ಸ್ಟ್ಯಾನ್‌ಫೋರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಅಕ್ಷತಾ ಮೂರ್ತಿ ಎಂಬಿಎ ಮಾಡುವಾಗ ರಿಷಿ ಸುನಕ್‌ರನ್ನು ಭೇಟಿ ಮಾಡಿದರು.
28
ಹಲವು ಬಾರಿ ರಿಷಿ ತಮ್ಮ ಕ್ಲಾಸ್ ಬಂಕ್ ಮಾಡಿ ಅಕ್ಷತಾ ಜೊತೆ ಕ್ಲಾಸ್ ಅಟೆಂಡ್ ಮಾಡುತ್ತಿದ್ದರು. ಆಕ್ಸ್‌ಫರ್ಡ್‌ನಿಂದ ಡಿಗ್ರಿ ಪಡೆದಿದ್ದ ರಿಷಿ ಸಿಕ್ಕಾಪಟ್ಟೆ ಬ್ರೈಟ್ ಸ್ಟೂಡೆಂಟ್ ಆಗಿದ್ದರು.
38
ಅವರು ಸ್ಟೇಟ್ಸ್‌ನಲ್ಲಿ ಓದುತ್ತಿದ್ದಾಗ ಹಾಫ್ ಮೂನ್ ಬೇ ಎಂಬ ಸ್ಥಳದಲ್ಲಿ ಭೇಟಿಯಾಗುತ್ತಿದ್ದರು. ಈ ಪ್ರದೇಶದಲ್ಲಿದ್ದ ಸುಂದರವಾದ ಅಲಂಕಾರಿಕ ಹೋಟೆಲ್ ಅನ್ನು ನೋಡುತ್ತಾ ಸದಾ ಗಂಟೆಗಟ್ಟಲೆ ಹರಟುತ್ತಿದ್ದರು.
48
ಕಡೆಗೆ ಇದೇ ಹಾಫ್ ಮೂನ್ ಬೇ ಸ್ಥಳದಲ್ಲಿ ವಾಕ್ ಕರೆದುಕೊಂಡು ಹೋದ ರಿಷಿ ಸುನಕ್, ಏಕಾಂತದಲ್ಲಿದ್ದ ಸಮಯ ನೋಡಿ ಅಕ್ಷತಾಗೆ ಪ್ರಪೋಸ್ ಮಾಡಿದರು.
58
ನಂತರ ಅಕ್ಷತಾ ತಮ್ಮ ಪ್ರೀತಿಯ ಬಗ್ಗೆ ತಂದೆ ನಾರಾಯಣ ಮೂರ್ತಿಯವರಲ್ಲಿ ಹೇಳಿಕೊಂಡರು. ಮೊದಲಿಗೆ ಈ ಬಗ್ಗೆ ಮೂರ್ತಿಯವರು ಕೋಪಗೊಂಡರು.
68
ಆದರೆ, ಯಾವಾಗ ರಿಷಿಯನ್ನು ಭೇಟಿಯಾದರೋ ಅವರ ಅಭಿಪ್ರಾಯ ಬದಲಾಯಿತು. ಅಂತೂ ಅವರು ಮಗಳ ಪ್ರೇಮ ವಿವಾಹಕ್ಕೆ ಒಪ್ಪಿಗೆ ಇತ್ತರು.
78
9 ವರ್ಷಗಳ ಡೇಟಿಂಗ್ ಬಳಿಕ ಜೋಡಿಯು 2009ರ ಆಗಷ್ಟ್‌ನಲ್ಲಿ ಬೆಂಗಳೂರಿನಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟರು. ಇದೀಗ ಇವರಿಗೆ ಕೃಷ್ಣ ಮತ್ತು ಅನೌಷ್ಕ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
88
ರಿಷಿ ಸುನಕ್ ಯುಕೆ ಪ್ರಧಾನಿಯೂ ಆಗಿದ್ದಾರೆ. ಅವಳ ಪ್ರೀತಿ ಮತ್ತು ಬೆಂಬಲವಿಲ್ಲದೆ ನಾನು ಈ ಸ್ಥಾನಕ್ಕೆ ಬರಲು ಸಾಧ್ಯವಿರಲಿಲ್ಲ ಎನ್ನತ್ತಾರೆ ಸುನಾಕ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.