ದಾಂಪತ್ಯದಲ್ಲಿ ಹೀಗಾಗುತ್ತಿದೆ ಎಂದಾಗ ಎಚ್ಚೆತ್ತುಕೊಳ್ಳಿ, ಎಲ್ಲವೂ ಸರಿ ಇಲ್ಲದಾಗ ಸರಿ ಮಾಡ್ಕೊಳ್ಳಿ!

First Published | Sep 6, 2023, 5:04 PM IST

ಮದುವೆ ನಂತರ ಗಂಡ ಮತ್ತು ಹೆಂಡತಿ ಸಂತೋಷವಾಗಿದ್ದರೆ, ಅದರ ಹಿಂದೆ ಅನೇಕ ಕಾರಣಗಳಿರಬಹುದು. ಆದರೆ ಕೆಲವು ವಿಷ್ಯಗಳ ಬಗ್ಗೆ ಸಂಗಾತಿ ಜೊತೆಗೆ ಜಗಳ ಆಗುತ್ತಿದ್ರೆ, ಆವಾಗ ಸಂಬಂಧದ ಬಗ್ಗೆ ನೀವು ಯೋಚನೆ ಮಾಡಬೇಕು.
 

ಮದುವೆ ನಂತರ, ಅನೇಕ ಜನರ ವೈವಾಹಿಕ ಜೀವನವು (Married Life) ಉತ್ತಮವಾಗಿ ನಡೆಯುತ್ತದೆ, ಆದರೆ ಕೆಲವರು ತಮ್ಮ ಸಂಗಾತಿಯೊಂದಿಗೆ (Life partner) ತುಂಬಾ ಜಗಳವಾಡಲು ಪ್ರಾರಂಭಿಸುತ್ತಾರೆ.ಮದುವೆ ನಂತರ ಪ್ರತಿದಿನ ಜಗಳವಾಗುತ್ತಿದ್ರೆ, ಇದರಿಂದ ಸಂಬಂಧ ಹಾಳಾಗುತ್ತೆ. ಯಾವ ವಿಷ್ಯಗಳಿಗೆ ಪದೇ ಪದೇ ಜಗಳವಾಗುವ ಸಾಧ್ಯತೆ ಹೆಚ್ಚಿದೆ ನೋಡೋಣ. 

ನಿಮ್ಮ ಸಂಬಂಧ (relationship) ಚೆನ್ನಾಗಿರಬೇಕು ಅಂದ್ರೆ ನೀವು, ಸಂಗಾತಿಯನ್ನು ನಿರ್ಲಕ್ಷಿಸುವ ಬದಲು ಅವರೊಂದಿಗೆ ಕುಳಿತು ವಿಷಯಗಳನ್ನು ಪರಿಹರಿಸುವುದು ಉತ್ತಮ. ವೈವಾಹಿಕ ಜೀವನದಲ್ಲಿ ನೀವು ನಿರ್ಲಕ್ಷಿಸಬಾರದ ಕೆಲವು ಚಿಹ್ನೆಗಳು ಯಾವುವು?  ಅನ್ನೋದನ್ನು ತಿಳಿಯಲು ಮುಂದೆ ಓದಿ. 
 

Tap to resize

ಹೆಚ್ಚಾಗಿ ಮಾತನಾಡೋದೇ ಇಲ್ಲ
ಯಾವುದೇ ಯಶಸ್ವಿ ಸಂಬಂಧವು ಪರಿಣಾಮಕಾರಿ ಸಂವಹನದ (communication) ಮೇಲೆ ನಿಂತಿರುತ್ತೆ ಅಂದ್ರೆ ತಪ್ಪಾಗಲ್ಲ.ಸಂಗಾತಿಯು ಇದ್ದಕ್ಕಿದ್ದಂತೆ ದೂರವಾದಾಗ, ನಿಮ್ಮೊಂದಿಗೆ ಮಾತನಾಡೋದನ್ನು ತಪ್ಪಿಸಿದಾಗ ಅಥವಾ ಸಂಬಂಧವನ್ನು ಕಡಿಮೆ ಮಾಡಿದಾಗ, ಅದು ಸಂಗಾತಿ ನಿಮ್ಮೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿಲ್ಲ ಅನ್ನೋದನ್ನು ಸೂಚಿಸುತ್ತೆ. 

ಸಂಬಂಧದಲ್ಲಿ ಬರುವ ಎಲ್ಲಾ ಸಮಸ್ಯೆಯನ್ನು ಪರಿಹರಿಸುವುದು ಮುಖ್ಯ ಮತ್ತು ಅಗತ್ಯವಿದ್ದರೆ, ನಿಮ್ಮ ಸಂಬಂಧದಲ್ಲಿ ಸಂವಹನವನ್ನು ಸುಧಾರಿಸಲು ನೀವು ವೃತ್ತಿಪರ ಕೌನ್ಸಿಲಿಂಗ್ ಎಕ್ಸ್ ಪರ್ಟ್ ಭೇಟಿ ಮಾಡೋದು ಉತ್ತಮ. ಅಥವಾ ನಿಮಗೆ ಸರಿಯಾದ ರೀತಿಯಲ್ಲಿ ಸಲಹೆ ನೀಡುವ ವ್ಯಕ್ತಿಯ ಜೊತೆ ಇಬ್ಬರೂ ಮಾತನಾಡೋದು ಉತ್ತಮ. 
 

ಭಾವನೆಯನ್ನು ಅರ್ಥಮಾಡಿಕೊಳ್ಳದಿರುವುದು 
ಸಂಗಾತಿಯು ನಿಮ್ಮ ಭಾವನೆಗಳನ್ನು (feelings) ಮೆಚ್ಚದಿದ್ದರೆ ಮತ್ತು ಭಾವನಾತ್ಮಕ ಅಗತ್ಯಗಳನ್ನು ನಿರ್ಲಕ್ಷಿಸಿದರೆ, ಅದು ಸಂಬಂಧವನ್ನು ಕೊನೆಗೊಳಿಸುವ ಚಿಹ್ನೆ ಅನ್ನೋದನ್ನು ತಿಳಿಯಿರಿ. ಸಂಬಂಧದಲ್ಲಿ, ಇಬ್ಬರೂ ವ್ಯಕ್ತಿಗಳು ಮೊದಲಿಗೆ ಇಮೋಷನಲಿ ಕನೆಕ್ಟ್ ಆಗಿರಬೇಕು. ಆಗ ಮಾತ್ರ ಇಬ್ಬರ ನಡುವೆ ಉತ್ತಮ ಭಾಂದವ್ಯ ಮೂಡಲು ಸಾಧ್ಯ. 

ಸಂಗಾತಿಯನ್ನು ಕಂಟ್ರೋಲ್ ಮಾಡೋದು
ಇಬ್ಬರಲ್ಲಿ ಯಾರಾದರು ಒಬ್ಬರು ತಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿ ಮಾಡಲು ಬಯಸಿದ್ರೆ, ಅದಕ್ಕೆ ನೀವು ಅನುಮತಿ  ನೀಡದೇ ಅವರನ್ನು ಕಂಟ್ರೋಲ್ (controling partner) ಮಾಡುತ್ತಿದ್ದರೆ,  ಅದು ಸರಿಯಲ್ಲ.  ಹೆಲ್ತಿ ರಿಲೇಶನ್ ಶಿಪ್ ನಿಮ್ಮದಾಗಬೇಕಂದ್ರೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿರಬೇಕೆ ವಿನಃ ಸಂಗಾತಿಯನ್ನು ಕಂಟ್ರೋಲ್ ಮಾಡೋದು ಅಲ್ಲ. 

ಸಂಗಾತಿಯು ಅತಿಯಾಗಿ ಕಂಟ್ರೋಲ್ ಮಾಡುತ್ತಿದ್ದರೆ ಅಥವಾ ಕುಟುಂಬ ಸದಸ್ಯರೊಂದಿಗೆ ಸಂಬಂಧ ಮುರಿಯಲು ಪ್ರಯತ್ನಿಸುತ್ತಿದ್ದರೆ, ಅದು ಅನಾರೋಗ್ಯಕರ ಸಂಬಂಧದ ಪ್ರಾರಂಭವಾಗಿದೆ. ನಿಮ್ಮ ಸಂಗಾತಿಯು ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಬೆಂಬಲಿಸುತ್ತಾರೋ ಇಲ್ಲವೋ ಎಂಬುದನ್ನು ಮಹಿಳೆಯರು ಯಾವಾಗಲೂ ನೆನಪಿನಲ್ಲಿಡಬೇಕು. 
 

ಮತ್ತೆ ಮತ್ತೆ ಟೀಕಿಸುತ್ತಲೇ ಇರೋದು
ಸಂಗಾತಿಯು ಗೌರವಯುತವಾಗಿ ವರ್ತಿಸದಿದ್ದಾಗ ಅಥವಾ ನಿಮ್ಮನ್ನು ಅವಮಾನಿಸುವುದು, ಅವನು ಸರಿಯಾಗಿಲ್ಲ ಎಂಬುದರ ಸಂಕೇತವೂ ಆಗಿದೆ. ಜಗಳವಾಡದಿದ್ದರೂ ನಿಮ್ಮ ಸಂಗಾತಿ ನಿರಂತರವಾಗಿ ನಿಮ್ಮನ್ನು ಟೀಕಿಸುತ್ತಿದ್ದರೆ,  ಇತರ ಜನರ ಮುಂದೆ ನಿಮಗೆ ಬಯ್ಯುತ್ತಿದ್ದರೆ, ನಿಂದನಾತ್ಮಕ ಭಾಷೆಯನ್ನು ಬಳಸಿದರೆ, ಇದರಿಂದ ನಿಮ್ಮ ಸ್ವಪ್ರತಿಷ್ಠೆ ಹಾಳಾಗುತ್ತೆ್. ಹಾಗಾಗಿ ಹೀಗಾದಗ ಎಚ್ಚರದಿಂದಿರಿ. 

Latest Videos

click me!