40ರ ನಂತ್ರ ಇಷ್ಟು ಬದಲಾಗುತ್ತಾ ಮಹಿಳೆ ಮನಸ್ಸು ! ಏನಿದು ಮೆನೋ ಡಿವೋರ್ಸ್?

Published : Jul 07, 2026, 07:12 PM IST

meno divorce : ಸೋಶಿಯಲ್‌ ಮೀಡಿಯಾದಲ್ಲಿ ಮೆನೋ ಡಿವೋರ್ಸ್‌ ಬಗ್ಗೆ ಹೆಚ್ಚು ಚರ್ಚೆ ಆಗ್ತಿದೆ. 45 ವರ್ಷದ ನಂತ್ರ ಮಹಿಳೆಯರು ವಿಚ್ಛೇದನ ಪಡೆಯಲು ಕಾರಣ ಏನು? ಪ್ರಶ್ನೆಗೆ ಉತ್ತರ ಇಲ್ಲಿದೆ.

PREV
16
ವೈರಲ್ ಆಗುತ್ತಿರುವ ಮೊನೋ ಡಿವೋರ್ಸ್ ಎಂದರೇನು?

ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಮೆನೋಪಾಸ್ ಎಂಬ ಪದ ಹೆಚ್ಚು ಚರ್ಚೆಯಾಗುತ್ತಿದೆ. ಕೆಲವರು ಮೆನೋಪಾಸ್ ಬಂದ ನಂತರ ಮಹಿಳೆಯರು ವಿಚ್ಛೇದನ ಪಡೆಯಲು ಹೆಚ್ಚು ಆಸಕ್ತಿ ತೋರುತ್ತಾರೆ ಎಂಬ ವಾದ ಮಂಡಿಸ್ತಿದ್ದಾರೆ. ಇದಕ್ಕೆ ಮೆನೋ ಡಿವೋರ್ಸ್ (meno divorce )ಅಂತ ಕರೆಯಲಾಗ್ತಿದೆ. ಆದ್ರೆ ನಿಜಕ್ಕೂ ಮೆನೋಪಾಸ್ಡಿವೋರ್ಸ್‌ ಗೆ ಕಾರಣವಾಗ್ತಿದ್ಯಾ?

26
ಮೆನೋಪಾಸ್ ಎಂದ್ರೇನು?

ತಜ್ಞರ ಪ್ರಕಾರ, ಮೆನೋಪಾಸ್ ಯಾವುದೇ ವೈದ್ಯಕೀಯ ಕಾಯಿಲೆ ಅಥವಾ ಅಧಿಕೃತ ರೋಗನಿರ್ಣಯವಲ್ಲ. ಇದು ಮಹಿಳೆಯ ಜೀವನದಲ್ಲಿ ಬರುವ ಒಂದು ಹಂತವನ್ನು ವಿವರಿಸಲು ಬಳಸುವ ಸಾಮಾಜಿಕ ಪದ. ಮುಟ್ಟುನಿಲ್ಲುವ ಸಮಯ. ಸಾಮಾನ್ಯವಾಗಿ 45 ರಿಂದ 55 ವರ್ಷದ ನಡುವೆ ಹಾರ್ಮೋನುಗಳಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಇದರಿಂದ ಮನಸ್ಥಿತಿ, ನಿದ್ರೆ, ಒತ್ತಡ ಮತ್ತು ಭಾವನೆಗಳಲ್ಲಿ ವ್ಯತ್ಯಾಸ ಕಾಣಿಸಬಹುದು.

36
ಹಾರ್ಮೋನುಗಳೇ ಸಂಬಂಧಕ್ಕೆ ಅಡ್ಡಿ ಆಗ್ತಿದ್ಯಾ?

ಹಾರ್ಮೋನ್‌, ದಾಂಪತ್ಯ ಮುರಿಯಲು ಕಾರಣ ಆಗ್ತಿಲ್ಲ ಎನ್ನುತ್ತಾರೆ ತಜ್ಞರು. ಮೆನೋಪಾಸ್ ವಿಚ್ಛೇದನಕ್ಕೆ ಕಾರಣವಲ್ಲ. ಆದರೆ ಸಂಬಂಧದಲ್ಲಿ ಈಗಾಗಲೇ ಇದ್ದ ಸಮಸ್ಯೆಗಳನ್ನು ಅದು ಹೆಚ್ಚು ಸ್ಪಷ್ಟವಾಗಿ ಕಾಣುವಂತೆ ಮಾಡಬಹುದು. ಈಗಾಗಲೇ ಸಂಬಂಧದಲ್ಲಿ ಸಂವಹನದ ಕೊರತೆ, ನಿರಂತರ ಜಗಳ, ಗೌರವದ ಅಭಾವ ಅಥವಾ ಭಾವನಾತ್ಮಕ ಅಂತರ ಇದ್ದರೆ, ಮೆನೋಪಾಸ್ ಹಂತದಲ್ಲಿ ಆ ಸಮಸ್ಯೆಗಳು ಇನ್ನಷ್ಟು ಸ್ಪಷ್ಟವಾಗಿ ಕಾಣಿಸಬಹುದು ಎನ್ನುತ್ತಾರೆ ತಜ್ಞರು.

46
ಮಹಿಳೆಯರಲ್ಲಿ ಬದಲಾವಣೆ

ಅನೇಕ ಮಹಿಳೆಯರು ವರ್ಷಗಳ ಕಾಲ ಕುಟುಂಬ, ಮಕ್ಕಳು ಮತ್ತು ಜವಾಬ್ದಾರಿಗಳಿಗಾಗಿ ತಮ್ಮ ಆಸೆಗಳನ್ನು ಬದಿಗಿಡುತ್ತಾರೆ. ಮಕ್ಕಳು ದೊಡ್ಡವರಾದ ನಂತರ, ಇನ್ನು ನನ್ನ ಜೀವನ ಹೇಗಿರಬೇಕು? ಎಂಬ ಪ್ರಶ್ನೆ ಸಹಜವಾಗಿ ಅವರನ್ನು ಕಾಡುತ್ತದೆ. ತಮ್ಮ ಸಂತೋಷ, ಸ್ವಾಭಿಮಾನ ಮತ್ತು ಮಾನಸಿಕ ನೆಮ್ಮದಿಗೆ ಹೆಚ್ಚಿನ ಮಹತ್ವ ನೀಡಲು ಆರಂಭಿಸುತ್ತಾರೆ. ಇದ್ರಿಂದಾಗಿ ಅವರು ಬದಲಾದಂತೆ ಕಾಣಿಸಲು ಶುರುವಾಗ್ತಾರೆ.

56
ಇಂದಿನ ಮಹಿಳೆಯರಲ್ಲಿ ಏನು ಬದಲಾಗಿದೆ?

ಇಂದಿನ ಮಹಿಳೆಯರು ಮೊದಲಿಗಿಂತ ಹೆಚ್ಚು ವಿದ್ಯಾವಂತರಾಗಿದ್ದಾರೆ ಮತ್ತು ಆರ್ಥಿಕವಾಗಿಯೂ ಸ್ವಾವಲಂಬಿಗಳಾಗಿದ್ದಾರೆ. ಆದ್ದರಿಂದ, ಒಂದು ಸಂಬಂಧ ನಿರಂತರ ಮಾನಸಿಕ ಒತ್ತಡ ಅಥವಾ ಅವಮಾನವನ್ನು ಉಂಟುಮಾಡುತ್ತಿದ್ದರೆ, ಅದನ್ನು ಸಹಿಸಿಕೊಂಡೇ ಬದುಕುವ ಬದಲು ತಮ್ಮ ಭವಿಷ್ಯದ ಬಗ್ಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಧೈರ್ಯವನ್ನು ತೋರಿಸುತ್ತಾರೆ.

66
ಎಲ್ಲಾ ಸಂಬಂಧಗಳಿಗೂ ಡಿವೋರ್ಸ್ ಅಂತ್ಯವೇ?

ಖಂಡಿತ ಇಲ್ಲ. ಗಂಡ-ಹೆಂಡತಿಯ ನಡುವೆ ನಂಬಿಕೆ, ಗೌರವ, ಪ್ರೀತಿ ಮತ್ತು ಮುಕ್ತ ಸಂವಹನ ಇದ್ದರೆ, ಮೆನೋಪಾಸ್ ಹಂತವನ್ನು ಇಬ್ಬರೂ ಒಟ್ಟಾಗಿ ಯಶಸ್ವಿಯಾಗಿ ಎದುರಿಸಬಹುದು. ಅನೇಕ ದಂಪತಿ ಈ ಸಮಯದಲ್ಲಿ ಇನ್ನಷ್ಟು ಗಟ್ಟಿಯಾಗಿರುವ ಉದಾಹರಣೆಗಳೂ ಇವೆ. ಈ ಸಮಯದಲ್ಲಿ ಏನೇ ಸಮಸ್ಯೆ ಇದ್ರೂ ಪರಸ್ಪರ ಮುಕ್ತವಾಗಿ ಮಾತನಾಡಬೇಕು. ಮೆನೋಪಾಸ್ ಬಗ್ಗೆ ಸರಿಯಾದ ಮಾಹಿತಿ ಇಟ್ಟುಕೊಳ್ಳಬೇಕು. ಅಗತ್ಯವಿದ್ದರೆ ವೈದ್ಯರು ಅಥವಾ ಸಂಬಂಧಿತ ಸಲಹೆಗಾರರ ಸಹಾಯ ಪಡೆಯಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ವಿಶೇಷ ಗಮನ ಹರಿಸಬೇಕು. ಒಬ್ಬರಿಗೊಬ್ಬರು ಸಮಯ, ಸಹಾನುಭೂತಿ ಮತ್ತು ಭಾವನಾತ್ಮಕ ಬೆಂಬಲ ನೀಡಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories