ಯಾವುದೇ ಸಂಬಂಧವು ಪ್ರೀತಿ ಮತ್ತು ನಂಬಿಕೆಯ ಮೇಲೆ ನಿಂತಿದೆ. ಇದರ ಜೊತೆಗೆ ಒಬ್ಬ ವ್ಯಕ್ತಿಯು ತನ್ನ ಸಂಗಾತಿಯಿಂದ ಹೊಂದಿರುವ ನಿರೀಕ್ಷೆಗಳು ಸಹ ಸಂಬಂಧದಲ್ಲಿ ಬದ್ಧರಾಗೋದಕ್ಕೆ ಮುಖ್ಯ. ಆದರೆ ನಿಮ್ಮ ಸಂಗಾತಿಯಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಅಥವಾ ನಿಮ್ಮ ಇಷ್ಟಕ್ಕೆ ತಕ್ಕಂತೆ ವಿಷಯಗಳನ್ನು ಯೋಚಿಸುವುದು ಸರಿಯೇ? ನಮ್ಮ ಸಂಗಾತಿಯಿಂದ ಅವರು ಪೂರೈಸಬಹುದಾದಷ್ಟನ್ನು ಮಾತ್ರ ನಾವು ನಿರೀಕ್ಷಿಸಬೇಕು. ಆದರೆ, ಕೆಲವೊಮ್ಮೆ ನಾವು ಇಷ್ಟವಿಲ್ಲದೆ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತೇವೆ. ಈ ಅತಿಯಾದ ನಿರೀಕ್ಷೆಯೇ (more expection) ನಮ್ಮನ್ನು ದುಃಖಕ್ಕೆ ಈಡು ಮಾಡುತ್ತೆ.
ಸಂಬಂಧದಲ್ಲಿ ನಿರೀಕ್ಷೆಗಳು ಇರಬೇಕು, ಆದರೆ ಅತಿಯಾದ ನಿರೀಕ್ಷೆ ಇಟ್ಟುಕೊಂಡರೆ, ಇದರಿಂದಾಗಿ ಯಾವುದೇ ಕಾರಣವಿಲ್ಲದೆ ಸಂಬಂಧದಲ್ಲಿ ಬಿರುಕು ಉಂಟಾಗಲು ಪ್ರಾರಂಭಿಸುತ್ತದೆ ಮತ್ತು ದೈನಂದಿನ ಜೀವನದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಲು ಆರಂಭವಾಗುತ್ತದೆ. ಅಂತಹ ನಾಲ್ಕು ನಿರೀಕ್ಷೆಗಳ ಬಗ್ಗೆ ನಾವು ನಿಮಗೆ ಹೇಳ್ತೀವಿ ಕೇಳಿ, ಇದನ್ನ ನೀವು ನೆನಪಿಟ್ಟುಕೊಂಡ್ರೆ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು (relationship)ಯಾವಾಗಲೂ ಸಂತೋಷ ಮತ್ತು ಸ್ಟ್ರಾಂಗ್ ಆಗಿರುತ್ತೆ.
ಸಂಗಾತಿ ಪರ್ಫೆಕ್ಟ್ ಆಗಿರ್ಬೇಕು ಅಂತ ಬಯಸಬೇಡಿ: ಯಾರೂ ಪರ್ಫೆಕ್ಟ್ ಅಲ್ಲ ಎಂಬುದು ನಿಜ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಸಂಬಂಧದ ಆರಂಭಕ್ಕೂ ಮುನ್ನ ಮತ್ತು ನಂತರ ಸಂಗಾತಿ ಪರ್ಫೆಕ್ಟ್ (perfect partner) ಆಗಿರಬೇಕೆಂದು ನಿರೀಕ್ಷಿಸುವುದು ನಿಮ್ಮನ್ನೇ ನೀವು ದುಃಖಕ್ಕೆ ಆಹ್ವಾನಿಸಿದಂತಾಗುತ್ತದೆ. ನಿಮ್ಮ ಸಂಗಾತಿಯನ್ನು ನೀವು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ಅವರನ್ನು ಹೇಗಿದ್ದೀರೋ ಹಾಗೆಯೇ ಸ್ವೀಕರಿಸಿ. ನ್ಯೂನತೆಗಳಿಗಿಂತ ಸಂಗಾತಿಯ ಸಾಮರ್ಥ್ಯಗಳ ಮೇಲೆ ಹೆಚ್ಚು ಗಮನ ಹರಿಸಿ. ಸಂಬಂಧದಲ್ಲಿ ಪ್ರೀತಿ ಮತ್ತು ಪರಸ್ಪರ ತಿಳುವಳಿಕೆಯೊಂದಿಗೆ ನೀವು ಹಂತ ಹಂತವಾಗಿ ಮುಂದೆ ಸಾಗಿದ್ರೆ, ರಿಲೇಶನ್ ಶಿಪ್ ಸ್ಟ್ರಾಂಗ್ ಆಗುತ್ತೆ.
ನೀವು ಹೇಳಿದ್ದೆಲ್ಲಾ ಕೇಳ್ತಾರೆ ಅಂದ್ಕೋಬೇಡಿ: ಕೆಲವರು ಯಾವಾಗಲೂ ತಮ್ಮನ್ನು ತಾವು ಸರಿ ಎಂದು ಹೇಳಿ ಕೊಳ್ತಾರೆ. ಹೀಗಿರೋವಾಗ ಅವರು ಏನೇ ಹೇಳಿದರೂ ಅಥವಾ ಮಾಡಿದರೂ, ಸಂಗಾತಿಯು ಅದನ್ನು ಒಪ್ಪಿಕೊಳ್ಳಬೇಕು ಎಂದು ಅವರು ನಿರೀಕ್ಷಿಸುತ್ತಾರೆ. ಇದು ಮಾತ್ರವಲ್ಲ, ಅವರು ಏನನ್ನಾದರೂ ಹೇಳಿದರೆ, ಸಂಗಾತಿ ಓಕೆ ಹೇಳುತ್ತಾರೆ ಎಂದು ನಿರೀಕ್ಷಿಸುತ್ತಾರೆ. ಆದರೆ ಇಂತಹ ನಡವಳಿಕೆ ತುಂಬಾನೆ ಕೆಟ್ಟದಾಗಿರುತ್ತೆ. ಇದು ಕಂಟ್ರೋಲ್ (controlling behaviour) ಮಾಡುವಂತಹ ನಡವಳಿಕೆಯಾಗಿದ್ದು, ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರುತ್ತೆ.
ಹೇಳದೆ ನಿಮ್ಮ ಮನಸ್ಸನ್ನು ತಿಳಿದುಕೊಳ್ಳುವುದು: ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳುವ ಸಂಗಾತಿಯನ್ನು ಬಯಸುತ್ತಾರೆ, ಆದರೆ ಅರ್ಥಮಾಡಿಕೊಳ್ಳುವ ಬದಲು, ಅವರು ನಿಮ್ಮ ಮನಸ್ಸನ್ನು ಹೇಳದೆ ತಿಳಿದುಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದು ಸರಿಯಲ್ಲ. ಜನರು ತಮ್ಮ ಕೋಪ, ಅಸಮಾಧಾನ, ಪ್ರೀತಿಯನ್ನು ಸಹ ತಮ್ಮ ಮನಸ್ಸಿನಲ್ಲಿ ಅಡಗಿಸಿಡುವುದನ್ನು ಹೆಚ್ಚಾಗಿ ಕಾಣಬಹುದು. ನಿಮ್ಮ ಸಂಗಾತಿಯು ಬಾಯಿ ಬಿಟ್ಟು ಹೇಳದೇಯೇ ಅವರ ಹೃದಯದಲ್ಲಿರುವ ವಿಷಯಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು ಅಂದ್ರೆ ಹೇಗೆ? ಇದು ಸಂಬಂಧದಲ್ಲಿ ತಪ್ಪು ತಿಳುವಳಿಕೆಗಳನ್ನು ಸೃಷ್ಟಿಸಬಹುದು. ಹಾಗಾಗಿ ಸಾಧ್ಯವಾದಷ್ಟು ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡೋದನ್ನು ಕಲಿಯಿರಿ.
ಸಂಗಾತಿ ನಿಮ್ಮಂತೆಯೇ ಇರಬೇಕೆಂದು ಬಯಸೋದು: ಜನರನ್ನು ಪರಸ್ಪರ ಬೇರ್ಪಡಿಸುವುದು ಅವರ ನಡವಳಿಕೆ. ಈ ನಡವಳಿಕೆಯಿಂದದೇ ಒಬ್ಬರು ಇನ್ನೊಬ್ಬರತ್ತ ಆಕರ್ಷಿತರಾಗ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿಯು ನಿಮ್ಮಂತೆಯೇ ಇರಬೇಕೆಂದು ನಿರೀಕ್ಷಿಸುವುದು ಅಥವಾ ಅದೇ ಗುಣಗಳನ್ನು ಹೊಂದಿರೋದು ಖಂಡಿತಾ ಸಾಧ್ಯವಿಲ್ಲ. ಕೆಲವು ವಿಷಯಗಳು ಒಂದೇ ಆಗಿರಬಹುದು, ಆದರೆ ಅವು ಒಂದೇ ಆಗಿರುತ್ತವೆ ಎಂದು ನಿರೀಕ್ಷಿಸುವುದು ಸರಿಯಲ್ಲ. ಅವನು ನಿಮ್ಮ ಸಂಗಾತಿ, ಕಾರ್ಬನ್ ಕಾಪಿ (carbon copy) ಅಲ್ಲ ಎಂಬುದನ್ನು ನೆನಪಿಡಿ. ಆದ್ದರಿಂದ ಅವರು ಕಾಲಾನಂತರದಲ್ಲಿ ನಿಮ್ಮಂತೆಯೇ ಇರುತ್ತಾರೆ ಎಂದು ನಿರೀಕ್ಷಿಸಬೇಡಿ. ಅವರು ನಿಮ್ಮಂತೆ ಇರಬೇಕು ಎಂದು ನೀವು ಬಯಸಿದರೆ ಅದರಿಂದ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.