ಇಲ್ಲಿ ವಿಜೃಂಭಣೆಯಿಂದ ನಡೆಯುತ್ತೆ ಮಂಗಳಮುಖಿಯರ ಮದುವೆ, ಮರುದಿನವೇ ವಿಧವೆ!

First Published Jul 23, 2022, 6:15 PM IST

ಮದುವೆಯ ಬಗ್ಗೆ ವಿವಿಧೆಡೆ ವಿವಿಧ ರೀತಿಯ ಸಂಪ್ರದಾಯಗಳಿವೆ. ಕೆಲವು ಕಡೆಗಳಲ್ಲಿ ಬಹುಪತ್ನಿತ್ವವಬ ವಾಡಿಕೆಯಲ್ಲಿದ್ದರೆ, ಮತ್ತೆ ಕೆಲವೆಡೆ ಮದುವೆಗೆ ಮುನ್ನವೇ ಲಿವ್ ಇನ್ ರಿಲೇಶನ್‌ನಲ್ಲಿರುವ ಸಂಪ್ರದಾಯವೂ ಇದೆ. ಇದೆಲ್ಲವೂ ಆಯಾ ಪ್ರದೇಶದ ಆಚರಣೆಗೆ ಬಿಟ್ಟದ್ದು. ಇಂದು ನಾವಿಲ್ಲಿ ಹೇಳ್ತಾ ಇರೋದು ಮಂಗಳಮುಖಿಯರ ಮದುವೆ ಬಗ್ಗೆ. ಹೌದು, ಈ ಊರಲ್ಲಿ ಮಂಗಳಮುಖಿಯರ ಅದ್ಧೂರಿ ಮದುವೆ ನಡೆದು, ಮರುದಿನವೇ ಅವರು ವಿಧವೆಯರಾಗ್ತಾರೆ.

ಸಾಮಾನ್ಯವಾಗಿ ನಾವು ನೋಡಿರುವಂತೆ ಮದುವೆ ಮತ್ತಿತರ ಸಮಾರಂಭಗಳಲ್ಲಿ ಅನೇಕ ಮಂಗಳಮುಖಿಯರು ನೃತ್ಯ ಮಾಡುತ್ತಾರೆ ಅಲ್ವಾ? ಆದರೆ ಭಾರತದಲ್ಲಿ ಈ ಮಂಗಳಮುಖಿಯರೇ ಮದುವೆಯಾಗುವ ಒಂದು ಸ್ಥಳವಿದೆ ಎಂದು ನಿಮಗೆ ತಿಳಿದಿದೆಯೇ, ಅದೂ ಕೇವಲ ಒಂದು ದಿನ ಮಾತ್ರ? ಯಾವುದು ಈ ಊರು. ಇಲ್ಲಿನ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ. 

ನಮ್ಮ ದೇಶದಲ್ಲಿ ಇಂತಹ ಅನೇಕ ವಿಲಕ್ಷಣ ಸಂಪ್ರದಾಯಗಳಿವೆ, ಅವು ಶತಮಾನಗಳಿಂದ ನಡೆಯುತ್ತಿವೆ. ಅಂತಹ ಸಂಪ್ರದಾಯಗಳ (tradition) ಬಗ್ಗೆ ತಿಳಿದು ನಮಗೆ ಆಶ್ಚರ್ಯವಾಗುತ್ತದೆ. ಇದೇ ರೀತಿಯ ಒಂದು ಸಂಪ್ರದಾಯವು ಭಾರತದ ತಮಿಳುನಾಡಿನಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಏನಿದು ಸಂಪ್ರದಾಯ ತಿಳಿಯಿರಿ. 

ತಮಿಳುನಾಡಿನ ಒಂದೆಡೆ ಮಂಗಳಮುಖಿಯರ ವಿವಾಹ ಹಬ್ಬವನ್ನು ಆಡಂಬರ ಮತ್ತು ಸಂಭ್ರಮದೊಂದಿಗೆ ಆಚರಿಸಲಾಗುತ್ತೆ. 18 ದಿನಗಳ ಕಾಲ ನಡೆಯುವ ಈ ಉತ್ಸವದ 17ನೇ ದಿನದಂದು ಮಂಗಳಮುಖಿಯರು ಮದುವೆಯಾಗುತ್ತಾರೆ. ಆದರೆ ಏನಾಗುತ್ತದೆ ಎಂದರೆ ಮರುದಿನ ಅವರು ಸುಮಂಗಲಿಯರಾಗಿ ಇರೋದಿಲ್ಲ, ಅಂದರೆ ಅವರು ವಿಧವೆಯಾಗುತ್ತದೆ. ಕಿನ್ನರರ ಮದುವೆಯ ಹಿಂದಿನ ಕಾರಣವೇನು ಅನ್ನೋ ವಿಷಯದ ಬಗ್ಗೆ ನಾವು ನಿಮಗಿಂದು ತಿಳಿಸುತ್ತೇವೆ.

ಒಂದೇ ದಿನದ ಸುಮಂಗಲಿಯಾಗುವ ಮಂಗಳಮುಖಿ

ತಮಿಳುನಾಡಿನಲ್ಲಿ ತಮಿಳು ಹೊಸ ವರ್ಷವು ಪ್ರಾರಂಭವಾದಾಗ, ಮೊದಲ ಹುಣ್ಣಿಮೆಯ ಸಮಯದಲ್ಲಿ ಮಂಗಳಮುಖಿಯರ ವಿವಾಹ ಆಚರಣೆಯ ಪ್ರಾರಂಭವನ್ನು ಸೂಚಿಸುತ್ತದೆ. ಈ 18 ದಿನಗಳ ಸುದೀರ್ಘ ಕಾರ್ಯಕ್ರಮದ 17 ನೇ ದಿನದಂದು, ಎಲ್ಲಾ ಮಂಗಳಮುಖಿಯರು ತಮ್ಮ ದೇವರಾದ ಇರ್ವಾನ್ ನೊಂದಿಗೆ ಆಡಂಬರದಿಂದ ಮದುವೆಯಾಗುತ್ತಾರೆ. 

ಈ ಸಮಯದಲ್ಲಿ, ಮಂಗಳಮುಖಿಯರು ಹದಿನಾರು ಶೃಂಗಾರಗಳನ್ನು ಮಾಡಿಕೊಳ್ಳುತ್ತಾರೆ ಮತ್ತು ಇರ್ವಾನ್ ದೇವರ ಅನುಗ್ರಹದ ವಧುವಾಗುತ್ತಾಳೆ. ಅಲ್ಲದೇ ಅವರು ಸಪ್ತಪದಿಯನ್ನು ಸಹ ತುಳಿಯುತ್ತಾರೆ. ಇಷ್ಟೇ ಅಲ್ಲ, ಮದುವೆಯ ನಂತರ, ಈ ಮಂಗಳಮುಖಿಯರ ಮೆರವಣಿಗೆಯನ್ನು ಸಹ ನಡೆಸಲಾಗುತ್ತದೆ, ಅಲ್ಲಿ ಅವರು ತಮ್ಮ ದೇವರೊಂದಿಗೆ ನಗರದಾದ್ಯಂತ ಸಂಚರಿಸುತ್ತಾರೆ.

ಮರುದಿನ ಅವಳು ವಿಧವೆಯಾಗುತ್ತಾಳೆ

ಮಂಗಳಮುಖಿಯರ ಮದುವೆಯ ಆಚರಣೆಯ ಕೊನೆಯ ದಿನದಂದು ಅಂದರೆ 18 ನೇ ದಿನದಂದು, ಈ ಮಂಗಳಮುಖಿಯರು ವಿಧವೆಯರಾಗುತ್ತಾರೆ (widow). ವಾಸ್ತವವಾಗಿ, ಅವಳು ಆಡಂಬರದಿಂದ ಮದುವೆಯಾಗಿರುವ ಅದೇ ದೇವರಾದ ಇರ್ವಾನ್ ನ ಪ್ರತಿಮೆಯನ್ನು ಮುರಿಯುವ ಮೂಲಕ, ಅವಳು ವಿಧವೆಯಾಗುತ್ತಾಳೆ ಮತ್ತು ವಿಧವೆಯಂತೆ ಅಳಲು ಪ್ರಾರಂಭಿಸುತ್ತಾಳೆ. ಇದರ ಹಿಂದೆ ದೊಡ್ಡ ಕತೆಯೇ ಇದೆ.

ಇದು ಮಹಾಭಾರತದ ಸಮಯದಲ್ಲಿ ಪ್ರಾರಂಭವಾಯಿತು

ಈ ವಿಲಕ್ಷಣ ಸಂಪ್ರದಾಯದ ಹಿಂದೆ, ಮಹಾಭಾರತದ ಕತೆಯೇ ಇದೆ. ಏನಿದು ಕತೆ ಕೇಳಿ… ಇದು ಮಹಾಭಾರತದ ಯುದ್ಧದ ಸಮಯದಲ್ಲಿ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಪಾಂಡವರು ಕಾಳಿಮಾತೆಯನ್ನು ಪೂಜಿಸುತ್ತಿದ್ದರು ಮತ್ತು ಪೂಜೆಯ ನಂತರ ಒಬ್ಬ ರಾಜಕುಮಾರನನ್ನು ಬಲಿಕೊಡಬೇಕಾಗಿತ್ತು. 

ರಾಜ ಇರ್ವಾನ್ ತನ್ನನ್ನು ತಾನು ತ್ಯಾಗ ಮಾಡಲು ಒಪ್ಪಿದನು, ಆದರೆ ಅವನು ಮದುವೆಯಾಗದ ಹಿನ್ನೆಲೆಯಲ್ಲಿ ಬಲಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಯಿತು. ಅದಕ್ಕಾಗಿ ರಾಜಕುಮಾರ ಇರ್ವಾನ್ ನನ್ನು ಒಂದು ದಿನಕ್ಕಾಗಿ ಮದುವೆಯಾಗಲಾಯಿತು ಎಂದು ಹೇಳಲಾಗಿದೆ. 

ಹಾಗಾದರೆ ಇರ್ವಾನ್ ನನ್ನು 1 ದಿನಕ್ಕಾಗಿ ಮದುವೆಯಾಗಿದ್ದವರು ಯಾರು? ಅನ್ನೋ ಪ್ರಶ್ನೆ ಮೂಡೋದು ಖಂಡಿತಾ. ಭಗವಾನ್ ಕೃಷ್ಣನು ಮೋಹಿನಿ ರೂಪವನ್ನು ತೆಗೆದುಕೊಂಡು ಇರ್ವಾನ್ ನನ್ನು ಮದುವೆಯಾದನು. ಮರುದಿನ ಇರ್ವಾನ್ ಅನ್ನು ಬಲಿ ಕೊಡಲಾಯಿತು ಮತ್ತು ಭಗವಾನ್ ಶ್ರೀ ಕೃಷ್ಣನು ವಿಧವೆಯಾದನು ಮತ್ತು ದುಃಖಿಸಿದನು ಎನ್ನಲಾಗಿದೆ. 

ಇದೇ ಸಂಪ್ರದಾಯವನ್ನು ಇಂದಿಗೂ ಸಹ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಲಾಗುತ್ತೆ. ಕಿನ್ನರರು ಪ್ರತಿ ವರ್ಷ ಈ ದಿನದಂದು ತಮ್ಮ ಮೆಚ್ಚಿನ ದೇವರು ಇರ್ವಾನ್ ನನ್ನು ಮದುವೆಯಾಗುತ್ತಾರೆ ಮತ್ತು ಮರುದಿನವೇ ವಿಧವೆಯಾಗುತ್ತಾರೆ. ಈ ವಿಶೇಷ ಮದುವೆಗೆ ಮಂಗಳಮುಖಿಯರು ಮಾತ್ರ ಸಾಕ್ಷಿಯಾಗಿರುತ್ತಾರೆ. 

click me!