ಇಂದಿನ ಯುಗದಲ್ಲಿ, ಹುಡುಗರು ಮದುವೆಗಾಗಿ ಮನೆಯಲ್ಲಿ ಕುಳಿತಿರೋ ಹುಡುಗಿಯರಿಗಿಂತ, ಉದ್ಯೋಗದಲ್ಲಿರುವ ಹುಡುಗಿಯರೇ ಮೊದಲ ಆಯ್ಕೆಯಾಗುತ್ತಿದ್ದಾರೆ. ಇದರ ಹಿಂದೆ ಅನೇಕ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿವೆ. ಅವುಗಳ ಬಗ್ಗೆ ಡೀಟೇಲ್ ಆಗಿ ತಿಳಿದುಕೊಳ್ಳೋಣ.
ಆರ್ಥಿಕ ಸ್ವಾತಂತ್ರ್ಯ (Economical Freedom)
ಉದ್ಯೋಗ ಹೊಂದಿರುವ ಹುಡುಗಿಯರು ಆರ್ಥಿಕವಾಗಿ ಸ್ವತಂತ್ರರಾಗಿದ್ದಾರೆ (financially independant). ಅವರ ಈ ಸ್ವಾವಲಂಬನೆ , ಇಂಡಿಪೆಂಡೆಂಟ್ ಆಗಿರೋ ಗುಣ ಪುರುಷರನ್ನ ಹೆಚ್ಚು ಅಟ್ರಾಕ್ಟ್ ಮಾಡುತ್ತೆ.
ಸಾಮಾಜಿಕ ಗೌರವ (Social Respect)
ಉದ್ಯೋಗ ಹೊಂದಿರುವ ಮಹಿಳೆಯರಿಗೆ ಸಮಾಜದಲ್ಲಿ ಗೌರವ (social respect) ಸಿಗುತ್ತದೆ. ಅವರು ವಿದ್ಯಾವಂತರು ಮತ್ತು ಸ್ವಾವಲಂಬಿಗಳು. ಹಾಗಾಗಿ ಅಂತಹ ಮಹಿಳೆಯರತ್ತ ಪುರುಷರು ಆಕರ್ಷಿತರಾಗೋದು ಸಾಮಾನ್ಯ.
ಸ್ಟ್ರಾಂಗ್ ಆಗಿರ್ತಾರೆ
ಆಫೀಸ್ ಗೆ ಹೋಗಿ ಕೆಲಸ ಮಾಡುವುದು ಅವಳನ್ನು ಭಾವನಾತ್ಮಕವಾಗಿ ಬಲಪಡಿಸುತ್ತದೆ (Emotionally Strong). ಇದರಿಂದ ಆಕೆ ಜೀವನದಲ್ಲಿ ಏನು ಬಂದರೂ ಎದುರಿಸುವ ಸಾಮರ್ಥ್ಯ ಹೊಂದಿರ್ತಾಳೆ.
ಪಾರ್ಟನರ್‌ಶಿಪ್ (Partnership)
ಉದ್ಯೋಗ ಹೊಂದಿರುವ ಮಹಿಳೆಯರು ಮನೆಕೆಲಸದಲ್ಲಿ ಸಮಾನವಾಗಿ ಭಾಗವಹಿಸುತ್ತಾರೆ. ಅವರು ಕುಟುಂಬಕ್ಕೆ ಕೊಡುಗೆ ನೀಡಲು ಸಿದ್ಧರಾಗಿರುತ್ತಾರೆ. ಎರಡನ್ನೂ ಜೊತೆಯಾಗಿ ನಿಭಾಯಿಸುವ ಹುಡುಗಿ ಖಂಡಿತವಾಗಿಯೂ ಹುಡುಗರ ಮೊದಲ ಆಯ್ಕೆ.
Time Management
ಭಾವನಾತ್ಮಕವಾಗಿ ಸ್ಟ್ರಾಂಗ್ ಆಗಿರೋ ಮಹಿಳೆಯರಿಗೆ ಟೈಮ್ ಮ್ಯಾನೇಜ್‌ಮೆಂಟ್ ಹೇಗೆ ಅಂತಾನೂ ಗೊತ್ತಿರುತ್ತೆ. ಸುಖಾ ಸುಮ್ಮನೆ ಬೇಡದ ವಿಷಯದಲ್ಲಿ ಕಾಲಹರಣ ಮಾಡೋದು ಕಡಿಮೆ.
ಆತ್ಮವಿಶ್ವಾಸ
ಕೆಲಸಕ್ಕೆ ಹೋಗುತ್ತಿರುವ ಮಹಿಳೆಯರು ಸ್ವಾವಲಂಬಿಗಳು, ಈ ಕಾರಣದಿಂದಾಗಿ ಅವರು ಸಾಕಷ್ಟು ಆತ್ಮವಿಶ್ವಾಸವನ್ನು (self confidence) ಹೊಂದಿದ್ದಾರೆ. ಕಾನ್ಸ್ಪಿಡೆನ್ಸ್ ಇರೋ ಮಹಿಳೆಯರ (Confident Women) ಕಡೆಗೆ ಹುಡುಗರು ಬೇಗ ಆಕರ್ಷಿತರಾಗ್ತಾರೆ.
ಸುಖಾ ಸುಮ್ಮನೆ ಟಿವಿ ಮುಂದೆ ಟೈಮ್ ಕಳೆಯೋದ ಬಿಟ್ಟು, ಸಿಕ್ಕು ಸ್ವಲ್ಪ ಸಮಯವನ್ನು ರಚನಾತ್ಮಕವಾಗಿ ಬಳಸಿಕೊಳ್ಳಲು ಉದ್ಯೋಗಸ್ಥ ಮಹಿಳೆಯರು ಕಲಿತಿರುತ್ತಾರೆ.
ಸಹಕಾರ
ಕೆಲಸ ಮಾಡುತ್ತಿರುವ ಮಹಿಳೆ ತಮ್ಮ ಸಂಗಾತಿಯ ಕನಸುಗಳು ಮತ್ತು ಗುರಿಗಳನ್ನು ಸಾಧಿಸಲು ಸಹಾಯ ಮಾಡಬಹುದು. ಜೊತೆಗೆ ಹಣಕಾಸಿನ ಸಮಸ್ಯೆ ಬಂದಾಗ, ಇಬ್ಬರೂ ಜೊತೆಯಾಗಿ ನಿಭಾಯಿಸೋದು ಸುಲಭ.
ಮಕ್ಕಳನ್ನು ಬೆಳೆಸುವುದು
ಕೆಲಸದಲ್ಲಿರೋ ಮಹಿಳೆಯರು ವಿದ್ಯಾವಂತರು ಮತ್ತು ಜಾಗೃತರಾಗಿರುತ್ತಾರೆ. ಇದು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಮೌಲ್ಯಗಳನ್ನು ನೀಡುತ್ತದೆ. ಹಾಗಾಗಿ ಇದೆನ್ನೆಲ್ಲಾ ಯೋಚನೆ ಮಾಡಿ ಪುರುಷರು ಹೆಚ್ಚಾಗಿ ಮದ್ವೆಯಾಗೋದಕ್ಕೆ ಕೆಲಸದಲ್ಲಿರೋ ಹುಡುಗಿಯನ್ನೆ ಆಯ್ಕೆ ಮಾಡ್ತಾರೆ..