ಸಂಬಂಧದಲ್ಲಿ ಮೋಸ ಮಾಡುವುದು ಹೊಸ ವಿಷಯವಲ್ಲ, ಹೆಚ್ಚಿನ ರಿಲೇಶನ್ ಶಿಪ್ ಗಳು (Relationship) ಕೊನೆಗೊಳ್ಳೋದೇ ಸಂಗಾತಿಯ ವಿವಾಹೇತರ ಸಂಬಂಧದಿಂದ. ಆದರೆ ಇತ್ತೀಚಿನ ದಿನಗಳಲ್ಲಿ ಲವ್ ಮ್ಯಾರೇಜ್ ಆದ್ರೂ ಸಂಗಾತಿಗೆ ಮೋಸ ಮಾಡೊ ಜನ ಇದ್ದಾರೆ. ಇದನ್ನ ಕೇಳಿದ್ರೆ ಅಚ್ಚರಿಯಾಗುತ್ತೆ, ಆದ್ರೆ ಮೋಸ ಮಾಡೋದು ಕಾಮನ್. ಇತ್ತೀಚಿನ ದಿನಗಳಲ್ಲಂತೂ ಲವ್ ಮ್ಯಾರೇಜ್ ಸಾಮಾನ್ಯ. ತಮಗಿಷ್ಟ ಬಂದ ಹುಡುಗಿಯನ್ನು ಮದ್ವೆಯಾಗ್ತಾರೆ. ಆದ್ರೆ ಮದ್ವೆ ಆಗಿ ಪ್ರೀತಿಸಿದ ಹುಡುಗಿ ಜೊತೆಗೂ ಚೆನ್ನಾಗಿರಲ್ಲ.
ಪ್ರೇಮ ವಿವಾಹದ (love marriage) ನಂತರವೂ, ಜನರು ತಮ್ಮ ಸಂಗಾತಿಗಳಿಗೆ ಮೋಸ ಮಾಡೋದು ಅಥವಾ ವಿವಾಹೇತರ ಸಂಬಂಧ ಹೊಂದೋದು ಯಾಕೆ? ಅದೇ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬೇಕು ಅಲ್ವಾ? ಪ್ರೀತಿಸಿ ಮದ್ವೆ ಆದ್ಮೇಲೆ ಮೋಸ ಮಾಡೋದು ಯಾಕೆ?
ಸಂಬಂಧದಲ್ಲಿ ಸಂತೋಷವೇ ಇರಲ್ಲ
ಪ್ರೀತಿಸುವ ಸಂದರ್ಭದಲ್ಲಿ ಸಂಗಾತಿಯ ಸಣ್ಣ ಪುಟ್ಟ ತಪ್ಪುಗಳ್ಯಾವುವು ಕಾಣೋದೆ ಇಲ್ಲ. ಆ ಸಂದರ್ಭದಲ್ಲಿ ಬರೀ ಪ್ರೀತಿಯೇ ಇರುತ್ತೆ, ಪ್ರೀತಿಯ ಮುಂದೆ ತಪ್ಪುಗಳೆಲ್ಲಾ ಶೂನ್ಯವಾಗುತ್ತೆ. ಆದರೆ ಪ್ರೀತಿಸುವವರು ಮದುವೆಯಾಗಿ ಒಟ್ಟಿಗೆ ಬಾಳೋದಿಕ್ಕೆ ಆರಂಭಿಸಿದ ಮೇಲೆ, ತಪ್ಪುಗಳು ಎದ್ದು ಕಾಣುತ್ತೆ, ಪ್ರೀತಿ ಕಡಿಮೆಯಾಗುತ್ತೆ. ಪದೇ ಪದೇ ಕೋಪ ಮಾಡೋದು, ತಪ್ಪುಗಳನ್ನು ಹುಡುಕೋದು ಇದೆಲ್ಲವೂ ಸಾಮಾನ್ಯ. ಹೀಗೆ ಮುಂದುವರೆದ್ರೆ ಜೀವನದಲ್ಲಿ ಸಂತೋಷವೇ ಇರಲ್ಲ. ಹೀಗಾದರೆ ಪ್ರೀತಿ ಹುಡುಕಿ ಬೇರೆಡೆಗೆ ಹೋಗ್ತಾರೆ ಜನ.
ಅಡ್ವೆಂಚರ್ ಗಾಗಿ
ಕೆಲವು ಜನರು ತಮ್ಮ ಸಂಗಾತಿ ಚೀಟ್ ಮಾಡೋದನ್ನೆ ಅಡ್ವೆಂಚರ್ (for adventure) ಅಂದ್ಕೊಳ್ತಾರೆ. ಮದುವೆಯಾದ ನಂತರವೂ, ಅವರು ಅನೇಕ ಹುಡುಗರು ಅಥವಾ ಹುಡುಗಿಯರೊಂದಿಗೆ ಮಾತನಾಡುತ್ತಾರೆ, ರಿಲೇಶನ್ ಶಿಪ್ ನಲ್ಲೂ ಉಳಿಯುತ್ತಾರೆ. ಇದೆಲ್ಲಾ ತುಂಬಾನೆ ಕೂಲ್ ಕ್ಯಾರೆಕ್ಟರ್ ಅಂತ ಜನ ಅಂದ್ಕೊಳ್ತಾರೆ.
ಲೈಂಗಿಕ ಬಯಕೆ ಪೂರೈಸಲು
ಸಂಗಾತಿಗೆ ಮೋಸ ಮಾಡುವ ಮತ್ತೊಂದು ಮುಖ್ಯ ಕಾರಣ ಅಂದ್ರೆ ಲೈಂಗಿಕ ಬಯಕೆ (Sexual Desire) ಪೂರೈಸಲು. ಪ್ರತಿಯೊಬ್ಬರ ಹಾರ್ಮೋನುಗಳು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ, ಆದ್ದರಿಂದ ಕೆಲವರು ಅಲ್ಪಾವಧಿಯಲ್ಲಿ ತೃಪ್ತಿ ಪಡೆದ್ರೆ, ಮತ್ತೆ ಕೆಲವರಿಗೆ ತೃಪ್ತಿ ಆಗೋದೆ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ, ಆ ಅಗತ್ಯಗಳನ್ನು ತಮ್ಮ ಸಂಗಾತಿ ಪೂರೈಸದಿದ್ದಾಗ, ಜನ ತಮ್ಮ ಸಂಗಾತಿಗೆ ಮೋಸ ಮಾಡ್ತಾರೆ ಮತ್ತು ಬೇರೊಬ್ಬರೊಂದಿಗೆ ಸಂಬಂಧ ಬೆಳೆಸುತ್ತಾರೆ, ಆ ಮೂಲಕ ತಮ್ಮ ಲೈಂಗಿಕ ಬಯಕೆ ಪೂರೈಸುತ್ತಾರೆ.
ಎಕ್ಸೈಟ್ ಮೆಂಟ್ ಇರೋದಿಲ್ಲ
ಪ್ರೀತಿ ಮಾಡೋ ಆರಂಭದಲ್ಲಿದ್ದ ಎಕ್ಸೈಟ್’ಮೆಂಟ್ ಮದ್ವೆಯಾದ್ಮೇಲೆ ಇರೋದೆ ಇಲ್ಲ. ವೈವಾಹಿಕ ಜೀವನ (married life) ತುಂಬಾ ಖುಷಿಯಾಗಿರಬೇಕು ಅಂದ್ರೆ ನಿಮ್ಮ ಸಂಗಾತಿಯೊಂದಿಗೆ ಟ್ರಾವೆಲ್ ಮಾಡೋದು, ಅಡ್ವೆಂಚರ್ ಮಾಡೋದು, ಪ್ರತಿ ತಿಂಗಳು ಡೇಟಿಂಗ್‌ಗೆ ಹೋಗೋದು ಇದೆಲ್ಲಾ ಮಾಡ್ಬೇಕು. ಆದ್ರೆ ಆರಂಭದಲ್ಲಿದ್ದ ಈ ಎಕ್ಸೈಟ್ಮೆಂಟ್ ಆಮೇಲೆ ಇರೋದೇ ಇಲ್ಲ. ಸಂಗಾತಿ ಮೇಲೆ ಯಾವುದೇ ಆಸಕ್ತಿ ಇರೋದಿಲ್ಲ. ಇದರಿಂದ ಅವರು ಬೇರೆ ಸಂಗಾತಿ ಕಡೆಗೆ ಆಕರ್ಷಿತರಾಗ್ತಾರೆ, ತಮ್ಮ ಸಂಗಾತಿಗೆ ಮೋಸ ಮಾಡ್ತಾರೆ.
ತಮ್ಮ ಕೆಲಸದಲ್ಲಿ ಬ್ಯುಸಿ ಆದ್ರೆ
ಪ್ರೀತಿಸೋ ಟೈಮಲ್ಲಿ ಅದೆಷ್ಟೇ ಬ್ಯುಸಿಯಾಗಿದ್ರೂ ಸಹ ಇಬ್ಬರು ಒಬ್ಬರಿಗೊಬ್ಬರು ಸಮಯ ಕೊಡೋದನ್ನು ಮರೆಯೋದಿಲ್ಲ. ಆದ್ರೆ ಪ್ರೀತಿಸಿ ಮದ್ವೆ ಆದ್ಮೇಲೆ, ಇನ್ನು ಜೊತೆಗೆ ಇರೋದು ಅಲ್ವಾ? ಯಾಕೆ ನಾನು ಫ್ರೀ ಮಾಡ್ಕೊಂಡು ಸಮಯ ಕೊಡ್ಬೇಕು ಅಂತ ಭಾವಿಸೋಕೆ ಆರಂಭಿಸ್ತಾರೆ, ಜೊತೆಗೆ ತಮ್ಮ ಕೆಲಸದಲ್ಲು ಬ್ಯುಸಿ ಆಗ್ತಾರೆ. ಇದ್ರಿಂದ ಪ್ರೀತಿಗೆ ಹಾತೊರೆಯುವ ಮನಸು ಇನ್ನೊಬ್ಬರಲ್ಲಿ ಆ ಪ್ರೀತಿಯನ್ನ ಹುಡುಕೋಕೆ ಆರಂಭಿಸುತ್ತೆ.