Arranged Marriage ಆಗ್ತಿದ್ದೀರಾ? ಹಾಗಿದ್ರೆ ಇದನ್ನ ನೀವು ಓದ್ಲೇಬೇಕು…

First Published | Feb 14, 2023, 6:30 PM IST

ಇತ್ತೀಚಿನ ದಿನಗಳಲ್ಲಿ, ಲವ್ ಮ್ಯಾರೇಜ್ ಟ್ರೆಂಡ್ ಜಾಸ್ತಿನೇ ಆಗ್ತಿದೆ ಅನ್ನೋದು ನಿಜಾ.. ಆದ್ರೂ ಇಂದಿಗೂ ವಿಶ್ವದ ಅರ್ಧಕ್ಕಿಂತ ಹೆಚ್ಚು ಜನರು ಇನ್ನೂ ಅರೇಂಜ್ ಮ್ಯಾರೇಜ್ ಆಗಲು ಬಯಸುತ್ತಾರೆ. ಅರೇಂಜ್ ಮ್ಯಾರೇಜ್ ಸಂಬಂಧಗಳ ನಿಜವಾದ ಅರ್ಥವನ್ನು ನಮಗೆ ತಿಳಿಸುತ್ತದೆ. ಇದ್ರಿಂದ ಪ್ರಯೋಜನಗಳು ಸಹ ಸಾಕಷ್ಟಿವೆ ಅದರ ಬಗ್ಗೆ ತಿಳಿಯೋಣ.
 

ನಮ್ಮಲ್ಲಿ ಹೆಚ್ಚಿನವರು ಡ್ರೀಮ್ ಮ್ಯಾರೇಜ್ (dream marriage) ಹೊಂದಲು ಬಯಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಅಂತಹ ಜನರು ನಮ್ಮ ವಿವಾಹವು ಸುಂದರವಾದ ಫೇರಿ ಟೇಲ್‌ನಂತೆ ಇರಬೇಕು ಎಂದು ನಂಬುತ್ತಾರೆ, ಇದು ಪ್ರೇಮ-ಪ್ರಣಯದೊಂದಿಗೆ ಸಾಕಷ್ಟು ಸಾಹಸ ಮತ್ತು ರೊಮ್ಯಾಂಟಿಕ್ ಡೇಟ್ ಅನ್ನು ಸಹ ಒಳಗೊಂಡಿರಬೇಕು ಎಂದು ಜನ ಬಯಸ್ತಾರೆ. ಆದರೆ ಮದುವೆ ಬಾಲಿವುಡ್ ಚಿತ್ರಗಳಂತೆ ಅಲ್ಲ ಅನ್ನೋದು ನಮಗೆಲ್ಲರಿಗೂ ತಿಳಿದಿದೆ. ವಿವಾಹವು ಇಬ್ಬರು ಅಪರಿಚಿತ ವ್ಯಕ್ತಿಗಳನ್ನು ಶಾಶ್ವತವಾಗಿ ಪರಸ್ಪರ ಸೇರುವಂತೆ ಮಾಡುವುದು ಮಾತ್ರವಲ್ಲದೆ, ಇಬ್ಬರ ಕುಟುಂಬಗಳನ್ನು ಒಳಗೊಂಡಿರುವ ಬಂಧವಾಗಿದೆ.
 

ನಮ್ಮಲ್ಲಿ ಕೆಲವರು ಅರೇಂಜ್ ಮ್ಯಾರೇಜ್ (arrange marriage) ಆಗಲು ಬಯಸಿದರೆ, ಇನ್ನೂ ಅನೇಕರು ಪ್ರೇಮ ವಿವಾಹವನ್ನು ಇಷ್ಟಪಡ್ತಾರೆ. ಹೌದು, ನೀವು ಸಂಬಂಧಗಳ ನಿಜವಾದ ಅರ್ಥವನ್ನು ತಿಳಿದುಕೊಳ್ಳಲು ಬಯಸಿದರೆ, ಅರೇಂಜ್ ಮ್ಯಾರೇಜ್ ಕ್ಕಿಂತ ಉತ್ತಮವಾದುದು ಯಾವುದೂ ಇಲ್ಲ. ಏಕೆಂದರೆ ಇಂದಿಗೂ ಹೆಚ್ಚಿನ ಯುವಕರು ತಮ್ಮ ಹೆತ್ತವರ ಆಯ್ಕೆಯ ಪ್ರಕಾರ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟಪಡ್ತಾರೆ. 

Tap to resize

ಅರೇಂಜ್ ಮ್ಯಾರೇಜ್ ನಿಂದ ಸಾಕಷ್ಟು ಸಂಬಂಧದ ಪಾಠಗಳನ್ನು  (lesson of relationship) ಕಲಿಯುತ್ತಾರೆ. ಇದರಿಂದ ಜೀವನದಲ್ಲಿ ಸಿಹಿ ವಿಷಯಗಳು ಸಹ ನಡೆಯುತ್ತದೆ. ಹೀಗಿರೋವಾಗ, ನಿಮ್ಮ ಹೆತ್ತವರ ಒಪ್ಪಿಗೆಯೊಂದಿಗೆ ನೀವು ಸಹ ಮದುವೆಯಾಗಲು ಹೊರಟಿದ್ದರೆ, ನೀವು ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ಪ್ರೀತಿ ನಿಧಾನವಾಗಿ ಆಗುತ್ತೆ
ಪ್ರೇಮ ವಿವಾಹದಂತೆ (love marriage), ಅರೇಂಜ್ ಮ್ಯಾರೇಜ್ ನಲ್ಲಿ, ಇಬ್ಬರು ಸಂಗಾತಿಗಳ ನಡುವೆ ಬೇಗನೆ ಲವ್ ಆಗೋದಿಲ್ಲ. ಮದುವೆಯ ನಂತರವೂ ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ನೀವು ಕ್ರಮೇಣ ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳುತ್ತೀರಿ ಮತ್ತು ನಂತರ ಪ್ರೀತಿ ಪ್ರಾರಂಭವಾಗುತ್ತದೆ. 

ವಾಸ್ತವವಾಗಿ, ಪ್ರೀತಿಯು ಅರೇಂಜ್ ಮ್ಯಾರೇಜ್ ನಲ್ಲಿ ಬದ್ಧತೆಯಂತಿದೆ. ಮದುವೆಯ ನಂತರ, ಅದು ಸಂತೋಷವಾಗಿರಲಿ ಅಥವಾ ದುಃಖವಾಗಿರಲಿ, ನೀವು ಒಟ್ಟಿಗೆ ಬದುಕಬೇಕು. ನೀವು ಕೆಲವು ತಿಂಗಳ ಹಿಂದೆ ಭೇಟಿಯಾದ ಅಪರಿಚಿತ ವ್ಯಕ್ತಿಯೊಂದಿಗೆ ಪ್ರತಿ ಸಂದರ್ಭದಲ್ಲೂ ಜೊತೆಯಾಗಿ ನಿಲ್ಲಬೇಕಾಗಿ ಬರುತ್ತೆ. ಇಬ್ಬರೂ ಯಾವಾಗ ಪ್ರೀತಿಯಲ್ಲಿ ಬೀಳುತ್ತಾರೆ, ಅನ್ನೋದೆ ಗೊತ್ತಾಗೋದಿಲ್ಲ.
 

ಸುಂದರ ಮುಖ ಮುಖ್ಯವಲ್ಲ, ಗುಣ ಮುಖ್ಯ
ನೀವು ಸುಂದರವಾದ ಹುಡುಗಿ ಅಥವಾ ಹುಡುಗನನ್ನು ಮದುವೆಯಾಗಿದ್ದೀರಿ ಎಂದು ಭಾವಿಸೋಣ. ಅವನ ಮುಖವು ಎಷ್ಟು ಸಮಯದವರೆಗೆ ನಿಮ್ಮನ್ನು ಆಕರ್ಷಿಸಬಹುದು? ಒಂದು ವರ್ಷ, ಎರಡು ವರ್ಷ ಅಥವಾ ಗರಿಷ್ಠ ಐದು ವರ್ಷಗಳು. ಸ್ವಲ್ಪ ಸಮಯದ ನಂತರ, ಅವನು ತನ್ನ ಕೆಟ್ಟ ಸ್ವಭಾವದಿಂದ ನಿಮ್ಮನ್ನು ಮತ್ತು ಕುಟುಂಬವನ್ನು ಅವಮಾನಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ವಿವಾಹವು ದೀರ್ಘಕಾಲದವರೆಗೆ ಉಳಿಯಬೇಕಾದರೆ, ಸಂಗಾತಿಯು ಸುಂದರವಾದ ಮುಖ ಹೊಂದಿದ್ರೆ ಸಾಲದು, ಜೊತೆಗೆ ಕರುಣಾಮಯಿ ಹೃದಯವನ್ನು (good heart )ಹೊಂದಿರಬೇಕು ಎಂಬುದನ್ನು ನೆನಪಿನಲ್ಲಿಡೋದು ಬಹಳ ಮುಖ್ಯ.

ಪೋಷಕರ ಅಭಿಪ್ರಾಯ ಕೇಳೋದನ್ನು ಮರೆಯಬೇಡಿ

ಜೀವನ ಮತ್ತು ಮದುವೆ ಎರಡು ವಿಷಯಗಳಲ್ಲಿ ನಮ್ಮ ಪೋಷಕರು ನಮಗಿಂತ ಹೆಚ್ಚು ಅನುಭವ ಹೊಂದಿದ್ದಾರೆ. ಅವರು ಈ ಹಂತವನ್ನು ದಾಟಿದ್ದಾರೆ, ಇದರಲ್ಲಿ ನೀವು ಹೊಸ ಹೆಜ್ಜೆ ಇಡಲಿದ್ದೀರಿ. ಹಾಗಾಗಿ, ನಮಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂಬುದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಅವರು ನಮ್ಮ ಹಿತೈಷಿಗಳು, ಜೊತೆಗೆ ನಮ್ಮ ನಿಜವಾದ ಮಾರ್ಗದರ್ಶಕರೂ ಹೌದು. ಹಾಗಾಗಿ ಅವರ ಮಾತನ್ನು ಕೇಳಿ.
 

ಅರೇಂಜ್ ಮ್ಯಾರೇಜ್ ಸಹ ರೋಮ್ಯಾಂಟಿಕ್ ಆಗಿರುತ್ತೆ
ರೊಮ್ಯಾನ್ಸ್ (romance) ಪ್ರೇಮ ವಿವಾಹದಲ್ಲಿ ಮಾತ್ರವಲ್ಲ, ಅರೇಂಜ್ ಮ್ಯಾರೇಜ್ ನಲ್ಲೂ ಇರುತ್ತೆ. ಹೌದು, ಆದರೆ ಪ್ರಣಯವನ್ನು ಪದಗಳ ಮೂಲಕ ವಿವರಿಸಲು ಸಾಧ್ಯವಿಲ್ಲ. ಇದರಲ್ಲಿ, ಕ್ರಮೇಣ ನೀವು ನಿಮ್ಮ ಸಂಗಾತಿಯ ಬಗ್ಗೆ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತೀರಿ. ಆದ್ದರಿಂದ ಪ್ರತಿ ದಿನವೂ ನಿಮಗೆ ಅಚ್ಚರಿಯಂತಿರುತ್ತೆ. ನೀವಿಬ್ಬರೂ ಅಪರಿಚಿತರಂತೆ ಭೇಟಿಯಾಗುತ್ತೀರಿ. ನಂತರ ಅವರು ಸ್ನೇಹಿತರಾಗುತ್ತಾರೆ ಮತ್ತು ನಂತರ ಈ ಸಂಬಂಧವು ಗಟ್ಟಿಯಾಗುತ್ತಾ ಹೋಗುತ್ತೆ. ಅರೇಂಜ್ ಮ್ಯಾರೇಜ್ ನಲ್ಲಿ ಪ್ರಣಯಕ್ಕೆ ವಿಭಿನ್ನ ವ್ಯಾಖ್ಯಾನವಿದೆ, ಇದು ಸಮಯ ಕಳೆದ ಹಾಗೆ ಅರ್ಥವಾಗುತ್ತೆ.

ಹೊಂದಾಣಿಕೆ ಅತ್ಯಗತ್ಯ
ಅದು ಪ್ರೇಮ ವಿವಾಹವಾಗಿರಲಿ ಅಥವಾ ಅರೇಂಜ್ ಮ್ಯಾರೇಜ್ ಆಗಿರಲಿ, ನೀವು ನಿಮ್ಮ ಸಂಗಾತಿಯೊಂದಿಗೆ ಹೊಂದಿಕೊಳ್ಳಬೇಕು (Compromise). ಇದು ಮಾತ್ರವಲ್ಲ, ಅವನೊಂದಿಗೆ, ನೀವು ಅವನ ಕುಟುಂಬ ಸದಸ್ಯರೊಂದಿಗೆ ಹೊಂದಿಕೊಳ್ಳಬೇಕು. ಯಶಸ್ವಿ ವಿವಾಹದಲ್ಲಿ, ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಬೇಷರತ್ತಾಗಿ ಪ್ರೀತಿಸುವುದಾಗಿ ಮತ್ತು ಪ್ರತಿಯೊಂದು ಸಂದರ್ಭದಲ್ಲೂ ಪರಸ್ಪರ ಬೆಂಬಲಿಸುವ ಭರವಸೆ ನೀಡುತ್ತಾನೆ.

Latest Videos

click me!