2023 ರಲ್ಲಿ ಈ ಗಿಫ್ಟ್’ ನಿಮಗೆ ನೀವೇ ಕೊಡುವ ಮೂಲಕ ಹೊಸ ಜೀವನ ಆರಂಭಿಸಿ

Published : Dec 16, 2022, 05:12 PM IST

ಹೊಸ ವರ್ಷ ಅಂದರೆ 2023 ಬರಲು ಇನ್ನೇನು ಕೆಲವೇ ದಿನಗಳಿವೆ. ಪ್ರತಿ ವರ್ಷವೂ ಒಂದು ನಿರ್ಣಯವನ್ನು ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ನಿಮಗೆ ನೀವು ಉಡುಗೊರೆಯಾಗಿ ನೀಡುವ ಕಲ್ಪನೆಯು ಹೊಸ ಟ್ರೆಂಡ್ ಆಗಿದೆ. ಅಂದಹಾಗೆ, ಈ ಬಾರಿ ನೀವು ಈ ವಸ್ತುಗಳನ್ನು ನಿಮಗೆ ನೀವೇ ಉಡುಗೊರೆಯಾಗಿ ನೀಡುವ ಮೂಲಕ ಹೊಸ ವರ್ಷವನ್ನು ಸ್ವಲ್ಪ ವಿಶೇಷವಾಗಿ ಪ್ರಾರಂಭಿಸಬಹುದು.  

PREV
111
2023 ರಲ್ಲಿ ಈ ಗಿಫ್ಟ್’ ನಿಮಗೆ ನೀವೇ ಕೊಡುವ ಮೂಲಕ ಹೊಸ ಜೀವನ ಆರಂಭಿಸಿ

ಪ್ರತಿ ವರ್ಷದಂತೆ ಹೊಸ ವರ್ಷದಂದು ನಿರ್ಣಯ (new year resolution) ತೆಗೆದುಕೊಳ್ಳುವ ಹಳೆಯ ವಿಧಾನವನ್ನು ಮರೆತುಬಿಡಿ, ಏಕೆಂದರೆ ನಿಮಗೆ ಉಡುಗೊರೆ ನೀಡಲು ನಿಮಗೆ ಹೊಸ ಮಾರ್ಗವನ್ನು ಹೇಳಲಿದ್ದೇವೆ. ನಿಮಗೆ ನೀವೇ ಏನನ್ನು ಉಡುಗೊರೆಯಾಗಿ ನೀಡಬಹುದು ಮತ್ತು ಸಂತೋಷವನ್ನು ಅನುಭವಿಸಬಹುದು ಎಂಬುದನ್ನು ಕಲಿಯಿರಿ. ಇದರಿಂದ ನೀವು ಖಂಡಿತವಾಗಿಯೂ ಹ್ಯಾಪಿಯಾಗಿರೋದ್ರಲ್ಲಿ ಸಂಶಯವೇ ಇಲ್ಲ.

211
ಪುಸ್ತಕ (books):

ನೀವು ಓದುವುದನ್ನು ಇಷ್ಟಪಡುತ್ತಿದ್ದರೆ, ಈ ಹೊಸ ವರ್ಷದಲ್ಲಿ ನೀವು ನಿಮಗೆ ಒಂದು ಪುಸ್ತಕವನ್ನು ಉಡುಗೊರೆಯಾಗಿ ನೀಡಬಹುದು.ಇದು ಕ್ಷಣಾರ್ಧದಲ್ಲಿ ಮನಸ್ಸನ್ನು ಶಾಂತಗೊಳಿಸುವ ಮಾರ್ಗ. ಈ ವಿಧಾನವು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ ಮತ್ತು ವ್ಯಕ್ತಿತ್ವವನ್ನು ಸಹ ಸುಧಾರಿಸುತ್ತದೆ.

311
ಪ್ರಯಾಣ (solo travel):

ನೀವು ಪ್ರಯಾಣವನ್ನು ಇಷ್ಟಪಡುತ್ತಿದ್ದರೆ, 2023 ರಲ್ಲಿ ಏಕಾಂಗಿಯಾಗಿ ಪ್ರಯಾಣಿಸಲು ಪ್ಲ್ಯಾನ್ ಮಾಡಿ. ಟ್ರಾವೆಲ್ ಮಾಡೊದರಿಂದ ಒತ್ತಡವು ಕ್ಷಣಾರ್ಧದಲ್ಲಿ ಹೋಗುತ್ತದೆ ಎಂದು ಸಂಶೋಧನೆಯು ಬಹಿರಂಗಪಡಿಸಿದೆ. ಬಜೆಟ್ ಸಮಸ್ಯೆ ಇದ್ದರೆ, ಅಗ್ಗದ ಪ್ರಯಾಣಗಳಿಗೆ ಹೆಸರುವಾಸಿಯಾದ ಸ್ಥಳಗಳಿಗೆ ಭೇಟಿ ನೀಡಿ..

411
ನಿಮಗಿಷ್ಟವಾದುದನ್ನು ಮಾಡಿ (do whatever you love)

ನೀವು ಉತ್ತಮ ಜೀವನ ನಡೆಸುತ್ತಿದ್ದರೆ ಮತ್ತು ಅದರಲ್ಲಿ ಹೆಚ್ಚುವರಿಯಾಗಿ ಏನನ್ನಾದರೂ ಮಾಡಲು ಬಯಸಿದರೆ, ನಿಮ್ಮ ನೆಚ್ಚಿನ ಕೋರ್ಸ್ ಗೆ ಜಾಯಿನ್ ಆಗಬಹುದು. ಒಂಟಿತನವನ್ನು ಅನುಭವಿಸುವುದಕ್ಕಿಂತ ಉತ್ತಮ ಹಾದಿಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದು ಉತ್ತಮ. ಇದು ನಿಮಗೆ ಹೆಚ್ಚಿನ ಖುಷಿಯನ್ನು ನೀಡುತ್ತೆ.

511
ನಿಮಗಾಗಿ ಟೈಮ್ ಕೊಡಿ (give time to yourself)

ಮನೆ ಕೆಲಸ, ಆಫೀಸ್ ಕೆಲಸ, ಮದುವೆ ಫಂಕ್ಷನ್ ಎಂದೆಲ್ಲಾ ಇಷ್ಟು ವರ್ಷ ನಿಮ್ಮನ್ನು ನೀವು ಸಂಪೂರ್ಣವಾಗಿ ತೊಡಗಿಸಿಕೊಂಡದ್ದು ಇದೆ. ಆದರೆ ಈ ಬಾರಿ ನಿಮಗೆ ನೀವು ಸಮಯ ನೀಡೋದನ್ನು ಕಲಿಯಿರಿ. ನೆಮ್ಮದಿಯಾಗಿ ಒಂದು ಅರ್ಧ ಗಂಟೆ ವಾಕಿಂಗ್, ಬುಕ್ ಓದೋದು, ರಿಲ್ಯಾಕ್ಸ್ ಆಗೋದು ಏನಾದರೂ ನಿಮಗಾಗಿ ಸಮಯ ಕೊಡೋದು ಇಂಪಾರ್ಟಂಟ್.

611
ಮನಶಾಂತಿ ಪಡೆದುಕೊಳ್ಳೋದು ಮುಖ್ಯ (peace of mind)

ಆ ಕೆಲಸ ಆಗಿಲ್ಲ, ಈ ಕೆಲಸ ಆಗಿಲ್ಲ, ಬೆಳಗ್ಗೆ ತಿಂಡಿ ಏನು ಮಾಡೋದು? ಮದ್ಯಾಹ್ನ ಊಟಕ್ಕೆ ಏನು ಮಾಡೋದು? ಮಕ್ಕಳನ್ನು ಸಂಜೆ ಏನು ತಿಂಡಿ ಕೊಡೋದು?.. ಸ್ಟಾಪ್ ಇಷ್ಟೆಲ್ಲಾ ಯೋಚ್ನೆ ಮಾಡ್ತಾ ಇದ್ರೆ ಮನಶಾಂತಿ ಹಾಳಾಗುತ್ತೆ. ಹಾಗಾಗಿ, ರಿಲ್ಯಾಕ್ಸ್ ಆಗಿ, ಮೆಡಿಟೇಶನ್ ಮಾಡಿ ಮನಶಾಂತಿ ಪಡೆಯಿರಿ. ಮನಸ್ಸು ಶಾಂತವಾಗಿದ್ರೆ ಕೆಲಸವೂ ಸುಲಭವಾಗಿ ಆಗುತ್ತೆ.

711
ನಿಮ್ಮನ್ನು ನೀವು ಪ್ರೀತಿಸಿ (self love):

ನಿಮ್ಮ ಹೃದಯ ಮತ್ತು ಆತ್ಮವನ್ನು ಒಳ್ಳೆಯತನ ಮತ್ತು ದಯೆಯಿಂದ ಸಮೃದ್ಧವಾಗಿರಿಸಿ. ನಿಮ್ಮನ್ನು ನೀವು ಪ್ರೀತಿಸುವ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಿ, ಅದು ಈ ಜಗತ್ತಿಗೆ ನಿಮ್ಮ ಅತ್ಯುತ್ತಮ ಎಡಿಶನ್ ನೀಡುತ್ತದೆ. ಜೊತೆಗೆ ನೀವು ಹ್ಯಾಪಿಯಾಗಿರಲು ಸಹಾಯವಾಗುತ್ತೆ. ಯಾರು ನಿಮ್ಮ ಬಗ್ಗೆ ಏನೆ ಹೇಳಿದ್ರೂ ಕೇರ್ ಮಾಡ್ಬೇಡಿ. ನಿಮ್ಮ ಮನಸಿಗೆ ಇಷ್ಟವಾದುದನ್ನು ಮಾಡಿ. ಅದಕ್ಕಾಗಿ ನಿಮ್ಮನ್ನು ನೀವು ಪ್ರೀತಿಸಿ.

811
ಆತ್ಮವಿಶ್ವಾಸ (Self confidence):

 ಆತ್ಮವಿಶ್ವಾಸದಿಂದ ನಿಮ್ಮನ್ನು ನೀವು ನಂಬುವುದು ನಿಮ್ಮನ್ನು ನಿಜವಾಗಿಯೂ ಜೀವನದಲ್ಲಿ ಬಹುದೂರ ಕೊಂಡೊಯ್ಯುತ್ತದೆ. ಬ್ಲೇಕ್ ಲೈವ್ಲಿ ಉಲ್ಲೇಖಿಸಿದಂತೆ, 'ನೀವು ಧರಿಸಬಹುದಾದ ಅತ್ಯಂತ ಸುಂದರವಾದ ಆಭರಣ ಎಂದರೆ ಆತ್ಮವಿಶ್ವಾಸ.' ನಿಮ್ಮ ಆಂತರಿಕ ಆತ್ಮವಿಶ್ವಾಸವು ನಿಮ್ಮನ್ನು ಎಲ್ಲೆಡೆ ಮಿಂಚುವಂತೆ ಮಾಡುತ್ತೆ. 

911
ಸ್ವ-ಅಭಿವೃದ್ಧಿ (Self Developement):

ನಿಮ್ಮ ಸ್ವಂತ ಸಾಮರ್ಥ್ಯಗಳನ್ನು ಅರಳಿಸುವುದು ನೀವು ನಿಮಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯಾಗಿದೆ. ಬ್ರಿಯಾನ್ ಟ್ರೇಸಿ ಉಲ್ಲೇಖಿಸಿದಂತೆ, 'ವೈಯಕ್ತಿಕ ಅಭಿವೃದ್ಧಿಯು ಒಂದು ಪ್ರಮುಖ ಸಮಯ ಉಳಿಸುವ ಸಾಧನವಾಗಿದೆ. ನೀವು ಉತ್ತಮರಾದಷ್ಟೂ, ನಿಮ್ಮ ಗುರಿಗಳನ್ನು ಸಾಧಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.' 

1011
ಗುರಿ ನಿಗದಿಪಡಿಸಿ (fix your goal):

ಗುರಿ ನಿಗದಿಪಡಿಸಿದರೆ, ಭವಿಷ್ಯದ ಹಾದಿಯನ್ನು ಸುಲಭವಾಗಿ ತಲುಪಬಹುದು. ಮುಂಬರುವ ಸಮಯದಲ್ಲಿ ನೀವು ಏನು ಮಾಡಬೇಕು ಎಂಬುದರ ಬಗ್ಗೆ ನೀವು ನಿಮ್ಮ ಗುರಿಯನ್ನು ಇಂದೇ ಪ್ಲ್ಯಾನ್ ಮಾಡಿ. ಈ ವಿಧಾನವು ಒತ್ತಡವನ್ನು ಸಹ ತೆಗೆದುಹಾಕುತ್ತದೆ. ಜೊತೆಗೆ ಗುರಿ ತಲುಪಲು ಏನೆಲ್ಲಾ ಮಾಡಬೇಕು ಅನ್ನೋದನ್ನು ನಿರ್ಧರಿಸಲು ಸಹ ಸಾಧ್ಯವಾಗುತ್ತೆ.

1111

ದುಡ್ಡು ಕೊಟ್ಟು ಪಡೆದ ಗಿಫ್ಟ್ ಎಷ್ಟು ದಿನ ಉಳಿಯುತ್ತೆ ಅಲ್ವಾ? ದುಡ್ಡು ಕೊಡದೇ ನೀವು ನಿಮಗಾಗಿ ಕೊಡುವಂತಹ ಇಂತಹ ಗಿಫ್ಟ್‌ಗಳು ಜೀವನ ಪರ್ಯಂತ ನಿಮ್ಮ ಜೊತೆ ಇರುತ್ತೆ. ಹಾಗಾಗಿ ಈ ನ್ಯೂ ಇಯರ್ ಗೆ ಇಂತಹ ಗಿಫ್ಟ್ ಗಳನ್ನೇ ನಿಮಗೆ ನೀವು ಕೊಡುವ ಮೂಲಕ ಹೊಸ ವರ್ಷಾನ ಹ್ಯಾಪಿಯಾಗಿ ಆರಂಭಿಸಿ.

click me!

Recommended Stories