ಆಶ್ಲೇ ಮ್ಯಾಡಿಸನ್‌ನಲ್ಲಿ ಸೈನ್ ಅಪ್ ಆಗಿರುವ ಬಳಕೆದಾರರ ಡೇಟಾಬೇಸ್ ಪ್ರಕಾರ, ಕೇಂದ್ರ ದೆಹಲಿಯು ಸತತ ಎರಡನೇ ವರ್ಷವೂ ಭಾರತದ ಟಾಪ್ 20 ನಗರಗಳಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ದೆಹಲಿ NCR ಪ್ರದೇಶದಿಂದ ಈ ಅಪ್ಲಿಕೇಶನ್‌ಗೆ ಭಾರಿ ಪ್ರತಿಕ್ರಿಯೆ ಸಿಗುತ್ತಿದೆ. ಇನ್ನು ದೆಹಲಿಯ ಆರು ಜಿಲ್ಲೆಗಳಾದ ಮಧ್ಯ ದೆಹಲಿ, ನೈಋತ್ಯ ದೆಹಲಿ, ಪೂರ್ವ ದೆಹಲಿ, ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ ಮತ್ತು ವಾಯುವ್ಯ ದೆಹಲಿ ಟಾಪ್ 20 ರಲ್ಲಿವೆ. ಇದರೊಂದಿಗೆ ದೆಹಲಿಯ ಪಕ್ಕದಲ್ಲಿರುವ ಗುರುಗ್ರಾಮ್, ಗಾಜಿಯಾಬಾದ್ ಮತ್ತು ಗೌತಮ್ ಬುದ್ಧ ನಗರ (ನೋಯ್ಡಾ) ಜಿಲ್ಲೆಗಳು ಸಹ ಟಾಪ್ 20ರಲ್ಲಿ ಸೇರಿವೆ.