Love at first sight ಎಂದರೇನು, ಇದನ್ನ ಹೆಚ್ಚು ಅನುಭವಿಸುವುದು ಹುಡುಗನೋ ಹುಡುಗಿಯೋ?

Published : Aug 03, 2026, 12:26 PM IST

Love at First Sight ಎಂದರೇನು? ಹುಡುಗ ಅಥವಾ ಹುಡುಗಿ ಈ ಫೀಲಿಂಗ್ ಯಾರಲ್ಲಿ ಹೆಚ್ಚು. ಪ್ರೀತಿಯಲ್ಲಿ ಮೊದಲು ಬೀಳುವುದು ಯಾರು? ಹೊಸ ಅಧ್ಯಯನಗಳು ಕುತೂಹಲಕಾರಿ ವರದಿ ಇಲ್ಲಿದೆ ಲಿಂಕ್ ಕ್ಲಿಕ್ ಮಾಡಿ

PREV
15
Love at First Sight ಎಂದರೇನು?

ನೀವು ಯಾವುದಾದರೂ ಲವ್ ಸ್ಟೋರಿ ಸಿನಿಮಾ ನೋಡಿಯೇ ಇರುತ್ತೀರಿ. ಇಂಥ ಸಿನಿಮಾ ನೋಡಿದ ಯಾರಿಗಾದರೂ ಇದು ಗೊತ್ತಿರುತ್ತೆ. ಸಿನಿಮಾದ ನಾಯಕ ಎಲ್ಲೋ ಒಂದು ಕಡೆ ನಿಂತಿರುತ್ತಾನೆ, ಆಗ ನಾಯಕಿಯ ಆಗಮನ ಆಗುತ್ತದೆ. ಅದು ನಾಯಕನ ಕಣ್ಣಿಗೆ ಬಿದ್ದಾಗ ಎಲ್ಲಿಂದಲೋ ತಣ್ಣಗೆ ಗಾಳಿ ನಾಯಕನಿಗೆ ರೋಮಾಂಚನ ಶುರುವಾಗುತ್ತದೆ. ಅವಳ ಕಣ್ಣು, ಮೂಗು, ಹೇರ್‌ಸ್ಟೈಲ್, ಡ್ರೆಸ್, ನಡೆಯುವ ಸ್ಟೈಲ್ ಒಂದೇ ದೃಶ್ಯಗಳನ್ನ ನಾಯಕ ನೋಡುತ್ತಿರುವಾಗಲೇ ಹಿನ್ನೆಲೆ ರೊಮ್ಯಾಂಟಿಕ್ ಮ್ಯೂಜಿಕ್ ಬರುತ್ತದೆ ಅದು ಏನು ಅಂದ್ರೆ ಮೊದಲ ನೋಟದಲ್ಲೇ ನಾಯಕ ಪ್ರೀತಿಯಲ್ಲಿ ಬಿದ್ದನೆಂದು ಅರ್ಥ.. ಇದನ್ನೇ ಇನ್ನಷ್ಟು ಚೆಂದವಾಗಿ Love at First Sight ಅಂತಾರೆ.

25
Love at first sight: ತುಂಬಾ ಫೀಲ್ ಆಗೋದು ಹುಡುಗಿಯೋ ಹುಡುಗನೋ?

ಇಂಥ ಸಿನಿಮಾಗಳಿಂದಾಗಿ ಮಹಿಳೆಯರೇ ಹೆಚ್ಚು ಫೀಲ್ ಆಗ್ತಾರೆ. Love at First Sight ವಿಷ್ಯದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರೇ ಹೆಚ್ಚು ಭಾವನಾತ್ಮಕ, ಬೇಗನೆ ಸಂಬಂಧ ಬೆಳೆಸಿಕೊಳ್ತಾರೆ ಅಂತಾ ಬಹಳಷ್ಟು ಜನರ ಊಹೆ. ಆದರೆ ಅದು ನಿಜವಲ್ಲ. ವಿಜ್ಞಾನಿಗಳು ಇತ್ತೀಚೆಗೆ ಸಂಶೋಧನೆ ನಡೆಸಿದ್ದಾರೆ. ಅದರಲ್ಲಿ ಇದು ತಪ್ಪು ಎಂದು ಹೇಳಿದೆ. ಮಹಿಳೆಯರಷ್ಟೇ ಪುರುಷರು ಕೂಡ ತುಂಬಾ ಭಾವನಾತ್ಮಕವಾಗಿರುತ್ತಾರೆ. ಒಬ್ಬಳು ಇಷ್ಟವಾದರೆ ತುಂಬಾ ಬೇಗನೇ ಮನಸಿಗೆ ಹಚ್ಕೊಳ್ತಾರೆ, ಇಷ್ಟವಾದವಳನ್ನು ತೀವ್ರವಾಗಿ ಪ್ರೀತಿಸಲಾರಂಭಿಸುತ್ತಾರೆ ಎಂದು ಹೊಸ ಅಧ್ಯಯನ ತಿಳಿಸಿದೆ.

35
ಏನಿದು Love at First Sight? ವೈದ್ಯರು, ವಿಜ್ಞಾನಿಗಳು ಏನು ಹೇಳ್ತಾರೆ?

ಸರಳವಾಗಿ ಹೇಳುವುದಾದರೆ, ಮೊದಲಸಲ ಒಬ್ಬಳು ಹುಡುಗಿ ಅಥವಾ ಹುಡುಗನನ್ನು ನೋಡಿ ಆಕರ್ಷಿತರಾಗುವುದು, ಅವನು ಅಥವಾ ಅವಳೇ ನನ್ನ ಜೀವನಕ್ಕೆ ಸರಿಯಾದ ಸಂಗತಿ ಅಂತಾ ಭಾವಿಸಿದಾಗ ಅದನ್ನ ಲವ್ ಅಟ್ ಫಸ್ಟ್ ಸೈಟ್ ಅಂತಾರೆ. ಆದರೆ ಈ ವಿಷ್ಯದಲ್ಲಿ ವೈದ್ಯರು, ವಿಜ್ಞಾನಿಗಳು ಹೇಳೋದೇನೆಂದರೆ ಇದರಲ್ಲಿ ಯಾವುದೇ ಮ್ಯಾಜಿಕ್ ಇಲ್ಲ. ಇದೆಲ್ಲ ಮನಸಿನ ಆಟ!

ತುಂಬಾ ಸುಂದರ, ಆಕರ್ಷಕವಾಗಿ ಕಾಣುವವರನ್ನ ಮೊದಲ ಸಲ ನೋಡಿದಾಗ ನಮ್ಮ ದೇಹದಲ್ಲಿ ಕೆಲವು ರಾಸಾಯನಿಕಗಳು ಸ್ರವಿಸಿ ಮೆದುಳಿನಲ್ಲಿ ವೇಗವಾಗಿ ಹರಿಯಲಾರಂಭಿಸಿದಾಗ ತಕ್ಷಣವೇ ಒಂದು ಹಿತ ಅನುಭವ, ವಿಚಿತ್ರವಾದ ಫೀಲಿಂಗ್ ಆಗಲು ಪ್ರಾರಂಭಿಸುತ್ತದೆ. ಇದರೊಂದಿಗೆ ಸಿನಿಮಾ ದೃಶ್ಯಗಳು ಕಣ್ಮುಂದೆ ಬಂದು, ಆ ದೃಶ್ಯಗಳನ್ನ ಕಲ್ಪಿಸಿಕೊಂಡಾಗ ಒಂಥರಾ ಫೀಲ್ ಅಗುತ್ತೆ ಇದಕ್ಕೆ love at first sight ಎಂದು ತಪ್ಪು ಭಾವಿಸ್ತಾರೆ ಎನ್ನುತ್ತದೆ ಅಧ್ಯಯನ.

45
ಯಾರು ಮೊದಲು ಪ್ರೀತಿಯಲ್ಲಿ ಬೀಳೋದು ಹುಡುಗನೋ? ಹುಡುಗಿಯೋ?

ಈಗ ನಮ್ಮ ಮುಂದಿನ ಪ್ರಶ್ನೆ ಎಂದರೆ ಯಾರು ಮೊದಲು ಪ್ರೀತಿಯಲ್ಲಿ ಬೀಳೋದು? ಹುಡುಗನೋ ಹುಡುಗಿಯೋ? ಈ ವಿಷಯದ ಬಗ್ಗೆ ಪ್ರಪಂಚದಾದ್ಯಂತ ಸಾಕಷ್ಟು ಅಧ್ಯಯನಗಳು ನಡೆದಿವೆ. ಈ ಅಧ್ಯಯನ ವರದಿಗಳು ಹೇಳುವುದೇನೆಂದರೆ ಹುಡುಗಿಯರಿಗಿಂತ ಹುಡುಗರೇ ಬೇಗ ಲವ್‌ನಲ್ಲಿ ಬೀಳ್ತಾರಂತೆ. ಅಂದರೆ ಲವ್ ಅಟ್ ಫಸ್ಟ್ ಸೈಟ್ ಫೀಲ್ ಅನುಭವಿಸೋದು ಹುಡುಗರೇ ಅಂತಾಯ್ತು. ಇದೆ ಕಾರಣಕ್ಕೋ ಏನೋ ಸಿನಿಮಾಗಳಲ್ಲಿ ಮೊದಲು ನಾಯಕನ್ನು ತೋರಿಸಲಾಗುತ್ತೆ ನಂತರ ನಾಯಕಿ ಎಂಟ್ರಿ ಆಗ್ತಿದ್ದಂತೆ 

ಮೊದಲ ನೋಟಕ್ಕೆ ಲವ್ ಶುರುವಾಗುತ್ತೆ. ಇದಕ್ಕೆ ಕಾರಣವೆಂದರೆ ಹುಡುಗಿಯರ ಬಾಹ್ಯ ಸೌಂದರ್ಯಕ್ಕೆ ಬಹಳ ಬೇಗನೇ ಮರುಳಾಗುತ್ತಾರೆ. ಆದರೆ ಈ ವಿಚಾರದಲ್ಲಿ ಹುಡುಗಿಯರು ಲವ್ ಅಟ್ ಫಸ್ಟ್ ಸೈಟ್‌ನಲ್ಲಿ ಬಿಳೋದು ಅಪರೂಪ. ಏಕೆಂದರೆ ಹುಡುಗಿಯರು ಮೊದಲು ಹುಡುಗನ ನಡೆವಳಿಕೆ ಬುದ್ಧಿವಂತಿಕೆ, ಉದ್ಯೋಗ ಮೊದಲು ಗಮನಿಸುತ್ತಾರಂತೆ ನಂತರ ಲವ್ ಮಾಡುವ ಬಗ್ಗೆ ಯೋಚಿಸುತ್ತಾರಂತೆ. ಆದರೆ ಇತ್ತೀಚೆಗೆ ಹುಡುಗ ಎಷ್ಟೇ ಬುದ್ಧಿವಂತನಾಗಿದ್ದರೂ, ಒಳ್ಳೆ ಮನಸಿನವರಾಗಿದ್ದರೂ ಅವನ ಪರ್ಸ್ ಮತ್ತು ಸೈಟ್(ಆಸ್ತಿಪಾಸಿ) ನೋಡಿ ಹಿಂದೆ ಬೀಳುವವರು ಹೆಚ್ಚಾಗ್ತಿದ್ದಾರೆಂದು ತಮಾಷೆ ಮಾಡಲಾಗ್ತಿದೆ. ಅದು ವಾಸ್ತವವೂ ಹೌದು!

55
Love at first sight: ಇಂಥ ಪ್ರೀತಿ ಎಷ್ಟು ಕಾಲ ಉಳಿಯುತ್ತೆ?

ಅಧ್ಯಯನ ವರದಿಗಳು ಹೇಳುವ ಪ್ರಕಾರ, Love at first sight ವಾಸ್ತವಾಗಿ ಅದೊಂದು ಆ ಕ್ಷಣದ ಫೀಲಿಂಗ್ ಹೊರತು ಅದೇ ಪ್ರೀತಿಯಲ್ಲ. ಮೊದಲಸಲ ನೋಡಿದಾಗ ಹೆಚ್ಚು ಆಕರ್ಷಿತರಾಗಿರುತ್ತಾರೆ. ಆದರೆ ವಾಸ್ತವ ಜೀವನ ಆ ಯುವತಿ ಅಥವಾ ಯುವಕನೊಂದಿಗೆ ಕಾಲ ಕಳೆದಂತೆಲ್ಲ ಅವರ ಸಾಮರ್ಥ್ಯ, ದೌರ್ಬಲ್ಯಗಳು ತಿಳಿದುಕೊಂಡಾಗ ಆಕರ್ಷಣೆ ಕಡಿಮೆಯಾಗಲು ಪ್ರಾರಂಭಿಸುತ್ತದೆ ಅಥವಾ ನಿಜವಾದ ಪ್ರೀತಿ ಚಿಗುರೊಡೆಯುತ್ತದೆ. ಆ ಸಂಬಂಧ ಮುಂದುವರಿದರೆ ಅದುವ ನಿಜವಾದ ಪ್ರೀತಿ, ಇದು ಅಪರೂಪ.

ನಿಮಗೆ ಇಂಥ ಅನುಭವವಾಗಿದೆಯೇ? ಕಾಮೆಂಟ್ ಮಾಡಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories