ಜೋಡಿಗಳನ್ನು ಸ್ವರ್ಗದಲ್ಲಿಯೇ ನಿಶ್ಚಯಿಸಲಾಗುತ್ತೆ ಎಂದು ಹೇಳಲಾಗುತ್ತೆ. ಈ ಜೋಡಿಗಳ ನಡುವೆ ಕೇವಲ ಪ್ರೀತಿ, ರೋಮ್ಯಾನ್ಸ್ ಮಾತ್ರ ಇದ್ರೆ ಸಾಕಾಗಲ್ಲ, ಬದಲಾಗಿ ಆರ್ಥಿಕವಾಗಿಯೂ ಒಬ್ಬರಿಗೊಬ್ಬರು ಬೆಂಬಲ ನೀಡಬೇಕು. ನೀವು ಸಂಬಂಧದಲ್ಲಿದ್ದಾಗ, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಜವಾಬ್ದಾರಿ ಒಬ್ಬ ಸಂಗಾತಿಯ ಮೇಲಿದ್ದರೆ, ಸಂಬಂಧದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಹೆಚ್ಚುತ್ತವೆ. ಆದುದರಿಂದ ಇಬ್ಬರೂ ಸಮಾನವಾಗಿ ಈ ಬಗ್ಗೆ ಗಮನ ಹರಿಸೋದು ಮುಖ್ಯ.
ನೀವು ದಂಪತಿಗಳಾಗಿ ನಿಮ್ಮ ಜೀವನವನ್ನು ಪ್ರಾರಂಭಿಸಿದಾಗ, ನಿಮ್ಮ ಜೀವನದ ಉಳಿದ ಅಂಶಗಳು ಅಂದರೆ ಪ್ರೀತಿ, ರೊಮ್ಯಾನ್ಸ್ ನಂತೆ, ಹಣಕಾಸು ಸಂಬಂಧಿತ ವಿಷಯಗಳಲ್ಲಿ ಜೊತೆ ಜೊತೆಯಾಗಿ ಸಾಗುವುದು ಬಹಳ ಮುಖ್ಯ, ಇದರಿಂದ ಹಣವನ್ನು ಉತ್ತಮವಾಗಿ ನಿರ್ವಹಿಸಬಹುದು.
210
ಹಣ ಮ್ಯಾನೇಜ್ ಮಾಡೋದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಇದ್ದಕ್ಕಿದ್ದಂತೆ ಹಣದ ಅವಶ್ಯಕತೆ ಉಂಟಾದರೆ, ಲಾಟರಿ ಹೊಡೆಯಲು ಕಾಯಬೇಕಾಗಿಲ್ಲ. ನೀವು ಜೀವನದ ಹೊಸ ಇನ್ನಿಂಗ್ಸ್ ಪ್ರಾರಂಭಿಸಿದಾಗ, ಖಂಡಿತವಾಗಿಯೂ ಹಣದ ನಿರ್ವಹಣೆಗಾಗಿ ಕೆಳಗೆ ನೀಡಲಾದ ಕೆಲವು ಸಲಹೆಗಳನ್ನು ಪರಿಗಣಿಸಿ.
310
ದಂಪತಿಗಳಿಗೆ ಮನಿ ಮ್ಯಾನೇಜ್ಮೆಂಟ್ ಟಿಪ್ಸ್
1. ಹಣಕಾಸು ಖಾತೆಗಾಗಿ ಬ್ಯಾಂಕ್ ಖಾತೆ ಶೇರ್ ಮಾಡಿ
ದಂಪತಿ ಒಂದೇ ಬ್ಯಾಂಕಿನಲ್ಲಿ ತಮ್ಮ ಜಂಟಿ ಬ್ಯಾಂಕ್ ಖಾತೆಯನ್ನು (joint bank account)ತೆರೆಯಬೇಕಾಗುತ್ತದೆ. ಇದರ ಮೂಲಕ ನೀವು ಕುಟುಂಬದ ಎಲ್ಲಾ ರೀತಿಯ ವೆಚ್ಚಗಳನ್ನು ಭರಿಸಬೇಕು, ಅದು ಈ ಬ್ಯಾಂಕ್ ಖಾತೆಯ ಮೂಲಕ ಮಾಡಬೇಕು. ಇದರಿಂದ ಸಮಸ್ಯೆ ಬರೋದಿಲ್ಲ.
410
ಕೆಲವು ಕುಟುಂಬಗಳಲ್ಲಿ ಒಬ್ಬ ಸಂಗಾತಿಯ ಆದಾಯ ಹೆಚ್ಚಾಗಿರುತ್ತದೆ ಮತ್ತು ಇನ್ನೊಬ್ಬ ಸಂಗಾತಿಯ ಆದಾಯವು ಕಡಿಮೆ ಇರುತ್ತದೆ, ಆದರೆ ಅವರು ಒಟ್ಟಿಗೆ ಮನೆಯ ಖರ್ಚುಗಳು ಮತ್ತು ಇತರ ವೆಚ್ಚಗಳನ್ನು ಭರಿಸಿದಾಗ, ದಂಪತಿ ಉತ್ತಮವಾಗಿ ಜೀವನ ನಿರ್ವಹಿಸಲು ಸಾಧ್ಯವಾಗುತ್ತದೆ.
510
2. ದಂಪತಿಗಳು ತಮ್ಮ ಫೈನಾನ್ಸ್ ನ್ನು ಬೇರೆ ಬೇರೆಯಾಗಿರಿಸಿ
ಈ ವಿಧಾನವನ್ನು ಅನುಸರಿಸಲು, ಇಬ್ಬರೂ ತಮ್ಮ ಬ್ಯಾಂಕ್ ಖಾತೆಗಳನ್ನು ಪ್ರತ್ಯೇಕವಾಗಿ ಇಡಬೇಕಾಗುತ್ತದೆ. ಆದರೆ, ನೀವು ತಮ್ಮ ಪರಸ್ಪರ ಒಪ್ಪಿಗೆಯ ಪ್ರಕಾರ ಮನೆಯ ಜವಾಬ್ದಾರಿಗಳನ್ನು (share responsibility) ಸಹ ಹಂಚಿಕೊಳ್ಳಬಹುದು. ಈ ರೀತಿಯಾಗಿ, ಇಬ್ಬರೂ ತಮ್ಮ ಆರ್ಥಿಕತೆಯನ್ನು ಸ್ವತಃ ನಿಯಂತ್ರಿಸಲು ಸಾಧ್ಯವಾಗುತ್ತದೆ ಮತ್ತು ಅದನ್ನು ತಮಗೆ ಬೇಕಾದಂತೆ ಉತ್ತಮವಾಗಿ ನಿರ್ವಹಿಸಬಹುದು.
610
3. ಫೈನಾನ್ಸ್ ಅನ್ನು 50:50 ಆಗಿ ಡಿವೈಡ್ ಮಾಡಿ
ಈ ವಿಧಾನದ ಪ್ರಕಾರ, ಇಬ್ಬರೂ ಮನೆಯ ಎಲ್ಲಾ ವೆಚ್ಚಗಳನ್ನು ಅರ್ಧದಷ್ಟು ಅಂದರೆ 50% ಜವಾಬ್ದಾರಿಗೆ ಅನುಗುಣವಾಗಿ ವಿಂಗಡಿಸಬೇಕು. ಇದು ಯಾರ ಮೇಲೂ ಹೆಚ್ಚಿನ ಜವಾಬ್ದಾರಿ ಬೀಳುವಂತೆ ಮಾಡೋದಿಲ್ಲ, ಅದನ್ನು ಅವರು ಸುಲಭವಾಗಿ ಹಂಚಿಕೊಳ್ಳಬಹುದು.
710
4. ಗಳಿಕೆಯ ಆಧಾರದ ಮೇಲೆ ಪಾಲು
ಈ ವಿಧಾನದಲ್ಲಿ ಪ್ರತಿಯೊಬ್ಬ ಜೋಡಿ ತಮ್ಮ ಆದಾಯದ ಅನುಪಾತಕ್ಕೆ ಅನುಗುಣವಾಗಿ ಮನೆಯ ಖರ್ಚುಗಳನ್ನು ವಿಂಗಡಿಸಬಹುದು. ಆದಾಯ ಹೆಚ್ಚಾದಷ್ಟೂ ಅವನು ಹೆಚ್ಚು ಜವಾಬ್ದಾರಿಯನ್ನು ಹೊರುತ್ತಾನೆ. ಅದೇ ಸಮಯದಲ್ಲಿ, ಆದಾಯವು ಕಡಿಮೆಯಾದಷ್ಟೂ, ಅವನು ಕಡಿಮೆ ಜವಾಬ್ದಾರಿಯನ್ನು ಹೊರುತ್ತಾನೆ.
810
5. ದಂಪತಿಗಳಲ್ಲಿ ಒಬ್ಬರ ಆದಾಯ ಬಳಸಬೇಕು. ಮತ್ತೊಬ್ಬರದ್ದು ಸೇವಿಂಗ್ಸ್ ಮಾಡಬೇಕು
ಈ ವಿಧಾನದ ಮೂಲಕ, ದಂಪತಿಗಳು ತಮ್ಮ ಜೀವನಶೈಲಿಯಲ್ಲಿ ಸ್ವಲ್ಪ ರಾಜಿ ಮಾಡಿಕೊಳ್ಳಬೇಕಾಗಬಹುದು. ಆದರೆ ನಿಮ್ಮ ಜೀವನಶೈಲಿಗೆ ಅನುಗುಣವಾಗಿ ಮನೆಯ ಖರ್ಚುಗಳನ್ನು ಭರಿಸಬಹುದು.
910
ಇಲ್ಲಿ ದಂಪತಿಗಳಲ್ಲಿ ಒಬ್ಬರ ಆದಾಯವನ್ನು ಖರ್ಚು ಮಾಡುವ ಮೂಲಕ ಮನೆಯ ಖರ್ಚುಗಳನ್ನು ಪರಿಹರಿಸಲಾಗುತ್ತದೆ. ಆದರೆ, ಇನ್ನೊಬ್ಬ ಸಂಗಾತಿಯ ಸಂಪೂರ್ಣ ಆದಾಯವನ್ನು ಉಳಿತಾಯವಾಗಿ (savings) ಬಳಸಲಾಗುತ್ತದೆ. ಇದರಲ್ಲಿ, ಆದಾಯಕ್ಕೆ ಅನುಗುಣವಾಗಿ ನಿಮ್ಮ ಜೀವನಶೈಲಿಯನ್ನು ಸೀಮಿತಗೊಳಿಸಬಹುದು ಅಥವಾ ಹೆಚ್ಚಿಸಬಹುದು.
1010
ಮನೆಗೆ ಬರುವ ಆದಾಯವನ್ನು ನಿರ್ವಹಿಸಲು ಈ ಸಲಹೆಗಳು ದಂಪತಿಗಳ ಭವಿಷ್ಯಕ್ಕೆ ಬಲವಾದ ಅಡಿಪಾಯವನ್ನು ನೀಡಲು ಸಮರ್ಥವಾಗಿವೆ. ಆದ್ದರಿಂದ, ನಿಮ್ಮ ಜೀವನದ ಹೊಸ ಪ್ರಾರಂಭ ಮಾಡುವಾಗ ಅವುಗಳನ್ನು ಕಾರ್ಯಗತಗೊಳಿಸುವುದು ನಿಮಗೆ ತುಂಬಾ ಪ್ರಯೋಜನಕಾರಿ ಅನ್ನೋದು ತಿಳಿದು ಬಂದಿದೆ.