ಹೀಗೆಲ್ಲಾ ಮಾಡೋರಾದ್ರೆ ನೀವು ಜೀವಮಾನ ಪೂರ್ತಿ ಒಂಟಿಯಾಗಿಯೇ ಕಳೀಬೇಕಾಗುತ್ತೆ!

First Published | Jul 12, 2024, 4:00 PM IST

ಇತ್ತೀಚಿನ ದಿನಗಳಲ್ಲಿ ಏನಾಗಿದೆ ಅಂದ್ರೆ ಜನರು ಜನರಿಂದ ದೂರ ಆಗ್ತಿದ್ದಾರೆ ಹಾಗೂ ಸೋಶಿಯಲ್ ಮಿಡಿಯಾ, ಇಂಟರ್ನೆಟ್ ಗೆ ಅಡಿಕ್ಟ್ ಆಗ್ತಿದ್ದಾರೆ. ಹೀಗೆ ತಂತ್ರಜ್ಞಾನದ ಬಲೆ ಸಿಲುಕಿದ ಜನರು ಕೊನೆಗೆ ಒಂಟಿಯಾಗಿಯೇ ಜೀವನ ನಡೆಸುವಂತಾಗುತ್ತೆ. 
 

ವಿಶ್ವದ ಕಾಲು ಭಾಗದಷ್ಟು ಜನರು ತುಂಬಾ ಅಥವಾ ಅದಕ್ಕೂ ಹೆಚ್ಚಿನ ಜನರು ಒಂಟಿತನವನ್ನು (Lonliness)ಅನುಭವಿಸುತ್ತಾರೆ. ಇದಕ್ಕೆ ಕಾರಣ ಏನು ಗೊತ್ತಾ  ಜನರನ್ನ ಬಿಟ್ಟು ತಂತ್ರಜ್ಞಾನಕ್ಕೆ ಜನ ಒಗ್ಗಿಕೊಳ್ಳುವುದು. ನಿಮ್ಮಲ್ಲೂ ಇಂಥಹುದೇ ಅಭ್ಯಾಸಗಳಿದ್ರೆ ನೀವು ಸಾಯೋವರ್ಗೂ ಸಿಂಗಲ್ ಆಗಿಯೇ ಉಳಿತೀರಿ. 

ಸೋಶಿಯಲೈಜ್ ಆಗದೇ ಇರೋದು : 
ಫ್ರೆಂಡ್ಸ್ ಅಥವಾ ಫ್ಯಾಮಿಲಿ ಜನ ನಿಮ್ಮನ್ನ ಹೊರಗಡೆ ಸುತ್ತಾಡಲು ಕರೆದಾಗ ಏನಾದರೊಂದು ನೆಪ ಹೇಳಿ ಮನೆಯಲೇ ಕುಳಿತುಕೊಳ್ಳೋಕೆ ಆರಂಭಿಸಿದ್ರೆ, ನೀವು ಒಂಟಿಯಾಗಿಯೇ ಉಳಿಯುತ್ತೀರಿ. 

Latest Videos


ಫ್ರೆಂಡ್ಸ್ ಮಾಡದೇ ಇರೋದು : 
ನೀವು ಹೊಸ ಸ್ನೇಹಿತರನ್ನು ಸಂಪಾದಿಸಲು (not making new friends) ಯಾವುದೇ ಪ್ರಯತ್ನ ಮಾಡದಿದ್ದರೆ, ನೀವು ಇನ್ನೂ ಒಂಟಿ ಜೀವನಕ್ಕೆ ನಿಮ್ಮನ್ನು ಸಿದ್ಧಪಡಿಸಿಕೊಳ್ಳುತ್ತೀರಿ ಅಂತ ಅರ್ಥ. 

ಸೋಶಿಯಲ್ ಮೀಡಿಯಾದ ಅತಿಯಾದ ಬಳಕೆ : 
ಸಾಮಾಜಿಕ ಮಾಧ್ಯಮದಲ್ಲಿ (social media) ಇತರ ಜನರನ್ನು ನೋಡುವ ಮೂಲಕ, ರೀಲ್ಸ್ ಸ್ಕ್ರೋಲ್ ಮಾಡೋ ಮೂಲಕ ಒಂದು ದಿನ ನೀವು ಏಕಾಂಗಿಯಾಗಿರುತ್ತೀರಿ. ಇದೇ ಅಭ್ಯಾಸ ಆಗ್ಬಿಟ್ರೆ ಜೀವನ ಪೂರ್ತಿ ಒಂಟಿಯಾಗಿಯೇ ಇರ್ತೀರಿ. 

ಇನ್ನೊಬ್ಬರ ಬಗ್ಗೆ ಹೆಚ್ಚು ಯೋಚಿಸೋದು : 
ನಿಮ್ಮ ಅಗತ್ಯಗಳಿಗಿಂತ ಜನರ ಅಗತ್ಯಗಳಿಗೆ ಆದ್ಯತೆ ನೀಡುವುದು ಖಂಡಿತವಾಗಿಯೂ ನಿಮ್ಮೊಳಗೆ ಒಂಟಿತನವನ್ನು ಉಂಟುಮಾಡುತ್ತದೆ. ಇದರಿಂದ ನಿಮ್ಮ ಬಗ್ಗೆ ನಿಮಗೆ ಯಾವುದೇ ಕೇರ್ ಇರೋದಿಲ್ಲ. 

ಮತ್ತೊಬ್ಬರ ಮೇಲೆ ಹೆಚ್ಚು ಭರವಸೆ ಇಡೋದು : 
ಇತರರು ನಿಮ್ಮೊಂದಿಗೆ ಶಾಶ್ವತವಾಗಿ ಇರಬೇಕೆಂದು ನಿರೀಕ್ಷಿಸಬೇಡಿ. ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತಲೇ ಇರಿ. ಫ್ರೆಂಡ್ಸ್ ಇವತ್ತು ಬರ್ತಾರೆ ನಾಳೆ ಹೊಗ್ತಾರೆ, ಹಾಗಾಗಿ ಯಾರ ಮೇಲೂ ಹೆಚ್ಚು ಭರವಸೆ ಇಡ್ಬೇಡಿ. ಇದ್ರಿಂದ ಒಂಟಿತನ ಕಾಡುತ್ತೆ.

ಬೇಗ ಕೋಪ ಮಾಡ್ಕೊಳೋದು : 
ನಿಮ್ಮ ಕೋಪವನ್ನು (angry) ನಿಯಂತ್ರಿಸಿ ಮತ್ತು ನಿಮ್ಮ ಭಾವನೆಗಳನ್ನು ಆರೋಗ್ಯಕರ ರೀತಿಯಲ್ಲಿ ವ್ಯಕ್ತಪಡಿಸಲು ಕಲಿಯಿರಿ. ನಿಮ್ಮ ಅತಿಯಾದ ಕೋಪದಿಂದ ನಿಮ್ಮ ಬಳಿ ಯಾರೂ ಬಾರದೇ, ನೀವು ಒಬ್ಬಂಟಿಯಾಗಿ ಉಳಿಯುವಂತಾಗಬಹುದು. 
 

ಹೆಚ್ಚು ಕೆಲಸ ಮಾಡೋದು : 
ನಿಮ್ಮ ಎಲ್ಲಾ ಶಕ್ತಿ ಮತ್ತು ಸಮಯವನ್ನು ಕೆಲಸದಲ್ಲಿ ತೊಡಗಿಸುವುದು ನಿಮಗೆ ದಣಿವು ಮತ್ತು ಖಾಲಿತನವನ್ನು ಉಂಟುಮಾಡುತ್ತದೆ. ಇದರಿಂದ ಬೇರೆ ಪ್ರಪಂಚದ ಬಗ್ಗೆ ನಿಮಗೆ ಯೋಚನೆಯೇ ಇಲ್ಲ, ಒಬ್ಬಂಟಿಯಾಗೋದಕ್ಕೆ ಶುರುವಾಗುತ್ತೆ. 

click me!