ಗಂಡನನ್ನು ಒಲಿಸಿಕೊಳ್ಳಲು ಒಳಉಡುಪಿನ ವಶೀಕರಣವಂತೆ! ಎಲ್ಲಿಗೆ ಬಂತಪ್ಪಾ ಕಾಲ!

First Published | Jun 19, 2024, 11:06 AM IST

ಗಂಡ ಹೆಂಡತಿ ಸಂಬಂಧ ಚೆನ್ನಾಗಿರಬೇಕು ಅಂತ ಏನೇನೋ ಮಾಡೊ ಜನರನ್ನ ನೋಡಿದ್ದೀರಿ. ಇಲ್ಲೊಂದು ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ಒಳ ಉಡುಪಿನ ವಶೀಕರಣ ಮಾಡುವುದನ್ನು ಹೇಳಿಕೊಟ್ಟಿದ್ದಾರೆ ನೋಡಿ. 
 

ಹಿಂದೆ ಗಂಡ ಹೆಂಡತಿ ಸಂಬಂಧ (Husband and wife relationship) ಅಂದ್ರೆ, ಅದು ಸಾಯೋ ತನಕ ಮುರಿಯದಂತಹ ಬಂಧನ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡರೆ ಬದುಕೋದು ಸುಲಭ. ಜೊತೆಗೆ ಪ್ರೀತಿ, ಗೌರವ ಇದ್ರೆ ದಾಂಪತ್ಯ ಜಿವನ (Love, Respect in Married Life) ತುಂಬಾ ಸೊಗಸಾಗಿರುತ್ತೆ. ಆದರೆ ಈಗ ಕಾಲ ಬದಲಾಗಿದೆ. ಸಂಬಂಧ ಹಿಂದಿನಂತೆ ಇಲ್ವೇ ಇಲ್ಲ. 
 

ಮದುವೆಯಾಗಿ ವರ್ಷದೊಳಗೆ ವಿಚ್ಚೇದನ (Divorce within an Year) ಪಡೆಯೋರ ಸಂಖ್ಯೆ ಹೆಚ್ಚಿದೆ. ತಮ್ಮ ಗಂಡ ಬೇರೆ ಹುಡುಗೀರ ಕಡೆ ನೋಡಬಾರದು, ಗಂಡ ತನ್ನ ಬಳಿಯೇ ಉಳಿಯಬೇಕು ಅನ್ನೋ ಹೆಂಗಸರ ಸಂಖ್ಯೆ ಹೆಚ್ಚಾಗಿದೆ. ತಮ್ಮ ಗಂಡನನ್ನು ವಶದಲ್ಲಿಡಲು ಹೆಂಗಸರು ಏನೇನೋ ಟ್ರೈ ಮಾಡ್ತಾರೆ. 
 

Tap to resize

ಇದೀಗ ಸೋಶಿಯಲ್ ಮಿಡಿಯಾದಲ್ಲಿ ಒಂದು ವಿಡೀಯೋ ವೈರಲ್ (Social Media Viral Video) ಆಗುತ್ತಿದೆ. ಇದರಲ್ಲಿ ಮಹಿಳೆಯೊಬ್ಬರು ಗಂಡನ ಗಮನ ಹೆಂಡ್ತಿನ ಬಿಟ್ಟು ಬೇರೆಡೆ ಹೋಗದಿರಲು ಏನು ಮಾಡಬೇಕು ಅನ್ನೋದನ್ನು ಹೇಳಿದ್ದಾರೆ. ಇದೀಗ ವಿಡಿಯೋ ನೋಡಿ ಜನ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ. 
 

ಗಂಡನ ಇಂಟ್ರೆಸ್ಟ್ ಸದಾ ನಿಮ್ಮ ಮೇಲೆ ಇರಬೇಕು ಅಂತಾಂದ್ರೆ ಗಂಡನ ಇನ್ನರ್‌ವೇರ್ ಜೊತೆಗೆ, ನಿಮ್ಮ ಇನ್ನರ್ ವೇರ್ ಸೇರಿಸಿ ಕಟ್ಟಬೇಕು. ಅದನ್ನ ಮನೆಯ ನೈಋತ್ಯ ದಿಕ್ಕಿನಲ್ಲಿ ಯಾರಿಗೂ ಕಾಣದಂತೆ ಇಡಬೇಕು. ಇದರಿಂದ ಗಂಡನ ಗಮನ ನಿಮ್ಮ ಮೇಲಿಂದ ಬೇರೆ ಕಡೆ ಹೋಗೋದೆ ಇಲ್ಲ, ಎಂದಿದ್ದಾರೆ. 
 

ಹೀಗೆ ಒಬ್ಬ 'ಸ್ಪೆಷಲ್' ಎಕ್ಸ್‌ಪರ್ಟ್ ಮಹಿಳೆ ಹೇಳಿರುವ ವಿಡೀಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದಕ್ಕೆ ವಿವಿಧ ರೀತಿಯ ಕಾಮೆಂಟ್ಸ್ ಕೂಡ ಬರುತ್ತಿವೆ. ವಶೀಕರಣ ಕೇಳಿದ್ದೇವೆ, ಆದರೆ ಈ ಕಾಚಾಕರಣ ಇವತ್ತೇ ಕೇಳಿದ್ದು ಎಂದು ಹೇಳಿದ್ದಾರೆ. 
 

ಇನ್ನೂ ಕೆಲವರು ನಿಮ್ಮ ಗಂಡ ನಿಮ್ಮ ಜೊತೆಗೆ ಇರಬೇಕು ಅಂತ, ನೀವು ಈ ರೀತಿ ಮಾಡೋದಾದ್ರೆ, ಅಂತಹ ಗಂಡನ ಜೊತೆ ಇರೋದೇ ವೇಸ್ಟ್. ಅವರನ್ನು ಬಿಡೋದೆ ಒಳ್ಳೆಯದು ಎಂದು ಹೇಳಿದ್ದಾರೆ. ಇನ್ನು ಕೆಲವರು ಬಾಯ್ ಫ್ರೆಂಡ್ ಬೇರೆ ಹುಡುಗೀರನ್ನು ನೋಡದ ಹಾಗೆ ಮಾಡೋದು ಹೇಗೆ ಅಂತಾನೂ ಕೇಳಿದ್ದಾರೆ. 
 

ಮತ್ತೊಬ್ಬರು ಕಾಮೆಂಟ್ ಮಾಡಿ, ಇಂಟ್ರೆಸ್ಟ್ ಬರುತ್ತೋ ಇಲ್ವೋ ಗೊತ್ತಿಲ್ಲ, ಆದರೆ ಚಡ್ಡಿ (underwear) ವಿಷ್ಯಕ್ಕೆ ಜಗಳ ಆಗೋದು ಗ್ಯಾರಂಟಿ ಎಂದಿದ್ದಾರೆ. ಇನ್ನೊಬ್ರು ಎಲ್ಲೆಲ್ಲಿಂದ ಬರ್ತಾರೆ ಜನ, ನಿಮ್ಮ ಪಾದ ಪೂಜೆ ಮಾಡ್ಬೇಕು, ಈ ತರ ಎಲ್ಲಾ ಐಡಿಯಾ ಎಲ್ಲಿಂದ ಸಿಗುತ್ತೆ ನಿಮಗೆ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. ನಿಮಗೂ ಗಂಡನನ್ನು ನಿಮ್ಮ ವಶದಲ್ಲಿ ಇಟ್ಕೋಳ್ಳಬೇಕು ಅಂದ್ರೆ ನೀವು ಒಮ್ಮೆ ಟ್ರೈ ಮಾಡಿ ನೋಡಿ. 

Latest Videos

click me!