ದೈಹಿಕ ಅನ್ಯೋನ್ಯತೆ ಅಥವಾ ಫಿಸಿಕಲ್ ಇಂಟಿಮೆಸಿ (Physical intimacy) ಸಂಬಂಧದಲ್ಲಿ ಬಹಳ ಮುಖ್ಯವಾದದ್ದು. ಇದು ಸಂಬಂಧವನ್ನು ಬಲಪಡಿಸಲು ಮತ್ತು ಅದರಲ್ಲಿ ಥ್ರಿಲ್ಲಿಂಗ್ ಉಳಿಸೋದಕ್ಕೆ ಸಹಾಯ ಮಾಡುತ್ತೆ. ಆದರೂ, ನಾವು ಅಂತಹ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ದಂಪತಿ ಸಹ ಅದರ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ, ಆದರೆ ಇದು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹಂಚಿಕೊಳ್ಳುವ ವಿಷಯವಾಗಿದೆ.
ವರ್ಷಗಳ ನಂತರವೂ, ಪರಸ್ಪರ ಇಂಟ್ರೆಸ್ಟ್ ಕಡಿಮೆಯಾಗಿಲ್ಲ, ಒಬ್ಬರಿಗೊಬ್ಬರು ಬೋರ್ ಆಗಿಲ್ಲ, ಅಲ್ಲದೇ ಒಬ್ಬರಿಗೊಬ್ಬರಲ್ಲಿ ಪ್ರೀತಿ ಜಾಸ್ತಿನೇ ಇದೆ ಅಂದರೆ ಅದಕ್ಕೆ ರೊಮ್ಯಾನ್ಸ್ (Romance) ಕಾರಣ. ಅಂದರೆ ಇದು ಎಷ್ಟು ಪ್ರಯೋಜನಗಳನ್ನು ಹೊಂದಿದೆ ಅನ್ನೋದನ್ನು ನೀವು ಸಹ ನೋಡಬಹುದು.
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಕಪಲ್ಸ್ ನಡುವೆ ದೈಹಿಕ ಹೊಂದಾಣಿಕೆಯ (Physical Compatibility) ಕೊರತೆಯಿದೆ, ಇದು ಅವರ ಸಂಬಂಧದ ಮೇಲೂ ಪರಿಣಾಮ ಬೀರುತ್ತಿದೆ. ಅವರು ಒಟ್ಟಿಗೆ ವಾಸಿಸುತ್ತಿದ್ದಾರೆ, ಆದರೆ ದೈಹಿಕವಾಗಿ ತೃಪ್ತರಾಗಿಲ್ಲ. ಇದರ ಬಗ್ಗೆ ನೇರ ಸಂಭಾಷಣೆ ನಡೆಯದೇ ಇದ್ದರೆ, ಕೆಲವೊಮ್ಮೆ ಜಗಳದ ಸಮಯದಲ್ಲಿ ಅಂತಹ ವಿಷಯಗಳು ಹೊರಬರುತ್ತವೆ ಮತ್ತು ಇದು ಸಂಗಾತಿಯು ಹತಾಶೆಗೆ ಜಾರಲು ಕಾರಣವಾಗುತ್ತದೆ.
ಅಂದಹಾಗೆ, ಕೆಲವು ಸಲಹೆಗಳ ಸಹಾಯದಿಂದ, ನೀವು ದೈಹಿಕ ಹೊಂದಾಣಿಕೆಯನ್ನು ಉತ್ತಮಗೊಳಿಸಬಹುದು.
ಮಾತುಕತೆ
ಪ್ರತಿಯೊಂದು ಸಮಸ್ಯೆಗೂ ಸಂವಾದವೇ ಪರಿಹಾರ. ನೀವು ಸಾಮಾನ್ಯ ವಿಷಯದ ಬಗ್ಗೆ ಮಾತನಾಡುವಂತೆಯೇ, ನೀವು ಇಂಟಿಮೆಸಿ ಬಗ್ಗೆಯೂ ಮಾತನಾಡಬಹುದು. ಸಂಗಾತಿಯ ಅಗತ್ಯತೆಗಳು ಮತ್ತು ಬಯಕೆಗಳ ಬಗ್ಗೆ ನೀವು ನೇರವಾಗಿ ಕೇಳಬಹುದು. ಇದರಿಂದ ನಿಮ್ಮ ಸಂಬಂಧ ಮತ್ತು ರೊಮ್ಯಾಂಟಿಕ್ ಜೀವನ ಎರಡು ಚೆನ್ನಾಗಿರುತ್ತೆ.
ಟಚ್ ಅರ್ಥಮಾಡಿಕೊಳ್ಳಿ
ನಿಮ್ಮ ಸಂಗಾತಿಯೊಂದಿಗಿನ ಹೆಚ್ಚಿನ ಕನೆಕ್ಷನ್ ಹೊಂದಲು, ಹಾಸಿಗೆಯ ಮೇಲೆ ರೊಮ್ಯಾಂಟಿಕ್ ಆಗಿದ್ದರೆ ಸಾಲದು, ಇತರ ಕಡೆಯೂ ಅವರಿಗೆ ಸಪೋರ್ಟ್ ನೀಡಿ ಬೆಂಬಲಿಸೋದು ಮುಖ್ಯ. ಸ್ಪರ್ಶ ಚಿಕಿತ್ಸೆಯು (Touch Therapy) ಭಾವನಾತ್ಮಕ ಸಂಪರ್ಕಗಳನ್ನು ನಿರ್ಮಿಸುತ್ತದೆ. ಸಂಗಾತಿಯನ್ನು ಪ್ರೀತಿಯಿಂದ ತಬ್ಬಿಕೊಳ್ಳುವುದು, ಕೈ ಕೈ ಹಿಡಿದು ನಡೆಯುವುದು, ಮಸಾಜ್ ಮಾಡುವುದು... ಇವೆಲ್ಲವೂ ಪರಸ್ಪರ ಹತ್ತಿರ ತರುವ ವಿಷಯಗಳು. ಅವು ಲೈಂಗಿಕ ಜೀವನವನ್ನು ಸಹ ಸುಧಾರಿಸುತ್ತವೆ.
ಹೊಸ ಪ್ರಯೋಗ ಮಾಡಿ
ಆತ್ಮೀಯ ಕ್ಷಣಗಳನ್ನು ವಿಶೇಷವಾಗಿಸಲು, ಒಟ್ಟಿಗೆ ಹೊಸ ಪ್ರಯೋಗಗಳನ್ನು ಮಾಡಿ. ಇದು ಸಂಗಾತಿಗೆ ಹತ್ತಿರವಾಗಲು ಮತ್ತು ಅವರನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ನೀಡುತ್ತದೆ. ಅಲ್ಲದೆ, ಈ ವಿಷಯವು ಸಂಬಂಧದಲ್ಲಿ ಬೇಸರಕ್ಕೆ ಜಾಗವೇ ಕೊಡೋದಿಲ್ಲ. ಫೋರ್ ಪ್ಲೇ (foreplay), ಅನ್ಯೋನ್ಯತೆಯ ಸಮಯದಲ್ಲಿ ನೀವು ವಿವಿಧ ರೀತಿಯ ಗೇಮ್ ಗಳನ್ನು ಪ್ರಯತ್ನಿಸಬಹುದು.