ಇನ್ನೊಬ್ಬರನ್ನು ಇಂಪ್ರೆಸ್ ಮಾಡೋದ್ರಲ್ಲೇ ಕಳೆದೋಗಿದ್ದೀರಾ? ನಿಮ್ಮನ್ನೂ ಕೇರ್ ಮಾಡಿ!

First Published | Dec 24, 2023, 4:59 PM IST

ಇತ್ತೀಚಿನ ದಿನಗಳಲ್ಲಿ ನಾವು ಹೇಗೆ ಆಗಿದ್ದೀವಿ ಅಂದ್ರೆ, ಇನ್ನೊಬ್ಬರನ್ನು ಮೆಚ್ಚಿಸಲು, ಮತ್ತೊಬ್ಬರನ್ನು ಇಂಪ್ರೆಸ್ ಮಾಡೋದ್ರಲ್ಲೇ ಕಳೆದು ಬಿಟ್ಟಿದ್ದೇವೆ. ಇದರ ನಡುವೆ ನಮ್ಮನ್ನು ಕೇರ್ ಮಾಡೊದು ಮರೆತೆ ಹೋಗಿದೆ. ಇದರಿಂದ ಮುಂದೆ ನೀವು ಮಾನಸಿಕವಾಗಿ ಸಮಸ್ಯೆ ಅನುಭವಿಸಬಹುದು. ಹಾಗಾಗಿ ನಿಮ್ಮ ಬಗ್ಗೆ ಕಾಳಜಿ ವಹಿಸಿ, ನಿಮ್ಮನ್ನು ಪ್ರೀತಿಸುವುದು ಮುಖ್ಯ, ಇದರ ಬಗ್ಗೆ ತಿಳಿದುಕೊಳ್ಳೋಣ.

ನೀವು ಇತರರಿಗೆ ಸಹಾಯ ಮಾಡಲು ಬಯಸಿದರೆ, ಅದು ತುಂಬಾನೆ ಒಳ್ಳೆಯ ಕೆಲಸವೇ ಸರಿ. ಆದರೆ ಇತರರ ಸಂತೋಷವನ್ನು ನೋಡಿಕೊಳ್ಳುವ ಅವಸರದಲ್ಲಿ ನಿಮ್ಮನ್ನು ನೀವು ನಿರ್ಲಕ್ಷಿಸಬೇಡಿ. ನಿಮ್ಮನ್ನು ನೀವು ಇಗ್ನೋರ್ ಮಾಡುವಂತಹ ಅಭ್ಯಾಸವು ಅನೇಕ ರೀತಿಯಲ್ಲಿ ತುಂಬಾ ಹಾನಿಕಾರಕವಾಗಿದೆ. ಹೀಗೆ ಮಾಡೋದರಿಂದ ಸ್ವಲ್ಪ ಸಮಯದ ನಂತರ, ವ್ಯಕ್ತಿಯು ಒಂಟಿತನ ಮತ್ತು ಖಿನ್ನತೆಯನ್ನು (depression) ಅನುಭವಿಸಲು ಪ್ರಾರಂಭಿಸೋದು ಖಂಡಿತಾ. 

ನಾವು ಇನ್ನೊಬ್ಬರನ್ನು ಕೇರ್ ಮಾಡುತ್ತಾ, ಅವರ ಬಗ್ಗೆ ಕಾಳಜಿ ಮಾಡುತ್ತಾ ಹೋದಾಗ ನಮ್ಮ ಬಗ್ಗೆ ನಿರ್ಲಕ್ಷ ಹೆಚ್ಚಾಗುತ್ತ ಹೋಗುತ್ತದೆ. ಇದರಿಂದ ಕೊನೆಗೆ ನೀವು ಒಬ್ಬಂಟಿ ಎನ್ನುವ ಭಾವನೆ ಸಹ ಮೂಡಬಹುದು. ವಿಶೇಷವಾಗಿ ನೀವು ಸ್ವತಃ ಸಮಸ್ಯೆಯಲ್ಲಿದ್ದಾಗ ಮತ್ತು ನಿಮಗೆ ಸಹಾಯ ಮಾಡಲು ಯಾರೂ ಇಲ್ಲದಿದ್ದಾಗ. ಇತರರ ಬಗ್ಗೆ ಮನಸ್ಸಿನಲ್ಲಿ ದೂರುಗಳು ಸಂಗ್ರಹವಾಗಲು ಪ್ರಾರಂಭಿಸುತ್ತವೆ. ಈ ಎಲ್ಲಾ ವಿಷಯಗಳ ಬಗ್ಗೆ ಯೋಚಿಸುತ್ತಾ ಹೋದಂತೆ, ಮಾನಸಿಕ ಸಮಸ್ಯೆ ಹೆಚ್ಚುತ್ತಲೇ ಹೋಗುತ್ತೆ. 

Tap to resize

ಇದರಿಂದಾಗುವ ಹಾನಿಯೇನು?: ನೀವು ನಿಮ್ಮ ಬಗ್ಗೆ ಕೇರ್ ಮಾಡದೇ ಇದ್ದಾಗ, ನೀವು ಅರ್ಥಮಾಡಿಕೊಳ್ಳಬೇಕಾದ ಮೊದಲ ವಿಷಯವೆಂದರೆ, ಹಾಗೆ ಮಾಡೋದರಿಂದ ನಿಮಗೂ ಹಾನಿಯಾಗುತ್ತೆ, ಜೊತೆಗೆ ನೀವು ಪ್ರೀತಿ ಮಾಡುವ ವ್ಯಕ್ತಿಗೂ ಹಾನಿಯಾಗುತ್ತದೆ. ಇನ್ನೊಬ್ಬರು ನಿಮ್ಮ ಬಗ್ಗೆ ಅದೇ ಕಾಳಜಿ ವಹಿಸದೇ ಇದ್ದಾಗ ನಿಮಗೂ ಕೋಪ ಬರಬಹುದು. ನಾನು ಇತರರಿಗಾಗಿ ಎಷ್ಟು ಮಾಡುತ್ತೇನೆ ಆದರೆ ಯಾರೂ ನನಗೆ ಸಹಾಯ ಮಾಡುವುದಿಲ್ಲ ಎಂಬ ಅತೃಪ್ತಿಯ ಭಾವನೆ ಮನಸ್ಸಿನಲ್ಲಿ ಉದ್ಭವಿಸಬಹುದು.

ಎಲ್ಲಾ ಜವಾಬ್ದಾರಿಗಳನ್ನು ನಾನೊಬ್ಬಳೇ ಏಕಾಂಗಿಯಾಗಿ ತೆಗೆದುಕೊಳ್ಳಬೇಕು ಎನ್ನುವ ಯೋಚನೆ ಸಹ ಬರುತ್ತದೆ. ಇಂತಹ ನಕಾರಾತ್ಮಕ ಆಲೋಚನೆಗಳನ್ನು (negative thinking)  ತಪ್ಪಿಸಲು, ಮೊದಲು ನಿಮ್ಮ ಮನಸ್ಸಿನಲ್ಲಿ ಒತ್ತಡವನ್ನು ಉಂಟುಮಾಡುವ ಸಂದರ್ಭಗಳನ್ನು ಗುರುತಿಸಲು ಪ್ರಯತ್ನಿಸಿ. ನಂತರ ಪ್ರಜ್ಞಾಪೂರ್ವಕ ರೀತಿಯಲ್ಲಿ ಅವರಿಂದ ದೂರವಿರಲು ಪ್ರಯತ್ನಿಸಿ.

ಪ್ರಯತ್ನಗಳನ್ನು ಮುಂದುವರಿಸಿ: ನೀವು ಮೊದಲಿನಿಂದಲೂ ನಿಮ್ಮ ಬಗ್ಗೆ ಕಟ್ಟುನಿಟ್ಟಾಗಿದ್ದರೆ, ಅದರಲ್ಲಿ ಹಠಾತ್ ಬದಲಾವಣೆಯನ್ನು ತರುವುದು ಅಸಾಧ್ಯ. ಇದಕ್ಕಾಗಿ, ನಿರಂತರ ಪ್ರಯತ್ನಗಳು ಅವಶ್ಯಕ. ಅದಕ್ಕಾಗಿ ನಿಧಾನವಾಗಿಯಾದರೂ ಸರಿ ನಿಮ್ಮ ಮೇಲೆ ನಿಮಗೆ ಒಲವು ಮೂಡುವಂತೆ ನೋಡಿಕೊಳ್ಳೋದು ಮುಖ್ಯ. 

ಸಹಾಯವನ್ನು ಕೇಳಲು ಹಿಂಜರಿಯಬೇಡಿ: ನಿಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ನೀವು ಸಮಸ್ಯೆಗೆ ಯಾವುದೇ ಪರಿಹಾರವನ್ನು ಕಾಣದಿದ್ದರೆ, ವಿಶ್ವಾಸಾರ್ಹ ಸ್ನೇಹಿತರೊಂದಿಗೆ ಮಾತನಾಡಲು ಹಿಂಜರಿಯಬೇಡಿ. ಇದರ ಹೊರತಾಗಿಯೂ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗದೇ ಇದ್ದರೆ, ಸಲಹೆಗಾರರನ್ನು ಸಂಪರ್ಕಿಸಿ. ಮನಸ್ಸಿನಲ್ಲಿ ಬಲವಾದ ಇಚ್ಛಾಶಕ್ತಿ ಇದ್ದರೆ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಸಿಕ್ಕೇ ಸಿಗುತ್ತೆ.

ಕೆಲವು ಒಳ್ಳೆಯ ವಿಷಯಗಳನ್ನು ನೆನಪಿಡಿ: ನಿಮ್ಮ ಮನಸ್ಸು ಎಂದಾದರೂ ಸಿಡಿಮಿಡಿಗೊಂಡಿದ್ದರೆ, ಕೆಲವು ಒಳ್ಳೆಯ ವಿಷಯಗಳನ್ನು ನೆನಪಿಡಿ. ನಿಮ್ಮನ್ನು ಜನರು ಹೊಗಳಿದ ನೆನಪು, ನೀವು ಪ್ರಶಸ್ತಿಯನ್ನು ಸ್ವೀಕರಿಸಿದ ಕ್ಷಣ, ಕೆಲವೊಮ್ಮೆ ನಿಮ್ಮ ಸಹಾಯದಿಂದ ಯಾರಾದರೂ ಪ್ರಯೋಜನ ಪಡೆದಿದ್ದರೆ ಅದನ್ನೂ ಸಹ ನೆನಪಿಸಿ ಅಥವಾ ನಿಮಗೆ ಯಾರಾದರೂ ಥ್ಯಾಂಕ್ಯೂ ಹೇಳಿದ್ದರೆ, ಅದನ್ನು ನೆನಪಿಸಿ. ಅಂತಹ ಸಕಾರಾತ್ಮಕ ವಿಷಯಗಳು ನಿಮ್ಮ ಮಹತ್ವವನ್ನು ಅರಿತುಕೊಳ್ಳುವಂತೆ ಮಾಡುತ್ತದೆ ಮತ್ತು ನಿಮಗೆ ನಿಮ್ಮ ಬಗ್ಗೆ ಉತ್ತಮ ಭಾವನೆ ಮೂಡುವಂತೆ ಮಾಡುತ್ತೆ. 

ಈ ವಿಷಯಗಳನ್ನು ಮರೆಯಬೇಡಿ
- ನಿಮ್ಮ ಸಂತೋಷದಲ್ಲಿ ರಾಜಿ ಮಾಡಿಕೊಳ್ಳಬೇಡಿ.
- ಇತರರನ್ನು ಕ್ಷಮಿಸಲು ಕಲಿಯಿರಿ.
- ಕಹಿ ಅನುಭವಗಳನ್ನು ಮರೆತುಬಿಡಿ.
- ಒಳ್ಳೆಯ ಕಾರ್ಯಗಳಿಗಾಗಿ ಬೆನ್ನು ತಟ್ಟಿಕೊಳ್ಳಿ. 

Latest Videos

click me!