ಕೊಹ್ಲಿ, ಧೋನಿ, ತೆಂಡುಲ್ಕರ್ ಟೀಮ್‌ಮೇಟ್‌ನ್ನು ಡೇಟ್ ಮಾಡಿದ್ದ ಖ್ಯಾತ ನಟಿ, ಬ್ರೇಕಪ್‌ ನಂತರ ಬಾಲಿವುಡ್ ತೊರೆದ್ರು!

Published : Oct 08, 2023, 02:50 PM ISTUpdated : Oct 08, 2023, 02:54 PM IST

ಬಾಲಿವುಡ್‌ನ ಈ ನಟಿ ಕೊಹ್ಲಿ, ಧೋನಿ, ತೆಂಡೂಲ್ಕರ್ ಅವರ ಟೀಮ್ ಮೇಟ್‌ನ್ನು ಈ ನಟಿ ಡೇಟ್ ಮಾಡಿದ್ದರು. ಆದರೆ ಕ್ರಿಕೆಟರ್ ಜೊತೆಗೆ ಬ್ರೇಕಪ್ ಆದ ನಂತರ ಚಿಕ್ಕ ವಯಸ್ಸಿನಲ್ಲೇ ಬಾಲಿವುಡ್ ತೊರೆದರು. ಯಾರು ಆ ನಟಿ? ಡೇಟ್ ಮಾಡಿದ್ದು ಯಾರನ್ನು?

PREV
18
ಕೊಹ್ಲಿ, ಧೋನಿ, ತೆಂಡುಲ್ಕರ್ ಟೀಮ್‌ಮೇಟ್‌ನ್ನು ಡೇಟ್ ಮಾಡಿದ್ದ ಖ್ಯಾತ ನಟಿ, ಬ್ರೇಕಪ್‌ ನಂತರ ಬಾಲಿವುಡ್ ತೊರೆದ್ರು!

ಕ್ರಿಕೆಟ್ ಮತ್ತು ಬಾಲಿವುಡ್ ನಡುವಿನ ಸಂಬಂಧವು ತುಂಬಾ ಹಳೆಯದಾಗಿದೆ. ಅನೇಕ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗಿದ್ದಾರೆ. ಅನೇಕ ಕ್ರಿಕೆಟಿಗರು ನಟಿಯರೊಂದಿಗೆ ದೀರ್ಘಕಾಲ ಡೇಟಿಂಗ್ ಮಾಡಿದ್ದಾರೆ. ಹಾಗೆಯೇ ಈ ನಟಿ ಈ ಖ್ಯಾತ ಕ್ರಿಕೆಟರ್‌ನ್ನು ಡೇಟ್ ಮಾಡಿದ್ದರು. ಆದರೆ ಇಬ್ಬರ ಸಂಬಂಧ ಬ್ರೇಕಪ್‌ನಲ್ಲಿ ಕೊನೆಗೊಂಡಿತು.

28

ಬಾಲಿವುಡ್‌ನ ಈ ನಟಿ ಕೊಹ್ಲಿ, ಧೋನಿ, ತೆಂಡೂಲ್ಕರ್ ಅವರ ಟೀಮ್ ಮೇಟ್‌ನ್ನು ಡೇಟ್ ಮಾಡಿದ್ದರು. ಆದರೆ ಚಿಕ್ಕ ವಯಸ್ಸಿನಲ್ಲೇ ಬಾಲಿವುಡ್ ತೊರೆದರು. ಆ ನಟಿ ಮತ್ಯಾರೂ ಅಲ್ಲ ಕಿಸ್ನಾ, ಡೇವಿಡ್, ರಾಕಿ, ಲಕ್ ಬೈ ಚಾನ್ಸ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಇಶಾ ಶರ್ವಾಣಿ. ಈಕೆ ಕ್ರಿಕೆಟಿಗ ಜಹೀರ್ ಖಾನ್‌ರನ್ನು ಡೇಟ್ ಮಾಡುತ್ತಿದ್ದರು.

38

ಇಶಾ ಅವರ ಬಹುತೇಕ ಚಿತ್ರಗಳು ಫ್ಲಾಪ್ ಆಗಿದ್ದವು. ಹೀಗಾಗಿ ಬಾಲಿವುಡ್‌ನಲ್ಲಿ ಛಾಪು ಮೂಡಿಸಲು ವಿಫಲರಾದರು. ಇಶಾ ಶರ್ವಾಣಿ ಅವರ ಚಿತ್ರಗಳಿಗಿಂತ ಅವರ ಲವ್‌ ಲೈಫ್ ಹೆಚ್ಚು ಸುದ್ದಿಯಾಗಿತ್ತು. ಇಶಾ ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದ ಸಮಯವಿತ್ತು. 

48

 ವರದಿಗಳ ಪ್ರಕಾರ, ಇಶಾ ಮತ್ತು ಜಹೀರ್ ಖಾನ್ ಮೊದಲ ಬಾರಿಗೆ 2005ರಲ್ಲಿ ಸಮಾರಂಭವೊಂದರಲ್ಲಿ ಭೇಟಿಯಾದರು. ಇಬ್ಬರೂ ಸುಮಾರು ಎಂಟು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದರು.

58

ವರದಿಗಳ ಪ್ರಕಾರ, ಜಹೀರ್ ಮತ್ತು ಇಶಾ ಅವರ ಮೊದಲ ಭೇಟಿಯ ನಂತರ ಉತ್ತಮ ಸ್ನೇಹಿತರಾದರು. ಕ್ರಮೇಣ ಅವರ ಸ್ನೇಹ ಪ್ರೀತಿಗೆ ತಿರುಗಿತು. ಎಂಟು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಜಹೀರ್ ಮತ್ತು ಇಶಾ 2013ರಲ್ಲಿ ಬೇರ್ಪಟ್ಟರು.

68

ಜಹೀರ್ ಮತ್ತು ಇಶಾ ಅವರ ಬ್ರೇಕಪ್ ಸುದ್ದಿಯು ಎಲ್ಲರನ್ನು ದಿಗ್ಭ್ರಮೆಗೊಳಿಸಿತು. ಜಹೀರ್ ಖಾನ್ ಜೊತೆಗಿನ ಬ್ರೇಕಪ್ ನಂತರ, ಇಶಾ ದೀರ್ಘಕಾಲ ಯಾರೊಂದಿಗೂ ಡೇಟಿಂಗ್ ಮಾಡಲಿಲ್ಲ.

78

ಇಶಾ ಶರ್ವಾಣಿ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್ ಆದ ನಂತರ ಚಿಕ್ಕ ವಯಸ್ಸಿನಲ್ಲೇ ಬಾಲಿವುಡ್ ತೊರೆದರು. ಇಶಾ ಶರ್ವಾಣಿ ತರಬೇತಿ ಪಡೆದ ನರ್ತಕಿಯಾಗಿರುವುದರಿಂದ ಅವರು ನಟನೆಯನ್ನು ತೊರೆದ ನಂತರ ನೃತ್ಯಗಾರ್ತಿಯಾಗಿ ಛಾಪು ಮೂಡಿಸಲು ಪ್ರಾರಂಭಿಸಿದರು. ಇಶಾ ಶರ್ವಾಣಿ ಪ್ರಸ್ತುತ ಒಂಟಿಯಾಗಿದ್ದಾರೆ.

88

2011ರ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದ ಜಹೀರ್ ಖಾನ್ ಈಗ ನಟಿ ಸಾಗರಿಕಾ ಘಾಟ್ಗೆ ಅವರನ್ನು ಮದುವೆಯಾಗಿದ್ದಾರೆ. ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಮತ್ತು ಟವರ್‌ನಲ್ಲಿ ಬಾಲಿವುಡ್ ಸೆಲೆಬ್ಸ್ ಮತ್ತು ಜಹೀರ್ ಟೀಮ್ ಇಂಡಿಯಾ ಸಹೋದ್ಯೋಗಿಗಳಿಗೆ ಭವ್ಯವಾದ ಆರತಕ್ಷತೆ ನಡೆಯಿತು.

Read more Photos on
click me!

Recommended Stories