ಮದ್ವೆ ಆದ್ರೂ ಲೈಫ್ ಬೋರ್ ಅನಿಸ್ತಾ ಇದ್ಯಾ? ಏನ್ಮಾಡೋದು?

Published : Jun 14, 2023, 05:17 PM IST

ಮದುವೆಯ ನಂತರ, ನಿಮ್ಮ ಜೀವನವು ತುಂಬಾನೇ ಬೋರಿಂಗ್ ಆಗಿದೆ ಎಂದು ನಿಮಗೆ ಅನಿಸ್ತಾ ಇದ್ಯಾ?  ಹಾಗಿದ್ರೆ ನಿಮ್ಮ ಬೋರಿಂಗ್ ದಿನಗಳನ್ನ ಖುಷಿ ಖುಷಿಯಾಗಿಸೋದಕ್ಕೆ ಇಲ್ಲಿದೆ ಒಂದಿಷ್ಟು ಟಿಪ್ಸ್. ಇವುಗಳನ್ನ ಅನುಸರಿಸಿದ್ರೆ ಖಂಡಿತವಾಗಿಯೂ ನೀವು ಹ್ಯಾಪಿಯಾಗಿರಬಹುದು.   

PREV
17
ಮದ್ವೆ ಆದ್ರೂ ಲೈಫ್ ಬೋರ್ ಅನಿಸ್ತಾ ಇದ್ಯಾ? ಏನ್ಮಾಡೋದು?

ಮದುವೆಯಾದ ಆರಂಭದಲ್ಲಿ ದಿನಗಳು ತುಂಬಾ ಸಂತೋಷವಾಗಿ ಕಳೆದು ಹೋಗುತ್ತೆ. ಆದರೆ ಮದುವೆಯಾದ ಕೆಲವು ವರ್ಷಗಳ ನಂತರ, ಕಪಲ್ಸ್ ಆಗಾಗ್ಗೆ ಪರಸ್ಪರ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿ, ಅವರ ನಡುವೆ ಸಣ್ಣ ಜಗಳಗಳೂ ನಡೆಯುತ್ತೆ. ನಿಮ್ಮ ವೈವಾಹಿಕ ಜೀವನವೂ (married life) ತುಂಬಾ ನೀರಸವಾಗಿದೆ ಎಂದು ನಿಮಗೆ ಅನಿಸಿದ್ರೆ, ನೀವು ಹೀಗೆ ಮಾಡಬಹುದು. 

27

ಕ್ರೇಝಿ ಆಟಗಳನ್ನು ಆಡಿ (crazy games)
ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯಲು ಬಯಸಿದರೆ, ವಾರಾಂತ್ಯದಲ್ಲಿ ಕೆಲವು ಆಟಗಳನ್ನು ಪ್ಲ್ಯಾನ್ ಮಾಡಬಹುದು. ನಿಮ್ಮ ಸಂಗಾತಿಯ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಆಟವನ್ನು ಯೋಜಿಸಬಹುದು.ಔಟ್ ಡೋರ್ ಗೇಮ್ಸ್ ಆಗಿದ್ರೆ ಇನ್ನೂ ಚೆನ್ನಾಗಿರುತ್ತೆ. ಇದು ನಿಮಗೆ ಮತ್ತು ನಿಮ್ಮ ಸಂಗಾತಿಗೆ ಜೊತೆಯಾಗಿ ಸಮಯ ಕಳೆಯೋದಕ್ಕೆ ಸಹಾಯ ಮಾಡುತ್ತೆ.

37

ಟ್ರಿಪ್ ಪ್ಲ್ಯಾನ್ ಮಾಡಿ (plan your trip)
ಸಂಗಾತಿಯೊಂದಿಗೆ ಪ್ರವಾಸವನ್ನು ಪ್ಲ್ಯಾನ್ ಮಾಡಬಹುದು. ಮನೆಯಲ್ಲಿದ್ರೆ ಒಂದಲ್ಲ ಒಂದು ಕೆಲಸಗಳಿಂದ ಇಬ್ಬರೂ ಬ್ಯುಸಿಯಾಗಿಬಿಡ್ತೀರಿ. ಒಬ್ಬರಿಗೊಬ್ಬರು ಸರಿಯಾದ ಸಮಯ ಕೊಡಲು ಸಾಧ್ಯವಾಗೋದಿಲ್ಲ. ಅಂತಹ ಸಮಯದಲ್ಲಿ ನೀವು ಟ್ರಿಪ್ ಪ್ಲ್ಯಾನ್ ಮಾಡಿ ಜೊತೆಯಾಗಿ ಸಮಯ ಕಳೆಯಬಹುದು. 

47

ನೀವಿಬ್ಬರೂ ಕೆಲಸ ಮಾಡುತ್ತಿದ್ದರೆ ಮತ್ತು ದೀರ್ಘ ರಜೆ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಸಣ್ಣ ಪ್ರವಾಸವನ್ನು ಯೋಜಿಸಬಹುದು ಅಥವಾ ವೀಕೆಂಡ್ ಪ್ಲ್ಯಾನ್ ಮಾಡಬಹುದು. ನಿಮ್ಮ ಟ್ರಿಪ್ ಕೆಲವೊಂದು ರೊಮ್ಯಾಂಟಿಕ್ ತಾಣಗಳಿಗೆ (romantic places) ಆಗಿದ್ರೆ ಅದು ಇನ್ನೂ ಸಖತ್ತಾಗಿರುತ್ತೆ. 

57

ಮನೆಕೆಲಸಕ್ಕೆ ಸಹಕರಿಸಿ (share her work)
ಮನೆಯ ಎಲ್ಲಾ ಕೆಲಸಗಳ ಹೊರೆಯನ್ನು ಹೆಂಡತಿಯ ಮೇಲೆ ಹಾಕುವುದರಿಂದ ಸಂಬಂಧದಲ್ಲಿ ಹುಳಿ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಂದು ಕೆಲಸವನ್ನು ಮನೆಯಲ್ಲಿ ಮತ್ತು ಹೊರಗೆ ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಇದರಿಂದ ಸಾಮರಸ್ಯ ಹೆಚ್ಚುತ್ತೆ.
 

67

ನೀವು ಜೊತೆ ಜೊತೆಯಾಗಿ ಅಡುಗೆ ಮಾಡಬೇಕು. ಈ ಸಂದರ್ಭದಲ್ಲಿ ಹೆಚ್ಚು ಮಾತುಕತೆಯೂ ಆಗುತ್ತೆ, ಅದರ ಜೊತೆಗೆ ಸ್ವಲ್ಪ ರೋಮ್ಯಾನ್ಸ್ ಕೂಡ ಆಗುತ್ತೆ. ಹೀಗೆ ನೀವು ಸಂಗಾತಿ ಜೊತೆ ಕ್ವಾಲಿಟಿ ಟೈಮ್ ಕಳೆಯಬಹುದು.  
 

77

ಇನ್ನು ಏನಂದ್ರೆ ಗಂಡ ಆಗಿರಬಹುದು ಅಥವಾ ಹೆಂಡತಿಯೇ ಆಗಿರಬಹುದು ನಿಮ್ಮ ಸಂಗಾತಿಯ ಪ್ರತಿಯೊಂದು ಸಣ್ಣ ವಿಷಯವನ್ನು ನೀವು ಅರ್ಥಮಾಡಿಕೊಳ್ಳಬೇಕು ಮತ್ತು ಗೌರವಿಸಬೇಕು. ನಿಮ್ಮ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ, ನೀವು ನಿಮ್ಮ ಸಂಬಂಧವನ್ನು ಬಲಪಡಿಸಬಹುದು.
 

Read more Photos on
click me!

Recommended Stories