Breakup ಬಳಿಕ ಪ್ರತಿಯೊಬ್ಬ ಗಂಡಸ್ರೂ ಮಾಡೋ ಕೆಲಸಾನೇ ಇದು!

Published : Dec 14, 2022, 11:22 AM IST

ಬ್ರೇಕ್ ಅಪ್ ನೋವಾಗೋದು ಕೇವಲ ಹುಡುಗಿಯರಿಗೆ ಮಾತ್ರಾನಾ? ಖಂಡಿತಾ ಇಲ್ಲ… ಹುಡುಗರು ಸಹ ತುಂಬಾ ಕೆಟ್ಟದಾಗಿ ಬ್ರೇಕ್ ಅಪ್ ನೋವನ್ನು ಅನುಭವಿಸುತ್ತಾರೆ. ಬ್ರೇಕ್ ಅಪ್ ಆದಾಗ ಹುಡುಗರು ಏನು ಮಾಡ್ತಾರೆ ಅನ್ನೋದನ್ನು ತಿಳಿಯಬೇಕು ಎಂದು ಬಯಸಿದ್ರೆ ನೀವು ಖಂಡಿತವಾಗಿಯೂ ಇದನ್ನ ಓದಿ… 

PREV
110
Breakup ಬಳಿಕ ಪ್ರತಿಯೊಬ್ಬ ಗಂಡಸ್ರೂ ಮಾಡೋ ಕೆಲಸಾನೇ ಇದು!

ಬ್ರೇಕಪ್…  ಹೆಚ್ಚಿನ ಪ್ರೇಮಕಥೆಗಳಲ್ಲಿ ಬ್ರೇಕ್ ಅಪ್ ಆಗೋದು ಕಾಣಬಹುದು. ಇನ್ನೊಬ್ಬ ವ್ಯಕ್ತಿಯು ಎಲ್ಲಿಯವರೆಗೆ ಪ್ರೀತಿಸುತ್ತಾನೋ ಅಲ್ಲಿಯವರೆಗೆ, ಎಲ್ಲವೂ ಸರಿಯಾಗಿರುತ್ತೆ, ಆದರೆ ಬ್ರೇಕ್ ಅಪ್ ಆದಾಗ ಆ ನೋವನ್ನು ಕಡಿಮೆ ಮಾಡಲು ಸಾಧ್ಯವಾಗೋದಿಲ್ಲ. ಬ್ರೇಕಪ್ (brekaup) ನಂತರ ಏನು ಮಾಡಬೇಕು, ಯಾರನ್ನು ಭೇಟಿಯಾಗಬೇಕು, ಹೇಗೆ ಮುಂದುವರಿಯಬೇಕು ಮತ್ತು ಬ್ರೇಕಪ್ ನ ನೋವನ್ನು ಹೇಗೆ ಮರೆಯುವುದು ಅನ್ನೋದು ಗೊತ್ತಿರೋದಿಲ್ಲ. ಇನ್ನೂ ಹೆಚ್ಚು ಜನ ಅಂದ್ಕೊಳ್ತಾರೆ ಬ್ರೇಕಪ್ ಆಗೋದು ಹುಡುಗಿಯರಿಗೆ ಮಾತ್ರ ಅಂತ ಅಂದ್ಕೊಳ್ತಾರೆ, ಆದ್ರೆ ಹುಡುಗರೂ ಸಹ ಬ್ರೇಕ್ ಅಪ್ ಸಮಯದಲ್ಲಿ ಹೆಚ್ಚಿನ ನೋವನ್ನು ಅನುಭವಿಸ್ತಾರೆ.

210

ಪುರುಷರು ಯಾವತ್ತೂ ಅಳೋದೆ ಇಲ್ಲ, ಅವರಿಗೆ ಯಾವತ್ತೂ ನೋವು ಆಗಲ್ಲ ಎಂದು ನಮ್ಮ ಸಮಾಜ ಅಂದುಕೊಂಡಿದೆ. ಆದ್ರೆ ಇದು ನಮ್ಮ ತಪ್ಪು ನಂಬಿಕೆ. ಬ್ರೇಕ್ ಅಪ್ ಆಗೋದು ಹುಡುಗರಿಗೆ ತುಂಬಾ ನೋವನ್ನುಂಟು ಮಾಡುತ್ತೆ. ಆದ್ರೆ ಅವ್ರು ಬ್ರೇಕ್ ಅದ್ಮೇಲೆ ಏನೆಲ್ಲಾ ಮಾಡ್ತಾರೆ ಅನ್ನೋದು ಗೊತ್ತಾ? 

310
ಒಬ್ಬಂಟಿಯಾಗಿರ್ತಾರೆ (stay alone)

ಬ್ರೇಕ್ ಅಪ್ ಆದ್ಮೇಲೆ ಹೆಚ್ಚಿನ ಹುಡುಗರು ಒಬ್ಬಂಟಿಯಾಗಿರೋಕೆ ಬಯಸ್ತಾರೆ. ಕೆಲವರು ರೂಮಲ್ಲಿ ಬಂಧಿಯಾದ್ರೆ, ಇನ್ನೂ ಕೆಲವರು ಗಾಡಿ ತೆಗೊಂಡು ಫ್ರೆಂಡ್ಸ್, ಸಂಬಂಧಿಕರ ಕೈಗೆ ಸಿಗದಂತೆ ದೂರ ಎಲ್ಲಾದ್ರೂ ಹೋಗ್ತಾರೆ. ಒಟ್ಟಾರೆ ಅವ್ರು ಒಬ್ಬಂಟಿಯಾಗಿರಲು ಇಷ್ಟ ಪಡ್ತಾರೆ. 

410
ಬ್ಲಾಕ್ ಮಾಡೋದು, ಇಲ್ಲಾ ಡಿಲಿಟ್ ಮಾಡೋದು (block and delete)

ಬ್ರೇಕಪ್ ನಂತರ, ಹುಡುಗರು ಮಾಜಿ ಪ್ರೇಮಿಯ ಮೆಸೇಜ್ ಗಳನ್ನು ನೋಡ್ತಾ ಇರ್ತಾರೆ.. ಜೊತೆಗೆ ಕೆಲವರು ಮಾಜಿ ಪ್ರೇಮಿಯ ನಂಬರ್ ಡಿಲಿಟ್ ಮಾಡ್ತಾರೆ, ಇನ್ನೂ ಕೆಲವರು ವಾಟ್ಸಪ್ ನಿಂದ ಬ್ಲಾಕ್ ಮಾಡ್ತಾರೆ, ಮತ್ತೆ ಅನ್ ಲಾಕ್ ಮಾಡ್ತಾರೆ… ಒಟ್ಟಲ್ಲಿ ಆ ಕ್ಷಣದಲ್ಲಿ ನೆಮ್ಮದಿ ಸಿಗುವಂತಹ ಎಲ್ಲಾ ಕೆಲಸ ಮಾಡ್ತಾನೆ ಇರ್ತಾರೆ. 

510
ex ಬಗ್ಗೆ ಮಾಹಿತಿ ಇಟ್ಕೊಳ್ತಾರೆ (collecting information about ex)

ಬ್ರೇಕಪ್ ನಂತರ, ಹೆಚ್ಚಿನ ಹುಡುಗರು ಹುಡುಗಿಯರನ್ನು ಮರೆಯೋದಿಲ್ಲ, ಬದಲಾಗಿ ತಮ್ಮ ಮಾಜಿ ಪ್ರೇಮಿಯ ಬಗ್ಗೆ ಎಲ್ಲಾ ಮಾಹಿತಿ ತಿಳಿಯಲು ಪ್ರಯತ್ನಿಸ್ತಾರೆ. ಅವರು ಏನು ಮಾಡ್ತಾ ಇದ್ದಾರೆ, ಯಾರನ್ನು ಭೇಟಿಯಾಗಲಿದ್ದಾರೆ, ಅವರ ಜೀವನದಲ್ಲಿ ಬೇರೆ ಯಾರಾದರೂ ಇದ್ದಾರೆಯೇ, ಇತ್ಯಾದಿಗಳನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತೆ. ಅದಕ್ಕಾಗಿತೇ ಸ್ನೇಹಿತರು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಮಾಹಿತಿ ಕಲೆಹಾಕುತ್ತಿರುತ್ತಾರೆ. 

610
ಲುಕ್ ಬದಲಿಸ್ತಾರೆ (changing the look)

ಪ್ರೀತಿಯಲ್ಲಿದ್ದಾಗ ಹುಡುಗರು, ಹುಡುಗಿಯರು ಹೇಳಿದ ಎಲ್ಲಾದಕ್ಕೂ ತಲೆಯಾಡಿಸುತ್ತಿದ್ದರು. ಅವರಿಗಾಗಿ ತಮ್ಮ ಹೇರ್ ಸ್ಟೈಲ್, ಲುಕ್ ಎಲ್ಲವನ್ನೂ ಬದಲಾಯಿಸಿದ್ದರು. ಆದರೆ ಬ್ರೇಕ್ ಅಪ್ ಆದ ಬಳಿ ಅವರು ಮತ್ತೆ ತಮ್ಮ ಲುಕ್ ಬದಲಾಯಿಸ್ತಾರೆ. ಪ್ರೇಮಿಯೇ ಇಲ್ಲದಾಗ, ಅವಳು ಇಷ್ಟ ಪಡೋ ಲುಕ್ ಯಾಕೆ ಬೇಕು ಅಂತಾ ಅಂದ್ಕೊಳ್ತಾರೆ. 

710
ಹೊಸ ಸಂಗಾತಿಯನ್ನು ಹುಡುಕುವುದು (search for new partner)

ಹೆಚ್ಚಿನ ಹುಡುಗರು ಬ್ರೇಕಪ್ ನಂತರ ಸ್ವಲ್ಪ ಸಮಯದ ನಂತರ ಹೊಸ ಸಂಗಾತಿಯನ್ನು ಹುಡುಕಲು ಪ್ರಾರಂಭಿಸುತ್ತಾರೆ. ಏಕೆಂದರೆ ಮಾಜಿ ಪ್ರೇಮಿ ತಮ್ಮ ಜೀವನದಿಂದ ಹೊರಟು ಹೋಗಿದ್ದಾರೆ. ಅವರು ಬೇರೆಯವರ ಜೊತೆ ಹ್ಯಾಪಿಯಾಗಿರ್ಬೇಕಾದ್ರೆ ನಾನ್ಯಾಕೆ ಇರಬಾರ್ದು ಅಂತಾ, ಮತ್ತೆ ರಿಲೇಶನ್ ಶಿಪ್ ನಲ್ಲಿರಲು ಬಯಸ್ತಾರೆ. 

810
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರ್ತಾರೆ  (active in social media)

ಬ್ರೇಕಪ್ ನಂತರದ ಸಮಯ ಸಾಕಷ್ಟು ದೀರ್ಘವಾಗಿದೆ ಅನ್ಸುತ್ತೆ. ನಿಮಿಷಗಳು ಗಂಟೆಗಳಂತೆ ಮತ್ತು ಗಂಟೆಗಳು ದಿನಗಳಂತೆ ಕಳೆಯುತ್ತೆ. ಸಮಯ ಕಳೆಯೋದೆ ಕಷ್ಟವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಹುಡುಗರ ಅತ್ಯುತ್ತಮ ಸಂಗಾತಿ ಎಂದರೆ ಅವರ ಲ್ಯಾಪ್ ಟಾಪ್ ಮತ್ತು ಮೊಬೈಲ್. ಅವರು ತಮ್ಮ ಹೆಚ್ಚಿನ ಸಮಯವನ್ನು ಸೋಶಿಯಲ್ ಮೀಡಿಯಾದಲ್ಲಿ ಕಳೆಯುತ್ತಾರೆ, ಇದರಿಂದಾಗಿ ಅವರ ಮನಸ್ಸನ್ನು ಬೇರೆಡೆಗೆ ತಿರುಗಿಸಬಹುದು ಮತ್ತು ತಮ್ಮ ಬ್ರೇಕಪ್ ನೋವಿನಿಂದ ದೂರವಿರಬಹುದು.

910
ಎಕ್ಸ್ ಗೆ ಕಾಲ್ ಮಾಡ್ತಾರೆ (call ex)

ಹೆಚ್ಚಿನ ಸಂದರ್ಭಗಳಲ್ಲಿ, ಬ್ರೇಕಪ್ ಆದಾಗ ಹುಡುಗ್ರು ಡ್ರಿಂಕ್ಸ್ ಮಾಡೋಕೆ ಆರಂಭಿಸ್ತಾರೆ. ನಶೆ ಏರಿದ ಮೇಲೆ ಕೇಳ್ಬೇಕೆ, ಅದರ ನಂತರ ಹಳೆಯ ಆಲೋಚನೆಗಳು ಮತ್ತೆ ಮನಸ್ಸಿನಲ್ಲಿ ಬರುತ್ತೆ, ಅವರು ತನ್ನ ಸಂಗಾತಿಯ ಬಗ್ಗೆ ಯೋಚಿಸುತ್ತಾ ಭಾವುಕರಾಗ್ತಾರೆ, ಹಾಗಾಗಿ ಕುಡಿದ ನಶೆಯಲ್ಲಿ ಮಾಜಿ ಪ್ರೇಮಿಗೆ ಕರೆ ಮಾಡಿ, ಯಾಕೆ ಬ್ರೇಕ್ ಅಪ್ ಮಾಡ್ಕೊಂಡೆ, ನನ್ನಿಂದ ತಪ್ಪಾದ್ರೆ ಸಾರಿ, ಮತ್ತೆ ಬಂದ್ಬಿಡು ಎಂದು ಗೋಗರೆಯುತ್ತಾರೆ.
 

1010

ಹುಡುಗರು ತಮ್ಮ ಬ್ರೇಕಪ್ ನಂತರ ಸಾಮಾನ್ಯವಾಗಿ ಮಾಡುವ ಕೆಲಸಗಳಿವು. ಫೈನಲಿ ಹೇಳೋದೇನಂದ್ರೆ, ಬ್ರೇಕ್ ಅಪ್ ಆದ ಮಾತ್ರಕ್ಕೆ ನಿಮ್ಮ ಜೀವನವು ಹಾಳಾಗಿದೆ ಎಂದು ಯಾವತ್ತೂ ಯೋಚ್ನೆ ಮಾಡ್ಬೇಡಿ. ಲೈಫ್ ಅನ್ನು ಕೊನೆಗೊಳಿಸೋ ಯೋಚನೆ ಕೂಡ ಮಾಡ್ಬೇಡಿ., ಏಕೆಂದರೆ ನಿಮ್ಮ ಭವಿಷ್ಯವು ತುಂಬಾ ಉಜ್ವಲವಾಗಿರಬಹುದು. ಕಾದು ನೋಡಿ… ಸ್ವಲ್ಪ ಕಾಯೋದ್ರಲ್ಲಿ ತಪ್ಪೇನಿಲ್ಲ ಬಿಡಿ.

Read more Photos on
click me!

Recommended Stories