Weird News: ಇಲ್ಲಿ ಮದುವೆಯ ನಂತರ ವಧುವನ್ನು ಆಶೀರ್ವದಿಸಲು ತಲೆ ಮೇಲೆ ಉಗುಳ್ತಾರೆ

First Published | Jul 26, 2022, 6:10 PM IST

ಇಂದಿಗೂ ನೀವು ಅನೇಕ ವಿಚಿತ್ರ ವಿವಾಹ ಸಂಪ್ರದಾಯಗಳನ್ನು ಕೇಳಿರಬಹುದು ಮತ್ತು ನೋಡಿರಬಹುದು. ಪ್ರಪಂಚದಾದ್ಯಂತ ಇಂತಹ ಅನೇಕ ವಿಚಿತ್ರ ಸಂಪ್ರದಾಯಗಳಿವೆ (weird tradition).  ಇಂದು ನಾವು ನಿಮಗೆ ಏನು ಹೇಳಲಿದ್ದೇವೆ ಎಂದು ತಿಳಿದರೆ ನೀವು ಶಾಕ್ ಆಗ್ತೀರಿ. ಏಕೆಂದರೆ ವಧುವನ್ನು ಆಶೀರ್ವದಿಸುವ ಏಕೈಕ ವಿಚಿತ್ರ ಮಾರ್ಗ ಇಲ್ಲಿದೆ.

ಹೊಸದಾಗಿ ಮದುವೆಯಾದಾಗ, ಹಿರಿಯರು ಅವರಿಗೆ ಆಶೀರ್ವಾದ ಮಾಡೋದು ಸಾಮಾನ್ಯವಾಗಿದೆ, ಇದರಿಂದ ಅವರ ಮುಂದಿನ ಜೀವನವು ಸಂತೋಷ ಮತ್ತು ಪ್ರೀತಿಯಿಂದ ಕೂಡಿರುತ್ತದೆ ಎಂದು ನಂಬಲಾಗಿದೆ. ಆದರೆ ಕೀನ್ಯಾದಲ್ಲಿ ಮದುವೆಯ ನಂತರ ವಧುವನ್ನು ವಿಚಿತ್ರ ರೀತಿಯಲ್ಲಿ ಆಶೀರ್ವದಿಸುವ ಒಂದು ಬುಡಕಟ್ಟು ಜನಾಂಗವಿದೆ. ಈ ಬುಡಕಟ್ಟು ಜನಾಂಗದವರು ವಧುವನ್ನು ಉಗುಳುವ ಮೂಲಕ ಆಶೀರ್ವದಿಸುತ್ತಾರೆ. 

ಹೌದು, ಈ ಸಂಪ್ರದಾಯವು ಕೇಳಲು ವಿಚಿತ್ರವಾಗಿ ತೋರಬಹುದು, ಆದರೆ ಇದು ಇಲ್ಲಿನ ಸಂಪ್ರದಾಯವಾಗಿದೆ, ಇಲ್ಲಿ ಹುಡುಗಿಯ ವಿದಾಯದ ಸಮಯದಲ್ಲಿ, ತಂದೆಯು ಮಗಳ ದೇಹದ ಮೇಲೆ ಉಗುಳುವ ಮೂಲಕ ಆಶೀರ್ವದಿಸುತ್ತಾನೆ. ಈ ವಿಲಕ್ಷಣ ಸಂಪ್ರದಾಯದ  (weird tradition) ಬಗ್ಗೆ ಮತ್ತು ಅದರ ಹಿಂದಿನ ಕತೆಯ ಬಗ್ಗೆ ಎಂದು ನಾವು ನಿಮಗೆ ತಿಳಿಸುತ್ತೇವೆ ಕೇಳಿ…

Tap to resize

ಮಗಳನ್ನು ಆಶೀರ್ವದಿಸಲು ಉಗುಳಿದ ತಂದೆ 

ವಾಸ್ತವವಾಗಿ, ಮಸಾಯಿಗಳು ಕೀನ್ಯಾ ಮತ್ತು ತಾಂಜೇನಿಯಾದ ಬುಡಕಟ್ಟು ಜನಾಂಗವಾಗಿದೆ. ಈ ಬುಡಕಟ್ಟು ಜನಾಂಗದಲ್ಲಿ, ಹುಡುಗಿಯು ಮದುವೆಯಾದಾಗ, ವಿದಾಯದ ಸಮಯದಲ್ಲಿ, ವಧುವಿನ ತಂದೆಯು ಮಗಳ ತಲೆ ಮತ್ತು ಎದೆಯ ಮೇಲೆ ಉಗುಳುವ ಮೂಲಕ ಆಶೀರ್ವದಿಸುತ್ತಾನೆ. 

ಈ ಸಂಪ್ರದಾಯವನ್ನು ಶತಮಾನಗಳಿಂದ ಇಲ್ಲಿ ಆಚರಣೆ ಮಾಡಲಾಗುತ್ತಿದೆ ಮತ್ತು ಜನರು ಇದನ್ನು ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗವೆಂದು ಪರಿಗಣಿಸುತ್ತಾರೆ. ತಂದೆ ಉಗುಳಿದಾಗ ಮಗಳು ಅದನ್ನು ಆಶೀರ್ವಾದವೆಂದು (blessings) ಪರಿಗಣಿಸುತ್ತಾಳೆ.

ವರದಕ್ಷಿಣೆ ನೀಡಿದ ನಂತರ ತಲೆಯನ್ನು ಬೋಳಿಸಲಾಗುತ್ತದೆ
ವಾಸ್ತವವಾಗಿ, ಈ ಬುಡಕಟ್ಟು ಜನಾಂಗದಲ್ಲಿ, ಮಗಳನ್ನು ಮದುವೆಯಾದಾಗ ವರದಕ್ಷಿಣೆ (dowry) ನೀಡುವ ಸಂಪ್ರದಾಯವಾಗಿದೆ. ಹುಡುಗನ ಕುಟುಂಬ ಸದಸ್ಯರಿಗೆ ವರದಕ್ಷಿಣೆಯನ್ನು ನೀಡಿದಾಗ, ವಧುವಿನ ತಲೆಯನ್ನು ಸಹ ಕ್ಷೌರ ಮಾಡಲಾಗುತ್ತದೆ. ಇದು ಈ ಬುಡಕಟ್ಟು ಜನಾಂಗದ ಆಚರಣೆಯಾಗಿದೆ.

Umoja, Kenya

ನಂತರ ವಧು ತನ್ನ ತಂದೆಯ ಮುಂದೆ ಮಂಡಿಯೂರಿ ಮನೆಯ ಎಲ್ಲಾ ಹಿರಿಯರ ಆಶೀರ್ವಾದವನ್ನು ಪಡೆಯುತ್ತಾಳೆ. ಈ ಸಮಯದಲ್ಲಿ, ಮನೆಯ ಹಿರಿಯರು ವಧುವಿನ ತಲೆಯ ಮೇಲೆ ಮತ್ತು ಎದೆಯ ಮೇಲೆ ಉಗುಳುತ್ತಾರೆ. ಇದನ್ನು ಮಾಡುವುದು ವಧುವಿಗೆ ಮಂಗಳಕರ ಎಂದು ಹೇಳಲಾಗುತ್ತದೆ. 

ಈ ಸಂಪ್ರದಾಯವನ್ನು ನವ ವಧುವಿನೊಂದಿಗೆ (bride) ಮಾತ್ರವಲ್ಲದೆ ನವಜಾತ ಶಿಶುಗಳೊಂದಿಗೂ ಮಾಡಲಾಗುತ್ತದೆ. ಹೌದು, ಮಗು ಹುಟ್ಟಿ ಸ್ವಲ್ಪ ಸಮಯವಾದಾಗ ಆ ಮಗುವಿಗೆ ಆಶೀರ್ವಾದ ನೀಡುವ ಸಲುವಾಗಿ ಹಿರಿಯರು ಮಗುವಿನ ತಲೆಯ ಮೇಲೆ ಉಗುಳುವುದು ಸಂಪ್ರದಾಯವಾಗಿದೆ. 

ಇದರ ಹಿಂದಿನ ಕಾರಣವೇನು?

ಉಗುಳುವುದು ಗೌರವದ ಸಂಕೇತ ಎಂದು ಮಸಾಯಿ ಸಮುದಾಯದ ಜನರು ಹೇಳುತ್ತಾರೆ. ಒಬ್ಬ ಅತಿಥಿ ಬಂದಾಗ, ಅದೇ ರೀತಿಯಲ್ಲಿ ಅಂಗೈಯ ಮೇಲೆ ಉಗುಳುವ ಮೂಲಕ ಅವನನ್ನು ಸ್ವಾಗತಿಸಲಾಗುತ್ತದೆ. ಅಯ್ಯೋ ಎಂದು ಅನಿಸಿದರೂ, ಇದು ಇಲ್ಲಿನ ಬುಡಕಟ್ಟು ಜನಾಂಗ ಪಾಲಿಸುತ್ತಿರುವ ನಿಯಮವಾಗಿದೆ.

ಅಷ್ಟೇ ಅಲ್ಲ, ಇಲ್ಲಿನ ಜನಾಂಗ ಮತ್ತೊಂದು ಸಂಪ್ರದಾಯವನ್ನು ಸಹ ಪಾಲನೆ ಮಾಡುತ್ತಾರೆ. ಮದುವೆಯ ಸಮಯದಲ್ಲಿ ಹುಡುಗಿಯ ತಲೆ ಮತ್ತು ಸ್ತನದ ಮೇಲೆ ಉಗುಳಿದ ನಂತರ ಹುಡುಗಿ ಅತ್ತೆ-ಮಾವನ ಮನೆಗೆ ಹೋಗುವಾಗ, ಹುಡುಗಿ ಹಿಂತಿರುಗಿ ಸಹ ನೋಡ ಬಾರದು ಎಂದು ನಂಬಲಾಗಿದೆ, ಇಲ್ಲದಿದ್ದರೆ ವಧುವು ಕಲ್ಲಾಗಿ ಬದಲಾಗುತ್ತಾಳೆ ಎಂದು ಹೇಳಲಾಗುತ್ತದೆ.

Latest Videos

click me!