ದಾಂಪತ್ಯಕ್ಕೆ ಕುತ್ತು ಬಂದಿದೆ ಅಂದ್ರೆ, ಈ ತಪ್ಪಾಗಿರುತ್ತೆ ಅಂತಾನೇ ಅರ್ಥ

First Published | Mar 14, 2023, 5:19 PM IST

ಮದುವೆ ಮುರಿದು ಬೀಳೋದಕ್ಕೆ ಹಲವಾರು ಕಾರಣಗಳಿವೆ. ಕೆಲವೊಮ್ಮೆ ನಮ್ಮ ತಪ್ಪುಗಳಿಂದಾಗಿ ನಾವು ನಮ್ಮ ಸಂಬಂಧವನ್ನು ಹಾಳುಮಾಡುತ್ತೇವೆ. ಪ್ರಮುಖವಾಗಿ ಯಾವ ವಿಷಯಗಳು ನಿಮ್ಮ ಸಂಬಂಧವನ್ನು ಹಾಳು ಮಾಡುತ್ತವೆ ಅನ್ನೊದನ್ನು ನೋಡೋಣ. ಆ ತಪ್ಪುಗಳನ್ನು ಸರಿಪಡಿಸಿದ್ರೆ ಸಂಬಂಧ ಗಟ್ಟಿಯಾಗುತ್ತೆ.
 

ಗಂಡ-ಹೆಂಡತಿ ಸಂಬಂಧದ (husband and wife relationship) ಹೆಚ್ಚಿನ ಸಮಸ್ಯೆಗಳು ಅವರಿಬ್ಬರಲ್ಲಿ ಒಬ್ಬರ ಗಮನ ಇತರ ಕಡೆಗೆ ಹೆಚ್ಚು ಅಲೆದಾಡಲು ಪ್ರಾರಂಭಿಸಿದಾಗ ಮಾತ್ರ ಪ್ರಾರಂಭವಾಗುತ್ತವೆ. ಇದನ್ನು ಹೆಚ್ಚಿನ ಜನರು ನಂಬುತ್ತಾರೆ. ಇದಲ್ಲದೇ, ಅತ್ತೆ ಮತ್ತು ಸೊಸೆ ನಡುವೆ ಜಗಳ ಉಂಟಾದಾಗಲೂ ಅನೇಕ ಮನೆಗಳು ಮುರಿದು ಹೋಗುತ್ತವೆ. ಆದರೆ ಇನ್ನೂ ಕೆಲವು ವಿವಾಹಗಳು ಮುರಿದು ಹೋಗಲು ನಾವೇ ಕಾರಣವಾಗುತ್ತೇವೆ. ಅವುಗಳ ಬಗ್ಗೆ ತಿಳಿಯೋಣ.

ಹೌದು, ಇದು ನಿಮಗೆ ವಿಚಿತ್ರವಾಗಿ ತೋರಬಹುದು, ಆದರೆ ಇದು ನಿಜ. ಮೂರನೇ ವ್ಯಕ್ತಿಯು ತಮ್ಮ ಸಂಬಂಧ ಪ್ರವೇಶಿಸುವಾಗ ಮಾತ್ರ ಗಂಡ ಮತ್ತು ಹೆಂಡತಿ ಬೇರ್ಪಡುವ ಅಗತ್ಯವಿಲ್ಲ. ಅನೇಕ ಜನರು ತಮ್ಮ ತಪ್ಪುಗಳಿಂದಾಗಿ ತಮ್ಮ ವೈವಾಹಿಕ ಜೀವನವನ್ನು (married life) ಅಪಾಯಕ್ಕೆ ತಳ್ಳುತ್ತಾರೆ. ಆ ತಪ್ಪುಗಳು ಯಾವುವು ಅನ್ನೋದನ್ನು ತಿಳಿಯೋಣ. 

Latest Videos


ಭಾವನಾತ್ಮಕ ಅನ್ಯೋನ್ಯತೆಯ ಕೊರತೆ
ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಅನ್ಯೋನ್ಯತೆ (emotional attachment) ಕೊರತೆಯಿದ್ದಾಗಲೂ ಅವರ ನಡುವಿನ ಸಂಬಂಧ ಹದಗೆಡುತ್ತದೆ. ಇಲ್ಲಿ ಭಾವನಾತ್ಮಕ ಅನ್ಯೋನ್ಯತೆ ಎಂದರೆ ನೀವಿಬ್ಬರೂ ನಿಮ್ಮ ವೈಯಕ್ತಿಕ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿದಾಗ ಸಮಸ್ಯೆ ಹುಟ್ಟಿ ಕೊಳ್ಳುತ್ತವೆ.

ಅದೇ ಸಮಯದಲ್ಲಿ, ತಮ್ಮ ವೈಯಕ್ತಿಕ ವಿಷಯಗಳು ಅಥವಾ ಸ್ಪೇಸ್ ಪರಸ್ಪರ ಹಂಚಿಕೊಳ್ಳುವ ದಂಪತಿ ನಡುವೆ ಸಮಸ್ಯೆಗಳು ಬರೋದು ತುಂಬಾನೆ ಕಡಿಮೆ. ಯಾಕಂದ್ರೆ ಇದರಿಂದ ಇಬ್ಬರ ನಡುವೆ ಅನ್ಯೋನ್ಯತೆ ಇರುತ್ತೆ. ಅಲ್ಲದೇ ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. 

ರೊಮ್ಯಾನ್ಸ್ ಇಲ್ಲದೇ ಇರೋದು (lack of romance)
ಮದುವೆಯ ಆರಂಭಿಕ ದಿನಗಳಲ್ಲಿ, ಗಂಡ ಮತ್ತು ಹೆಂಡತಿಯ ನಡುವೆ ರೊಮ್ಯಾನ್ಸ್ ಹೆಚ್ಚಾಗಿಯೇ ಇರುತ್ತೆ, ಆದರೆ ಅವರ ವಿವಾಹದ 2 ವರ್ಷಗಳು ಕಳೆದ ತಕ್ಷಣ, ಅವರ ನಡುವೆ ಏನೂ ಒಂದೇ ಆಗಿರುವುದಿಲ್ಲ. ಸಂಗಾತಿ ಕೈ ಹಿಡಿಯುವುದು - ಚುಂಬಿಸುವುದು, ಮುದ್ದಾಡುವುದು ಮತ್ತು ಲೈಂಗಿಕತೆ ಎಲ್ಲವೂ ದೂರ ಆಗುತ್ತೆ.

ಸಂಬಂಧದಲ್ಲಿ ಪ್ರಣಯವನ್ನು ಕಾಪಾಡಿಕೊಳ್ಳಲು ಸೆಕ್ಸ್ ಮಾಡುವ ಅಗತ್ಯ ಇಲ್ಲ. ನೀವು ಬಯಸಿದರೆ, ನೀವು ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳಬಹುದು (hug your partner) ಮತ್ತು ನಿಮ್ಮ ಪ್ರೀತಿಯನ್ನು ಅನುಭವಿಸುವಂತೆ ಮಾಡಬಹುದು. ನಿಮ್ಮ ವೈವಾಹಿಕ ಜೀವನವು ದೀರ್ಘಕಾಲದವರೆಗೆ ಮುಂದುವರಿಯಬೇಕೆಂದು ನೀವು ಬಯಸಿದರೆ, ನಿಮ್ಮ ನಡುವಿನ ಪ್ರಣಯ ಸಂಬಂಧವು ಎಂದಿಗೂ ಶೂನ್ಯವಾಗಲು ಬಿಡಬೇಡಿ.
 

ಹಣಕ್ಕಾಗಿ ಜಗಳ (Finacnial issues)
ವೈವಾಹಿಕ ಜೀವನವನ್ನು ಸರಿಯಾಗಿ ನಡೆಸುವಲ್ಲಿ ಹಣವು ದೊಡ್ಡ ಪಾತ್ರ ವಹಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಿದ್ದರೆ, ಅದು ದಂಪತಿ ನಡುವೆ ದೊಡ್ಡ ಉದ್ವಿಗ್ನತೆಯನ್ನು ಸೃಷ್ಟಿಸುತ್ತದೆ. ವಿಶೇಷವಾಗಿ ಒಬ್ಬ ವ್ಯಕ್ತಿಯು ಇನ್ನೊಬ್ಬರಿಗಿಂತ ಹೆಚ್ಚು ಖರ್ಚು ಮಾಡುತ್ತಿರುವಾಗ ಜಗಳ ಹುಟ್ಟುತ್ತೆ

ಹಣಕ್ಕಾಗಿ ನಿಮ್ಮಿಬ್ಬರ ನಡುವೆ ಜಗಳ ನಡೆಯುತ್ತಿದ್ದರೆ, ನೀವಿಬ್ಬರೂ ಒಟ್ಟಿಗೆ ಕುಳಿತು ಬಜೆಟ್ ಮಾಡಬೇಕು. ಇದನ್ನು ಮಾಡುವುದರಿಂದ, ನಿಮ್ಮಿಬ್ಬರ ನಡುವಿನ ಸಮಸ್ಯೆ ಕೊನೆಗೊಳ್ಳುವುದು ಮಾತ್ರವಲ್ಲದೆ ವಿಷಯಗಳು ಸುಗಮವಾಗಿ ನಡೆಯುತ್ತವೆ. ಜೊತೆಗೆ ಹಣವನ್ನು ಉಳಿತಾಯ ಮಾಡುವ ಮಾರ್ಗದ ಬಗ್ಗೆಯೂ ನಿಮಗೆ ಅರಿವಾಗುತ್ತದೆ. 

ಪರಸ್ಪರರ ಬಗ್ಗೆ ಕಾಳಜಿ ವಹಿಸದಿರುವುದು
ಯಾರಾದರೂ ನಿಮ್ಮ ಬಗ್ಗೆ ಕಾಳಜಿ ವಹಿಸಿದಾಗ, ತುಂಬಾ ಖುಷಿಯಾಗುತ್ತೆ. ಅಂತಹ ಪರಿಸ್ಥಿತಿಯಲ್ಲಿ, ನೀವಿಬ್ಬರೂ ಪರಸ್ಪರರ ಬಗ್ಗೆ ಕಾಳಜಿ ವಹಿಸುವುದನ್ನು ನಿಲ್ಲಿಸಿದರೆ, ಅದು ನಿಮ್ಮ ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಯೋಚಿಸಿ? ಯಾವುದೇ ಆರೋಗ್ಯಕರ ಸಂಬಂಧಕ್ಕಾಗಿ, ದಂಪತಿ ಪರಸ್ಪರ ಕಾಳಜಿ ವಹಿಸುವುದನ್ನು ಎಂದಿಗೂ ನಿಲ್ಲಿಸಬಾರದು. ನೀವು ಒಬ್ಬರನ್ನೊಬ್ಬರು ಹೆಚ್ಚು ಅರ್ಥಮಾಡಿಕೊಂಡಷ್ಟೂ, ನೀವು ಪರಸ್ಪರರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೀರಿ, ನೀವು ಹತ್ತಿರವಾಗುತ್ತೀರಿ.

click me!