14 ಗಂಡು ಮಕ್ಕಳ ನಂತರ ದಂಪತಿಗೆ ಹೆಣ್ಣು ಮಗು..! ಅಣ್ಣಂದಿರೆಲ್ಲ ಖುಷ್

First Published Nov 7, 2020, 11:14 AM IST

14 ಜನ ಗಂಡು ಮಕ್ಕಳಿದ್ದ ದಂಪತಿಗೆ 15ನೇ ಡೆಲಿವರಿಯಲ್ಲಿ ಹೆಣ್ಣು ಮಗುವಾಗಿದೆ. ತಂದೆ ತಾಯಿ ಸೇರಿ ಪುಟ್ಟ ಹೆಣ್ಣು ಮಗುವಿನ 14 ಜನ ಅಣ್ಣಂದಿರೂ ಫುಲ್ ಖುಷ್ ಆಗಿದ್ದಾರೆ

14 ಗಂಡು ಮಕ್ಕಳ ನಂತರ ದಂಪತಿಗೆ ಹೆಣ್ಣು ಮಗುವಾಗಿದೆ
undefined
ಅಮೆರಿಕದ ಮಿಷಿಗನ್ ದಂಪತಿಯ ಹರ ಸಾಹಸದಲ್ಲಿ ಕೊನೆಗೂ ಜಯ ಸಿಕ್ಕಿದೆ
undefined
ಜೀವನದಲ್ಲಿ ಅತ್ಯದ್ಭುತ ಗಿಫ್ಟ್ ಪಡೆದಿರುವುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ ಜೋಡಿ
undefined
ಮೊದಲ ಮಗನಿಗೆ ಈಗ 28 ವರ್ಷವಾಗಿದ್ದು ಅವನೂ ಪುಟ್ಟ ತಂಗೀನಾ ನೋಡಿ ಫುಲ್ ಖುಷ್ ಆಗಿದ್ದಾನೆ
undefined
ಗಂಡು ಮಗು ಬೇಕೆಂದು ಹರಕೆ ಹೊತ್ತು, ಹತ್ತಾರು ಮಕ್ಕಳನ್ನು ಹೆರುವುದು ಗೊತ್ತು.
undefined
ಆದರೆ, ಅಮೆರಿಕದ ಮಿಷಗನ್‌ನ ಈ ದಂಪತಿ ಹೆಣ್ಣು ಮಗು ಬೇಕೆಂದು 15 ಮಕ್ಕಳನ್ನು ಹೆತ್ತಿದ್ದಾರೆ. ಅಂತೂ ಇದೀಗ ಮಗಳು ಹುಟ್ಟಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ.
undefined
ಡಿಗ್ರಿ ಓದುತ್ತಿರುವಾಗಲೇ ಕೇಟರಿ ಮತ್ತ ಜೋ ಎಂಬ ಜೋಡಿಗೆ ಮೂರು ಮಕ್ಕಳಾಗಿದ್ದವು.
undefined
ನಂತರ 1993ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಮೊದಲ ಮಗನಿಗೀಗ 28 ವರ್ಷ. ಎಲ್ಲರೂ ನಿಮಗೆ ಮಗಳು ಹುಟ್ಟೋಲ್ಲ ಎನ್ನುವವರೇ. ಆದರೂ, ಪ್ರಯತ್ನ ಬಿಡಲಿಲ್ಲ ಈ ದಂಪತಿ.
undefined
ಅಂತೂ ಇದೀಗ ಮ್ಯಾಗಿ ಎಂಬ ಮಗಳಿಗೆ ಜನ್ಮ ನೀಡಿದ್ದಾರೆ ಕೇಟರಿ. ಸಿಕ್ಕಾಪಟ್ಟೆ ಖುಷಿಯಾಗಿದೆಯಂತೆ.
undefined
ಇವರ ಮೊದಲ ಮಗ ಟೈಲರ್‌ಗಂತೂ ಸಂತೋಷಕ್ಕೆ ಮಾತೇ ಹೊರಡುತ್ತಿಲ್ಲವಂತೆ.
undefined
ಹೀಗೆ ಹೆಣ್ಣಿಗಾಗಿ ಪರಿತಪಿಸುವವರ ಸಂಖ್ಯೆ ಮತ್ತಷ್ಟು ಹೆಚ್ಚಲೆಂದು ಹಾರೈಸೋಣ.
undefined
click me!