'ಅಮೃತಧಾರೆ' ಖ್ಯಾತಿಯ ಜೈದೇವ್ ಮತ್ತು 'ಭಾರ್ಗವಿ ಎಲ್‌ಎಲ್‌ಬಿ' ಖ್ಯಾತಿಯ ರಾಧಾ ಭಗವತಿ ನಿಜ ಜೀವನದಲ್ಲಿ ಒಂದಾಗುತ್ತಿದ್ದಾರೆ. ಆರಂಭದಲ್ಲಿ ರಾಧಾ ಅವರ ಪ್ರೀತಿಯನ್ನು ತಿರಸ್ಕರಿಸಿದ್ದ ನಟ ರಾಣವ್, ನಂತರ ಅವರ ವ್ಯಕ್ತಿತ್ವಕ್ಕೆ ಮನಸೋತು ಮದುವೆಗೆ ಒಪ್ಪಿಕೊಂಡಿದ್ದಾರೆ.
ಅಮೃತಧಾರೆಯಲ್ಲಿ ಪೆದ್ದು ಮಲ್ಲಿಯಾಗಿ ಎಲ್ಲರ ಮನಸ್ಸನ್ನು ಗೆದ್ದು ಇದೀಗ ಭಾರ್ಗವಿ ಎಲ್ಎಲ್ಬಿಯಲ್ಲಿ ಭಾರ್ಗವಿ ಆಗಿ ಮಿಂಚುತ್ತಿದ್ದಾರೆ ನಟಿ ರಾಧಾ ಭಗವತಿ. Amurthadhaare Serialನಲ್ಲಿ ಮೋಸ ಮಾಡಿ ಪ್ರೆಗ್ನೆಂಟ್ ಮಾಡಿದ ಜೈದೇವ್ನನ್ನೇ ರಿಯಲ್ ಲೈಫ್ನಲ್ಲಿ ಮದ್ವೆಯಾಗ್ತಿದ್ದಾರೆ ನಟಿ ರಾಧಾ. ಇವರ ಮದುವೆ ಡೇಟ್ ಬಗ್ಗೆ ಇನ್ನೂ ಬಹಿರಂಗಗೊಳ್ಳದಿದ್ದರೂ, ರಿಯಲ್ ಲೈಫ್ ಲವ್ ಸ್ಟೋರಿ ಮಾತ್ರ ರೋಚಕವಾಗಿದೆ.
26
ನಟಿಯನ್ನು ಮೊದಲಿಗೆ ಒಪ್ಪಿಕೊಳ್ಳದ ನಟ
ಇದೀಗ ಆರಂಭದಲ್ಲಿ ನಟಿ ರಾಧಾ ಭಗವತಿ ಅವರು ಪ್ರಪೋಸ್ ಮಾಡಿದಾಗ, ರಾಣವ್ ಬೇಡ ಎಂದ ಬಗ್ಗೆ ನಟಿ ಮಾತನಾಡಿದ್ದಾರೆ. ಸುಮನ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ನಟಿ, ನನಗೆ ಗೊತ್ತಿಲ್ಲದೇ ಅವರ ಮೇಲೆ ಲವ್ ಆಯ್ತು, ಅವರ ಕ್ಯೂಟ್‌ನೆಸ್ ನನ್ನನ್ನ ಅಟ್ರ್ಯಾಕ್ಟ್ ಮಾಡಿತು. ಆದರೆ ಅವರ ಹಿನ್ನೆಲೆ ಏನೂ ಗೊತ್ತಿರಲಿಲ್ಲ. ಅವರು ಹಣವಂತರಾ, ಕಾರು, ಬಂಗ್ಲೆ ಇದ್ಯಾ ಏನೂ ಅರಿವು ಇರಲಿಲ್ಲ. ಮನಸ್ಸು ಅವರನ್ನು ಕೇಳುತ್ತಿತ್ತು ಅಷ್ಟೇ ಎಂದು ತಮಗೆ ಆರಂಭದಲ್ಲಿ ಆದ ಲವ್ ಫೀಲಿಂಗ್ಸ್ ಬಗ್ಗೆ ಹೇಳಿದ್ದಾರೆ.
36
ಒಲ್ಲೆ ಎಂದು ಬಿಟ್ಟರು
ಮನಸ್ಸು ಕೇಳದೇ ನಾನೇ ಒಂದು ದಿನ ನಾನು ಅವರಿಗೆ ಹೋಗಿ ಹೇಳಿಬಿಟ್ಟೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಈಗ ಸದ್ಯಕ್ಕೆ ಅದರ ಬಗ್ಗೆ ಏನೂ ಪ್ಲ್ಯಾನ್ಸ್ ಇಲ್ಲ, ಸಾರಿ ಅಂತ ಹೇಳಿಬಿಟ್ಟರು. ನನಗೆ ಆಗ ಏನು ಮಾತಾಡಬೇಕು ಅಂತ ಗೊತ್ತಾಗಿರ್ಲಿಲ್ಲ. ಕಂಪ್ಲೀಟ್ ಆಗಿ ಬ್ಲ್ಯಾಂಕ್ ಆಗಿಬಿಟ್ಟೆ. ಅದು ನನಗೆ ಹರ್ಟ್ ಆಯ್ತು ಎಂದು ನಟಿ ಹೇಳಿದ್ದಾರೆ.
ಅವರು ನನ್ನ ಪ್ರೀತಿಯನ್ನ ರಿಜೆಕ್ಟ್ ಮಾಡಿದ್ದಾರೆ ಅಂತ ಗೊತ್ತಿದ್ರೂ ಕೂಡ, ಅವರ ಮೇಲೆ ಇದ್ದ ಪ್ರೀತಿ ಹೋಗ್ತಾನೆ ಇರ್ಲಿಲ್ಲ. ಮದುವೆ ಆದರೆ ಇವರನ್ನೇ ಆಗ್ತೀನಿ. ಇಲ್ಲದೇ ಇದ್ರೆ ಆ ಮದುವೆ ಅನ್ನೋ ಕಾನ್ಸೆಪ್ಟ್ ಬೇಡ ನನ್ನ ಜೀವನದಲ್ಲಿ ಅಂತ ನಾನು ಫಿಕ್ಸ್ ಅಗಿಬಿಟ್ಟಿದ್ದೆ. ಆದರೂ ಶೂಟಿಂಗ್‌ನಲ್ಲಿ ಏನೂ ಗೊತ್ತಿಲ್ಲದವರ ರೀತಿ ಭಾಗಿಯಾಗಿದ್ದೆ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
56
ಏಕಾಏಕಿ ನಿರ್ಧಾರ ಸಲ್ಲ
ಇದಕ್ಕೆ ರಾಣವ್ ಅವರು, ಮೊದಲು ಪಾತ್ರದ ಪರಿಚಯ ಆಗಿತ್ತು ಬಿಟ್ರೆ, ನಮ್ಮಿಬ್ಬರ ವ್ಯಕ್ತಿತ್ವದ ಪರಿಚಯ ಅಗಿರ್ಲಿಲ್ಲ. ಅವರಿಗೆ ಯಾವಾಗ ನನ್ನ ವ್ಯಕ್ತಿತ್ವದ ಪರಿಚಯ ಆಯ್ತೋ ಅವರಿಗೆ ನನ್ನ ಮೇಲೆ ಆಸೆ ಆಗೋಕೆ ಶುರುವಾಯ್ತು. ಅವರ ವ್ಯಕ್ತಿತ್ವದ ಪರಿಚಯ ನನಗೆ ಆಗಿದ್ರೂ ಕೂಡ ನಾನು ಅದರ ಮೇಲೆ ಗಮನ ಕೊಟ್ಟಿರಲಿಲ್ಲ. ಬಹುಶಃ ಗಮನ ಕೊಟ್ಟಿದಿದ್ರೆ ನನಗೇ ಮೊದಲು ಇವರ ಮೇಲೆ ಫೀಲಿಂಗ್ಸ್ ಶುರುವಾಗುತ್ತಿತ್ತೋ ಗೊತ್ತಿಲ್ಲ. ಅಷ್ಟಕ್ಕೂ ಇಂಥ ನಿರ್ಧಾರ ಏಕಾಏಕಿ ತೆಗೆದುಕೊಳ್ಳುವುದು ಅಲ್ಲವಲ್ಲ ಎಂದಿದ್ದಾರೆ.
66
ವ್ಯಕ್ತಿತ್ವ ಬದಲಾಗಲಿಲ್ಲ
ಆದಕ್ಕೆ ಅವರು ಪ್ರಪೋಸ್ ಮಾಡಿದಾಗ ನಾನು ಒಪ್ಪಿಕೊಂಡಿರಲಿಲ್ಲ. ಆದರೆ, ಈಕೆಯ ವ್ಯಕ್ತಿತ್ವ ಬದಲಾಗಲಿಲ್ಲ ಅನ್ನೋದು ಗೊತ್ತಾಯ್ತು. ಆಮೇಲೆ ನಾನೇ ಇದಕ್ಕೆ ಒಪ್ಪಿಕೊಂಡೆ ಎಂದಿದ್ದಾರೆ. ಮುಂಚೆ ನನ್ನ ಜೊತೆಗೆ ಇವರ ಒಡನಾಟ ಹೇಗಿತ್ತೋ ಹಾಗೆ ಇತ್ತು. ಅದು ನನಗೆ ಇಷ್ಟ ಆಯ್ತು. ಅಲ್ಲಿಗೆ ನಮ್ಮ ಮದುವೆ ಫಿಕ್ಸ್ ಆಯ್ತು ಎಂದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.