Published : Dec 11, 2023, 05:56 PM ISTUpdated : Dec 11, 2023, 06:03 PM IST
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ತಮ್ಮ 6ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಫ್ಯಾನ್ಸ್‌ಗಳು ಈ ಸೆಲೆಬ್ರಿಟಿ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಇದೇ ವೇಳೆ ಅನುಷ್ಕಾ ಅವರು ಡೇಟಿಂಗ್ ಸಮಯದಲ್ಲಿ ವಿರಾಟ್ ಕೊಹ್ಲಿಯಿಂದ ತಾವು ಹೇಗೆ ಇಂಪ್ರೆಸ್ ಅದೇ ಎಂಬ ವಿಚಾರವನ್ನು ಹೇಳಿಕೊಂಡಿದ್ದು, ಈಗ ಸಖತ್ ವೈರಲ್ ಆಗಿದೆ.
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ತಮ್ಮ 6ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಫ್ಯಾನ್ಸ್‌ಗಳು ಈ ಸೆಲೆಬ್ರಿಟಿ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.
210
ಇದೇ ವೇಳೆ ಅನುಷ್ಕಾ ಅವರು ಡೇಟಿಂಗ್ ಸಮಯದಲ್ಲಿ ವಿರಾಟ್ ಕೊಹ್ಲಿಯಿಂದ ತಾವು ಹೇಗೆ ಇಂಪ್ರೆಸ್ ಅದೇ ಎಂಬ ವಿಚಾರವನ್ನು ಹೇಳಿಕೊಂಡಿದ್ದು, ಈಗ ಸಖತ್ ವೈರಲ್ ಆಗಿದೆ.
310
ಪ್ರೀತಿ ಹಾಗೂ ಸಂತೋಷ ವೈಭವಕ್ಕೆ ಇನ್ನೊಂದು ಉದಾಹರಣೆ ಅನುಷ್ಕಾ ಹಾಗೂ ವಿರಾಟ್, 2013ರಲ್ಲಿ ಜಾಹೀರಾತೊಂದರ ಶೂಟಿಂಗ್ ವೇಳೆ ಪರಸ್ಪರ ಪರಿಚಯವಾದ ಇವರ ಸ್ನೇಹ ನಂತರ ಪ್ರೇಮವಾಗಿ ಬದಲಾಗಿ ಮದುವೆಯಾಗಿ ಸುಖಿ ದಾಂಪತ್ಯಕ್ಕೆ ಮತ್ತೊಂದು ಹೆಸರಾಗಿದ್ದಾರೆ ಈ ಜೋಡಿ.
410
ಮೊದಲ ಭೇಟಿಯಲ್ಲಿಯೇ ಇವರ ಮಧ್ಯೆ ಗಾಢವಾದ ಬಂಧವೊಂದು ಬೆಳೆದಿತ್ತು. ಆದರೆ ತಮ್ಮ ಈ ಪ್ರೀತಿಯನ್ನು ಬಹಳ ಕಾಲ ಮುಚ್ಚಿಟ್ಟಿದ ಈ ಜೋಡಿ 2017ರ ಡಿಸೆಂಬರ್ 11 ರಂದು ಮದುವೆಯಾಗುವ ಮೂಲಕ ಪ್ರೀತಿಗೆ ದಾಂಪತ್ಯದ ಮುದ್ರೆಯೊತ್ತಿದ್ದರು.
510
ಕ್ರಿಕೆಟ್ ಹಾಗೂ ಬಾಲಿವುಡ್ ತಾರೆಯರು ಮೇಳೈಸಿದ ಇವರ ಅದ್ದೂರಿ ವಿವಾಹ ಇಟಲಿಯಲ್ಲಿ ನಡೆದಿತ್ತು. ಮದುವೆಯ ನಂತರ ಆಗಾಗ ತಮ್ಮಿಬ್ಬರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುವ ಈ ಜೋಡಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
610
2021ರಲ್ಲಿ ಮಗಳು ವಂಶಿಕಾರನ್ನು ಸ್ವಾಗತಿಸಿದ ಈ ದಂಪತಿ ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು.
710
ಈಗ ತಮ್ಮ 6ನೇ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಟಿ ಅನುಷ್ಕಾ ತಾನು ಹೇಗೆ ಕ್ರಿಕೆಟ್‌ನ ಸೆನ್ಸೇಷನ್ ಆಗಿದ್ದ ವಿರಾಟ್ ಕೊಹ್ಲಿಯಿಂದ ಇಂಪ್ರೆಸ್ ಆದೇ ಎಂದು ಹೇಳಿಕೊಂಡಿದ್ದಾರೆ.
810
ತಾವು ಡೇಟಿಂಗ್ ಶುರು ಮಾಡುವ ಮೊದಲೇ ವಿರಾಟ್ ಅವರ ನೆನಪಿನ ಶಕ್ತಿ ಅವರನ್ನು ಬಹಳವಾಗಿ ಇಂಪ್ರೆಸ್ ಮಾಡಿತ್ತಂತೆ. ವಿರಾಟ್ ಕೊಹ್ಲಿ ಅವರ ನೆನಪಿನ ಶಕ್ತಿ ಬಹಳ ಚೆನ್ನಾಗಿದೆ. ಹಲವು ವಿಚಾರಗಳಲ್ಲಿ ನನಗೆ ಅದು ಸಹಾಯ ಮಾಡಿದೆ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.
910
ಮತ್ತೊಂದೆಡೆ ಕೊಹ್ಲಿ ಕೂಡ ತನ್ನ ಮುದ್ದಿನ ಪತ್ನಿಯನ್ನು ಹೊಗಳಿದ್ದು, ಆಕೆ ತನ್ನ ಮಗಳಿಗೆ ಒಬ್ಬಳು ಉತ್ತಮ ತಾಯಿಯಾಗಿದ್ದಾಳೆ. ಅಲ್ಲದೇ ತಮ್ಮ ವಮಿಕಾಗೆ ಪೋಷಕರಾದ ಸಂದರ್ಭದ ಬಗ್ಗೆ ಮಾತನಾಡಿದ ವಿರಾಟ್ ಆಕೆಯನ್ನು ಬಹಳ ಒಳ್ಳೆಯ ರೀತಿಯಲ್ಲಿ ಅನುಷ್ಕಾ ಬೆಳೆಸುತ್ತಿದ್ದಾಳೆ ಎಂದು ಹೇಳಿಕೊಂಡಿದ್ದಾರೆ.
1010
ಇತ್ತೀಚೆಗೆ ವಿರಾಟ್ ಹಾಗೂ ಅನುಷ್ಕಾ ಚೆಪ್ ಸುರೇಂದರ್ ಮೊಹನ್ ಜೊತೆ ಒಂದು ಫೋಟೋ ತೆಗೆಸಿಕೊಂಡಿದ್ದು, ಅಭಿಮಾನಿಗಳು ಮತ್ತೆ ಅನುಷ್ಕಾ ಗರ್ಭಿಣಿ ಅದಕ್ಕೆ ಜಾಕೆಟ್‌ನಿಂದ ಹೊಟ್ಟೆ ಮುಚ್ಚಿಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.