ಧರ್ಮ ಶಾಸ್ತ್ರವೇ ಹೇಳುತ್ತದೆ ಪತಿಯಾದವನು ಹೀಗಿರಬೇಕೆಂದು

Suvarna News   | Asianet News
Published : Nov 07, 2020, 04:35 PM IST

ನಾವು ಬಯಸೋದು ಒಂದು ಆಗೋದು ಒಂದು . ನಮ್ಮ ಬಾಳ ಸಂಗಾತಿ ಯಾರು ಎಂಬುದು ನಮಗೆ ತಿಳಿದಿರುವುದಿಲ್ಲ. ತಿಳಿಯದೆ ಬಂದ ವರಗಳಲ್ಲಿ ಒಂದನ್ನು ನಮಗೆ ಸರಿ ಹೊಂದುತ್ತದೆ ಎಂದು ಮದುವೆ ಆಗುತ್ತೇವೆ  . ನಮನ್ನು ಅರ್ಥಮಾಡಿ ಕೊಳ್ಳುವವನು , ನಮ್ಮ ನೋವನ್ನು ಹಂಚಿಕೊಳ್ಳುವವನು, ನಮ್ಮ ಸಂತೋಷಗಳಲ್ಲಿ ಭಾಗಿಯಾಗುವವನು, ನಮ್ಮ ಮನೆಯವರನ್ನು ತಮ್ಮ ಮನೆಯವರು ಎಂಬ ಭಾವಿಸುವ ಮನಸ್ಸುಳ್ಳವನು ಜೀವನ ಸಂಗಾತಿಯಾಗಿ ಬಂದರೆ ಎಷ್ಟು ಚಂದ. ಇಂತಹ ಕನಸು ಕನಸಾಗಿ ಉಳಿದಾಗ ನಾವು ಹೇಳುವ ಕೇಳುವ ಮಾತುಗಳು ಇವೆ ತಾನೇ;ಬ್ರಹ್ಮ ಬರಹ, ಬ್ರಹ್ಮ ಗಂಟು.

PREV
112
ಧರ್ಮ ಶಾಸ್ತ್ರವೇ ಹೇಳುತ್ತದೆ ಪತಿಯಾದವನು ಹೀಗಿರಬೇಕೆಂದು

ಈ ರೀತಿ ಎಷ್ಟೋಮಂದಿಗೆ ಜೀವನದಲ್ಲಿ ಆಗಿದ್ದು ಇದೆ. ಆಗುತ್ತಲೂ ಇದೆ.  ಸಂಸಾರದಲ್ಲಿ ಹೆಣ್ಣಾಗಲಿ ಗಂಡಾಗಲಿ ಸಮಾನ ಮನಸ್ಕರು ಇದ್ದರೆ ಅಲ್ಲಿ ಸಂತೋಷ ಇದೆ. ಹಾಗಾಗಿ ಮದುವೆ ಮಾಡಿ ಕೊಳ್ಳುವ ಮೊದಲು ಇಬ್ಬರು ತಮ್ಮ ಅಂತರಂಗ ಬಹಿರಂಗ ಎಲ್ಲವನ್ನು ಮಾತಾಡಿ ತಮ್ಮ ಮನಸ್ಸಿಗೆ ಹಿತವಾದರೆ ಮದುವೆಯಾಗಿ ಯಾರ ಒತ್ತಾಯಕ್ಕೆ ಗಂಟು ಬಿದ್ದು ಜೀವನ ನರಕವಾಗದಂತೆ ತಮ್ಮ ಬಾಳನ್ನು ತಾವು ರಕ್ಷಿಸಿಕೊಳ್ಳಿ.

212

ಮದುವೆಗೆ ಮೊದಲು ಹೆಣ್ಣಾಗಲಿ, ಗಂಡಾಗಲಿ ಅತೀ ಸಲುಗೆಯಿಂದ ಇರುವ ಬದಲು ಮದುವೆಯ ಬಳಿಕ ಆ ಸಲುಗೆ ಇರಲಿ. ಅದಕ್ಕೂ ಮೊದಲು ಅರ್ಥ ಮಾಡಿಕೊಳ್ಳುವಷ್ಟು ತಿಳಿ

312

ಯಾವುದೇ ಹೆಣ್ಣು ತನ್ನ ಗಂಡನಿಂದ ಮುಖ್ಯವಾಗಿ ಬಯಸೋದು ಸ್ನೇಹ ಪ್ರೀತಿ. ಅದನ್ನು ಪತಿಯಾದವನು ತನ್ನ ಪತ್ನಿಗೆ ಯಾವಾಗಲೂ ನೀಡಬೇಕು. ಹೀಗಿದ್ದರೆ ಸಂಸಾರ ಸುಂದರವಾಗಿರುತ್ತದೆ. 

412

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಮನೆಗೆ ಸೀಮಿತವಾಗಿ ನೋಡದೆ ಅವಳ ಆಸೆ ಆಕಾಂಕ್ಷೆಗಳನ್ನು ಪ್ರೋತ್ಸಾಹಿಸೋದನ್ನು ಕಲಿಯಬೇಕು .

512

ಧರ್ಮ ಶಾಸ್ತ್ರಗಳು ಕೇವಲ ಸ್ತ್ರೀಯರು ಹಾಗಿರಬೇಕು ಹೀಗಿರಬೇಕು ಎಂದು ಬರೆದಿಲ್ಲ. ಇಲ್ಲಿ ಪುರುಷರು ಹೇಗಿರಬೇಕು ಎಂಬುದನ್ನು ಬರೆದಿದೆ .

612

ಕಾರ್ಯೇಷು ಯೋಗಿ ; ಕರಣೇಷು ದಕ್ಷ ; ರೂಪೇಚಾ ಕೃಷ್ಣ ; ಕ್ಷಮಯಾತು ರಾಮಃ ; ಭೋಜ್ಯೇಷು ತೃಪ್ತತಃ ; ಸುಖ ದುಃಖ ಮಿತ್ರಂ ; 
ಈ ಶ್ಲೋಕ ದ ಭಾವಾರ್ಥ ತಿಳಿಯಲು ಮುಂದೆ ಓದಿ...  

712

ಕಾರ್ಯೇಷು ಯೋಗಿ : ಕೆಲಸ ಮಾಡುವುದರಲ್ಲಿ ಒಬ್ಬ ಯೋಗಿಯಂತೆ ಪ್ರತಿಫಲವನ್ನ ಅಪೇಕ್ಷಿಸದೆ ಮಾಡಬೇಕು ಎಂದು ಹೇಳುತ್ತಾರೆ . 

812

ಕರಣೇಷು ದಕ್ಷ : ಕುಟುಂಬವನ್ನು ನಡೆಸುವುದರಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ ದಕ್ಷತೆಯಿಂದಲೂ ಸಂಯಮದಿಂದಲೂ ವ್ಯವಹರಿಸಬೇಕು ಹಾಗೂ ಸಮರ್ಥನಾಗಿರಬೇಕು

912

ರೂಪೇಚ ಕೃಷ್ಣ : ರೂಪದಲ್ಲಿ ಕೃಷ್ಣನಂತೆ ಇರಬೇಕು ಅಂದರೆ ಎಂದಿಗೂ ಉತ್ಸಾಹದಿಂದಲೂ ಸಂತೋಷದಿಂದಲೂ ಇರಬೇಕು.

1012

ಕ್ಷಮಯಾತು ರಾಮ : ರಾಮನಂತೆ ಸಂಯಮ ಏಕಪತ್ನಿ ವೃತಸ್ಥನಾಗಿರಬೇಕು.ಮರ್ಯಾದಾ ಪುರುಷೋತ್ತಮನಂತೇ ಕ್ಷಮಿಸುವಗುಣ ಉಳ್ಳವನಾಗಿರಬೇಕು. 

1112

ಭೋಜ್ಯೇಷು ತೃಪ್ತತಃ : ಪತ್ನಿ ಅಥವಾ ತಾಯಿ ಬಡಿಸಿದ ಊಟವನ್ನು ಸಂತೃಪ್ತಿಯಿಂದ ಕೊಂಕುಮಾತುಗಳನ್ನು ಆಡದೆ ಉಣ್ಣಬೇಕು . 

1212

ಸುಖ ದುಃಖ ಮಿತ್ರಂ : ಪತ್ನಿಯ ಎಲ್ಲ ಸುಖ ದುಃಖಗಳಲ್ಲಿ ಕುಟುಂಬದ ನೋವು ನಲಿವುಗಳಲ್ಲಿ ಮಿತ್ರನಂತೆ ಜೊತೆಯಾಗಿರಬೇಕು. ಎಲ್ಲ ಸರಿ ತಪ್ಪುಗಳನ್ನು ಹಂಚಿಕೊಳ್ಳುವವನಾಗಿರಬೇಕು . ಇಂತಹ ಗುಣ ಉಳ್ಳವನು ಆದರ್ಶ ಪುರುಷನಾಗಿರುತ್ತಾನೆ . 

ಇಂತಹ ಗುಣವುಳ್ಳ ಗಂಡು, ಸದ್ಗುಣಿ ಹೆಣ್ಣಿಗೆ ಸಿಕ್ಕರೆ ಆದರ್ಶ ದಂಪತಿಗಳಾಗುತ್ತಾರೆ.

click me!

Recommended Stories