ನಟಿ ಊರ್ಮಿಳಾ ಮಾತೋಂಡ್ಕರ್‌ಗೆ ವಿಚ್ಛೇದನ ನೀಡಿದ ನಂತರ ಅವರ ಮಾಜಿ ಪತಿ ಮೊಹ್ಸಿನ್ ಅಖ್ತರ್ ಮೀರ್ ಎರಡನೇ ಮದುವೆಯಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಪತ್ನಿಯ ಕೈ ಹಿಡಿದ ಫೋಟೋ ಹಂಚಿಕೊಂಡಿದ್ದು, ಆಕೆಯ ಗುರುತನ್ನು ಗೌಪ್ಯವಾಗಿಟ್ಟಿದ್ದಾರೆ, ಇದು ಸಾಮಾಜಿಕ ಜಾಲತಾಣದಲ್ಲಿ ಕುತೂಹಲ ಕೆರಳಿಸಿದೆ.
ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್‌ಗೆ ವಿಚ್ಛೇದನ ನೀಡಿದ ಬೆನ್ನಲ್ಲೇ ಅವರ ಮಾಜಿ ಪತಿ ಇದೀಗ ಎರಡನೇ ಮದುವೆಯಾಗಿ ಹೊಸ ಸಂಸಾರವನ್ನು ಆರಂಭಿಸಿದ್ದಾರೆ. ಮಾಜಿ ಗಂಡನ ಮದುವೆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಆಕೆಯ ಸಂಸಾರದ ಬಗ್ಗೆ ಮತ್ತಷ್ಟು ವದಂತಿಗಳು ಹುಟ್ಟುಕೊಂಡಿವೆ.
28
ವೈಯಕ್ತಿಕ ಜೀವನದ ಕಾರಣಕ್ಕೆ ಮುನ್ನೆಲೆಗೆ ಬಂದ ಮೊಹ್ಸಿನ್
ಕಳೆದ ಹಲವು ವರ್ಷಗಳಿಂದ ಬಾಲಿವುಡ್‌ನಿಂದ ದೂರ ಉಳಿದಿರುವ ನಟಿ ಊರ್ಮಿಳಾ ಮಾತೋಂಡ್ಕರ್ ತಮ್ಮ ವೈಯಕ್ತಿಕ ಜೀವನದ ಕಾರಣಗಳಿಗಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಊರ್ಮಿಳಾ ಅವರಲ್ಲ, ಬದಲಿಗೆ ಅವರ ಮಾಜಿ ಪತಿ ತಮ್ಮ ವೈಯಕ್ತಿಕ ಬದುಕಿನ ಕಾರಣದಿಂದಾಗಿ ಭಾರಿ ಚರ್ಚೆಯಲ್ಲಿದ್ದಾರೆ. ಊರ್ಮಿಳಾಗೆ ಡೈವೋರ್ಸ್ ನೀಡಿದ ನಂತರ ಅವರು ಎರಡನೇ ಮದುವೆಯಾಗಿದ್ದು, ಅವರ ಮದುವೆಯ ಇಂಟ್ರೆಸ್ಟಿಂಗ್ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
38
ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಶೇರ್
ಊರ್ಮಿಳಾ ಅವರ ಮಾಜಿ ಪತಿಯ ಹೆಸರು ಮೊಹ್ಸಿನ್ ಅಖ್ತರ್ ಮೀರ್. ಊರ್ಮಿಳಾರಿಂದ ಅಧಿಕೃತವಾಗಿ ಬೇರ್ಪಟ್ಟ ನಂತರ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊಹ್ಸಿನ್ ಅವರೇ ಸ್ವತಃ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಈ ಮದುವೆಯ ವಿಶೇಷ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಊರ್ಮಿಳಾ ಮಾತೋಂಡ್ಕರ್ ಮತ್ತು ಮೊಹ್ಸಿನ್ ಅಖ್ತರ್ ಮೀರ್ ಅವರ ಮದುವೆಯನ್ನು ನೋಡೋದಾರೆ, ಇವರಿಬ್ಬರು 2016 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇವರ ಈ ವೈವಾಹಿಕ ಜೀವನ ಬಹಳ ದಿನಗಳ ಕಾಲ ಸುಖವಾಗಿ ಸಾಗಲಿಲ್ಲ. ಮದುವೆಯಾದ 8 ವರ್ಷಗಳ ನಂತರ ಇವರ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಉಂಟಾದ ಕಾರಣ, ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಬೇರ್ಪಡುವ ನಿರ್ಧಾರ ತೆಗೆದುಕೊಂಡರು.
58
2024 ರಲ್ಲಿ ಅಧಿಕೃತವಾಗಿ ದೂರಾದ ಜೋಡಿ
ಪರಸ್ಪರ ಒಮ್ಮತದಿಂದ ಬೇರ್ಪಡಲು ನಿರ್ಧರಿಸಿದ ಈ ಜೋಡಿಯು ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದರು. ತದನಂತರ ಕೋರ್ಟ್‌ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿಯನ್ನು ಸಲ್ಲಿಸಿ, ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಕಳೆದ 2024 ರಲ್ಲಿ ಇವರಿಬ್ಬರು ಕಾನೂನುಬದ್ಧವಾಗಿ ಹಾಗೂ ಶಾಶ್ವತವಾಗಿ ಪರಸ್ಪರ ದೂರಾದರು.
68
ಒಂದೂವರೆ ವರ್ಷದ ನಂತರ ಹೊಸ ಜೀವನದ ಆರಂಭ
ತಮ್ಮ ವಿಚ್ಛೇದನವಾಗಿ ಸರಿಸುಮಾರು ಒಂದೂವರೆ ವರ್ಷಗಳ ನಂತರ ಮೊಹ್ಸಿನ್ ಅಖ್ತರ್ ಮೀರ್ ಅವರು ತಮ್ಮ ಬದುಕಿನಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಮೊಹ್ಸಿನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಅವರು ಮಹಿಳೆಯೊಬ್ಬರ ಕೈಯನ್ನು ಪ್ರೀತಿಯಿಂದ ಹಿಡಿದುಕೊಂಡಿರುವುದು ಕಾಣಿಸುತ್ತಿದೆ.
78
ಕೈಯಲ್ಲಿ ಮೆಹೆಂದಿ ಮತ್ತು ಡೈಮಂಡ್ ರಿಂಗ್
ವೈರಲ್ ಆಗಿರುವ ಆ ಫೋಟೋದಲ್ಲಿ ಕಾಣಿಸುವ ಮಿಸ್ಟರಿ ಗರ್ಲ್ ತನ್ನ ಕೈಗಳಿಗೆ ವಧುವಿನಂತೆ ಸುಂದರವಾದ ಮೆಹೆಂದಿಯನ್ನು ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಫೋಟೋದಲ್ಲಿ ಅವರಿಬ್ಬರ ಕೈಬೆರಳುಗಳಲ್ಲಿ ಹೊಳೆಯುವ ಡೈಮಂಡ್ ರಿಂಗ್ ಕೂಡ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಫೋಟೋ ವೈರಲ್ ಆದಾಗಿನಿಂದ ಮೊಹ್ಸಿನ್ ಜೀವನಕ್ಕೆ ಬಂದಿರುವ ಈ ಹೊಸ ಮಹಿಳೆ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
88
ಮುಖ ಮತ್ತು ಹೆಸರನ್ನು ಗೌಪ್ಯವಾಗಿಟ್ಟ ಮಾಜಿ ಪತಿ
ಮೊಹ್ಸಿನ್ ತಾವು ಹಂಚಿಕೊಂಡಿರುವ ಫೋಟೋದಲ್ಲಿ ಆ ಮಹಿಳೆಯ ಮುಖವನ್ನು ಎಲ್ಲೂ ತೋರಿಸಿಲ್ಲ ಮತ್ತು ಆಕೆಯ ಹೆಸರೇನು ಎಂಬುದನ್ನು ಕೂಡ ಬಹಿರಂಗಪಡಿಸಿಲ್ಲ. ಈ ಕಾರಣದಿಂದಾಗಿ ಫೋಟೋದಲ್ಲಿ ಕಾಣುತ್ತಿರುವ ಮಹಿಳೆ ಯಾರು ಮತ್ತು ಆಕೆಯ ಹಿನ್ನೆಲೆ ಏನು ಎಂಬುದರ ಕುರಿತು ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಹಿಂದೆ ಮೊಹ್ಸಿನ್ ಮತ್ತು ಊರ್ಮಿಳಾ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದಾಗ ಇವರ ಡೈವೋರ್ಸ್ ಸುದ್ದಿ ಖಚಿತವಾಗಿತ್ತು. ಸದ್ಯ ವಿಚ್ಛೇದನದ ನಂತರ ಊರ್ಮಿಳಾ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.