ಕೆಲವು ಸಮಯದಿಂದ, ಮದುವೆ ಮತ್ತು ಮಕ್ಕಳ ಬಗ್ಗೆ ಜನರ ಆಲೋಚನೆಯಲ್ಲಿ ತುಂಬಾ ಬದಲಾವಣೆಯಾಗಿರೋದನ್ನು ನಾವು ನೋಡಬಹುದು. ವೃತ್ತಿಜೀವನ (career life) ಮತ್ತು ಉತ್ತಮ ಲೈಫ್ ಸ್ಟೈಲ್ ಬಯಕೆಯಿಂದಾಗಿ, ಜೀವನದಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ತುಂಬಾ ಲೇಟ್ ಆಗಿ ಮಗುವನ್ನು (late baby planning) ಪಡೆಯೋದು ಅಥವಾ ಮಗುವನ್ನು ಹೊಂದದಿರುವುದು ಈ ದಿನಗಳಲ್ಲಿ ಸಾಕಷ್ಟು ಟ್ರೆಂಡ್ ಆಗಿದೆ. ಇತ್ತೀಚಿನ ದಿನಗಳಲ್ಲಿ, ಈ ಟ್ರೆಂಡ್ ಸಿಟಿಗಳಲ್ಲಿರುವ ದಂಪತಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.
ತಡವಾಗಿ ಮಗು ಮಾಡಿಕೊಳ್ಳುವ ಈ ಟ್ರೆಂಡ್ ವಿಶೇಷವಾಗಿ ಭಾರತೀಯ ದಂಪತಿಗಳಲ್ಲಿ, ಅನೇಕ ಸಂದರ್ಭಗಳಲ್ಲಿ ವಿಚಿತ್ರವಾಗಿ ತೋರುತ್ತದೆ. ವಾಸ್ತವವಾಗಿ, ಭಾರತೀಯ ಸಮಾಜದಲ್ಲಿ, ಮದುವೆಯ ನಂತರ ಮಗುವಿನ ಜನನಕ್ಕೆ ಯಾವಾಗಲೂ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಇದನ್ನು ವಿವಾಹಿತ ದಂಪತಿಗಳ (married couples) ಜೀವನದ ಅತ್ಯಗತ್ಯ ಭಾಗವೆಂದು ಪರಿಗಣಿಸಲಾಗಿತ್ತು. ಆದರೆ ಈಗ ಅದೆಲ್ಲವೂ ಬದಲಾಗಿದೆ. ಅದಕ್ಕೆ ಮುಖ್ಯ ಕಾರಣಗಳು ಯಾವುವು ಅನ್ನೋದನ್ನು ತಿಳಿಯೋಣ.
ಕರಿಯರ್ ಗೆ ಪ್ರಾಮುಖ್ಯತೆ (career is more important)
ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ, ಸಾಮಾನ್ಯವಾಗಿ, ಗಂಡ ಮತ್ತು ಹೆಂಡತಿ ಇಬ್ಬರೂ ಕೆಲಸ ಮಾಡುತ್ತಿದ್ದಾರೆ ಮತ್ತು ಇಬ್ಬರೂ ತಮ್ಮ ವೃತ್ತಿಜೀವನದ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಮದುವೆಯಾದ ಕೂಡ್ಲೆ ಮಗುವನ್ನು ಪಡೆಯೋದು ಸ್ವಲ್ಪ ಸಮಯದವರೆಗೆ ಅಥವಾ ಶಾಶ್ವತವಾಗಿ ತಮ್ಮ ವೃತ್ತಿಜೀವನವನ್ನು ತ್ಯಜಿಸುವಂತಹ ಪರಿಸ್ಥಿತಿಯನ್ನು ತಂದೊಡ್ಡಿಯ್ಯೆ. ಹಾಗಾಗಿ, ತಮ್ಮ ಆಸೆಗಳನ್ನು ಪೂರೈಸಲು, ಅಂತಹ ದಂಪತಿಗಳು ತಮ್ಮ ವೃತ್ತಿಜೀವನವನ್ನು ನಿರ್ಧರಿಸಿದ ನಂತರ ಮಗುವನ್ನು ಪಡೆಯಲು ನಿರ್ಧರಿಸುತ್ತಾರೆ, ಇನ್ನೂ ಕೆಲವರು ಮಗು ಬೇಡ ಎಂದು ನಿರ್ಧರಿಸುತ್ತಾರೆ.
ಪ್ರಬುದ್ಧತೆಯ ಕೊರತೆ
ಈ ದಿನಗಳಲ್ಲಿ ಅನೇಕ ದಂಪತಿಗಳು ಚಿಕ್ಕ ವಯಸ್ಸಿನಲ್ಲಿಯೇ ಮಗುವನ್ನು ಪಡೆದುಕೊಂಡ್ರೆ, ಮಗುವಿನ ಜವಾಬ್ದಾರಿಯನ್ನು (responsibility) ಸರಿಯಾಗಿ ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ನಂಬುತ್ತಾರೆ. ಮಗುವಿನ ಜನನದ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮತ್ತು ತನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವಷ್ಟು ಪ್ರಬುದ್ಧರಾಗಿಲ್ಲ ಎನ್ನುವ ಕಾರಣಕ್ಕೆ ತಡವಾಗಿ ಮಗುವಿನ ಬಗ್ಗೆ ಪ್ಲ್ಯಾನ್ ಮಾಡಿಕೊಳ್ಳುತ್ತಾರೆ.
ಒಟ್ಟಿಗೆ ಹೆಚ್ಚಿನ ಸಮಯ ಕಳೆಯಲು
ಮದುವೆಯ ನಂತರ, ಕಪಲ್ಸ್ ಮೊದಲು ತಮ್ಮ ವೈವಾಹಿಕ ಜೀವನವನ್ನು ಆನಂದಿಸಬೇಕು (enjoy married life) ಮತ್ತು ನಂತರ ಮಗುವಿನ ಬಗ್ಗೆ ಪ್ಲ್ಯಾನ್ ಮಾಡಲು ಬಯಸುತ್ತಾರೆ. ಅಂತಹ ದಂಪತಿಗಳು ದೇಶ, ವಿದೇಶ ಟೂರ್ ಮಾಡುತ್ತಾ, ತಮ್ಮ ಮ್ಯಾರೇಜ್ ಲೈಫ್ ನ್ನು ಮೊದಲು ಎಂಜಾಯ್ ಮಾಡ್ತಾರೆ. ಬಳಿಕ ಮಗುವಿನ ಬಗ್ಗೆ ಪ್ಲ್ಯಾನ್ ಮಾಡ್ತಾರೆ.
ಚೈಲ್ಡ್ ಟ್ರಾಮ
ಕೆಲವು ಸಂದರ್ಭಗಳಲ್ಲಿ, ದಂಪತಿಗಳಲ್ಲಿ ಒಬ್ಬರಿಗೆ ಬಾಲ್ಯದಲ್ಲಿ ಕೆಟ್ಟ ಘಟನೆಗಳು ನಡೆದಿರುತ್ತವೆ. ಈ ಚೈಲ್ಡ್ ಟ್ರಾಮದಿಂದ (child trauma) ಹೊರ ಬರಲು ಅವರಿಗೆ ಕಷ್ಟವಾಗುತ್ತೆ. ಇದರಿಂದ ಅವರು ಬೇಗನೆ ಮಗುವನ್ನು ಪಡೆಯಲು ಸಹ ಭಯಪಡುತ್ತಾರೆ. ತಾನು ಅನುಭವಿಸಿದ ಬಾಲ್ಯದ ಆ ಕೆಟ್ಟ ಘಟನೆಗಳು, ನಮ್ಮ ಮಗುವಿಗೂ ಉಂಟಾದ್ರೆ ಅನ್ನೋ ಭಯದಲ್ಲಿಯೇ ಅವರು ಮಗುವನ್ನು ಪಡೆಯಲು ತಡಮಾಡುತ್ತಾರೆ.
ಭವಿಷ್ಯದ ಬಗ್ಗೆ ನಕಾರಾತ್ಮಕತೆ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸೋಶಿಯಲ್ ಮೀಡಿಯಾಕ್ಕೆ ತುಂಬಾನೆ ಎಡಿಕ್ಟ್ ಆಗಿರುತ್ತಾರೆ. ಅವರಿಗೆ ಪ್ರಪಂಚದಾದ್ಯಂತದ ಸುದ್ದಿ ಮತ್ತು ಘಟನೆಗಳು ನಿಮಿಷಗಳಲ್ಲಿ ತಲುಪುತ್ತವೆ. ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆಯಿಂದಾಗಿ, ಕೆಲವು ಜನರು ಡೂಮ್-ಸ್ಕ್ರೋಲಿಂಗ್ಗೆ (doom scrolling) ಅಡಿಕ್ಟ್ ಆಗ್ತಾರೆ(ಅಪಘಾತಗಳು, ಯುದ್ಧಗಳು, ಸಾವುಗಳು, ನೈಸರ್ಗಿಕ ವಿಪತ್ತುಗಳ ಎಲ್ಲಾ ಸುದ್ದಿಗಳನ್ನು ಸ್ಕ್ರಾಲ್ ಮಾಡುವ ಅಭ್ಯಾಸಕ್ಕೆ ಈ ಪದವನ್ನು ಬಳಸಲಾಗುತ್ತದೆ). ಈ ಕಾರಣದಿಂದಾಗಿ, ಅವರು ಭವಿಷ್ಯದ ಬಗ್ಗೆ ಹೆಚ್ಚು ಚಿಂತಿತರಾಗಿ, ನಮ್ಮ ಮಕ್ಕಳಿಗೆ ಭವಿಷ್ಯ ಸುರಕ್ಷಿತವಲ್ಲ ಎನ್ನುವ ಕಾರಣಕ್ಕೆ ಮಕ್ಕಳನ್ನು ಪಡೆಯದೇ ಇರಲು ನಿರ್ಧರಿಸುತ್ತಾರೆ
ಸ್ವಾತಂತ್ರ್ಯದ ಆಸೆ
ಕೆಲವು ದಂಪತಿಗಳು ತಮ್ಮ 'ಸ್ವಾತಂತ್ರ್ಯ'ವನ್ನು ಕಳೆದುಕೊಳ್ಳಲು (affraid to loss freedom) ಬಯಸೋದಿಲ್ಲ, ಈ ಕಾರಣದಿಂದಾಗಿ ಅವರು ತಡವಾಗಿ ಮಗು ಪಡೆಯುವ ಪ್ಲ್ಯಾನ್ ಮಾಡುತ್ತಾರೆ. ಮಗುವನ್ನು ಬೆಳೆಸುವುದು ಒಂದು ದೊಡ್ಡ ಜವಾಬ್ದಾರಿ ಎಂದು ಅವರು ನಂಬುತ್ತಾರೆ, ಅದನ್ನು ತೆಗೆದುಕೊಳ್ಳಲು ಅವರು ಬಯಸುವುದಿಲ್ಲ. ಬದಲಾಗಿ, ಅವರು ಹೊಸ ಹೊಸ ಚಟುವಟಿಕೆ, ಟ್ರಾವೆಲಿಂಗ್, ಕರಿಯರ್ ಬಗ್ಗೆ ಗಮನ ಹರಿಸುತ್ತಾರೆ.
ಹದಗೆಟ್ಟ ಸಂಬಂಧ
ಮಕ್ಕಳನ್ನು ತಡವಾಗಿ ಪಡೆಯುವ ಮತ್ತೊಂದು ಕಾರಣ ಅಂದ್ರೆ ಹದಗೆಟ್ಟ ಸಂಬಂಧ. ದಂಪತಿಗಳ ನಡುವೆ ಯಾವುದೇ ತೆರನಾದ ಭಾಂದವ್ಯ ಇರದೇ ಇದ್ದಾಗ, ಪದೇ ಪದೇ ಜಗಳ, ಗಲಾಟ ನಡೆಯುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಅವರು ಮಕ್ಕಳನ್ನು ಪಡೆಯಲು ಬಯಸೋದಿಲ್ಲ. ಸಂಬಂಧ ಸರಿಯಾದ ಮೇಲೆ ಈ ಬಗ್ಗೆ ಯೋಚನೆ ಮಾಡಿದರಾಯ್ತು ಎಂದು ಅಂದುಕೊಳ್ಳುತ್ತಾರೆ.