ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಆಮಂತ್ರಣ ಕಾರ್ಡ್ ಬೆಲೆ ಬೆಚ್ಚಿ ಬೀಳಿಸುತ್ತೆ. ಕೇವಲ ಒಂದು ಕಾರ್ಡ್‌ನ ಬೆಲೆಯೇ ಭಾರತದ ಬಹುತೇಕ ಉದ್ಯೋಗಿಗಳ ಸರಾಸರಿ ವಾರ್ಷಿಕ ಸಂಬಳದಷ್ಟಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮುಂಬರುವ ವಿವಾಹವು ಪ್ರಸ್ತುತ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಜಾಮ್‌ನಗರದಲ್ಲಿ ಅದ್ಧೂರಿ ಮದುವೆಯ ಪೂರ್ವ ಕಾರ್ಯಕ್ರಮವನ್ನು ಆಯೋಜಿಸಿದಾಗಿನಿಂದಲೂ ಈ ಜೋಡಿ, ಕುಟುಂಬದ ಸುದ್ದಿಯೇ ಎಲ್ಲರ ಕಣ್ಣು ಕಿವಿ ಅರಳಿಸುತ್ತಿರುವುದು.
211
ಮೊದಲ ವಿವಾಹಪೂರ್ವ ಕಾರ್ಯಕ್ರಮದ ಅದ್ಧೂರಿತನವೇ ವಿಶ್ವಾದ್ಯಂತ ಸುದ್ದಿಯಾಗುತ್ತಿದ್ದಾಗ, ಇಟಲಿಯಲ್ಲಿ ಮತ್ತೊಂದು ವಿವಾಹಪೂರ್ವ ಕಾರ್ಯಕ್ರಮ ಎಲ್ಲರ ಹುಬ್ಬರಳಿಸಿತು.
311
ಹಾಗೆ ನೀವು ಕಣ್ಣರಳಿಸುವಂಥ ಮತ್ತೊಂದು ಸುದ್ದಿ ಇಲ್ಲಿದೆ. ಅದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಕಾರ್ಡ್‌ನ ಬೆಲೆ.
411
ಹೌದು, ಅನಂತ್ ಮತ್ತು ರಾಧಿಕಾ ಅವರ ಮದುವೆ ಕಾರ್ಡ್‌ನ ಬೆಲೆ ಎಷ್ಟು ದುಬಾರಿಯಾಗಿದೆ ಎಂದರೆ ಒಂದೇ ಆಹ್ವಾನ ಪತ್ರಿಕೆಯು ನಿಮ್ಮ ಸಂಪೂರ್ಣ ವಾರ್ಷಿಕ ಸಂಬಳಕ್ಕಿಂತ ಹೆಚ್ಚಿದ್ದರೂ ಆಶ್ಚರ್ಯವಿಲ್ಲ!
511
ಮದುವೆಗೆ ಇನ್ನೇನು ಕೆಲವೇ ದಿನಗಳಿವೆ. ದೇಶ ವಿದೇಶದ ಅತಿ ಶ್ರೀಮಂತರು, ಸೆಲೆಬ್ರಿಟಿಗಳ ಜೊತೆ ಇಡೀ ಬಾಲಿವುಡ್ ಬಳಗ ಈ ಆಮಂತ್ರಣವನ್ನು ಸ್ವೀಕರಿಸಿದೆ.
611
ಎಲ್ಲ ವಿವಾಹಗಳು ನೆರವೇರಿದ ಬಳಿಕ ಸಾಮಾನ್ಯವಾಗಿ ಆಮಂತ್ರಣ ಪತ್ರಿಕೆ ಎಸೆಯಲಾಗುತ್ತದೆ. ಆದರೆ,ನೀವು ಅಂಬಾನಿ ಮನೆಯ ಆಮಂತ್ರಣ ಪತ್ರಿಕೆಯನ್ನು ಜೀವನಪೂರ್ತಿ ಸ್ಮರಣಿಕೆಯಾಗಿ ಸಂಗ್ರಹಿಸುತ್ತೀರಿ, ಅಥವಾ ಆಸ್ತಿಯಾಗಿಯೂ ನೋಡಬಹುದು.
711
ಆಮಂತ್ರಣ ಪತ್ರಿಕೆಯೊಂದಿಗೆ ಬೆಳ್ಳಿಯ ದೇಗುಲದಲ್ಲಿ ಚಿನ್ನದ ವಿಗ್ರಹಗಳು, ಶಾಲು, ಮತ್ತಷ್ಟು ಉಡುಗೊರೆಗಳಿದ್ದಿದ್ದನ್ನು, ವೈರಲ್ ಆದ ವಿಡಿಯೋವನ್ನು ನೀವೂ ನೋಡಿರುತ್ತೀರಿ.
811
ಇದೀಗ ಈ ಆಮಂತ್ರಣ ಪತ್ರಿಕೆಯ ವೆಚ್ಚ ಹೊರಬಿದ್ದಿದೆ. ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ತಮ್ಮ ಕಿರಿಯ ಮಗನ ಮದುವೆಯ ಆಮಂತ್ರಣಕ್ಕಾಗಿ ಕೋಟಿಗಟ್ಟಲೆ ಖರ್ಚು ಮಾಡಿದ್ದಾರೆ.
911
ವರದಿಗಳ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಆಮಂತ್ರಣವು ಪ್ರತಿ ಆಹ್ವಾನಕ್ಕೆ 6 - 7 ಲಕ್ಷ INR ವೆಚ್ಚವಾಗುತ್ತದೆ. ಇದು ಬಹುತೇಕ ಸರಾಸರಿ ಭಾರತೀಯರ ವಾರ್ಷಿಕ ವೇತನ!
1011
ಆಹ್ವಾನ ಪತ್ರದಲ್ಲಿರುವ ಶಾಲಿನ ಬೆಲೆ ಸುಮಾರು 10 - 12K ಆಗಿದೆ. ಬಾಕ್ಸ್‌ನಲ್ಲಿರುವ ಇತರ ವಸ್ತುಗಳಾದ ಚಿಂತನಶೀಲ ಉಡುಗೊರೆಗಳು ಮತ್ತು ಗಣೇಶ ಮತ್ತು ರಾಧಾ-ಕೃಷ್ಣರನ್ನು ಚಿತ್ರಿಸುವ ಚಿನ್ನ ಮತ್ತು ಬೆಳ್ಳಿಯ ಪ್ರತಿಮೆಗಳು ತುಂಬಾ ದುಬಾರಿಯಾಗಿವೆ.
1111
ಆಕಾಶ್ ಅಂಬಾನಿಯ ವೆಡ್ಡಿಂಗ್ ಕಾರ್ಡ್‌ಗಿಂತ ಹೆಚ್ಚು
ಆಕಾಶ್ ಮತ್ತು ಶ್ಲೋಕಾ ಮೆಹ್ತಾ ಅವರ ಮದುವೆಯ ಕಾರ್ಡ್‌ನ ಬೆಲೆ ಪ್ರತಿ ಆಹ್ವಾನಕ್ಕೆ ಸುಮಾರು 1.5 ಲಕ್ಷವಾಗಿತ್ತು. ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಅವರ ಮದುವೆ ಕಾರ್ಡ್ ಪ್ರತಿ ಆಹ್ವಾನಕ್ಕೆ 3 ಲಕ್ಷ ವೆಚ್ಚವಾಗಿತ್ತು.