ಈ ಮೂರು ವಿಷ್ಯ ತಿಳಿಯದಿದ್ರೆ ಸಂಬಂಧ ಮುರಿದು ಹೋಗುತ್ತೆ ಎನ್ನುತ್ತಾರೆ ಬಾಬಾ ರಾಮದೇವ್!

First Published | Dec 24, 2023, 4:58 PM IST

ಇಂದಿನ ಕಾಲದಲ್ಲಿ, ಸಂಬಂಧಗಳು ಎಷ್ಟು ಬೇಗನೆ ಮುರಿದು ಬೀಳಲು ಪ್ರಾರಂಭಿಸಿವೆಯೆಂದರೆ ಅವುಗಳ ಪ್ರಾಮುಖ್ಯತೆ ಕಳೆದುಹೋಗಿದೆ. ಈ ಬಗ್ಗೆ ಬಾಬಾ ರಾಮದೇವ್ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ ಮತ್ತು ಅಂತಹ ಪರಿಸ್ಥಿತಿಯು ಜನರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋದನ್ನು ಸಹ ಹೇಳಿದ್ದಾರೆ.  

ಬಾಬಾ ರಾಮದೇವ್ (Baba Ramdev) ಅವರನ್ನು ಮೊದಲು ಯೋಗ ಗುರು ಎಂದು ಕರೆಯಲಾಗುತ್ತಿತ್ತು, ಆದರೆ ಇದೀಗ ಅವರು ಯಶಸ್ವಿ ಉದ್ಯಮಿ ಮತ್ತು ಸ್ಪೂರ್ತಿದಾಯಕ ಭಾಷಣಕಾರ ಆಗಿದ್ದಾರೆ ಅಂದ್ರೆ ತಪ್ಪಿಲ್ಲ, ಯಾಕಂದ್ರೆ ಅಷ್ಟೊಂದು ಪ್ರೇರಣೆ ನೀಡುತ್ತೆ ಅವರ ಮಾತುಗಳು. ಅದು ಆರೋಗ್ಯ ಅಥವಾ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಿರಲಿ, ರಾಮ್ ದೇವ್ ಹೇಳುವ ವಿಷಯಗಳು ಮನಸ್ಸನ್ನು ತಟ್ಟದೇ ಇರದು. 

ಇತ್ತೀಚಿನ ದಿನಗಳಲ್ಲಿ ಸಂಬಂಧಗಳು(relationship) ಬೇಗನೆ ಮುರಿದು ಬೀಳೋದನ್ನು ನಾವು ಕಾಣಬಹುದು. ಈ ರೀತಿ ಸಂಬಂಧ ಮುರಿದು ಬಿದ್ದ ಅದರಿಂದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ನಿಭಾಯಿಸುವುದು ಹೇಗೆ ಎಂದು ಬಾಬಾ ರಾಮದೇವ್ ಅವರನ್ನು ಪ್ರಶ್ನಿಸಲಾಗಿತ್ತು. 

Tap to resize

ಈ ಬಗ್ಗೆ, ಯೋಗ ಗುರುಗಳು ತುಂಬಾ ಚೆನ್ನಾಗಿಯೇ ಉತ್ತರಿಸಿದ್ದು ಸಂಬಂಧಗಳನ್ನು ನಿರ್ವಹಿಸಲು ಮತ್ತು ಸಂತೋಷವಾಗಿಡಲು ಸಹಾಯ ಮಾಡುವ ಮೂರು ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅವರು ಜನರಿಗೆ ಸಲಹೆ ನೀಡಿದರು.  ಆ ಮೂರು ವಿಷಯಗಳು ಯಾವುವು? ಅವುಗಳನ್ನು ಜೀವನದಲ್ಲಿ ಯಾಕೆ ಅಳವಡಿಸಿಕೊಳ್ಳಬೇಕು ಅನ್ನೋದನ್ನು ನೋಡೋಣ. 

ಸಂಬಂಧವು ಜೀವನಕ್ಕೆ ಅತ್ಯಗತ್ಯ: ಸಂಬಂಧಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಬಾಬಾ ರಾಮ್ ದೇವ್, 'ಜೀವನದಲ್ಲಿ ಸಂಬಂಧಗಳು ಎಲ್ಲಕ್ಕಿಂತ ಮಿಗಿಲಾದವು. ಅದು ತಾಯಿಯ ಸಂಬಂಧವಾಗಿರಬಹುದು, ತಂದೆಯ ಸಂಬಂಧವಾಗಿರಬಹುದು, ಮಗ-ಮಗಳ ಸಂಬಂಧವಾಗಿರಬಹುದು ಅಥವಾ ಗುರು-ಶಿಷ್ಯರ ಸಂಬಂಧವಾಗಿರಬಹುದು...ಗಂಡ ಹೆಂಡತಿಯ ಸಂಬಂಧವೇ ಆಗಿರಬಹುದು. ಎಲ್ಲವೂ ಮುಖ್ಯವೇ. ಜಗತ್ತು ಸಂಬಂಧಗಳ ಮೂಲಕ ಸಾಗುತ್ತದೆ. ಅದು ಜೀವನಕ್ಕೆ ಅಗತ್ಯ ಅನ್ನೋದನ್ನು ಜನರು ಅರ್ಥ ಮಾಡಿಕೊಳ್ಳಬೇಕು. 

ಸಂಬಂಧದಲ್ಲಿ ಬಿರುಕು ಬಿಟ್ಟರೆ ಜೀವನದಲ್ಲೇ ಬಿರುಕು ಬಿಟ್ಟಂತೆ: ಸಂಬಂಧವು ಮುರಿದುಬೀಳಲು ಪ್ರಾರಂಭಿಸಿದಾಗ ಏನಾಗುತ್ತದೆ ಅನ್ನೋದನ್ನು ವಿವರಿಸಿದ ರಾಮ್ ದೇವ್ ಸಂಬಂಧಗಳು ಮುರಿದು ಬೀಳಲು ಪ್ರಾರಂಭಿಸಿದಾಗ, ಜೀವನವೂ ಛಿದ್ರಗೊಳ್ಳುತ್ತದೆ. ನೀವು ರಿಲೇಶನ್ ಶಿಪ್ ನಲ್ಲಿದ್ದರೆ ನೀವು ಸಂತೋಷದಿಂದ ಬದುಕುತ್ತೀರಿ. ಈ ರೀತಿಯ ಜೀವನವನ್ನು ನಡೆಸುವುದು ಯಶಸ್ಸು, ಸಂತೋಷ ಮತ್ತು ಸಮೃದ್ಧಿಯನ್ನು ನಿಮ್ಮ ಜೀವನದಲ್ಲಿ ತರುತ್ತೆ. 
 

ಈ ಮೂರು ವಿಷಯಗಳು ಮುಖ್ಯ: ಸಂಬಂಧದಲ್ಲಿ ಮೂರು ವಿಷಯಗಳು ಅಗತ್ಯವಾಗಿವೆ, ಇದರಿಂದ ಎಲ್ಲವೂ ಉತ್ತಮವಾಗಿ ನಡೆಯುತ್ತದೆ ಎಂದು ಹೇಳಿರುವ ರಾಮ್ ದೇವ್ ಸಂಬಂಧಗಳಲ್ಲಿ ಗೌರವ, ಪ್ರೀತಿ ಮತ್ತು ರಾಜಿ ಇಲ್ಲದಿದ್ದರೆ, ಜೀವನ ಕಷ್ಟವಾಗುತ್ತದೆ ಎಂದಿದ್ದಾರೆ. ಸಂಬಂಧಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಸಂಬಂಧವು ಕೆಲಸ ಮಾಡಬೇಕಾದರೆ ಈ ಮೂರು ವಿಷಯಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ರಾಮ್ ದೇವ್ ಒತ್ತಿ ಹೇಳಿದ್ದಾರೆ..
 

ಏಕತೆ ತುಂಬಾನೆ ಮುಖ್ಯ: ಬಾಬಾ ರಾಮದೇವ್ ಸಂಬಂಧದಲ್ಲಿ ಏಕತೆ (oneness) ತುಂಬಾನೆ ಮುಖ್ಯ ಎಂದಿದ್ದಾರೆ. ನಾವು ದೇಹದಲ್ಲಿ ಇಬ್ಬರು ಇರಬಹುದು, ಆದರೆ ಇಬ್ಬರು ಒಂದೇ ಆತ್ಮ ಎನ್ನುವಂತೆ ಜೀವನದಲ್ಲಿ ಸಾಗಿದರೆ ಜೀವನವು ಸಂತೋಷದಿಂದ ಕೂಡಿರುತ್ತದೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ. 

Latest Videos

click me!