ಮದ್ವೆ ಆಗ್ಲೋ, ಬೇಡ್ವೋ ಎಂಬ ಗೊಂದಲದಲ್ಲಿರೋರಿಗೆ ಸದ್ಗುರು ಕೊಡ್ತಾರೆ ಪರಿಹಾರ!

First Published | Dec 15, 2023, 5:31 PM IST

ಮದುವೆ ಅನ್ನೋದು ಸಾಮಾಜಿಕ ಬದ್ಧತೆಯಾಗಿದ್ದು, ಇದು ಪುರುಷರು ಮತ್ತು ಮಹಿಳೆಯರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಪುರುಷರಿಗೆ, ಮದುವೆ ಅಂದ್ರೆ ಮೂರು ಗಂಟು ಕಟ್ಟುವುದು ಹೊಸ ಕುಟುಂಬವನ್ನು ರೂಪಿಸುವುದು, ಆದರೆ ಮಹಿಳೆಯರಿಗೆ ಇದು ಅವರ ಜೀವನದ ಪ್ರಮುಖ ಸಂಬಂಧಗಳಲ್ಲಿ ಒಂದಾಗಿದೆ.
 

ಭಾರತೀಯ ಪೋಷಕರು ತಮ್ಮ ಮಕ್ಕಳ ವಯಸ್ಸು 25 ವರ್ಷ ದಾಟಿದ್ದು, ಇನ್ನೂ ಮದುವೆಯಾಗಿಲ್ಲ (marriage) ಎಂದ ಕೂಡಲೇ ಚಿಂತೆ ಮಾಡಲು ಪ್ರಾರಂಭಿಸುತ್ತಾರೆ ಎಂದರೆ ತಪ್ಪಾಗಲಾರದು. ನಿಮಗೆ ವಯಸ್ಸಾಗಿದೆ, ಮದುವೆಯಾಗಿ', 'ಮದುವೆ ಆದ್ರೆ ಎಲ್ಲವೂ ಚೆನ್ನಾಗಿರುತ್ತೆ', 'ತುಂಬಾ ಲೇಟ್ ಆದ್ರೆ ನಿಮಗೆ ಒಳ್ಳೆಯ ಹುಡುಗ ಸಿಗುವುದಿಲ್ಲ' 'ವಯಸ್ಸು ಮುಗಿದರೆ, ಉತ್ತಮ ಹುಡುಗಿಯನ್ನು ಪಡೆಯಲು ತೊಂದರೆಯಾಗುತ್ತದೆ'. ಹೀಗೆ ಮದುವೆಯಾಗದೆ ಇದ್ರೆ ಏನೇನೋ ಕೇಳಬೇಕಾಗುತ್ತೆ. 

ಏಕೆಂದರೆ ಮದುವೆ ಜೀವನಕ್ಕೆ ಅತ್ಯಗತ್ಯ ಎಂದು ಅವರು ನಂಬುತ್ತಾರೆ. ಮದುವೆಯಾದ್ರೆ ಮಕ್ಕಳ ಜೀವನದ (Life of children) ಅರ್ಧ ಸಮಸ್ಯೆಯೇ ಮುಗಿಯುತ್ತದೆ ಎಂದೇ ಭಾವಿಸಲಾಗುತ್ತದೆ. ಆದರೆ ಈಗಿನ ಜನ ಮಾತ್ರ ಮದುವೆ ಆಗಿಲ್ಲಾಂದ್ರೂ ಜೀವನ ಆರಾಮವಾಗಿ, ಸಂತೋಷವಾಗಿರಲು ಸಾಧ್ಯ ಎನ್ನುತ್ತಾರೆ. ಹಾಗಿದ್ರೆ ಮದುವೆಯಾಗಬೇಕೋ? ಬೇಡವೋ? ಸದ್ಗುರು ಏನು ಹೇಳುತ್ತಾರೆ ನೋಡೋಣ. 

Tap to resize

ಸದ್ಗುರು (Sadguru) ಹೇಳುವಂತೆ,  ಮದುವೆಯಾಗುವುದರಲ್ಲಿ ಯಾವುದೇ ಹಾನಿ ಇಲ್ಲ. ಮದುವೆ ಎನ್ನುವುದು ಕೇವಲ ಒಂದು ಸಂಸ್ಥೆ. ನೀವು ಅದನ್ನು ನಂಬುತ್ತೀರೋ ಇಲ್ಲವೋ, ಅದು ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು. ಮದುವೆ ಎಂಬುದು ಸಮಾಜ ನೀಡುವ ಒಂದು ಹಣೆಪಟ್ಟಿ. ಆದರೆ ನಿಮ್ಮೊಳಗೆ ಮದುವೆಯ ಅಗತ್ಯವಿಲ್ಲದಿದ್ದರೂ ನೀವು ಮದುವೆಯಾದರೆ, ಅದು ಅಪರಾಧ, ಯಾಕಂದ್ರೆ ಇಷ್ಟವಿಲ್ಲದೇ ಮದ್ವೆಯಾದ್ರೆ ನಿಮಗೆ ನೀವು ಶಿಕ್ಷೆ ಕೊಟ್ಟಂತೆ ಎನ್ನುತ್ತಾರೆ ಸದ್ಗುರು.
 

ನೀವು ಮದುವೆಗೆ ಸಿದ್ಧರಾದಾಗ ಮಾತ್ರ ಮದುವೆಯಾಗಿ. ಮೊದಲಿಗೆ, ನಿಮ್ಮ ಅಗತ್ಯಗಳನ್ನು ಅರ್ಥಮಾಡಿಕೊಳ್ಳಿ. ಅವು ತುಂಬಾ ಬಲವಾಗಿದ್ದರೆ, ನೀವು ನಿಜವಾಗಿಯೂ ಮದುವೆಯಾಗಬೇಕು. ನಿಮ್ಮ ಅಗತ್ಯಗಳನ್ನು ನೀವು ನಿವಾರಿಸಲು ಸಾಧ್ಯವಾದರೆ, ನೀವು ಮದುವೆಯ ಕಲ್ಪನೆಯನ್ನು ತ್ಯಜಿಸಬೇಕು. ಏಕೆಂದರೆ ಇಷ್ಟವಿಲ್ಲದ ವಿವಾಹಕ್ಕಿಂತ ಸಂತೋಷದಿಂದ ಒಂಟಿಯಾಗಿರುವುದು ಉತ್ತಮ. ಸಮಾಜ ಏನು ಹೇಳುತ್ತದೆ ಎಂಬ ಕಾರಣಕ್ಕೆ ಅಥವಾ ಇತರ ಜನರು ಮದುವೆಯಾಗುತ್ತಿದ್ದಾರೆ ಎಂಬ ಕಾರಣಕ್ಕೆ ಮದುವೆಯಾಗಬೇಡಿ.
 

ಜೀವನಪರ್ಯಂತ ಸಂಗಾತಿಯನ್ನು ಹುಡುಕುವುದು
ಮದುವೆ ಎಂದರೆ ಸಂಗಾತಿಯ ಬೆಂಬಲವನ್ನು ಪಡೆಯುವುದು ಎಂಬುದರಲ್ಲಿ ಸಂದೇಹವಿಲ್ಲ. ಇಂದಿನ ಕಾಲದಲ್ಲಿ, ಹೆಚ್ಚಿನ ಜನರು ತನ್ನ ಜೀವನವನ್ನು ಸಂಗಾತಿಯೊಂದಿಗೆ (life partner) ಕಳೆಯಲು ಬಯಸುತ್ತಾನೆ, ಅವರು ಅವರನ್ನು ಗೌರವಿಸುವುದು ಮಾತ್ರವಲ್ಲದೆ ಅವರನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರನ್ನು ತುಂಬಾ ಪ್ರೀತಿಸುತ್ತಾರೆ. ಏಕೆಂದರೆ ಮದುವೆಯು ಜೀವನಪರ್ಯಂತದ ಪ್ರಯಾಣ, ಉತ್ತಮ ಸಂಗಾತಿ ಸಿಕ್ಕಾಗ ಮಾತ್ರ ಈ ಬಾಂಧವ್ಯ ಉಳಿಯುತ್ತೆ. ಈ ಜಗತ್ತಿನಲ್ಲಿ ಸುಂದರವಾಗಿ ಒಟ್ಟಿಗೆ ವಾಸಿಸುವ, ಪರಸ್ಪರ ಆಳವಾಗಿ ಪ್ರೀತಿಸುವ ಮತ್ತು ಮೇಡ್ ಫಾರ್ ಈಚ್ ಅದರ್ ಎನ್ನುವಂತಹ ಅನೇಕ ಕಪಲ್ಸ್ ಗಳೂ ಇದ್ದಾರೆ.

ದೈಹಿಕ ಅಗತ್ಯಗಳಿಗೆ ಮದುವೆ ಮುಖ್ಯ
ನಮ್ಮ ಸಮಾಜದಲ್ಲಿ, ಮದುವೆಯ ನಂತರವೇ ಮಹಿಳೆಯರು ಮತ್ತು ಪುರುಷರು ಪರಸ್ಪರ ಹತ್ತಿರವಾಗುವುದು ಸರಿ ಮತ್ತು ಸೂಕ್ತವೆಂದು ಪರಿಗಣಿಸಲಾಗಿದೆ. ಲೈಂಗಿಕ ಅನ್ಯೋನ್ಯತೆಯನ್ನು (physical intimacy) ಪೂರೈಸಲು ಮದುವೆ ಅಗತ್ಯವೆಂದು ಜನರು ಪರಿಗಣಿಸಲು ಇದು ಒಂದು ಕಾರಣವಾಗಿದೆ. ಆದರೆ, ಮದುವೆ ನಿಮ್ಮ ಸ್ವಂತ ಅಗತ್ಯಗಳಿಗೆ ಅನುಗುಣವಾಗಿರಬೇಕು. ನಿಮ್ಮ ಅಗತ್ಯಗಳು ದೈಹಿಕ-ಭಾವನಾತ್ಮಕ ಮತ್ತು ಮಾನಸಿಕವಾಗಿರಬಹುದು. ನೀವು ಸಾಮಾಜಿಕ ಅಥವಾ ಆರ್ಥಿಕ ಕಾರಣಗಳಿಗಾಗಿ ಮಾತ್ರ ಮದುವೆಯಾಗಬಾರದು.
 

ಆದರ್ಶ ಪುರುಷ ಅಥವಾ ಮಹಿಳೆಯನ್ನು ಹುಡುಕಬೇಡಿ
ಈ ದಿನಗಳಲ್ಲಿ, ತಮ್ಮ ಸಂಗಾತಿಯ ಬಗ್ಗೆ ಜನರ ಉದ್ದೇಶಗಳು ಬಹಳ ವೇಗವಾಗಿ ಬದಲಾಗುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಆದರ್ಶ ಪುರುಷ ಅಥವಾ ಮಹಿಳೆಯನ್ನೆ ಮದುವೆಯಾಗೋದು ಅಂದ್ರೆ ಅದು ತಪ್ಪಾಗುತ್ತೆ. ಏಕೆಂದರೆ ಈ ಜಗತ್ತಿನಲ್ಲಿ ಯಾರೂ ಪರ್ಫೆಕ್ಟ್ (perfect partner) ಆಗಿರೋದಲ್ಲ. ನಿಮಗೆ ಸಂಗಾತಿಯ ಅಗತ್ಯವಿದೆ ಎಂದು ನಿಮಗೆ ಅನಿಸಿದರೆ, ನಿಮಗೆ ಸೂಕ್ತವಾದ ಯಾರನ್ನಾದರೂ ಹುಡುಕಿ. ನೀವಿಬ್ಬರೂ ಪರಸ್ಪರ ಒಪ್ಪಿಕೊಳ್ಳಬಹುದು. ನೀವು ಪ್ರೀತಿಸಬಹುದು. ಒಬ್ಬರನ್ನೊಬ್ಬರು ಗೌರವಿಸಿ. ಇಬ್ಬರಲ್ಲಿ ಹೊಂದಾಣಿಕೆ ಮುಖ್ಯವೇ ಹೊರತು, ಪರ್ಫೆಕ್ಷನ್ ಅಲ್ಲ. 

Latest Videos

click me!