Self Love: ನಿಮ್ಮನ್ನು ನೀವು ಪ್ರೀತಿಸುತ್ತಿದ್ರೆ ಈ ಕೆಲಸಗಳಿಂದ ದೂರವಿರಿ!

First Published | Sep 18, 2023, 5:51 PM IST

ಪ್ರತಿಯೊಬ್ಬರೂ ಜೀವನದಲ್ಲಿ ಸಂತೋಷವಾಗಿರಲು ಬಯಸುತ್ತಾರೆ ಆದರೆ ಕೆಲವೊಮ್ಮೆ ನಮ್ಮ ಪರಿಸ್ಥಿತಿಗಳು ಸಂತೋಷವಾಗಿರಲು ಬಿಡೋದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕೆಟ್ಟ ಸಮಯಗಳನ್ನು ಎದುರಿಸಲು ಮನಸ್ಸನ್ನು ಶಾಂತವಾಗಿಡುವುದು ಬಹಳ ಮುಖ್ಯ.
 

ನಮ್ಮ ಸುತ್ತಮುತ್ತಲಿನವರನ್ನು ಸಂತೋಷವಾಗಿಡುವುದು (happiness) ಹೇಗೆ? ಅದರ ಬಗ್ಗೆ ಎಲ್ಲಾ ಕಡೆಗಳಲ್ಲಿ, ಅಂದ್ರೆ ಜನರಿಂದ ಹಿಡಿದು, ಇಂಟರ್ನೆಟ್ ವರೆಗೆ ಎಲ್ಲೆಡೆ ಮಾಹಿತಿ ಲಭ್ಯವಿರುತ್ತೆ.  ಆದರೆ ನಮ್ಮನ್ನು ನಾವು ಸಂತೋಷವಾಗಿಡುವುದು ಹೇಗೆ? ಅನ್ನೋದರ ಬಗ್ಗೆ ಮಾತ್ರ ಹೆಚ್ಚಿನ ಮಾಹಿತಿ ಲಭ್ಯವಿರೋದಿಲ್ಲ. ಏಕೆಂದರೆ ಜನರು ತಮ್ಮನ್ನು ತಾವು ಸಂತೋಷವಾಗಿಡುವ ಮಹತ್ವವನ್ನು ಅರ್ಥಮಾಡಿಕೊಂಡರೆ, ದೊಡ್ಡ ಜನಸಂಖ್ಯೆಯು ಒಂಟಿತನಕ್ಕೆ ಬಲಿಯಾಗುತ್ತದೆ. ಜನರು ಹೆಚ್ಚಾಗಿ ತಮಗಿಂತ ತಮ್ಮ ಜೊತೆಗಿರುವವರ ಸಂತೋಷವನ್ನೇ ಹೆಚ್ಚಾಗಿ ಬಯಸುತ್ತಾರೆ. 

ಮೊದಲು ನಿಮ್ಮನ್ನು ನೀವು ಪ್ರೀತಿಸಲು (love yourself) ಆರಂಭಿಸಿದರೆ ಆವಾಗ ನೀವು ಸಂತೋಷವಾಗಿರಲು ಸಾಧ್ಯವಾಗುತ್ತೆ. ಹಾಗಿದ್ರೆ ನಿಮ್ಮನ್ನು ನೀವು ಸಂತೋಷವಾಗಿಡಲು ಏನು ಮಾಡಬೇಕು? ಯಾವ ಕೆಲಸವನ್ನು ಮಾಡಬಾರದು? ಅನ್ನೋದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. 
 

Tap to resize

ವಿಷಕಾರಿ ಜನರೊಂದಿಗಿನ ಸಂಬಂಧಗಳು: ಅನೇಕ ಬಾರಿ ನಾವು ನಮ್ಮ ಚಿಂತಕರು ಎಂದು ಪರಿಗಣಿಸುವ ಕುಟುಂಬ, ಸ್ನೇಹಿತರು ಮತ್ತು ಸಂಗಾತಿ ನಮ್ಮ ಆತಂಕ ಮತ್ತು ದುಃಖಗಳಿಗೆ ಕಾರಣರಾಗಿದ್ದಾರೆ. ಅವರಿಂದಾಗುವ ದುಃಖವನ್ನು ದೂರ ಮಾಡೋದು ಕಷ್ಟ. ಅಂತಹ ಸಂದರ್ಭದಲ್ಲಿ ಇನ್ನೊಬ್ಬರನ್ನು ಹೆಚ್ಚಾಗಿ ನಂಬೋದನ್ನು ಬಿಟ್ಟು ಬಿಡಿ. ಜೀವನದಲ್ಲಿ ಬಹಳ ಮುಖ್ಯವಾದ ನಿರ್ಧಾರಗಳು ತುಂಬಾ ಕಷ್ಟ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಒತ್ತಡದ ವಾತಾವರಣದಲ್ಲಿ ವಾಸಿಸುವುದು: ನೀವು ಎಲ್ಲಿ ವಾಸಿಸುತ್ತೀರ? ಎಲ್ಲಿ ಕೆಲಸ ಮಾಡುತ್ತೀರಿ? ಅನ್ನೋದು ನೀವು ಯೋಚಿಸುವುದಕ್ಕಿಂತ ಹೆಚ್ಚಾಗಿ ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಒತ್ತಡದ ಪರಿಸರವು ನಿಮ್ಮ ಸಂತೋಷ ಮತ್ತು ಆರಾಮವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಒತ್ತಡದ ವಾತಾವರಣದಿಂದ (stress area_ ದೂರ ಇರೋದು ಉತ್ತಮ. ಅಲ್ಲದೇ ನಿಮ್ಮ ಬಗ್ಗೆ ಕಾಳಜಿ ವಹಿಸಿದರೆ ಮನಸ್ಸಿಗೆ ಶಾಂತಿ ಸಿಗುತ್ತೆ. 

ಎಲ್ಲಾದಕ್ಕೂ ನಿಮ್ಮನ್ನು ನೀವು ದೂರುವುದು: ನಿಮ್ಮ ಎಲ್ಲಾ ಸಮಸ್ಯೆಗಳಿಗೆ ನೀವು ಬಾಹ್ಯ ಸಂದರ್ಭಗಳನ್ನು ದೂಷಿಸಿದರೆ, ನೀವು ನಿಮ್ಮ ಜೀವನದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದ್ದೀರಿ. ಇದನ್ನು ಮಾಡುವವರ ಮನಸ್ಸು ಎಂದಿಗೂ ಶಾಂತವಾಗಿರುವುದಿಲ್ಲ. ಎಲ್ಲಾದಕ್ಕೂ ನಿಮ್ಮನ್ನು ನೀವು ದೂರುವ ಬದಲು, ಒಳ್ಳೆಯತನದಿಂದ ದಿನವನ್ನು ಕಳೆಯಲು ಪ್ರಯತ್ನಿಸಿ, ಇದರಿಂದ ನಿಮ್ಮ ಮುಂದಿನ ಜೀವನ ಸಹ ಚೆನ್ನಾಗಿರುತ್ತೆ. 

ಇತರರ ಸಂತೋಷದ ಜವಾಬ್ದಾರಿಯನ್ನು ತೆಗೆದುಕೊಳ್ಳಿ: ಎಲ್ಲರನ್ನೂ ಸಂತೋಷವಾಗಿಡುವುದು ಅಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ, ನಿಮಗೆ ನೀವು ಕಷ್ಟ ಕೊಡುವ ಮೂಲಕ ಇತರರನ್ನು ಸಂತೋಷವಾಗಿಡಲು (making other happy) ಪ್ರಯತ್ನಿಸಿದ್ರೆ ಅದರಿಂದ ನಿಮಗೆ ದುಃಖವಾಗೋದು ಹೆಚ್ಚು. ಆದ್ದರಿಂದ, ಒಬ್ಬ ವ್ಯಕ್ತಿಯು ತನ್ನ ಸ್ವಂತ ಸಂತೋಷವನ್ನು ತ್ಯಾಗ ಮಾಡುವ ಮೂಲಕ ಇತರರನ್ನು ಸಂತೋಷವಾಗಿಡುವ ಬದಲು, ನಿಮ್ಮನ್ನು ನೀವು ಸಂತೋಷವಾಗಿರಿಸಿ. 

Latest Videos

click me!