ಚಾಣಕ್ಯ ಹೇಳ್ತಾನೆ ಕೇಳಿ, ಗಂಡ ತನ್ನ ಹೆಂಡ್ತಿಯಿಂದ ಈ ನಾಲ್ಕು ವಿಷ್ಯ ಮುಚ್ಚಿಟ್ರೇನೆ ಉತ್ತಮ!

First Published | Sep 9, 2023, 4:56 PM IST

ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ತುಂಬಾ ಡೆಲಿಕೇಟ್ ಆಗಿರುವಂತಹುದು, ಒಂದು ಸಣ್ಣ ಸುಳ್ಳು ಸಹ ಸಂಬಂಧವನ್ನು ಮುರಿದು ಬೀಳುವಂತೆ ಮಾಡಬಹುದು. ಆದರೆ ಚಾಣಕ್ಯ ನೀತಿಯ ಪ್ರಕಾರ, ವೈವಾಹಿಕ ಜೀವನದಲ್ಲಿ ಸಂತೋಷವಾಗಿರಲು ಕೆಲವು ವಿಷಯಗಳನ್ನು ಮುಚ್ಚಿಡೋದು ಅವಶ್ಯಕ.
 

ಗಂಡ ಮತ್ತು ಹೆಂಡತಿ ಎಲ್ಲಾ ವಿಷಯಗಳಲ್ಲೂ ಒಬ್ಬರಿಗೊಬ್ಬರು ಜೊತೆಯಾದರೆ, ಆ ಸಂಬಂಧವನ್ನು ದೂರ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಸಂಬಂಧದಲ್ಲಿ ಓಪನ್ ಆಗಿರಬೇಕು,  ಪರಸ್ಪರ ಯಾವುದೇ ಸುಳ್ಳುಗಳನ್ನು ಹೇಳಬಾರದು ಅಥವಾ ಏನನ್ನೂ ಮರೆ ಮಾಡಬಾರದು ಎನ್ನಲಾಗುತ್ತೆ. ಆದರೆ ವಿವಾಹವು ದೀರ್ಘಕಾಲ (long term marriage) ಉಳಿಯಲು, ಕೆಲವು ವಿಷಯಗಳ ಜವಾಬ್ದಾರಿಯನ್ನು ಗಂಡ ಮತ್ತು ಹೆಂಡತಿ ಮಾತ್ರ ಹೊರಬೇಕಾಗುತ್ತದೆ. ಅಲ್ಲದೆ, ಕೆಲವು ವಿಷಯಗಳನ್ನು ನಿಮ್ಮಲ್ಲಿಯೇ ರಹಸ್ಯವಾಗಿಡುವುದು ಮುಖ್ಯ.
 

ಚಾಣಕ್ಯ ನೀತಿಯಲ್ಲಿ (Chanakya Niti) ಆಚಾರ್ಯ ಚಾಣಕ್ಯನು ಹೇಳಿದ ಅಂತಹ ಕೆಲವು ವಿಷಯಗಳನ್ನು ಇಂದು ನಾವು ನಿಮಗೆ ಹೇಳುತ್ತಿದ್ದೇವೆ, ಅದನ್ನು ಯಾವುದೇ ಪತಿ ತನ್ನ ಹೆಂಡತಿಯೊಂದಿಗೆ ಹಂಚಿಕೊಳ್ಳಬಾರದು. ಇದು ಸಂಬಂಧವನ್ನು ದುರ್ಬಲಗೊಳಿಸುವುದಲ್ಲದೆ, ಇದು ಭಿನ್ನಾಭಿಪ್ರಾಯಕ್ಕೂ ಕಾರಣವಾಗಬಹುದು. ಆದುದರಿಂದ ಈ ವಿಷಯಗಳನ್ನು ಪತ್ನಿಯಿಂದ ಪತಿ ಮುಚ್ಚಿಡಬೇಕು.
 

Tap to resize

ನಿಮಗಾದ ಅವಮಾನದ ಬಗ್ಗೆ ತಿಳಿಸಬೇಡಿ
ಯಾವುದೇ ಮಹಿಳೆ ತನ್ನ ಗಂಡನಿಗೆ ಆಗುವ ಸಣ್ಣ ಅವಮಾನವನ್ನು(insult) ಸಹ ಸಹಿಸುವುದಿಲ್ಲ. ಅವರು ಇದನ್ನು ಅರಿತುಕೊಂಡ ತಕ್ಷಣ, ಸೇಡು ಮತ್ತು ಕೋಪದ ಭಾವನೆ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವಳು ಯಾವುದೇ ಸಂಬಂಧದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದ್ದರಿಂದ, ಶಾಂತಿಯನ್ನು ಕಾಪಾಡಿಕೊಳ್ಳಲು, ಪುರುಷನು ತನ್ನ ಅವಮಾನದ ಬಗ್ಗೆ ಎಂದಿಗೂ ತನ್ನ ಹೆಂಡತಿಯ ಬಳಿ ಹೇಳಬಾರದು.

ನಿಮ್ಮ ನಿಜವಾದ ಸಂಪಾದನೆ
ಹೆಚ್ಚಿನ ಪುರುಷನು ಯಾರೂ ಸಹ ತನ್ನ ನಿಜವಾದ ಗಳಿಕೆಯನ್ನು (real income) ತನ್ನ ಹೆಂಡತಿಗೆ ಹೇಳುವ ತಪ್ಪನ್ನು ಎಂದಿಗೂ ಮಾಡುವುದಿಲ್ಲ. ಚಾಣಕ್ಯ ನೀತಿಯ ಪ್ರಕಾರ, ಹೆಂಡತಿ ಬುದ್ಧಿವಂತಳಲ್ಲದಿದ್ದರೆ, ಕಡಿಮೆ ಸಂಪಾದಿಸುವ ಗಂಡನನ್ನು ಆಕೆ ಗೌರವಿಸೋದಿಲ್ಲ. ಹಾಗೆಯೇ ಯಾವಾಗಲೂ ಅದರ ಬಗ್ಗೆ ನಿಂದಿಸುತ್ತಾಳೆ. ಅಷ್ಟೇ ಅಲ್ಲದೇ, ಗಂಡನ ಸಂಪಾದನೆ ಬಗ್ಗೆ ತಿಳಿದ್ರೆ ಆಕೆ ಅದನ್ನು ವ್ಯರ್ಥ ಮಾಡುವ ಸಾಧ್ಯತೆ ಕೂಡ ಹೆಚ್ಚಿದೆ.

ದಾನ ನೀಡಿರುವ ಬಗ್ಗೆ
ನಿಜವಾದ ದಾನವೆಂದರೆ ನೀವು ಒಂದು ಕೈಯಿಂದ ನೀಡಿದ ದಾನ ಇನ್ನೊಂದು ಕೈಗೆ ಗೊತ್ತಾಗಬಾರದು ಅನ್ನೋದು. ನೀವು ದಾನ ನೀಡಿರುವ ಬಗ್ಗೆ ಸಂಗಾತಿಗೆ ಹೇಳಿದ್ರೆ ಅದರಿಂದ ಭಿನ್ನಾಭಿಪ್ರಾಯ ಉಂಟಾಗಬಹುದು. ಪತ್ನಿಯು ದನ ಪಿಶಾಚಿ ಆಗಿದ್ರೆ, ದಾನದ ಬಗ್ಗೆ ತಿಳಿದಾಗ ಅವರು ನಿಮ್ಮೊಂದಿಗೆ ಜಗಳವಾಡಬಹುದು. ಆದ್ದರಿಂದ, ಗಂಡ ಮತ್ತು ಹೆಂಡತಿ ಅವರು ನೀಡಿದ ದೇಣಿಗೆಗಳ ಬಗ್ಗೆ ಎಂದಿಗೂ ಪರಸ್ಪರ ಹೇಳಬಾರದು.

ನಿಮ್ಮ ದೌರ್ಬಲ್ಯವನ್ನು ಹೇಳಬೇಡಿ
ಗಂಡ ತನ್ನ ದೌರ್ಬಲ್ಯದ (weakness) ಅಂದ್ರೆ ವೀಕ್ ನೆಸ್ ಬಗ್ಗೆ ಎಂದಿಗೂ ಹೆಂಡತಿಗೆ ಹೇಳಬಾರದು. ಏಕೆಂದರೆ ಅನೇಕ ಬಾರಿ ಮಹಿಳೆಯರು ತಿಳಿಯದೆ ಇತರರ ಮುಂದೆ ಅದನ್ನು ಹೇಳಿ ಬಿಡುತ್ತಾರೆ. ಇದಲ್ಲದೆ, ಹೆಂಡತಿ ದುಷ್ಟಳಾಗಿದ್ದರೆ, ಅವಳು ಅದರ ಲಾಭವನ್ನು ಸ್ವತಃ ಪಡೆಯಲು ಪ್ರಾರಂಭಿಸುತ್ತಾಳೆ.

Latest Videos

click me!