ಇನ್ನೂ 2 ವರ್ಷ ತುಂಬಿಲ್ಲ.. ಇಷ್ಟು ಸಣ್ಣ ಮಗಳಿಗೆ ಕುದುರೆ ಸವಾರಿ ಕಲಿಸ್ತಿದ್ದಾರಾ ಪ್ರಿಯಾಂಕಾ ಚೋಪ್ರಾ

First Published | Dec 24, 2023, 1:22 PM IST

 ನಿಕ್ ಜೋನಸ್‌ ಹಾಗೂ ಪ್ರಿಯಾಂಕಾ ಜೋಡಿ, ಮಗಳ ಜೊತೆಗಿನ ಸುಂದರ ಕ್ಷಣಗಳ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಫ್ಯಾನ್ಸ್‌ಗಳಿಗೆ ಖುಷಿ ನೀಡುತ್ತಿರುತ್ತಾರೆ.

ಹಾಲಿವುಡ್ ಗಾಯಕ ನಿಕ್ ಜೋನಸ್ ಅವರನ್ನು ಮದುವೆಯಾಗಿ ಅಮೆರಿಕಾದಲ್ಲಿ ನೆಲೆ ನಿಂತಿರುವ ಪ್ರಿಯಾಂಕಾ ಚೋಪ್ರಾ ಅವರು ನಟನೆಯ ಜೊತೆ ಜೊತೆಗೆ ತಾಯ್ತನವವನ್ನು ಎಂಜಾಯ್ ಮಾಡ್ತಿದ್ದಾರೆ. 

2022ರಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗು ಮಾಲ್ತಿ ಮೇರಿಗೆ ಪೋಷಕರಾದ ನಿಕ್ ಜೋನಸ್‌ ಹಾಗೂ ಪ್ರಿಯಾಂಕಾ ಜೋಡಿ, ಮಗಳ ಜೊತೆಗಿನ ಸುಂದರ ಕ್ಷಣಗಳ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಫ್ಯಾನ್ಸ್‌ಗಳಿಗೆ ಖುಷಿ ನೀಡುತ್ತಿರುತ್ತಾರೆ.

Tap to resize

ಅದೇ ರೀತಿ ಈಗ ಪ್ರಿಯಾಂಕಾ ಅವರು ತಮ್ಮ ಪುಟ್ಟ ಮಗಳು ಕುದುರೆ ಮೇಲೆ ಕುಳಿತು ಹಾರ್ಸ್ ರೈಡ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಗಳೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತಿರುವ ಪ್ರಿಯಾಂಕಾ ಅವಳೊಂದಿಗೆ ಕಳೆಯುವ ಸಣ್ಣ ಸಣ್ಣ ಖುಷಿ ಸಣ್ಣ ಸಣ್ಣ ಹೊಸ ಅನುಭವಗಳನ್ನು ಹೇಳಿಕೊಳ್ಳುತ್ತಿರುತ್ತಾರೆ. 

ಅದೇ ರೀತಿ ಇತ್ತೀಚೆಗೆ ರಜಾದಿನಗಳ ಸಮಯದಲ್ಲಿ ಫಾರ್ಮೊಂದಕ್ಕೆ ಮಗಳೊಂದಿಗೆ ಭೇಟಿ ನೀಡಿರುವ ಪ್ರಿಯಾಂಕಾ ಅಲ್ಲಿ ತನ್ನ ಮಗಳನ್ನು ಕುದುರೆ ಮೇಲೆ ಕೂರಿಸಿ ಖುಷಿಪಡಿಸಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ ಪ್ರಿಯಾಂಕಾ

ಅಮೆರಿಕಾದಲ್ಲಿ ಪ್ರಸ್ತುತ ಕ್ರಿಸ್‌ಮಸ್‌ ರಜಾ ದಿನಗಳಾಗಿದ್ದು, ಬಹುತೇಕ ಮಂದಿ ಕ್ರಿಸ್‌ಮಸ್‌ಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ರಜಾದಿನಗಳನ್ನು ಝೂವೊಂದರಲ್ಲಿ ಅಮ್ಮ ಪ್ರಿಯಾಂಕಾ ಮಗಳು ಮಾಲ್ತಿ ಕಳೆದಿದ್ದಾರೆ. ಈ ವೇಳೆ ಮಗಳು ಮಾಲ್ತಿಗೆ ಬೂಟ್ ಧರಿಸಿ ಹೆಲ್ಮೆಟ್ ಹಾಕಿಸಿ ಕುದುರೆ ಮೇಲೆ ಕೂರಿಸಿದ್ದಾರೆ ಮಾಲ್ತಿ. 

ಈ ವೇಳೆ ಪ್ರಿಯಾಂಕಾ ಬ್ಲಾಕ್ ಲೆಗಿನ್ಸ್‌, ಬಿಳಿ ಟೀ ಶರ್ಟ್‌ ಮೇಲೆ ಓವರ್‌ಸೈಜ್ ಕೋಟ್‌ ಧರಿಸಿದ್ದು, ಕಣ್ಣಿಗೆ ಸನ್ ಗ್ಲಾಸ್ ಜೊತೆ ತಲೆಗೆ ಕ್ಯಾಪ್ ತೊಟ್ಟಿದ್ದಾರೆ. ಇವರ ಜೊತೆ ಇನ್ನೊಬ್ಬರು ಮಹಿಳೆ ಇರುವುದನ್ನು ಫೋಟೋದಲ್ಲಿ ಕಾಣಬಹುದು.

ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕನ್ ಗಾಯಕ ನಿಕ್ ಜೋನಸ್ ಅವರು 2018ರಲ್ಲಿ ಪಂಜಾಬಿ ಸ್ಟೈಲ್‌ನಲ್ಲಿ ಮುಂಬೈನಲ್ಲಿ ಮದುವೆಯಾಗಿದ್ದರು.

priyankha chopra

2018ರಲ್ಲಿ ಪ್ರಿಯಾಂಕಾ ಹುಟ್ಟುಹಬ್ಬಕ್ಕೂ ದಿನ ಮೊದಲು ನಿಕ್ ಜೋನಾಸ್ ಗ್ರೀಸ್‌ನಲ್ಲಿ ಪ್ರಿಯಾಂಕಾ ಚೋಪ್ರಾಗೆ ಪ್ರಪೋಸ್ ಮಾಡಿದ್ದರು. 

Latest Videos

click me!