ಸಂಬಂಧವನ್ನು (relationship) ಬೆಳೆಸುವುದು ಸುಲಭ, ಆದರೆ ಅದನ್ನು ಕಾಪಾಡಿಕೊಳ್ಳುವುದು ಕಷ್ಟ. ಈ ಅನುಭವ ಎಲ್ಲರಿಗೂ ಆಗಿರುತ್ತೆ ಅಲ್ವಾ? ಸಂಬಂಧವನ್ನು ಆರೋಗ್ಯಕರವಾಗಿ ಮತ್ತು ಗೌರವಯುತವಾಗಿಡಲು, ಅದರಲ್ಲಿ ನಂಬಿಕೆ, ಮಾತುಕತೆ, ಗೌರವ, ಅಂಡರ್ ಸ್ಟಾಂಡಿಂಗ್ ಬಹಳ ಮುಖ್ಯ. ಆದರೆ ಕೆಲವೊಮ್ಮೆ ಸಂದರ್ಭಗಳಿಂದಾಗಿ ಕೆಲವು ಸಂಬಂಧಗಳು ಮುರಿದುಬೀಳುತ್ತವೆ. ಬ್ರೇಕ್ ಅಪ್ ಆಗುತ್ತೆ ಕೆಲವು ಜನರು ಎಲ್ಲವನ್ನೂ ಮರೆತು ಮುಂದುವರಿಯುತ್ತಾರೆ, ಆದರೆ ಇನ್ನೂ ಕೆಲವು ಜನರು ಒಂದು ಮಿಲಿಯನ್ ಪ್ರಯತ್ನಗಳ ನಂತರವೂ ಆ ಸಂಬಂಧದಿಂದ ಮುಂದುವರಿಯಲು ಸಾಧ್ಯವಾಗುವುದಿಲ್ಲ.
ಬ್ರೇಕ್ ಅಪ್ ನಿಂದ (breakup) ಮುಂದುವರೆಯಲು ಸಾಧ್ಯವಾಗದೇ ಇದ್ದಾಗ ಅನೇಕ ಬಾರಿ ಜನರು ತಮ್ಮ ಮಾಜಿ ಬಗ್ಗೆ ತಿಳಿದುಕೊಳ್ಳಲು ಅವರ ಸೋಶಿಯಲ್ ಮೀಡಿಯಾ ಸ್ಟಾಕ್ ಮಾಡುತ್ತಾರೆ. ಆದರೆ ಹಾಗೆ ಮಾಡುವುದರಿಂದ ನಿಮಗೆ ಮತ್ತು ನಿಮ್ಮ ಮಾಜಿ ಸಂಗಾತಿಗೆ ಹಾನಿಕಾರಕವಾಗಬಹುದು. ನಿಮ್ಮ ಎಕ್ಸ್ ಅನ್ನು ನೀವು ಏಕೆ ಸ್ಟಾಕ್ ಮಾಡಬಾರದು ಎಂದು ತಿಳಿಯೋಣ.
ಭಾವನಾತ್ಮಕವಾಗಿ ದುರ್ಬಲರಾಗಿರುತ್ತಾರೆ: ಬ್ರೇಕಪ್ ನಂತರವೂ ನೀವು ನಿಮ್ಮ ಮಾಜಿ ಸಂಗಾತಿಯನ್ನು ಪ್ರೀತಿಸುತ್ತಿದ್ದರೆ, ಅದು ನಿಮ್ಮನ್ನು ನಿಮ್ಮ ಪಾಸ್ಟ್ ನೊಂದಿಗೆ ಭಾವನಾತ್ಮಕವಾಗಿ ಅಂಟಿಕೊಳ್ಳುವಂತೆ ಮಾಡುತ್ತದೆ. ಅಷ್ಟೇ ಅಲ್ಲ ನಿಮಗೆ ಸಂತೋಷವಾಗಿರಲು ಸಹ ಸಾಧ್ಯವಾಗೋದಿಲ್ಲ. ನಿಮ್ಮ ಎಕ್ಸ್ ನ ಸೋಶಿಯಲ್ ಮೀಡಿಯಾ (social media) ಪ್ರೊಫೈಲ್ಗಳನ್ನು ನಿರಂತರವಾಗಿ ಸ್ಟಾಕ್ ಮಾಡುತ್ತಿದ್ದರೆ, ಅದರಿಂದ ನಿಮ್ಮ ವಯಕ್ತಿಗೆ ಬೆಳವಣಿಗೆಗೆ ಅಡ್ಡಿಯಾಗುತ್ತೆ, ಅಷ್ಟೇ ಅಲ್ಲ, ಇದರ ಜೊತೆಗೆ ಇದರಿಂದ ನಿಮ್ಮ ದುಃಖ ಹೆಚ್ಚುತ್ತೆ, ಜೊತೆಗೆ ಜೆಲಸಿ ಭಾವನೆ ಸಹ ಹೆಚ್ಚುತ್ತೆ.
ಪ್ರೈವೆಸಿಯನ್ನು ಗೌರವಿಸಿ: ನಿಮ್ಮ ಮಾಜಿ ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಪ್ರೈವೆಸಿಯನ್ನು (privacy) ಕಾಪಾಡಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಚಟುವಟಿಕೆಗಳನ್ನು ಸ್ಟಾಕ್ ಮಾಡುವುದು, ಮಾಹಿತಿಗಾಗಿ ಅವರ ಸ್ನೇಹಿತರು ಅಥವಾ ಕುಟುಂಬವನ್ನು ಸಂಪರ್ಕಿಸುವುದು ಅಥವಾ ಅವರ ವೈಯಕ್ತಿಕ ಸ್ಥಳಕ್ಕೆ ಭೇಟಿ ನೀಡುವುದು ಇತ್ಯಾದಿಗಳು ಮಾಡೋದು ಸರಿಯಲ್ಲ. ಅವರನ್ನು ಅವರಷ್ಟಕ್ಕೇ ಬಿಟ್ಟು ಬಿಡಿ
ನೋವು ಹೆಚ್ಚಾಗುತ್ತೆ: ನಿರಂತರ ಬ್ರೇಕಪ್ ನಂತರವೂ ನೀವು ನಿಮ್ಮ ಮಾಜಿ ಸಂಗಾತಿಯನ್ನು ಸ್ಟಾಕ್ ಮಾಡುತ್ತಿದ್ದರೆ, ನಿಮ್ಮ ಸಂಬಂಧವನ್ನು ಕೊನೆಗೊಳಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಅವರನ್ನು ಸ್ಟಾಕ್ ಮಾಡುವುದರಿಂದ ಆ ಸಂಬಂಧದ ನೋವಲ್ಲೇ ನೀವು ಜೀವನ ಕಳೆಯಬೇಕಾಗಿ ಬರುತ್ತೆ.
ಮುಂದೆ ಸಾಗುವುದು ಮತ್ತು ಹೊಸ ಅವಕಾಶಗಳು: ನಿಮ್ಮ ಮಾಜಿ ಸಂಗಾತಿಯನ್ನು ಸ್ಟಾಕ್ (stalking ex) ಮಾಡೋದರಿಂದ ನೀವು ಹೊಸ ಅವಕಾಶಗಳನ್ನು ತಿರಸ್ಕರಿಸುತ್ತೀರಿ. ನಿಮ್ಮ ಪಾಸ್ಟ್ ಬಗ್ಗೆಯೇ ಯೋಚನೆ ಮಾಡೋದರಿಂದ ನಿಮ್ಮ ಬೆಳವಣಿಗೆ ಆಗೋದಾದ್ರೂ ಹೇಗೆ? ಹೊಸ ಸಂಬಂಧದಲ್ಲಿ ಇರೋದಾದ್ರೂ ಹೇಗೆ? ಹಾಗಾಗಿ ಪಾಸ್ಟ್ ನ್ನು ಬಿಟ್ಟು ನೀವು ಪ್ರೆಸೆಂಟ್ ನಲ್ಲಿ ಜೀವಿಸೋದು ಉತ್ತಮ.
ನಿಮ್ಮ ಆತ್ಮ ಗೌರವಕ್ಕೆ ಧಕ್ಕೆ: ಯಾರನ್ನಾದರೂ ಸ್ಟಾಕ್ ಮಾಡುವುದು ನಿಮ್ಮ ಸ್ವಾಭಿಮಾನವನ್ನು ಹಾನಿಗೊಳಿಸುತ್ತದೆ. ಇದರಿಂದ ನಿಮ್ಮ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹಾಗಾಗಿ ನಿಮ್ಮ ಬಗ್ಗೆ ನೀವು ಗಮನ ಹರಿಸೋದನ್ನು ಕಲಿಯಿರಿ. ಇದರಿಂದ ನಿಮ್ಮ ಬಗ್ಗೆ ನಿಮಗೆ ಗೌರವ ಮೂಡೋದು ಖಚಿತ.