ಮಗುವಿನ ಜನನ ಪತ್ರದಲ್ಲಿ ತಂದೆ ಎಂದು ನಮೂದಿಸಿ ಮಗು ಹೆತ್ತ ಝಹದ್ ಮನವಿ

First Published | Feb 12, 2023, 10:55 AM IST

ಕೇರಳದ ಅಂತರ್ಲಿಂಗಿ ದಂಪತಿ, ಇದೀಗ ತಮ್ಮ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಮ್ಮ ನೂತನ ಲಿಂಗವನ್ನೂ ನಮೂದಿಸುವಂತೆ ಕೋರಿಕೊಂಡಿದ್ದಾರೆ. ಜೊತೆಗೆ ಮಗುವಿಗೆ ಜನ್ಮ ನೀಡಿದ ಝಹದ್‌, ತನ್ನ ಹೆಸರನ್ನು ತಂದೆ ಕಾಲಂನಲ್ಲಿ ಸೇರಿಸುವಂತೆ ಮತ್ತು ಆಕೆಯ ಸಂಗಾತಿ ಝಿಯಾ ಪಾವಲ್‌ ತನ್ನ ಹೆಸರನ್ನು ತಾಯಿ ಕಾಲಂನಲ್ಲಿ ಸೇರಿಸುವಂತೆ ಕೋರಿದ್ದಾರೆ. 

ಇತ್ತೀಚೆಗೆ ಮಗುವಿಗೆ ಜನ್ಮನೀಡಿದ ಕೇರಳದ ಅಂತರ್ಲಿಂಗಿ ದಂಪತಿ, ಇದೀಗ ತಮ್ಮ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಮ್ಮ ನೂತನ ಲಿಂಗವನ್ನೂ ನಮೂದಿಸುವಂತೆ ಕೋರಿಕೊಂಡಿದ್ದಾರೆ. ಜೊತೆಗೆ ಮಗುವಿಗೆ ಜನ್ಮ ನೀಡಿದ ಝಹದ್‌, ತನ್ನ ಹೆಸರನ್ನು ತಂದೆ ಕಾಲಂನಲ್ಲಿ ಸೇರಿಸುವಂತೆ ಮತ್ತು ಆಕೆಯ ಸಂಗಾತಿ ಝಿಯಾ ಪಾವಲ್‌ ತನ್ನ ಹೆಸರನ್ನು ತಾಯಿ ಕಾಲಂನಲ್ಲಿ ಸೇರಿಸುವಂತೆ ಕೋರಿದ್ದಾರೆ. 

ಅಂತರ್ಲಿಂಗಿಗಳಾದ ಝಹದ್‌ ಪುರುಷನಾಗಲು ಮತ್ತು ಝಿಯಾ ಹೆಣ್ಣಾಗಲು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಈ ಹಂತದಲ್ಲಿ ಮಗು ಹೆರುವ ಕಾರಣಕ್ಕಾಗಿ ತಮ್ಮ ಚಿಕಿತ್ಸೆ ನಿಲ್ಲಿಸಿ ಹಾಲಿ ಇರುವ ದೈಹಿಕ ಸ್ಥಿತಿಯಲ್ಲೇ ಮುಂದುವರೆದು ಮಗುವಿಗೆ ಜನ್ಮ ನೀಡಿದ್ದರು.

Latest Videos


ಕೇರಳದ ಕೋಝಿಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತೃತೀಯಲಿಂಗಿ ದಂಪತಿಗಳು ಮಗುವನ್ನು ಪಡೆದರು. ಸಾಮಾಜಿಕ ಮಾಧ್ಯಮದಲ್ಲಿ ದಂಪತಿಯ ಆಪ್ತರು ಈ ಖುಷಿಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆದರೆ ಪೋಷಕರು ಮಗು ಹೆಣ್ಣು ಅಥವಾ ಗಂಡೇ ಎಂಬುದನ್ನು ಹೇಳಲು ನಿರಾಕರಿಸಿದ್ದಾರೆ. ಟ್ರಾನ್ಸ್‌ಮ್ಯಾನ್‌ ಮಗುವನ್ನು ಹೆತ್ತಿರೋ ಈ ಘಟನೆಯನ್ನು ದೇಶದ ಮೊದಲ ಪ್ರಕರಣ ಎಂದು ಪರಿಗಣಿಸಲಾಗಿದೆ.

ಈ ಹಿಂದೆಯೇ ದಂಪತಿ ಮಗುವನ್ನು ದತ್ತು ಪಡೆಯಲು ಪ್ರಯತ್ನಿಸಿದ್ದರು. ಆದರೆ, ದಂಪತಿ ಟ್ರಾನ್ಸ್‌ಜೆಂಡರ್‌ ಆಗಿರುವ ಕಾರಣ ಕಾನೂನು ಪ್ರಕ್ರಿಯೆಯು ಸವಾಲಾಗಿತ್ತು. ಹೀಗಿದ್ದೂ ಸಹದ್‌ಗೆ ಗಂಡಾಗಿದ್ದರೂ ಗರ್ಭಿಣಿಯಾಗುವ ಯೋಚನೆ ಬಂದಿತ್ತು. 'ಜನರು ಏನು ಹೇಳುತ್ತಾರೋ ಎಂಬ ಆತಂಕದಲ್ಲಿ ಆರಂಭದಲ್ಲಿ ಹಿಂಜರಿಯುತ್ತಿದ್ದೆ. ಅಲ್ಲದೆ ಒಮ್ಮೆ ಕೈಬಿಟ್ಟ ಸ್ತ್ರೀತ್ವಕ್ಕೆ ಮರಳುವುದು ಒಂದು ಸವಾಲಾಗಿ ಪರಿಣಮಿಸಿತು. ಆದರೆ ಜಿಯಾಳ ಪ್ರೀತಿ ಮತ್ತು ತಾಯಿಯಾಗಬೇಕೆಂಬ ಅದಮ್ಯ ಬಯಕೆ ನಿರ್ಧಾರವನ್ನೇ ಬದಲಿಸಿತು' ಎಂದು ಸಹದ್ ಹೇಳಿದ್ದರು.

ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನ ವೈದ್ಯರ ಮಾರ್ಗದರ್ಶನದಲ್ಲಿ ತಜ್ಞ ಪರೀಕ್ಷೆಗಳನ್ನು ನಡೆಸಿ ಆರೋಗ್ಯ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿಕೊಂಡ ನಂತರ ದಂಪತಿಗೆ ಚಿಕಿತ್ಸೆ ಆರಂಭಿಸಲಾಗಿತ್ತು. ಸಹದ್ ಹೆಣ್ಣಿನಿಂದ ಗಂಡಾಗಿ ಪರಿವರ್ತನೆಯ ಭಾಗವಾಗಿ, ಸ್ತನಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗಿತ್ತು.

'ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಸೇರಿಯನ್ ವಿಭಾಗದ ಮೂಲಕ ಬೆಳಿಗ್ಗೆ 9.30 ರ ಸುಮಾರಿಗೆ ಮಗು ಜನಿಸಿತು' ಎಂದು ದಂಪತಿಯ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದರು. ಸಹದ್ ಮತ್ತು ಜಿಯಾ ಕಳೆದ ಮೂರು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ

ಮಗುವಿನ ಆಗಮನದಿಂದ ದಂಪತಿ ತುಂಬಾ ಖುಷಿಯಾಗಿದ್ದಾರೆ. ಹೆರಿಗೆಯ ನಂತರ, ದಂಪತಿಗಳು ಆಸ್ಪತ್ರೆಯ ಎದೆ ಹಾಲಿನ ಬ್ಯಾಂಕ್‌ನಿಂದ ಮಗುವಿಗೆ ತಾಯಿಯ ಹಾಲನ್ನು ಪಡೆಯುತ್ತಿದ್ದಾರೆ. ಜಿಯಾ ನೃತ್ಯಗಾರ್ತಿ. ಸಹದ್ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. 

click me!