ದೈಹಿಕ ಸಂಬಂಧದ ಬಳಿಕ ರಕ್ತಸ್ರಾವವಾಗೋದು ಸಾಮಾನ್ಯವೇ? ತಜ್ಞರು ಏನು ಹೇಳ್ತಾರೆ?

Published : Oct 10, 2023, 08:01 PM IST

ದೈಹಿಕ ಸಂಬಂಧದಿಂದ ಯಾವುದೇ ಪುರುಷ ಮತ್ತು ಮಹಿಳೆಗೆ ಆನಂದ ಸಿಗೋದಂತೂ ನಿಜ. ಆದರೆ ಇದರ ನಂತರ, ನೀವು ಯಾವುದೇ ಸಮಸ್ಯೆ ಅನುಭವಿಸಿದರೆ, ಆವಾಗ ಅದರ ಬಗ್ಗೆ ಮೌನವಾಗಿದ್ದರೆ, ಸಮಸ್ಯೆ ಹೆಚ್ಚಬಹುದು. ಹಾಗಾಗಿ ನೀವು ಆ ವಿಷ್ಯಗಳ ಬಗ್ಗೆಯೂ ಮನಸ್ಸು ಬಿಚ್ಚಿ ಮಾತನಾಡಲೇಬೇಕು.   

PREV
110
ದೈಹಿಕ ಸಂಬಂಧದ ಬಳಿಕ ರಕ್ತಸ್ರಾವವಾಗೋದು ಸಾಮಾನ್ಯವೇ? ತಜ್ಞರು ಏನು ಹೇಳ್ತಾರೆ?

ದೈಹಿಕ ಸಂಬಂಧ (Physical Relationship) ಅಥವಾ ಸೆಕ್ಸ್ ಅನ್ನೋದು ನಿಮ್ಮ ದಾಂಪತ್ಯ ಜೀವನವನ್ನು ಉತ್ತಮವಾಗಿಡೋದಲ್ಲದೇ, ಪರಸ್ಪರ ಬಂಧವನ್ನು ಬಲಪಡಿಸುತ್ತವೆ. ಜೊತೆಗೆ ಇದು ಸಂತಾನೋತ್ಪತ್ತಿಗೆ ಮಾತ್ರವಲ್ಲ, ಇತರ ಕಾರಣಗಳಿಗಾಗಿಯೂ ಅಗತ್ಯವಾಗಿವೆ. ಆದರೆ ಹೆಚ್ಚಿನ ಮಹಿಳೆಯರು ಇಂದಿಗೂ ಲೈಂಗಿಕ ಸಂತೋಷಗಳ ಬಗ್ಗೆ ಮಾತನಾಡಲಾಗುವುದಿಲ್ಲ.ಇದು ಮಾತ್ರವಲ್ಲ, ಮಹಿಳೆಯರಿಗೆ ದೈಹಿಕ ಸಂಬಂಧ ಬೆಳೆಸುವಲ್ಲಿ ಯಾವುದೇ ಸಮಸ್ಯೆ ಇದ್ದರೆ ಅಥವಾ ಸೆಕ್ಸ್ ನಂತರ ಸಮಸ್ಯೆ ಉಂಟಾದರೂ ಅವರು ಅದರ ಬಗ್ಗೆ ಮಾತನಾಡುವುದನ್ನು ತಪ್ಪಿಸುತ್ತಾರೆ. 
 

210

ಅನೇಕ ಮಹಿಳೆಯರಿಗೆ ಸೆಕ್ಸ್ ಬಳಿಕ ಯೋನಿಯಿಂದ ರಕ್ತಸ್ರಾವ (vaginal bleeding) ಉಂಟಾಗುತ್ತದೆ. ಇದು ಸಾಮಾನ್ಯವೇ ಮತ್ತು ಅದಕ್ಕೆ ಕಾರಣವೇನು? ಅನ್ನೋದು ಹೆಚ್ಚಿನ ಜನಕ್ಕೆ ಗೊತ್ತಿರೋದಿಲ್ಲ. ಇಲ್ಲಿ ಆ ಬಗ್ಗೆ ಸರಿಯಾದ ಮಾಹಿತಿ ನೀಡಲಾಗಿದೆ. ತಜ್ಞರ ಸಲಹೆಯನ್ನು ನೀವು ಅರ್ಥ ಮಾಡಿಕೊಂಡು, ಮುಂದಿನ ಬಾರಿ ಏನಾದರೂ ಸಮಸ್ಯೆ ಉಂಟಾದಾಗ, ಕೂಡಲೇ ವೈದ್ಯರಲ್ಲಿ ಮಾತನಾಡೋದು ಉತ್ತಮ. 
 

310

ರಕ್ತಸ್ರಾವ ಸಾಮಾನ್ಯವೇ?
ಲೈಂಗಿಕ ಸಂಬಂಧದ ನಂತರ ಯೋನಿಯಿಂದ ಉಂಟಾಗುವ ರಕ್ತಸ್ರಾವದ ವಿಧವನ್ನು ಪೋಸ್ಟ್ಕೊಯಿಟಲ್ ರಕ್ತಸ್ರಾವ ಎಂದು ಕರೆಯಲಾಗುತ್ತದೆ. ಈ ರಕ್ತಸ್ರಾವವು ಸೌಮ್ಯವಾಗಿರಬಹುದು ಮತ್ತು ಕೆಲವೊಮ್ಮೆ ಇನ್ನೂ ಹೆಚ್ಚಾಗಿರಬಹುದು. ಕೆಲವು ಮಹಿಳೆಯರಿಗೆ ಸೌಮ್ಯ ಕಲೆಗಳು ಇರುತ್ತವೆ. ಇದಕ್ಕೆ ಅನೇಕ ಕಾರಣಗಳಿರಬಹುದು, ಅವುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು.

410

ಋತುಚಕ್ರದ (periods) ದಿನಾಂಕ ಹತ್ತಿರವಿರುವಾಗಲೂ ಇದು ಅನೇಕ ಬಾರಿ ಸಂಭವಿಸಬಹುದು ಆದ್ದರಿಂದ ವೈದ್ಯರ ಬಳಿಗೆ ಹೋಗುವ ಮೊದಲು ನಿಮ್ಮ ಋತುಚಕ್ರದ ದಿನಾಂಕವನ್ನು ಒಮ್ಮೆ ಪರಿಶೀಲಿಸಿ. ಒಂದು ವೇಳೆ ಪಿರಿಯಡ್ಸ್ ಹತ್ತಿರದಲ್ಲಿಲ್ಲದಾಗ ಬ್ಲೀಡಿಂಗ್ ಆದ್ರೆ ಆವಾಗ ವೈದ್ಯರನ್ನು ಭೇಟಿ ಮಾಡಬೇಕು.

510

ಇದು ಲೈಂಗಿಕವಾಗಿ ಹರಡುವ ಸೋಂಕು ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಯಿಂದ (STD) ಉಂಟಾಗಬಹುದು. ಸೆಕ್ಸ್ ಬಳಿಕ ಬ್ಲೀಡಿಂಗ್ ಆದ್ರೆ ಯೀಸ್ಟ್ ಅಥವಾ ಇತರ ಯೋನಿ ಸೋಂಕುಗಳಿಂದ ಉಂಟಾಗುವ ಉರಿಯೂತ ಸಂಭವಿಸಬಹುದು. ಇದು ಕ್ಲಮೈಡಿಯಾ ಅಥವಾ ಗೊನೊರಿಯಾದಂತಹ ಎಸ್ಟಿಐಗಳನ್ನು ಒಳಗೊಂಡಿದೆ.

610

ಸೆಕ್ಸ್ ಮಾಡುವಾಗ ಯೋನಿಯ ಶುಷ್ಕತೆ (vaginal dryness) ಕೂಡ ರಕ್ತಸ್ರಾವಕ್ಕೆ ಕಾರಣವಾಗಬಹುದು. ವಜೈನಾ ತುಂಬಾ ಡ್ರೈ ಇದ್ದಾಗ, ಯೋನಿಯ ಪ್ರವೇಶ ದ್ವಾರದಲ್ಲಿ ಚರ್ಮವು ಎದ್ದು ಬರಬಹುದು. ಇದು ರಕ್ತಸ್ರಾವಕ್ಕೆ ಕಾರಣವಾಗಬಹುದು. ಆದುದರಿಂದ ಲ್ಯೂಬ್ರಿಕೆಂಟ್ ಬಳಸೋದು ಉತ್ತಮ. 

710

ನಿಮ್ಮ ಋತುಬಂಧದ ಸಮಯವು ಹತ್ತಿರದಲ್ಲಿದ್ದರೂ ಸಹ, ಲೈಂಗಿಕ ಸಂಭೋಗದ ನಂತರ ಯೋನಿ ರಕ್ತಸ್ರಾವ ಸಂಭವಿಸಬಹುದು. ಏಕೆಂದರೆ ಈ ಸಮಯದಲ್ಲಿ ಈಸ್ಟ್ರೊಜೆನ್ (estrogen) ಕೊರತೆಯಿಂದಾಗಿ, ಯೋನಿಯ ಅಂಗಾಂಶಗಳು ಒಣಗುತ್ತವೆ ಮತ್ತು ತೆಳುವಾಗುತ್ತವೆ. 

810

ಕೆಲವೊಮ್ಮೆ ನೀವು ಗರ್ಭಿಣಿಯಾಗಿದ್ದಾಗ (pregnant) ಲೈಂಗಿಕ ಸಂಬಂಧ ಮಾಡಿದ್ರೂ ನಂತರ ರಕ್ತ ಬರಲು ಕಾರಣವಾಗಬಹುದು. ಆದಾಗ್ಯೂ, ನೀವು ಗರ್ಭಿಣಿಯಾಗಿದ್ದರೆ ಮತ್ತು ಯೋನಿಯಿಂದ ರಕ್ತ ಬರುತ್ತಿದ್ದರೆ, ಒಂದು ಕ್ಷಣವೂ ತಡಮಾಡದೇ ವೈದ್ಯಕೀಯ ಸಲಹೆಯನ್ನು ಪಡೆಯಿರಿ.

910

ಸೆಕ್ಸ್ ಮಾಡುವಾಗ ಇಬ್ಬರೂ ದಂಪತಿ ಆರಾಮವಾಗಿ ಇರುವುದು ಉತ್ತಮ. ಅನೇಕ ಬಾರಿ, ಸೆಕ್ಸ್ ಅವಸರದಲ್ಲಿ ಮಾಡಿದರೂ, ಯೋನಿಯಲ್ಲಿ ಘರ್ಷಣೆ ಉಂಟಾಗಬಹುದು ಮತ್ತು ಅದು ರಕ್ತಸ್ರಾವಕ್ಕೆ ಕಾರಣವಾಗಬಹುದು. ಆದುದರಿಂದ ಅವಸರದಲ್ಲಿ ಯಾವುದೇ ಕೆಲಸ ಮಾಡಬೇಡಿ. 

1010

ಕೆಲವು ಮಹಿಳೆಯರು ಮೊದಲ ಬಾರಿಗೆ ಲೈಂಗಿಕ ಸಂಬಂಧ ಹೊಂದಿದ ನಂತರ ರಕ್ತಸ್ರಾವ ಹೊಂದಿರುತ್ತಾರೆ. ಅದೇ ಸಮಯದಲ್ಲಿ, ಇದು ಕೆಲವರಲ್ಲಿ ಸಂಭವಿಸುವುದಿಲ್ಲ. ಎರಡೂ ವಿಷಯಗಳು ಸಾಮಾನ್ಯ. 

ಕೆಲವೊಮ್ಮೆ ಗರ್ಭಕಂಠದ ಕೆಲವು ವೈದ್ಯಕೀಯ ಪರಿಸ್ಥಿತಿಗಳು ಸಹ ಕಾರಣವಾಗಬಹುದು. ಇವುಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಕೂಡ ಸೇರಿದೆ.

ಬಿಎಂಐ (Body Mass Index)ಕಡಿಮೆ ಇರುವ ಮಹಿಳೆಯರಿಗೂ ಇದು ಸಂಭವಿಸಬಹುದು.
 

click me!

Recommended Stories