Relationship Tips: ವೈವಾಹಿಕ ಜೀವನದಿಂದ ನೆಗೆಟಿವಿಟಿಯನ್ನು ಹೀಗೆ ದೂರ ಮಾಡಿ

First Published Dec 31, 2022, 4:51 PM IST

ಸರಳ ಮತ್ತು ಪರಿಶುದ್ಧವಾದ ಜೀವನ ನಡೆಸೋದರಿಂದ, ಆ ಜೀವನ ನಡೆಸುವವರ ಜೀವನ ಕೂಡ ಸಂತೋಷವಾಗಿರುತ್ತೆ. ಆದರೆ  ನಕಾರಾತ್ಮಕತೆಯ ವಿಷಕಾರಿ ಬೀಜಗಳು ಸಂಬಂಧಗಳ ಇಡೀ ಸಸ್ಯವನ್ನು ನಾಶಪಡಿಸುತ್ತವೆ, ಆದ್ದರಿಂದ ನಕಾರಾತ್ಮಕತೆಯನ್ನು ಸಂಬಂಧಗಳಿಂದ ದೂರವಿಡುವುದು ಅರ್ಥಪೂರ್ಣವಾಗಿದೆ. ನೆಗೆಟಿವಿಟಿಯನ್ನು ದೂರ ಮಾಡೋದು ಹೇಗೆ ನೋಡಿ. 

ಜೀವನ ತುಂಬಾನೆ ಚಿಕ್ಕದಾಗಿದೆ, ಹಾಗಾಗಿ ನಾವು ಅದನ್ನು ಮುಕ್ತವಾಗಿ ಬದುಕಲು ಕಲಿಯಬೇಕು.. ಕೆಲವೊಮ್ಮೆ ನಾವು ನಮ್ಮ ಸ್ವಂತ ಜೀವನವನ್ನು ತುಂಬಾನೆ ಉದಾಸೀನದಿಂದ ಕಳೆಯುತ್ತೇವೆ, ಇದಕ್ಕೆ ಕಾರಣ ನಮ್ಮ ನಕಾರಾತ್ಮಕ ಚಿಂತನೆ (negative thinking). ಈ ಚಿಂತನೆಯು ನಮ್ಮನ್ನು ಶಾಂತಿಯುತವಾಗಿ ಬದುಕಲು ಬಿಡುವುದಿಲ್ಲ. ಗಂಡ ಮತ್ತು ಹೆಂಡತಿಯ ಸಂಬಂಧವು ತುಂಬಾ ಸುಂದರವಾದ ಸಂಬಂಧವಾಗಿದೆ, ನಮ್ಮ ನಕಾರಾತ್ಮಕ ಆಲೋಚನೆಯಿಂದಾಗಿ ನಾವು ಅದನ್ನು ಆಗಾಗ್ಗೆ ಅಪಾಯಕ್ಕೆ ಸಿಲುಕಿಸುತ್ತೇವೆ. ಸಂಬಂಧವನ್ನು ಕಾಪಾಡಿಕೊಳ್ಳಲು ಮತ್ತು ಅದನ್ನು ಸುಂದರವಾಗಿ ಬದುಕಲು, ನಿಮ್ಮ ಮನಸ್ಸಿನಿಂದ ನಕಾರಾತ್ಮಕ ಆಲೋಚನೆಗಳನ್ನು ತೆಗೆದುಹಾಕಿ, ಮತ್ತು ಸಕಾರಾತ್ಮಕ ಆಲೋಚನೆಯೊಂದಿಗೆ ಸಂತೋಷದ ಜೀವನ ನಡೆಸಿ.

ಹ್ಯಾಪಿ ಮ್ಯಾರೀಡ್ ಲೈಫ್  (happy married life) ನಿಮ್ಮದಾಗಲು, ಪ್ರೀತಿ, ಗೌರವದ ಜೊತೆಗೆ ಸಕಾರಾತ್ಮಕ ಭಾವನೆಯೂ ಬೇಕು. ನೀವು ಪಾಸಿಟೀವ್ ಆಗಿ ಯೋಚನೆ ಮಾಡಿದರೆ, ನಿಮ್ಮ ವೈವಾಹಿಕ ಜೀವನ ಸುಂದರವಾಗಿರುತ್ತೆ. ನಿಮಗೂ ನಿಮ್ಮ ವೈವಾಹಿಕ ಜೀವನ ಎಂಜಾಯ್ ಮಾಡುವ ಹಂಬಲವಿದ್ದರೆ, ಈ ರೀತಿಯಾಗಿ ನಿಮ್ಮ ಜೀವನದಿಂದ ನಕಾರಾತ್ಮಕತೆಯನ್ನು ದೂರ ಮಾಡಿ. 

ನಿಮ್ಮನ್ನು ನೀವೇ ಬದಲಾಯಿಸಿಕೊಳ್ಳಿ: ಇತರರನ್ನು ಬದಲಾಯಿಸುವ ಮೊದಲು ನಾವು ಯಾವಾಗಲೂ ನಮ್ಮನ್ನು ಬದಲಾಯಿಸುವ ಬಗ್ಗೆ ಯೋಚಿಸಬೇಕು. ಇತರರ ಬಗ್ಗೆ ಯೋಚಿಸುವ ಬದಲು, ಮೊದಲು ನೀವು ನಿಮ್ಮ ಸ್ವಂತ ಆಲೋಚನೆಯನ್ನು ಸಕಾರಾತ್ಮಕವಾಗಿಸಿಕೊಳ್ಳಬೇಕು. ಸಕಾರಾತ್ಮಕ ಚಿಂತನೆಯು (possitive thinking) ಸನ್ನಿವೇಶಗಳಲ್ಲಿ ಮಾತ್ರವಲ್ಲ, ವರ್ತನೆಯಲ್ಲಿಯೂ ಬದಲಾವಣೆಯನ್ನು ತರುತ್ತದೆ.  

ನಕಾರಾತ್ಮಕ ಚಿಂತನೆಯು ಅನೇಕ ಮನೆಗಳನ್ನು ಹಾಳುಮಾಡಿದೆ. ನಕಾರಾತ್ಮಕ ಚಿಂತನೆಯಿಂದಾಗಿ, ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗುತ್ತದೆ. ಎಲ್ಲಿಯಾದರೂ ಏನಾದರೂ ಸಂಭವಿಸಿದಾಗ, ಅದನ್ನು ನಿಮ್ಮ ಜೀವನದೊಂದಿಗೆ ಸೇರಿಸಬೇಡಿ, ನಿಮ್ಮನ್ನು ನೀವೆ ಬದಲಾಯಿಸಿ, ಪಾಸಿಟಿವ್ ಆಗಿರಿ. ಇದರಿಂದ ಜೀವನ ಚೆನ್ನಾಗಿರುತ್ತೆ. 

ಒತ್ತಡವನ್ನು ದೂರವಿಡಿ: ಜೀವನದಲ್ಲಿ ಅನೇಕ ಬಾರಿ ನಾವು ಮಾಡಲು ಸಾಧ್ಯವಾಗದ ಬಹಳಷ್ಟು ಘಟನೆಗಳು ಸಂಭವಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ನಕಾರಾತ್ಮಕ ದಿಕ್ಕಿನಲ್ಲಿ ಯೋಚಿಸದಂತೆ ತಡೆಯಲು ಪ್ರಯತ್ನಿಸಿ. ಸಂಗಾತಿಯ ಸಮಯವು ಸರಿಯಾಗಿ ನಡೆಯದಿದ್ದರೆ, ಅವನಿಗೆ ನೆಗೆಟೀವ್ ಆಗಿ ಏನಾದರೂ ಹೇಳುವ ಮೂಲಕ ನೈತಿಕ ಸ್ಥೈರ್ಯವನ್ನು ಕಡಿಮೆ ಮಾಡುವ ಬದಲು, ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡಿ.

ಆರೋಪ-ಪ್ರತ್ಯಾರೋಪಗಳಿಂದ ದೂರವಿರಿ: ನೀವು ನನ್ನ ಜೀವನಕ್ಕೆ ಬಂದಾಗಿನಿಂದಲೂ ಎಲ್ಲವೂ ಕೆಟ್ಟದಾಗುತ್ತಿದೆ ಎಂದು ಯಾವಾಗಲೂ ಶಪಿಸುತ್ತಾ ಅಥವಾ ನಿನ್ನಿಂದಾಗಿ ಒಂದು ಕೆಲಸವನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಂಗಾತಿಯನ್ನು (do not blame partner) ಯಾವಾಗಲೂ ದೂಷಿಸಬೇಡಿ. ಒಬ್ಬರನ್ನೊಬ್ಬರು ದೂಷಿಸುವುದನ್ನು ತಪ್ಪಿಸುವುದು ಬಹಳ ಮುಖ್ಯ. ಆರೋಪಗಳು ಸಂಬಂಧಗಳಲ್ಲಿ ಬಿರುಕನ್ನು ಉಂಟು ಮಾಡುತ್ತೆ, ಬದಲಾಗಿ ನೀವು ಎಂತಹ ಸಂದರ್ಭದಲ್ಲೂ ಜೊತೆಯಾಗಿ ಸೇರಿ ಕೆಲಸ ಮಾಡಬೇಕು. 

ಕ್ಷಮಿಸೋದನ್ನು ಕಲಿಯಿರಿ: ತಪ್ಪು ಎಲ್ಲರಿಂದಲೂ ಆಗುತ್ತದೆ, ತಪ್ಪು ಮಾಡದೇ ಇರುವವರು ಯಾರೂ ಇಲ್ಲ. ಹಾಗಾಗಿ, ಸಂಗಾತಿ ತಪ್ಪು ಮಾಡಿದಾಗ ಅವರನ್ನು ಧೂಷಿಸಿ, ಕೀಳಾಗಿ ನೋಡುವ ಬದಲು, ಅವರಿಂದ ಆ ತಪ್ಪು ಯಾಕಾಯ್ತು ಅನ್ನೋದನ್ನು ಅರ್ಥ ಮಾಡಿಕೊಳ್ಳೋದು ಮುಖ್ಯ. ಅಷ್ಟೇ ಅಲ್ಲ, ಅದಕ್ಕೂ ಮುಖ್ಯವಾಗಿ ಕ್ಷಮಿಸೋದು ತುಂಬಾನೆ ಮುಖ್ಯ. 
 

ಜೊತೆಯಾಗಿ ಎಂಜಾಯ್ ಮಾಡಿ: ನಿಮ್ಮಿಬ್ಬರ ಮಧ್ಯೆ ನೆಗೆಟಿವಿಟಿ ಬೆಳೆಯುತ್ತಿದೆ ಎಂದಾದರೆ, ಅದನ್ನು ನಿವಾರಿಸಲು ನೀವು ಜೊತೆಯಾಗಿ ಸೇರಿ ಕೆಲವೊಂದು ಮೋಜಿನ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಇಬ್ಬರ ನಡುವೆ ಪಾಸಿಟಿವ್ ವೈಬ್ಸ್ (positive vibes) ಬೆಳೆಯಲು ಸಾಧ್ಯವಾಗುತ್ತದೆ. ಇದು ಸಂಬಂಧವನ್ನು ಸುಧಾರಿಸುತ್ತೆ. 

ಶಾಂತವಾಗಿ ಎಲ್ಲವನ್ನೂ ನಿಭಾಯಿಸಿ: ನಿಮ್ಮ ಸಂಗಾತಿ ಯಾವಾಗಲೂ ನೆಗೆಟಿವ್ ಆಗಿ ಮಾತನಾಡುತ್ತಿದ್ದರೆ, ಅಥವಾ ಕೋಪದಿಂದಲೇ ಇದ್ದರೆ, ಅದಕ್ಕೆ ನೀವು ಹೆಚ್ಚು ರಿಯಾಕ್ಟ್ ಮಾಡೋದೆ ಬೇಡ. ಬದಲಾಗಿ ಸುಮ್ಮನೆ ಇದ್ದು ಬಿಡುವುದೇ ಉತ್ತಮ. ಶಾಂತವಾಗಿ ಎಲ್ಲವನ್ನೂ ನಿಭಾಯಿಸೋದನ್ನು ಕಲಿಯಿರಿ. ಇದರಿಂದ ಸಂಬಂಧ ಸುಂದರವಾಗಿರುತ್ತೆ. 

click me!