಿರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. 

88

ಹೆಣ್ಣನ್ನು ಲಕ್ಷ್ಮೀ ಎಂದು ಕಾಣುತ್ತೇವೆ. ಹಾಗಾಗಿ, ಅವರು ಗಂಡಸಿನ ಕಾಲಿಗೆ ಬೀಳುವ ಅಗತ್ಯವಿಲ್ಲ. ತಂದೆತಾಯಿ, ಗುರುಗಳ ಕಾಲಿಗೆರಗಿದರೆ ಸಾಕು. ಇಂಥದ್ದನ್ನು ಬಯಸುವ ಗಂಡಸರು ಎಕ್ತಾ ಕಪೂರ್ ಧಾರವಾಹಿಗಳನ್ನು ನೋಡುವುದು ಬಿಡಬೇಕು ಎಂಬುದು ಮತ್ತೊಬ್ಬರ ಅಭಿಪ್ರಾಯ.

click me!

Recommended Stories