ಭಾರತದಲ್ಲಿ ಈ ಬಾರಿ ಪ್ರೇಮಿಗಳ ದಿನಕ್ಕೆ ಹೂವಿಗಿಂತ ಕಾ0ಡೋಮ್ ಮಾರಾಟ ಹೆಚ್ಚು, ಸಾಮಾನ್ಯವಾಗಿ ಗಿಫ್ಟ್ ಐಟಂ, ಚಾಕೋಲೇಟ್, ಗ್ರೀಟಿಂಗ್ಸ್, ಗುಲಾಬಿ ಹೂವು ಸೇರಿದಂತೆ ಕೆಲ ವಸ್ತುಗಳ ಮಾರಾಟ ಅಧಿಕವಾಗಿತ್ತು. ಆದರೆ ಈ ಬಾರಿ ಭಾರತ ಹೊಸ ದಾಖಲೆ ಬರೆದಿದೆ.
ಪ್ರೇಮಿಗಳ ದಿನಾಚರಣೆ ವಿಶ್ವದೆಲ್ಲೆಡೆ ಆಚರಿಸಲಾಗಿದೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ಇಂತಹ ದಿನಾಚರಣೆಗಳನ್ನು ಭಾರತೀಯರು ಯಾವತ್ತು ಮಿಸ್ ಮಾಡಲ್ಲ. ಪ್ರೇಮಿಗಳ ದಿನಾಚರಣೆ ಸಂಭ್ರಮದ ಇಡೀ ವಾರ ಸಾಮಾನ್ಯವಾಗಿ ಚಾಕೋಲೇಟ್, ಗಿಫ್ಟ್ ಐಟಮ್ಸ್, ಗುಲಾಬಿ ಹೂವು ಸೇರಿದಂತೆ ವಸ್ತುಗಳು ದಾಖಲೆಯ ಮಾರಾಟ ಕಾಣುತ್ತದೆ. ಇ ಕಾಮರ್ಸ್ ದಾಖಲೆ ಪ್ರಕಾರ ಈ ಬಾರಿಯ ವ್ಯಾಲೆಟೈನ್ಸ್ ಡೇಗೆ ಭಾರತದಲ್ಲಿ ಹೂವಿಗಿಂತ ಹೆಚ್ಚು ಕಾ0ಡೋಮ್ ಮಾರಾಟವಾಗಿದೆ.
25
ಪ್ರೇಮಿಗಳ ದಿನಾಚರಣೆಗೆ ಸುರಕ್ಷತಾ ಸೀಕ್ರೆಟ್
2026ರ ಪ್ರೇಮಿಗಳ ದಿನಾಚರಣೆ ವಾರದಲ್ಲಿ ಕಾ0ಡೋಮ್ ಸೇರಿದಂತೆ ದೈಹಿಕ ಸಂಪರ್ಕದ ಉತ್ಪನ್ನಗಳೇ ಹೆಚ್ಚು ಮಾರಾಟವಾಗಿದೆ. ಈ ಮೂಲಕ ಈ ಬಾರಿ ಭಾರತೀಯರು ವ್ಯಾಲಟೈನ್ಸ್ ಡೇಗೆ ಚಾಕೋಲೇಟ್ ಸೇರಿದಂತೆ ಗಿಫ್ಟ್ ನೀಡುವ ಬದಲು ಸುರಕ್ಷತೆ ಕಡೆಗೆ ಭಾರಿ ಗಮನಹರಿಸಿರುವುದು ಬೆಳಕಿಗೆ ಬಂದಿದೆ.
35
2025ಕ್ಕೆ ಹೋಲಿಸಿದರೆ ಈ ಬಾರಿ ದಾಖಲೆ
ಕ್ವಿಕ್ ಕಾಮರ್ಸ್ ಆ್ಯಪ್ ದಾಖಲೆ ಪ್ರಕಾರ 2026ರಲ್ಲಿ ಫೆಬ್ರವರಿ 7 ರಿಂದ 14ರ ವರೆಗೆ ಕಾ0ಡೋಮ್ ಸೇರಿದಂತೆ ದೈಹಿಕ ಸಂಪರ್ಕದ ಉತ್ಪನ್ನಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ. 2025ಕ್ಕೆ ಹೋಲಿಸಿದರೆ 2026ರಲ್ಲಿ ಅತೀ ಹೆಚ್ಚು ಮಾರಾಟವಾಗಿರುವುದು ಕಾ0ಡೋಮ್ ಸೇರಿದಂತೆ ದೈಹಿಕ ಸಂಪರ್ಕದ ಉತ್ಪನ್ನಗಳು ಎಂದು ವರದಿ ಹೇಳುತ್ತಿದೆ.
ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ವ್ಯಾಲೆಟೈನ್ಸ್ ಡೇ ಗಿಫ್ಟ್, ಕಾರ್ಡ್‌ಗಳು ಹೆಚ್ಚು ಮಾರಾಟವಾಗಿದೆ. ಇದೇ ವೇಳೆ ಬ್ಯೂಟಿ ಹಾಗೂ ಫ್ಯಾಶನ್ ಐಟಮ್ಸ್ ಮೇಲೂ ಬೆಂಗಳೂರಿನಲ್ಲಿ ಭಾರಿ ಬೇಡಿಕೆ ಎರ್ಪಟ್ಟಿತ್ತು ಎಂದು ಕ್ವಿಕ್ ಕಾಮರ್ಸ್ ಆ್ಯಪ್ ದಾಖಲೆ ಹೇಳುತ್ತಿದೆ. ಇನ್ನು ಕೋಲ್ಕತಾದಲ್ಲಿ ಚಾಕೋಲೋಟ್ ಹಾಗೂ ಲೈ0ಗಿಕ ಉತ್ಪನ್ನಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.
55
ದಾಖಲೆ ಆರ್ಡರ್
ಕೋಲ್ಕತಾದಲ್ಲಿ ಪ್ರೇಮಿಗಳ ದಿನಾಚರಣೆ ದಿನ ಒಬ್ಬ ವ್ಯಕ್ತಿ ಬರೋಬ್ಬರಿ 25,000 ರೂಪಾಯಿ ಮೌಲ್ಯದ ಚಾಕೋಲೇಟ್ ಆರ್ಡರ್ ಮಾಡಿದ್ದಾನೆ. ಇನ್ನು ಕಟಕ್ ಮಹಿಳೆಯೊಬ್ಬರು ಪ್ರೇಮಿಗಳ ದಿನ 15093 ರೂಪಾಯಿ ಮೌಲ್ಯದ ಮೇಕ್ಅಪ್ ವಸ್ತುಗಳನ್ನು ಆರ್ಡರ್ ಮಾಡಿದ್ದಾರೆ. ಸೂರತ್‌ನಲ್ಲಿ ಗ್ರಾಹಕರೊಬ್ಬರು 10,845 ರೂಪಾಯಿ ಮೌಲ್ಯದ ಹೇರ್ ಕೇರ್, ಬಾತ್, ಬಾಡಿ ಪ್ರಾಡಕ್ಟ್ ಆರ್ಡರ್ ಮಾಡಿದ್ದಾರೆ.
ದಾಖಲೆ ಆರ್ಡರ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.